ಬಿಸಿಯೂಟದ sms ಕಳುಹಿಸಲು ಈ app download ಮಾಡಿಕೊಳ್ಳಿ ಸುಲಭ ಆಗಬಹುದು

ಮುಖ್ಯ ಶಿಕ್ಷಕರಿಗೆ ಸೂಚನೆ

ಈ ಹಿಂದಿನ ವಿಧಾನದಂತೆ ಎಲ್ಲಾ ಸರಕಾರಿ ಮತ್ತು ಅನುದಾನಿತ ಶಾಲೆಗಳ ಮುಖ್ಯ ಶಿಕ್ಷಕರು ಪ್ರತಿದಿನ ಊಟ ಮಾಡಿದ ಮಕ್ಕಳ ಹಾಗೂ ಶಿಕ್ಷಕರ‌ ಸಂಖ್ಯೆಯನ್ನು SMS ಮಾಡಬೇಕಾಗಿರುತ್ತದೆ. ಮುಖ್ಯ ಶಿಕ್ಷಕರು ತಮ್ಮ ಅಧಿಕೃತ ಮೊಬೈಲ್ ಸಂಖ್ಯೆಯಿಂದ SMS ರವಾನಿಸುವುದು. ಇದನ್ನು ಸುಲಭವಾಗಿ ರವಾನಿಸಲು ಕೆಳಗಿನ AMS ಆಪ್ ಡೌನ್ಲೋಡ್ ಮಾಡಿಕೊಳ್ಳಿ. ಆಪ್ ನಲ್ಲಿ ಕಾಣಿಸುವ AMS SMS ಆಪ್ಶನ್ ಬಳಸಿ ಮಕ್ಕಳ ಸಂಖ್ಯೆ ನಮೂದಿಸಿ ಸಂದೇಶ ರವಾನಿಸಿ.

ಪ್ರಧಾನ ಮಂತ್ರಿ ಪೋಷಣ್ – ಶಕ್ತಿ ನಿರ್ಮಾಣ್ ಕಾರ್ಯಕ್ರಮದಡಿಯಲ್ಲಿ ಸ್ವಯಂ ಚಾಲಿತ ಉಸ್ತುವಾರಿ ಪದ್ದತಿಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಸೂಚನೆ.

ಕೋವಿಡ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳು ತೆರೆಯದೇ ಇದ್ದುದರಿಂದ ಬಿಸಿಯೂಟ ವ್ಯವಸ್ಥೆ ಇಲ್ಲದಿದ್ದ ಸಮಯದಲ್ಲಿ ಸ್ವಯಂ ಚಾಲಿತ ಉಸ್ತುವಾರಿ ಪದ್ದತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಕೋವಿಡ್ ತೀವ್ರತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮತ್ತೆ ಎಲ್ಲಾ ಶಾಲೆಗಳಲ್ಲಿ ತರಗತಿಗಳು ಪುನರಾರಂಭಗೊಂಡಿದ್ದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ವಿತರಣೆ ಮಾಡಲಾಗುತ್ತಿದೆ.

ಆ ನಿಟ್ಟಿನಲ್ಲಿ ಈಗಾಗಲೇ ಚಾಲ್ತಿಯಲ್ಲಿದ್ದ ಸ್ವಯಂ ಚಾಲಿತ ಉಸ್ತುವಾರಿ ಪದ್ದತಿಯನ್ನು (AMS) ಪುನರಾರಂಭಗೊಳಿಸಲು ಈ ಕೂಡಲೇ ಅಗತ್ಯ ಕ್ರಮವಹಿಸುವುದು. ಶಾಲೆಗಳಲ್ಲಿ ಬಿಸಿಯೂಟ ವಿತರಿಸಿದ ದಿನಾಂಕ, ಬಿಸಿಯೂಟವನ್ನು ವಿತರಿಸುವ ಸಂದರ್ಭದಲ್ಲಿ ಹಾಜರಿದ್ದ ಶಿಕ್ಷಕರು ಮತ್ತು ‌ತರಗತಿವಾರು ಬಿಸಿಯೂಟದ ಫಲಾನುಭವಿಗಳ ಮಾಹಿತಿಯನ್ನು ರಾಜ್ಯದ ಸರ್ಕಾರಿ ಮತ್ತು ಅನುದಾನಿತ‌ ಶಾಲಾ ಮುಖ್ಯ ಶಿಕ್ಷಕರ ನೋಂದಾಯಿತ ಚರ ದೂರವಾಣಿ ಸಂಖ್ಯೆ (registered mobile number) ಯಿಂದ 15544 ಶುಲ್ಕರಹಿತ ದೂರವಾಣಿ ಸಂಖ್ಯೆಗೆ KARMDM DD/MM /YYYY T, S1, S2, S3, S4, S5, S6, S7, S8, S9, S10 ಈ ನಮೂನೆಯಲ್ಲಿ ಶಾಲೆ ನಡೆದ ಪ್ರತೀ ದಿನ ಕಡ್ಡಾಯವಾಗಿ ಕಳಿಸಲು ಸೂಕ್ತ ಕ್ರಮ ವಹಿಸುವುದು ಹಾಗೂ ಸ್ವಯಂ ಚಾಲಿತ ಉಸ್ತುವಾರಿ ಪದ್ದತಿಯನ್ನು ಪುನರಾರಂಭಿಸಲು ಸೂಚಿಸಲಾಗಿದೆ.

IMG 20211217 WA0015
IMG 20211217 WA0017
Sharing Is Caring:

Leave a Comment