ಧೂಮಕೇತುವನ್ನು ವೀಕ್ಷಿಸಿ ಇಂದು ಮತ್ತು ನಾಳೆ ಹೆಚ್ಚಿನ ಮಾಹಿತಿ ಇಲ್ಲಿದೆ

ಹಿಮಯುಗದಲ್ಲಿ ಭೂಮಿಯ ಸಮೀಪ ಬಂದಿದ್ದ ಹಸಿರು ಧೂಮಕೇತು 50 ಸಾವಿರ ವರ್ಷಗಳ
ಬಳಿಕ ಭೂಮಿಯ ಅತಿ ಸಮೀಪಕ್ಕೆ ಬರುತ್ತಿದೆ. ಫೆಬ್ರವರಿ 1 ಮತ್ತು 2 ರಂದು ನಸುಕಿನಲ್ಲಿ ಉತ್ತರಧ್ರುವ ನಕ್ಷತ್ರದ ಸಮೀಪ
ಇದು ಕಾಣಿಸಿಕೊಳ್ಳಲಿದೆ

IMG 20230201 WA0032

‘ನಸುಕಿನ 3 ಗಂಟೆಯಲ್ಲಿ ಉತ್ತರ ದಿಕ್ಕಿನ ಡ್ರಾಕೊ
ನಕ್ಷತ್ರಪುಂಜದ ಸಮೀಪ ಧೂಮಕೇತುವನ್ನು ಬರಿಗಣ್ಣಿನಲ್ಲಿ ವೀಕ್ಷಿಸಬಹುದಾಗಿದೆ.
ನಸುಕಿನಲ್ಲಿ ಸಪ್ತರ್ಷಿ ಮಂಡಲದ ಸಮೀಪ ಇದನ್ನು
ಕಣ್ಣುಂಬಿಕೊಳ್ಳಬಹುದಾಗಿದೆ’ ಎಂದು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

‘ಸ್ವಚ್ಛ ನೀಲಾಕಾಶದಲ್ಲಿ ಈ ಅದ್ಭುತ ದೃಶ್ಯವನ್ನು
ಪ್ರತಿಯೊಬ್ಬರೂ ನೋಡಬಹುದಾಗಿದೆ. ಇದೊಂದು ವಿಭಿನ್ನ ರೀತಿಯ ಧೂಮಕೇತುವಾಗಿದ್ದು, ಸೌರವ್ಯೂಹದ
ಆಚೆಗೆ ಇರುವ ಊರ್ತ್ ಕ್ಲಡ್‌ನಿಂದ ಹೊರಬಂದು
ಹಸಿರು ಧೂಮಕೇತು ಎಂದು ಕರೆಸಿಕೊಂಡಿದೆ. ಇದು
ಭೂಮಿಯಿಂದ 16 ಕೋಟಿ ಕಿ.ಮೀ ದೂರವಿದ್ದು, ಈಗ
4.2 ಕೋಟಿ ಕಿ.ಮೀ ಸಮೀಪಕ್ಕೆ ಬರಲಿದೆ. ಇದು
ಮತ್ತೊಮ್ಮೆ ಭೂಮಿ ಸಮೀಪಕ್ಕೆ ಬರಲು 50 ಸಾವಿರ
ವರ್ಷಗಳು ಬೇಕು’ ಎಂದು ಮಾಹಿತಿ ನೀಡಿದ್ದಾರೆ.

Sharing Is Caring:

Leave a Comment