ಶಿಕ್ಷಕರ ಕಲ್ಯಾಣ ನಿಧಿ ಸದಸ್ಯತ್ವ ಕಾರ್ಡ್ ಬಾರದೆ ಇರುವ ಶಿಕ್ಷಕರಿಗಾಗಿ ಗುರು seve-15

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ
ಅಜೀವ ಸದಸ್ಯತ್ವ ಪಡೆಯುವ ಹಾಗೂ ನವೀಕರಿಸಲು ಆನ್‌ಲೈನ್‌ ತಂತ್ರಾಂಶವನ್ನು ಬಳಸಲಾಗುತ್ತಿದ್ದು, ಹೊಸ ಆಜೀವ ಸದಸ್ಯತ್ವ ಕಾರ್ಡನ್ನು ಪಡೆದ ನಂತರವೇ 2022-23 ನೇ ಸಾಲಿನ ಉನ್ನತ ವ್ಯಾಸಂಗ ಧನಸಹಾಯಕ್ಕೆ
ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.ಕೆಲವೊಂದು ಶಿಕ್ಷಕರುಗಳು ಅಜೀವ ಸದಸ್ಯತ್ವಕ್ಕೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಇದುವರೆಗೂನವೀಕರಣಗೊಳ್ಳದೆ ಇರುವುದರಿಂದ ಶಿಕ್ಷಕರುಗಳ ಮಕ್ಕಳ ಉನ್ನತ ವ್ಯಾಸಂಗ ಧನಸಹಾಯಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಶಿಕ್ಷಕರ ಹಿತದೃಷ್ಟಿಯಿಂದ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸುವಂತೆಮನವಿ ಸಲ್ಲಿಸಿರುವುದರಿಂದ, ಧನಸಹಾಯಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕವನ್ನು
ದಿನಾಂಕ: 15-04-2023ರ ವರೆಗೂ ವಿಸ್ತರಿಸಲಾಗಿದೆ. ಈ ದಿನಾಂಕದವರೆಗೆ ಬಂದಂತಹ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು, ನಂತರ ಯಾವುದೇ ಕಾರಣಕ್ಕೂ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ ಎಂದು ತಿಳಿಸಿದೆ.

ಶಿಕ್ಷಕರ ಕಲ್ಯಾಣ ನಿಧಿ ಸದಸ್ಯತ್ವ ಕಾರ್ಡ್ ಗಾಗಿ ಗುರು seve-14 ರ ಮೂಲಕ ಜಿಲ್ಲೆಯಾದ್ಯಂತ ಮಾಹಿತಿಯನ್ನು ಪಡೆದು 200ಕ್ಕಿಂತಲೂ ಅಧಿಕ ಶಿಕ್ಷಕರಿಗೆ ಸಕಾಲದಲ್ಲಿ ಕಾರ್ಡ್ ಬರುವಂತೆ ಮಾಡುವುದರಲ್ಲಿ ನಾವು ಯಶಸ್ವಿ ಆಗಿದ್ದೇವೆ ಈ ಕಾರ್ಯದಲ್ಲಿ ಸಹಕರಿಸಿದ ಶಿಕ್ಷಕರ ಕಲ್ಯಾಣ ನಿಧಿಯ ಎಲ್ಲಾ ಅಧಿಕಾರಿ ವರ್ಗ ದವರಿಗೂ ವಂದನೆಗಳನ್ನು ಸಲ್ಲಿಸುತ್ತಾ ಸಹಕರಿಸಿದ ರಾಜ್ಯ ಸಂಘ ದ ಪದಾಧಿಕರಿಗಳಿಗೂ ವಂದನೆಗಳನ್ನು ಸಲ್ಲಿಸುತ್ತೇವೆ.ಮುಂದುವರಿದು ಇನ್ನೂ ಕೂಡಾ ಸದಸ್ಯತ್ವ ಕಾರ್ಡ್ ಬಾರದೇ ಇರುವ ಶಿಕ್ಷಕರು ಈ ಕೆಳಗಿನ ಗುರು seve-14google ಫಾರ್ಮ್ ಮೂಲಕ ಮಾಹಿತಿಯನ್ನು ನೀ ಡುವಂತೆ ವಿನಂತಿ
ಮಾಹಿತಿಯನ್ನು ನೀಡಲು
ಅಂತಿಮ ದಿನಾಂಕ 2/ 04/2023

ಅಧ್ಯಕ್ಷರು/ಕಾರ್ಯದರ್ಶಿ/ಸರ್ವ ಸದಸ್ಯರು
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ ಬೆಂಗಳೂರು

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಜಿಲ್ಲೆಯ ಸಮಸ್ತ ತಾಲೂಕು ಘಟಕ

WhatsApp Group Join Now
Telegram Group Join Now
Sharing Is Caring:

Leave a Comment