ಮಧ್ಯಾಹ್ನ ಬಿಸಿಯೂಟದ UC ಸುಲಭವಾಗಿ ತುಂಬಿಸುವ ವಿಧಾನ ಮತ್ತು ಅನುಕೂಲತೆಗಳು
- ತಿಂಗಳ UC ನೀಡಲು ಉಪಯುಕ್ತ
- ಬಿಸಿಯೂಟದ ಪ್ರತಿದಿನದ ಲೆಕ್ಕಾಚಾರಗಳನ್ನೂ ಮಾಡಬಹುದು.
- A4 ಅಳತೆಗೆ ಜೋಡಿಸಿದ್ದು, ಪ್ರಿಂಟ್ ತೆಗೆಯಲು ಸುಲಭ
- ಮೊಬೈಲ್ ನಲ್ಲಿಯೂ ಡೇಟಾ ಎಂಟ್ರಿ ಮಾಡಬಹುದು
- ಕೇವಲ ಒಟ್ಟು ಊಟದ ಸಂಖ್ಯೆ, ಜಮೆ ವಿವರ ಹಾಗೂ ಬೇಡಿಕೆಯನ್ನು ಮಾತ್ರ ನಮೂದಿಸಿದರೆ ಸಾಕು. ಉಳಿದೆಲ್ಲಾ ಲೆಕ್ಕಾಚಾರಗಳನ್ನು ತಂತ್ರಾಂಶವು ತನ್ನಿಂತಾನೇ ನಿರ್ವಹಿಸುತ್ತದೆ.
(ಮೇ ತಿಂಗಳಿನಲ್ಲಿ ಮಾತ್ರ ಒಂದು ಬಾರಿ ಪ್ರಾರಂಭಿಕ ಶಿಲ್ಕು, ಶಾಲೆ, ಹಾಗೂ ಶಿಕ್ಷಕರು ಮತ್ತು ಇತರ ವಿವರಗಳನ್ನು ತುಂಬಬೇಕು) - 2022-23ನೇ ಸಾಲಿನ ಎಲ್ಲಾ ಹನ್ನೆರಡೂ ತಿಂಗಳ ಯುಸಿ ಒಂದೇ ಫೈಲ್ ನಲ್ಲಿ ಲಭ್ಯ
- ಗೋಧಿಗೆ ಸಂಬಂಧಿಸಿದಂತೆ, ತಂತ್ರಾಂಶದಲ್ಲಿ ಸದ್ಯಕ್ಕೆ ಲೆಕ್ಕಾಚಾರದ ಮಾಹಿತಿಯನ್ನು ಸೇರಿಸಿಲ್ಲ. ಆದ್ದರಿಂದ ಗೋಧಿ ಸರಬರಾಜಾದರೆ ಈ ಹಿಂದಿನಂತೆ ನಾವೇ ಲೆಕ್ಕಾಚಾರ ಮಾಡಿ ನಮೂದಿಸಬೇಕು.
- ಒಂದು ವೇಳೆ ಅಡುಗೆ ತಯಾರಿಕಾ ವೆಚ್ಚಗಳು ಬದಲಾದರೆ ಈ ತಂತ್ರಾಂಶ ತಪ್ಪು ಮಾಹಿತಿ ನೀಡುತ್ತದೆ.
- ಬೇಳೆ/ಎಣ್ಣೆ/ಉಪ್ಪಿಗೆ ಸಂಬಂಧಿಸಿದ ಖರ್ಚನ್ನು ಬೇರೆ ಅನುದಾನದ ಮೂಲದಿಂದ ಭರಿಸಿದರೂ ತಂತ್ರಾಂಶ ತಪ್ಪು ಮಾಹಿತಿ ನೀಡುತ್ತದೆ.
- ದಾಸ್ತಾನು ಕೊಠಡಿಯ ಉಳಿಕೆಗೂ ಪುಸ್ತಕದಲ್ಲಿನ ಉಳಿಕೆಗೂ ವ್ಯತ್ಯಾಸಗಳಿರುವುದರಿಂದ ದಾಸ್ತಾನು ಕೊಠಡಿಯ ಉಳಿಕೆಯ ಮಾಹಿತಿಯನ್ನು ತಂತ್ರಾಂಶವು ನಮೂದಿಸುವುದಿಲ್ಲ. ನೈಜ ದಾಸ್ತಾನಿನ ಮಾಹಿತಿಯನ್ನು ನಾವೇ ನಮೂದಿಸಬೇಕು.
Prepared by
ಕೃಷ್ಣಪ್ರಸಾದ ವಿ.
ಸ.ಕಿ.ಪ್ರಾ. ಶಾಲೆ – ಕಲ್ಲಕಟ್ಟಣಿ
ಬೆಳ್ತಂಗಡಿ ತಾಲೂಕು,ದಕ್ಷಿಣ ಕನ್ನಡ