ಹೊಸ KGID Policy ಗೆ Online ಅರ್ಜಿಯನ್ನು ಸಲ್ಲಿಸುವ ವಿಧಾನ

WhatsApp Group Join Now
Telegram Group Join Now

Step 1
browser open ಮಾಡಿ KGID Login ಎಂದು type ಮಾಡಿ Search ಕೊಡಬೇಕು. ಹೊಸ Page ಕಾಣಿಸುತ್ತದೆ.

Step 2
KGIDಯನ್ನು ನಮೂದಿಸಬೇಕು. ಮೊಬೈಲ್ ಸಂಖ್ಯೆ ಇರುವಲ್ಲಿ click ಮಾಡಿದಾಗ ಮೊಬೈಲ್ ಸಂಖ್ಯೆ automatic fetch ಆಗುತ್ತದೆ. ಅದರ ಕೆಳಗೆ ಇರುವ Authenticate ಮೇಲೆ click ಮಾಡಿದಾಗ ಮೊಬೈಲ್ ಗೆ OTP ಬರುತ್ತದೆ. ಅದನ್ನು ನಮೂದಿಸಬೇಕು. ನಂತರ capcha code ನಮೂದಿಸಿ, Login button ಮೇಲೆ ಕ್ಲಿಕ್ ಮಾಡಬೇಕು.
Welcome to Karnataka government insurance department online services ಎಂಬ Page ತೆರೆದುಕೊಳ್ಳುತ್ತದೆ.

Step 3
ಎಡಗಡೆ menu bar ನಲ್ಲಿ ಇರುವ Life insurance ಎಂಬ option ಮೇಲೆ ಕ್ಲಿಕ್ ಮಾಡಿ, ಮೊದಲಿಗೆ ಇರುವ Apply for KGID policy ಎಂಬಲ್ಲಿ ಕ್ಲಿಕ್ ಮಾಡಬೇಕು. ಮುಂದಿನ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ನೀಡಿರುವ ಎಲ್ಲಾ ಸೂಚನೆಗಳನ್ನು ಸರಿಯಾಗಿ ಓದಿ check box ಮೇಲೆ click ಮಾಡಿ Proceed to application ಎಂಬಲ್ಲಿ click ಮಾಡಬೇಕು. Employee application form generate ಆಗುತ್ತದೆ

Step 4
ಮೇಲ್ಗಡೆ ಇರುವ Reference number ಬರೆದಿಟ್ಟುಕೊಳ್ಳಬೇಕು . ಮುಂದೆ ಎಂದಾದರೂ ಬೇಕಾಗುತ್ತದೆ.
ಕೆಳಗಡೆ ನಾಲ್ಕು optionಗಳು ಕಾಣಿಸುತ್ತವೆ. ಮೊದಲಿನ Basic details ಎಂಬ option ಇದೆ ಅದರ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ವೈಯಕ್ತಿಕ ಮಾಹಿತಿಯನ್ನು ತುಂಬಿಸಬೇಕು. ಕನ್ನಡದಲ್ಲಿಯೂ ಮಾಹಿತಿಯನ್ನು ತುಂಬಿಸಬೇಕು. ವಿವಾಹಿತರಾಗಿದ್ದಲ್ಲಿ ಸಂಗಾತಿಯ ಮಾಹಿತಿಯನ್ನು ತುಂಬಿಸುವುದು ಕಡ್ಡಾಯ.
Next ಎಂಬಲ್ಲಿ click ಮಾಡಿದಾಗ ಎರಡನೇ ಪೇಜ್ ತೆರೆದುಕೊಳ್ಳುತ್ತದೆ.

Step 5
ಎರಡನೆಯ ಪೇಜ್ ನಲ್ಲಿ ಈ ಹಿಂದೆ ಮಾಡಿಸಿದ KGID policy number, risk date, premium amount, some assured ಕಾಣಿಸುತ್ತದೆ. ಒಮ್ಮೆ ಸರಿಯಾಗಿ ಗಮನಿಸಿ ನಂತರ ಕಟಾವು ಮಾಡಲು ಬಯಸುವ ಮೊತ್ರವನ್ನು Enter amount ಕಾಲಂ ನಲ್ಲಿ ನಮೂದಿಸಬೇಕು. Save and next ಕೊಡಬೇಕು ಮುಂದಿನ ಪುಟ ತೆರೆದುಕೊಳ್ಳುತ್ತದೆ.

Step 6
ಕುಟುಂಬದ ಸದಸ್ಯರ ಮಾಹಿತಿಯನ್ನು ತುಂಬಿಸಬೇಕು. ಒಬ್ಬೊಬ್ಬರ ಮಾಹಿತಿಯನ್ನು ತುಂಬಿಸಿದ ನಂತರ add button ಮೇಲೆ ಕ್ಲಿಕ್ ಮಾಡಿ ಕುಟುಂಬದ ಸದಸ್ಯರ ವಿವರ ತುಂಬಿಸಬೇಕು. ಎಲ್ಲಾ ಸದಸ್ಯರ ಮಾಹಿತಿ ತುಂಬಿದ ಮೇಲೆ Action ಎಂಬಲ್ಲಿ edit or delete ಎಂದು ಇರುತ್ತದೆ. ಮಾಹಿತಿ ತಪ್ಪಾಗಿದ್ದಲ್ಲಿ ಎಡಿಟ್ ಮಾಡಲು ಅವಕಾಶ ಇದೆ. Save and next ಕೊಟ್ಟಾಗ ನಾಲ್ಕನೇ ಪೇಜ್ ತೆರೆದುಕೊಳ್ಳುತ್ತದೆ.

Step 7
Nominee ಮಾಹಿತಿಯನ್ನು ತುಂಬಿಸಬೇಕು. ಮದುವೆಯಾಗಿದ್ದರೆ ಗಂಡ ಅಥವಾ ಮಕ್ಕಳ ಹೆಸರು nominee ಮಾಡುವುದು ಕಡ್ಡಾಯ. ಅವರಿಗೆ ಎಷ್ಟು ಪರ್ಸೆಂಟ್ ಶೇರು ಎಂಬುದನ್ನು ನಮೂದಿಸಬೇಕು. Same and next ಕೊಟ್ಟಾಗ ಹೊಸ ಪೇಜ್ ಸಿಗುತ್ತದೆ.

Step 8
ಐದನೇ ಪೇಜ್ ನಲ್ಲಿ ನಮ್ಮ ಆರೋಗ್ಯಕ್ಕೆ ಸಂಬಂಧಿಸಿದ Yes/No ಪ್ರಶ್ನೆಗಳಿವೆ ಸರಿಯಾಗಿ ಓದಿ yes/no ಎಂದು ನಮೂದಿಸಬೇಕು. Save and next ಕೊಟ್ಟಾಗ 6ನೇ ಪೇಜ್ ತೆರೆದುಕೊಳ್ಳುತ್ತದೆ.

Step 9
ನಾಲ್ಕು ಸೂಚನೆ ನಿಡಲಾಗಿದೆ. ಸರಿಯಾಗಿ ಓದಿ check box ಮೇಲೆ click ಮಾಡಬೇಕು. ಮೊದಲು save button ಮೇಲೆ click ಮಾಡಿ ನಂತರ finish button ಮೇಲೆ ಕ್ಲಿಕ್ ಮಾಡಿದಾಗ Payment details open ಆಗುತ್ತದೆ. Payment detailsನಲ್ಲಿ ಒಂದು challan ತೆರೆದುಕೊಳ್ಳುತ್ತದೆ. Pay through K2 ಮೇಲೆ click ಮಾಡಬೇಕು.

Step 10
ಪಾವತಿಯ ವಿಧ ಎಂಬ ಹೊಸ ಪೇಜ್ ಕಾಣಿಸುತ್ತದೆ. ಅದರಲ್ಲಿ ಯಾವ ರೀತಿ ಪಾವತಿ ಮಾಡುತ್ತೀರಿ ಅದನ್ನು ಸೆಲೆಕ್ಟ್ ಮಾಡಿ, capcha ನಮೂದಿಸಿ check box ಮೇಲೆ ಕ್ಲಿಕ್ ಮಾಡಿ, ಸಲ್ಲಿಸು ಎಂಬ option ಮೇಲೆ ಕ್ಲಿಕ್ ಮಾಡಿದಾಗ ಹೊಸ ಪುಟ ಕಾಣಿಸುತ್ತದೆ. ಅಲ್ಲಿ ಯಾವುದಾದರೂ ಒಂದು ವಿಧವನ್ನು ಬಳಸಿ Payment ಮಾಡಬಹುದು. Enter ID or UPI Scanner code ಬಳಸಿ Payment ಮಾಡಬಹುದು.
Payment ಮಾಡಿದ ತಕ್ಷಣ next page open ಆಗುತ್ತದೆ.

Step 11
ಮುಂದಿನ ಪೇಜ್ ನಲ್ಲಿ Challan ಓಪನ್ ಆಗುತ್ತದೆ. Finish button ಮೇಲೆ ಕ್ಲಿಕ್ ಮಾಡಿದಾಗ 2 form download ಆಗುತ್ತದೆ. ಒಂದು form proposal form ಇನ್ನೊಂದು medical form ಎರಡೂ formಗಳಿಗೆ ಸಹಿ ಮಾಡಿಸಿ upload ಮಾಡಬೇಕು. Proposal formಗೆ ನಮ್ಮ ಸಹಿ ಹಾಗೂ DDO ಸಹಿ ಹಾಗೂ medical form ಗೆ ಸರಕಾರಿ ವೈದ್ಯರ ಸಹಿ ಹಾಕಿಸಿ ಏಳುದಿನಗಳ ಒಳಗೆ upload ಮಾಡಬೇಕು. ನಂತರ e sign upload ಮಾಡಬೇಕು.
Proposal form medical form ಹಾಗೂ ಚಲನ್ ಮೂರನ್ನೂ ಕವರಿಂಗ್ ಲೆಟರ್ ಜೊತೆ ಏಳು ದಿನಗಳ ಒಳಗೆ ಜಿಲ್ಲಾ ಕಚೇರಿಗೆ ತಲುಪಿಸಬೇಕು.

WhatsApp Group Join Now
Telegram Group Join Now
Sharing Is Caring:

Leave a Comment