ಗ್ರಾಮ ಪಂಚಾಯತಿ ಶಿಕ್ಷಣ ಪಡೆ ರಚಿಸುವ ಕುರಿತು ಮಾಹಿತಿ ಇಲ್ಲಿದೆ

ಭಾರತ ಸಂವಿಧಾನದ ಕಲಂ 21(ಎ) ಪ್ರಕಾರ 6 ರಿಂದ 14 ವರ್ಷದ ಪ್ರತಿ ಮಗು 8 ವರ್ಷಗಳ ಶಾಲಾ
ಶಿಕ್ಷಣವನ್ನು ಪಡೆಯುವುದು ಮೂಲಭೂತ ಹಕ್ಕಾಗಿರುತ್ತದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್
ರಾಜ್ ಅಧಿನಿಯಮ, 1993 ರ ಪ್ರಕರಣ 58 ರಲ್ಲಿ ಗ್ರಾಮ ಪಂಚಾಯಿತಿಯ ಪ್ರಕಾರ್ಯಗಳ ಬಗ್ಗೆ ವಿವರಿಸಲಾಗಿದ್ದು,
ಅದರಲ್ಲಿ ಗ್ರಾಮ ಪಂಚಾಯಿತಿಯು ಪ್ರಾಥಮಿಕ ಶಾಲೆಗೆ ಮಕ್ಕಳ ಸಾರ್ವತ್ರಿಕ ದಾಖಲಾತಿಯನ್ನು
ಖಚಿತಪಡಿಸಿಕೊಳ್ಳುವುದು ಪ್ರಮುಖವಾದ ಕಡ್ಡಾಯ ಕಾರ್ಯವಾಗಿರುತ್ತದೆ.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರಲು The Karnataka Right of
Children to Free and Compulsory Education Rules, 2012 ರನ್ವಯ ಗ್ರಾಮ ಪಂಚಾಯಿತಿಗಳು
ಗ್ರಾಮ ಶಿಕ್ಷಣ ರಿಜಿಸ್ಟರ್‌ನ್ನು ನಿರ್ವಹಿಸಬೇಕಾಗಿರುತ್ತದೆ. The Karnataka Right of Children to Free and
Compulsory Education (Amendment) Rules, 2014 ರನ್ವಯ ಮಕ್ಕಳ ಹಾಜರಾತಿಗೆ ಸಂಬಂಧಿಸಿದಂತೆ
ಸ್ಥಳೀಯ ಸಂಸ್ಥೆಗಳು ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ತಿಳಿಸಲಾಗಿದೆ.

ಮಾನ್ಯ ಉಚ್ಛ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 15768/2013 ರ ಆದೇಶದಂತೆ ಗ್ರಾಮ
ಪಂಚಾಯತಿಯು ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ನಡೆಸಬೇಕಾಗಿರುತ್ತದೆ.

ಮೇಲೆ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಹಾಗೂ
ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ಮಾಡಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಈ ಕೆಳಕಂಡಂತೆ ಗ್ರಾಮ
ಶಿಕ್ಷಣ ಪಡೆ ರಚನೆ ಮಾಡಿ ಆದೇಶಿಸಿದೆ.

1ಅಧ್ಯಕ್ಷರು/ ಆಡಳಿತಾಧಿಕಾರಿ, ಗ್ರಾಮ ಪಂಚಾಯತಿ ಅಧ್ಯಕ್ಷರು
2.ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಕಿರಿಯ, ಹಿರಿಯಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಗಳ ಶಾಲಾಭಿವೃದ್ಧಿಮತ್ತು ಮೇಲುಸ್ತುವಾರಿ ಸಮಿತಿಗಳ ಅಧ್ಯಕ್ಷರು.ಸದಸ್ಯರು
3.ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಕಿರಿಯ, ಹಿರಿಯ
ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರು
ಸದಸ್ಯರು
4.ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿಕ್ಷಣ ಸಂಯೋಜಕರು(ಇಸಿ) ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳುಸದಸ್ಯರು
5.ಅಂಗನವಾಡಿ ಕೇಂದ್ರದ ಮಹಿಳಾ ಮೇಲ್ವಿಚಾರಕರುಸದಸ್ಯರು
6.ಗ್ರಾಮ
ಪಂಚಾಯತಿ ವ್ಯಾಪ್ತಿಯ ಅಂಗನವಾಡಿ
ಕಾರ್ಯಕರ್ತೆಯರು.
ಸದಸ್ಯರು
7.ಗ್ರಾಮ ಪಂಚಾಯತಿ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರುಸದಸ್ಯರು
8.ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಂಥಾಲಯ
ಮೇಲ್ವಿಚಾರಕರು
ಸದಸ್ಯರು
9.ಗ್ರಾಮ ಪಂಚಾಯತಿ ಮಟ್ಟದ ಗ್ರಾಮೀಣ ಪುನರ್‌ವಸತಿ
ಕಾರ್ಯಕರ್ತರು (ವಿ.ಆರ್.ಡಬ್ಲ್ಯೂ)
ಸದಸ್ಯರು
10.ನಿವೃತ್ತ ಪ್ರಾಥಮಿಕ / ಪ್ರೌಢ ಶಾಲಾ ಶಿಕ್ಷಕರುಗಳು
ಇಬ್ಬರು
ಸದಸ್ಯರು
11.ಪ್ರೌಢ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಒಂದಕ್ಕಿಂತ
ಹೆಚ್ಚು ಪ್ರೌಢ ಶಾಲೆಗಳು ಇದ್ದಾಗ ವಾರ್ಷಿಕವಾಗಿ
ರೋಟೆಷನ್ ಆಧಾರದ ಮೇಲೆ ಆಯ್ಕೆ ಮಾಡಬೇಕು.
(ಅದರಲ್ಲಿ ಒಬ್ಬರು ವಿದ್ಯಾರ್ಥಿ ಮತ್ತು ಇನ್ನೊಬ್ಬರು
ವಿದ್ಯಾರ್ಥಿನಿ ಇರಬೇಕು.)
ಸದಸ್ಯರು
12.ಪಂಚಾಯತಿ ಅಭಿವೃದ್ಧಿ ಅಧಿಕಾರಿಸದಸ್ಯ ಕಾರ್ಯದರ್ಶಿ

ಉಲ್ಲೇಖ (1) ರ ಸುತ್ತೋಲೆಯಲ್ಲಿ 2020-21ನೇ ಸಾಲಿನಲ್ಲಿ ಶಾಲೆಗಳು ಸಕಾಲದಲ್ಲಿ ತೆರೆಯದೆ
ಇರುವುದರಿಂದ, ಪರ್ಯಾಯ ಮಾರ್ಗಗಳ ಮೂಲಕ ಮಕ್ಕಳನ್ನು ನಿರಂತರವಾಗಿ ಕಲಿಕಾ ಪ್ರಕ್ರಿಯೆಯಲ್ಲಿ
ತೊಡಗಿಸುವುದು ಶಿಕ್ಷಣ ಇಲಾಖೆಯ ಜವಾಬ್ದಾರಿಯಾಗಿರುವುದರಿಂದ ವಿದ್ಯಾಗಮ ಕಾರ್ಯಕ್ರಮವನ್ನು ಜಾರಿಗೆ
ತರಲಾಗಿದ್ದು, ಮಕ್ಕಳು ನಿರಂತರವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಅಧಿಕಾರಿಗಳು
ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸದರಿ ಕಾರ್ಯಕ್ರಮದಡಿ ವಿವರಿಸಲಾಗಿದೆ. ಆದರಂತೆ ವಿದ್ಯಾಗಮ
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಿಳಿಸಿದೆ.

ಮಾನ್ಯ ಉಚ್ಛ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು
ಶಾಲೆಗೆ ಸೇರಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದು ಅವಶ್ಯವಾಗಿದೆ. ಈ ಕಾರ್ಯದಲ್ಲಿ ಮಾನ್ಯ ನ್ಯಾಯಾಲಯವು
ಆದೇಶಿಸಿರುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಗಳು ಪ್ರಮುಖ ಪಾತ್ರ ವಹಿಸಬೇಕಾಗಿರುತ್ತದೆ.

ಗ್ರಾಮ ಪಂಚಾಯತಿ ಶಿಕ್ಷಣ ಪಡೆಯು ಕೈಗೊಳ್ಳಬೇಕಾದ ಕಾರ್ಯ ಯೋಜನೆಯನ್ನು ಈ ಕೆಳಗಿನಂತೆ
ಈ ದಿಶೆಯಲ್ಲಿ
ಗುರುತಿಸಲಾಗಿದೆ.

  1. Righ to Education Act, 2009 and The Karnataka Right of Children
    to Free and Compulsory Education Rules, 2012
    ಪಂಚಾಯಿತಿಗಳು ಗ್ರಾಮ ಶಿಕ್ಷಣ ರಿಜಿಸ್ಟರ್‌ನ್ನು ನಿರ್ವಹಿಸತಕ್ಕದ್ದು.
  2. ರಾಜ್ಯದ ಶಾಲೆಗಳಲ್ಲಿ ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮದಡಿ ಗ್ರಾಮ ಕಲಿಕಾ
    ಕೇಂದ್ರದಲ್ಲಿ ನೆರೆ ಹೊರೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ
    1) ಸೂಕ್ತ ಸ್ಥಳಾವಕಾಶ ಕಲ್ಪಿಸುವುದು.
    2) ಮಾಸ್ಕ್‌ಗಳನ್ನು ವಿತರಿಸುವುದು.

3) ಕೈ ಸ್ವಚ್ಛಗೊಳಿಸಲು ಸಾಬೂನು ನೀರಿನ ವ್ಯವಸ್ಥೆ ಮಾಡುವುದು.

4) ಪ್ರೌಢ ಶಾಲೆಯಲ್ಲಿ ಕಲಿಕಾ ಚಟುವಟಿಕೆಗಾಗಿ ಅವಶ್ಯವಿದ್ದಲ್ಲಿ ದೂರದರ್ಶನ
ಒದಗಿಸುವ ವ್ಯವಸ್ಥೆ ಮಾಡುವುದು.

  1. ಕೋವಿಡ್-19 ನಿಂದಾಗಿ ಶಾಲೆಗಳು ಮುಚ್ಚಿದ್ದು, ಮಕ್ಕಳ ಕಲಿಕೆಗೆ
    ತೊಂದರೆಯಾಗದಂತೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಸೂಕ್ತ ಸ್ಥಳಗಳನ್ನು
    ಗುರುತಿಸಿ ಮಕ್ಕಳಿಗೆ ಸೂಕ್ತ ಕಲಿಕಾ ಕೇಂದ್ರಗಳನ್ನು ತೆರೆಯಬೇಕು.
  2. ಎಲ್ಲಾ
    ಗ್ರಂಥಾಲಯಗಳನ್ನು ಬಳಸಿಕೊಳ್ಳುತ್ತಿರುವುದನ್ನು
    ಮಕ್ಕಳುಗಳು
    ಖಚಿತಪಡಿಸಿಕೊಳ್ಳಬೇಕು.
  3. 6 ರಿಂದ 18 ವರ್ಷದ ಎಲ್ಲಾ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಉಚಿತವಾಗಿ
    ನೊಂದಣಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳುವುದು.
  4. 6 ರಿಂದ 14 ವಯೋಮಾನದ ಮಕ್ಕಳು ಶಾಲೆಗೆ ನಿರಂತರವಾಗಿ ಹಾಜರಾಗುತ್ತಿರುವ
    ಬಗ್ಗೆ ಖಚಿತಪಡಿಸಿಕೊಳ್ಳುವುದು.
  5. ಗ್ರಾಮದಲ್ಲಿ ವಾಸವಿದ್ದು ಶಾಲೆಗೆ ಗೈರು ಹಾಜರಾಗುತ್ತಿರುವ ಮಕ್ಕಳನ್ನು ಕಡ್ಡಾಯವಾಗಿ
    ಹಾಜರುಪಡಿಸುವಲ್ಲಿ ಸೂಕ್ತ ಕಾರ್ಯತಂತ್ರಗಳನ್ನು ರೂಪಿಸುವುದು.
  6. ವಲಸೆ ಹೋಗುತ್ತಿರುವ ಪಾಲಕರ ಮಕ್ಕಳಿಗೆ ಶಾಲೆಯಲ್ಲಿ ಉಳಿಯುವಂತೆ ಮಾಡಲು
    ಸೂಕ್ತ ಕಾರ್ಯತಂತ್ರಗಳನ್ನು ರೂಪಿಸುವುದು.
  7. ಅಂಗನವಾಡಿ ಕಾರ್ಯಕರ್ತೆಯರು ನೋಂದಣಿ ಮಾಡಿಕೊಂಡಿರುವ ಮಕ್ಕಳಲ್ಲಿ, ಶಾಲಾ
    ವಯಸ್ಸಿನ ಅರ್ಹ ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆದ ಬಗ್ಗೆ, ಶಾಲಾ
    ದಾಖಲಾತಿ ಹಾಗೂ ಅಂಗನವಾಡಿ ದಾಖಲೆ ವಹಿಗಳನ್ನು ತಾಳೆ ನೋಡಿ ಎಲ್ಲಾ
    ಮಕ್ಕಳು ದಾಖಲಾತಿ ಮಾಡಿಕೊಂಡಿದ್ದರ ಬಗ್ಗೆ ಖಚಿತ ಪಡಿಸಿಕೊಳ್ಳುವುದು.

10, ಒಂದನೇ ತರಗತಿಗೆ, 5ನೇ ತರಗತಿಯಿಂದ 6ನೇ ತರಗತಿ ಏಳನೇ ತರಗತಿಯಿಂದ
ಎಂಟನೇ ತರಗತಿಗೆ, ಎಂಟನೇ ತರಗತಿಯಿಂದ 9ನೇ ತರಗತಿಯ ಮಕ್ಕಳು ಪ್ರವೇಶ
ಪಡೆದ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.

  1. ಉಲ್ಲೇಖ (2) ರ ಅಧಿಸೂಚನೆಯಂತೆ, ಸ್ಥಳೀಯ ಸಂಸ್ಥೆಗಳ ಕರ್ತವ್ಯಗಳ ಕುರಿತು
    ಸ್ಪಷ್ಟಪಡಿಸಿದ್ದು, ಅವುಗಳು ಯಥಾವತ್ತಾಗಿ ಜಾರಿಯಾಗುತ್ತಿರುವ ಬಗ್ಗೆ ಕಾಲಕಾಲಕ್ಕೆ
    ಖಚಿತಪಡಿಸಿಕೊಳ್ಳುವುದು.
  2. ಚೈಲ್ಡ್ ಟ್ರ್ಯಾಕ್ ಮಾಡುವ ಮೂಲಕ ಮಕ್ಕಳು ಯಾವುದಾದರೂ ಶಾಲೆಯಲ್ಲಿ
    ಹಾಜರಾಗುತ್ತಿರುವ ಬಗ್ಗೆ ಖಚಿತಪಡಿಸುವುದು.
  3. ಬಯಲು ಶೌಚ ಮುಕ್ತ ಗ್ರಾಮ ಮಾದರಿಯಲ್ಲಿ ಪ್ರತಿ ಗ್ರಾಮವು “100% ದಾಖಲಾತಿ
    ಮತ್ತು ಹಾಜರಾತಿ ಹೊಂದಿರುವ ಗ್ರಾಮ” ಎಂದು ಘೋಷಣೆ ಮಾಡುವುದು.
  4. ಕಾರ್ಯಪಡೆಯ ಅಜೆಂಡಾದಲ್ಲಿ ಮಕ್ಕಳ ರಕ್ಷಣಾ ಕಾಯ್ದೆ, ಬಾಲಕಾರ್ಮಿಕರ ಮತ್ತು
    ಬಾಲ್ಯ ವಿವಾಹಗಳ ನಿಷೇಧ ವಿಷಯಗಳ ಮತ್ತು ಅವುಗಳ ಉಲ್ಲಂಘನೆಗೆ ನೀಡುವ
    ಶಿಕ್ಷೆಗಳ ಬಗ್ಗೆ ಅರಿವು ಮೂಡಿಸುವುದು.
  5. ಹೊಸ ಶಿಕ್ಷಣ ನೀತಿ ಬಗ್ಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಈ ಕೆಳಕಂಡ ವಿಷಯಗಳ
    ಬಗ್ಗೆ ಚರ್ಚಿಸತಕ್ಕದ್ದು.
  6. ಶಾಲೆಗಳಲ್ಲಿ 100% ಮಕ್ಕಳ ದಾಖಲಾತಿ
    ಹೊಂದಿರುವುದನ್ನು
    ಖಚಿತಪಡಿಸಿಕೊಳ್ಳುವುದು.
  7. ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆಯು ಶೂನ್ಯವಾಗಿಸುವುದು.
  8. ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿರುವುದು.
  9. ಶಾಲೆಗಳಲ್ಲಿ ಸುರಕ್ಷಿತ ಪರಿಸರವನ್ನು ಕಲ್ಪಿಸಿರುವುದು.
  10. ಶಾಲಾ ಪರಿಸರದಲ್ಲಿ ತಾರತಮ್ಯ ಮಾಡದೆ ಒಗ್ಗೂಡಿರುವ ಪರಿಸರ ವ್ಯವಸ್ಥೆ
    ಕಲ್ಪಿಸಿರುವುದು.
  11. ಶಾಲಾ ಮಕ್ಕಳು ಸ್ಥಳೀಯ ಕುಶಲಕರ್ಮಿಗಳೊಡನೆ ಸಹಾಯಕರಾಗಿ
    ಕಾರ್ಯನಿರ್ವಹಿಸಿ ಕೌಶಲ್ಯ ವೃದ್ಧಿಸಿಕೊಳ್ಳಲು ಅವಕಾಶ ಕಲ್ಪಿಸುವುದು.
  12. ಗ್ರಾಮ ಶಿಕ್ಷಣ ಪಡೆ ಪ್ರತಿ ತ್ರೈಮಾಸಿಕಕ್ಕೊಮ್ಮೆ ಕಡ್ಡಾಯವಾಗಿ ಸಭೆ ಸೇರಿ ಪ್ರಗತಿಯನ್ನು
    ಪರಿಶೀಲನೆ ಮಾಡುವುದು.

ಮೇಲೆ ವಿವರಿಸಿರುವಂತೆ, ಕ್ರಮಕೈಗೊಂಡು, ಭಾರತ ಸಂವಿಧಾನ, The Karnataka Right of
Children to Free and Compulsory Education Rules, 2012 ಮತ್ತು ಕರ್ನಾಟಕ ಗ್ರಾಮ ಸ್ವರಾಜ್
ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ಆಶಯವನ್ನು ಹಾಗೂ ಮಾನ್ಯ ಉಚ್ಛ ನ್ಯಾಯಾಲಯದ
ಆದೇಶವನ್ನು ಪಾಲನೆ ಮಾಡುವ ಮೂಲಕ ಮಕ್ಕಳ ಶಿಕ್ಷಣದ ಹಕ್ಕನ್ನು ಜಾರಿಗೊಳಿಸಲು ಎಲ್ಲಾ ಗ್ರಾಮ
ಪಂಚಾಯಿತಿಗಳ ಗ್ರಾಮ ಶಿಕ್ಷಣ ಪಡೆಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ತಿಳಿಸಿದೆ.

Sharing Is Caring:

Leave a Comment