ಗುರುಭ್ಯೋ ನಮಃ
ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ
ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿ ಅದೆಷ್ಟೋ ವಿದ್ಯಾರ್ಥಿಗಳ ಜೀವನವನ್ನು ಬೆಳಗಿಸಿ ಸಾರ್ಥಕ್ಯವನ್ನು ಪಡೆದು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.
ಶ್ರೀಮತಿ ಮಾಲತಿ
ಸ.ಕಿ.ಪ್ರಾ ಶಾಲೆ ರಹಮತ್ ನಗರ ಮಂಗಳೂರು ದಕ್ಷಿಣ
ದಿನಾಂಕ 01.10.1961 ರಲ್ಲಿ ಜನಿಸಿದ ಮಾಲತಿಯವರು 01.07.1991 ರಂದು ಸೇವೆಗೆ ಸೇರಿದರು. ದಿನಾಂಕ 30.09.2021 ರಂದು ಸ.ಹಿ.ಪ್ರಾ ಶಾಲೆ ರಹಮತ್ ನಗರದಲ್ಲಿ ಸೇವಾ ನಿವೃತ್ತಿ ಹೊಂದುತ್ತಿದ್ದಾರೆ.ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ನಿರ್ಮಲಾ ಎಂ ಅಮೀನ್
ಸಹಶಿಕ್ಷಕರು
ಸ.ಹಿ.ಪ್ರಾ ಶಾಲೆ ಮಂಜನಾಡಿ
ಮಂಗಳೂರು ದಕ್ಷಿಣ
30.09.1961 ರಂದು ಜನಿಸಿದ ನಿರ್ಮಲಾರವರು 04.07.1991 ರಲ್ಲಿ ಸೇವೆಗೆ ಸೇರಿದರು. 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸ.ಹಿ.ಪ್ರಾ ಶಾಲೆ ಮಂಜನಾಡಿಯಲ್ಲಿ ನಿವೃತ್ತಿ ಹೊಂದುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ನಳಿನಿ
ಸ.ಹಿ.ಪ್ರಾ.ಶಾಲೆ ನ್ಯೂಪಡ್ಪು
ಮಂಗಳೂರು ದಕ್ಷಿಣ
01.06.1968ರಲ್ಲಿ ಜನಿಸಿದ ನಳಿನಿ ಇವರು 13.2.1990 ಕ್ಕೆ ಸೇವೆಗೆ ಸೇರಿದರು.ಈ ತಿಂಗಳು ಸ.ಹಿ.ಪ್ರಾ ಶಾಲೆ ನ್ಯೂಪಡ್ಪು ಇಲ್ಲಿ ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ಮಕ್ಕಳ ಜೀವನ ಬೆಳಗಲು ಶ್ರಮಿಸಿದ ತಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ
ಶ್ರೀಮತಿ ಬೊಮ್ಮಕ್ಕ ಕೆ
ಮುಖ್ಯ ಶಿಕ್ಷಕರು
ಸ.ಹಿ.ಪ್ರಾ ಶಾಲೆ ಮುಡ್ನೂರು ಮರ್ಕಂಜ ಸುಳ್ಯ ತಾಲೂಕು
01.10.1961 ರಲ್ಲಿ ಅಣ್ಣಪ್ಪ ಗೌಡ ಹಾಗೂ ಲಿಂಗಮ್ಮರವರ ಪುತ್ರಿಯಾಗಿ ಜನಿಸಿದ ಬೊಮ್ಮಕ್ಕ ಕೆ ಇವರು 27.06.1991 ರಲ್ಲಿ ಸ.ಕಿ.ಪ್ರಾ ಶಾಲೆ ವಾಲ್ತಾಜೆಯಲ್ಲಿ ಸೇವೆಗೆ ಸೇರಿದರು. ಮುಂದಕ್ಕೆ ಸ.ಹಿ.ಪ್ರಾ ಶಾಲೆ ಏನೇಕಲ್,ಮೊಗ್ರು, ಅಡ್ತಲೆ ಶಾಲೆಗಳಲ್ಲಿ ಸೇವೆ ಸಲ್ಲಿಸಿ 2018 ರಲ್ಲಿ ಭಡ್ತಿಗೊಂಡು ಸ.ಹಿ.ಪ್ರಾ ಶಾಲೆ ಗೂನಡ್ಕ ಇಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದರು. ನಂತರದಲ್ಲಿ ಇಡ್ಯಡ್ಕದಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಮುಡ್ನೂರು ಮರ್ಕಂಜ ದಲ್ಲಿ ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ನಿವೃತ್ತ ಸೈನಿಕರಾದ ಪತಿ ಕಮಲಾಕ್ಷ ಮಕ್ಕಳಾದ ಶಿಲ್ಪಾ ಪಿ.ಕೆ, ರಶ್ಮಿ ಪಿ.ಕೆ, ಕಾರ್ತಿಕ್ ಪಿ.ಕೆ, ಮೊಮ್ಮಗಳಾದ ಸಾನ್ವಿ ಇವರೊಂದಿಗಿನ ತಮ್ಮ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ಲೀನಾ ಡಿಸೋಜ
ದ.ಕ.ಜಿ.ಪಂ ಹಿ.ಪ್ರಾ ಶಾಲೆ ಕಳ್ಳಿಗೆ, ಬಂಟ್ವಾಳ ತಾಲೂಕು
ಜೋನ್ ಡಿಸೋಜ ಹಾಗೂ ಮಾರ್ಸೆಲೀನ್ ಡಿಸೋಜ ದಂಪತಿಗಳ ಪುತ್ರಿಯಾಗಿ ದಿನಾಂಕ 15-09-1961 ರಂದು ಜನಿಸಿ ಒಂದರಿಂದ ಏಳನೇ ತರಗತಿಯವರೆಗೆ ದ.ಕ.ಜಿ.ಪಂ ಹಿ.ಪ್ರಾ ಶಾಲೆ ಇನೋಳಿಯಲ್ಲಿ, 8ರಿಂದ 10ನೇ ತರಗತಿವರೆಗೆ ನಿತ್ಯಸಹಾಯ ಮಾತ ಹೈಸ್ಕೂಲ್ನಲ್ಲಿ ಮುಗಿಸಿ, ಶಿಕ್ಷಕ ಶಿಕ್ಷಣ ತರಬೇತಿಯನ್ನು ಸೈಂಟ್ ಜೋಸೆಫ್ ಟಿ ಟಿ ಐ ಫಾರ್ ವಿಮೆನ್, ಮಂಡ್ಯ ಇಲ್ಲಿ ಮಾಡಿದಿರಿ. 1986ರಲ್ಲಿ ಚಾರ್ಲ್ಸ್ ಮಿರಾಂದ ಇವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿ ಇಬ್ಬರು ಮಕ್ಕಳನ್ನು ಪಡೆದು, 1996ರಲ್ಲಿ ದ.ಕ.ಜಿ.ಪಂ ಹಿ.ಪ್ರಾ ಶಾಲೆ ಪಾಂಡವರ ಕಲ್ಲು ಇಲ್ಲಿ ಸೇವೆಗೆ ಸೇರ್ಪಡೆಗೊಂಡು 6 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ.
2002ರಲ್ಲಿ ವರ್ಗಾವಣೆಗೊಂಡು ದ.ಕ.ಜಿ.ಪಂ ಹಿ.ಪ್ರಾ ಶಾಲೆ ಕಳ್ಳಿಗೆ ಇಲ್ಲಿ ಶಿಕ್ಷಕಿಯಾಗಿ ಕರ್ತವ್ಯಕ್ಕೆ ತೊಡಗಿ ನಿಷ್ಠೆ, ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ವಿದ್ಯಾರ್ಥಿಗಳ, ಪೋಷಕರ ಹಾಗೂ ಸಹೋದ್ಯೋಗಿಗಳ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿರುತ್ತಾರೆ. ತಮ್ಮ ಸೇವಾವಧಿಯಲ್ಲಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವೃತ್ತಿ ಜೀವನದಿಂದ ದಿನಾಂಕ 30-09-2021ರಂದು ನಿವೃತ್ತಿ ಹೊಂದುತ್ತಿರುವ ತಮ್ಮ ಮುಂದಿನ ನಿವೃತ್ತಿ ಜೀವನವು ಉಜ್ವಲವಾಗಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ಭವಾನಿ ಎಂ
ಸಹಶಿಕ್ಷಕರು ಸ.ಹಿ.ಪ್ರಾ.ಶಾಲೆ ವೀರಮಂಗಳ ಪುತ್ತೂರು ತಾಲೂಕು.
ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಯನ್ನು ಹೊಂದಿರುವ ತಾವು ಪ್ರಾಥಮಿಕ, ಪ್ರೌಢ ಹಾಗೂ ಟಿ ಸಿ.ಎಚ್ ಶಿಕ್ಷಣವನ್ನು ಮುಗಿಸಿ ದಿನಾಂಕ 29-06-1991ರಂದು ಸರ್ಕಾರಿ ವೃತ್ತಿ ಬದುಕಿಗೆ ಸೇರಿದರು.ಸುಮಾರು 30ವರ್ಷಗಳ ಸುದೀರ್ಘ ಕಾಲ ನಿಸ್ವಾರ್ಥ ಸೇವೆಯನ್ನು ನೀಡಿ ಅಪಾರ ವಿದ್ಯಾರ್ಥಿ ಸಮೂಹಕ್ಕೆ ಜ್ಞಾನದ ಬೆಳಕನ್ನು ನೀಡಿದಿರಿ.ಇಂದು ನಿವೃತ್ತ ರಾಗುತ್ತಿರುವ ನಿಮಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನು ಕರುಣಿಸಲಿ,ಸಂತೃಪ್ತ ಜೀವನ ನಿಮ್ಮದಾಗಲಿ ಎಂದು ಪ್ರಾರ್ಥಿಸುತ್ತೇವೆ.
ಶ್ರೀಮತಿ ಜೆಸಿಂತ ಎಂ ರೊಡ್ರಿಗಸ್
ಸಹಶಿಕ್ಷಕಿ ದ.ಕ.ಜಿ.ಪಂ.ಸ.ಉ.ಹಿ.ಪ್ರಾ.ಶಾಲೆ ಹಿರೆಬಂಡಾಡಿ ಪುತ್ತೂರು ತಾಲೂಕು.
ಹೆನ್ರಿ ರೊಡ್ರಿಗಸ್ ಮತ್ತು ಶ್ರೀಮತಿ ಲೂಸಿ ರೊಡ್ರಿಗಸ್ ದಂಪತಿಗಳ ಮೂರನೇ ಮಗಳಾಗಿ 10-09-1961ರಂದು ಜನಿಸಿದರು.ಪ್ರಾಥಮಿಕ ಶಿಕ್ಷಣವನ್ನು ಮೈಕಲ್ಸ್, ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ಸೈಂಟ್ ಮೇರಿಸ್ ಗರ್ಲ್ಸ್ ಪ್ರೌಢ ಶಾಲೆ ಗಂಗೊಳ್ಳಿಯಲ್ಲಿ,ಪದವಿ ಶಿಕ್ಷಣವನ್ನು ಬೆಂಜನಪದವುಮತ್ತು ಟಿ ಸಿ.ಎಚ್ ವಿದ್ಯಾಭ್ಯಾಸವನ್ನು ಸೈಂಟ್ ಆನ್ಸ್ ಮಂಗಳೂರಿನಲ್ಲಿ ಮುಗಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ತಾವು ತಮ್ಮ ವೃತ್ತಿಯನ್ನು ನಾಲ್ಕು ವರ್ಷಗಳ ಕಾಲ ಸೇಕ್ರೆಡ್ ಹಾರ್ಟ್ ಸ್ಕೂಲ್ ಮೈಸೂರು ನಲ್ಲಿ ಹಾಗೂ ಸೇರ್ಕೆಡ್ ಹಾರ್ಟ್ ಕಾನ್ವೆಂಟ್ ಸ್ಕೂಲ್ ನಾಗಲ್ಯಾಂಡಿನಲ್ಲಿ ಮತ್ತು ಏಳು ವರ್ಷ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಲ್ಲಿಸಿ, ತದನಂತರ 04-08-1998 ರಂದು ಸಹಶಿಕ್ಷಕಿಯಾಗಿ ಸ.ಹಿ.ಪ್ರಾ.ಶಾಲೆ ಕಣ್ಣೂರು ಮಂಗಳೂರು ಇಲ್ಲಿ ಸರ್ಕಾರಿ ವೃತ್ತಿ ಸೇವೆಗೆ ಸೇರಿದರು.ಅಲ್ಲಿಂದ ಎಂಟು ವರ್ಷಗಳ ಕಾಲ ಸ.ಹಿ.ಪ್ರಾ.ಶಾಲೆ ತಿರುವೇಲು ಮಂಗಳೂರು ಇಲ್ಲಿ ಸೇವೆ ಸಲ್ಲಿಸಿ 2019ರಲ್ಲಿ ಕಡ್ಡಾಯ ವರ್ಗಾವಣೆಗೆ ಬಂದು ಇದುವರೆಗೆ ಪುತ್ತೂರು ತಾಲೂಕಿನ ಸ.ಉ.ಹಿ.ಪ್ರಾ.ಶಾಲೆ ಹಿರೆಬಂಡಾಡಿ ಇಲ್ಲಿ ಎರಡು ವರ್ಷಗಳ ಕಾಲ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.ಸುಮಾರು 23 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ಅದೆಷ್ಟೋ ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ಕರುಣಿಸಿ ಅವರ ಜೀವನದ ದಾರಿ ದೀಪವಾಗಿರುವಿರಿ. ತಮ್ಮ ನಿವೃತ್ತಿ ಬದುಕು ಸುಖ ನೆಮ್ಮದಿ ಸಮೃದ್ಧಿ ಆರೋಗ್ಯ ದಿಂದ ಕೂಡಿರಲಿ ಎಂದು ಶುಭಹಾರೈಕೆಗಳು.
ಶ್ರೀಮತಿ ಜುಲಿಯಾನ ಕ್ಲಿಜಾ ಗೋವಿಯಸ್
ಸಹಶಿಕ್ಷಕಿ ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ ಚಿಕ್ಕಮುಡ್ನೂರು ಪುತ್ತೂರು ತಾಲೂಕು.
ಶ್ರೀ ಫೆಲಿಕ್ಸ್ ಗೋವಿಯಸ್ ಮತ್ತು ಶ್ರೀಮತಿ ಸಿಸಿಲಿಯಾವೇಗಸ್ ಇವರ ಮಗಳಾಗಿ 12-08-1961ರಂದು ಜನಿಸಿದರು.ಪ್ರಾಥಮಿಕ ಶಿಕ್ಷಣವನ್ನು ಸಿದ್ದಕಟ್ಟೆ ಯಲ್ಲಿ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ಮೂಡಬಿದ್ರೆ ಯಲ್ಲಿ ಮತ್ತು ಟಿ ಸಿ.ಎಚ್ ವಿದ್ಯಾಭ್ಯಾಸವನ್ನು ಕಪಿತಾನಿಯೋ ಮಂಗಳೂರಿನಲ್ಲಿ ಮುಗಿಸಿದರು.ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ತಾವು 21-06-1994 ರಂದು ಸಹಶಿಕ್ಷಕಿಯಾಗಿ ಆನೇಕಲ್ ಬೆಂಗಳೂರು ಇಲ್ಲಿ ಸರ್ಕಾರಿ ವೃತ್ತಿ ಸೇವೆಗೆ ಸೇರಿದರು.ಅಲ್ಲಿಂದ 21-07-1998ರಿಂದ ಇದುವರೆಗೆ ಪುತ್ತೂರು ತಾಲೂಕಿನ ಸ.ಹಿ.ಪ್ರಾ.ಶಾಲೆ ಚಿಕ್ಕಮುಡ್ನೂರು ಇಲ್ಲಿ ಸೇವೆ ಸಲ್ಲಿಸಿದ್ದಾರೆ.ಸುಮಾರು 27ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ಅದೆಷ್ಟೋ ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ಕರುಣಿಸಿ ಅವರ ಜೀವನದ ದಾರಿ ದೀಪವಾಗಿರುವಿರಿ. ತಮ್ಮ ನಿವೃತ್ತಿ ಬದುಕು ಸುಖ ನೆಮ್ಮದಿ ಸಮೃದ್ಧಿ ಆರೋಗ್ಯ ದಿಂದ ಕೂಡಿರಲಿ ಎಂದು ಶುಭಹಾರೈಕೆಗಳು.
ವಿದ್ಯಾರ್ಥಿಗಳ ಸುಂದರ ಭವಿಷ್ಯದ ನಿರ್ಮಾಣದಲ್ಲಿ ತಮ್ಮ ಪ್ರಾಮಾಣಿಕ ಸೇವೆ ಸಲ್ಲಿಸಿ ಪ್ರಸ್ತುತ ನಿವೃತ್ತ ರಾಗುತ್ತಿರುವ ತಮ್ಮ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ. ಭಗವಂತನ ಸುಖ,ಶಾಂತಿ, ನೆಮ್ಮದಿ ನೀಡಲಿ ಎಂದು ಹಾರೈಸುತ್ತೇವೆ.