ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮತದಾರ ಪಟ್ಟಿಗೆ ಹೆಸರು ಸೇರ್ಪಡೆ ಗೊಳಿಸುವ ಕುರಿತು

WhatsApp Group Join Now
Telegram Group Join Now

ಶಿಕ್ಷಕರ ಕ್ಷೇತ್ರ ಮತ್ತು ಪದವೀಧರ ಕ್ಷೇತ್ರ ದ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಲು ಮೇ 6 ಕೊನೆಯ ದಿನ

💎 ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮತದಾರ ಪಟ್ಟಿಗೆ ಹೆಸರು ಸೇರ್ಪಡೆ ಗೊಳಿಸಲು ಅಕ್ಟೋಬರ್ 25 ರ ವರೆಗೆ ಅವಕಾಶ ಕಲ್ಪಿಸಲಾಗಿದೆ

ಅರ್ಹತೆ

💎 ಈಗಾಗಲೇ ಪದವಿ ಮುಗಿಸಿ ಮೂರು ವರ್ಷವನ್ನು ಪೂರ್ಣಗೊಳಿಸಿರುವ ಎಲ್ಲಾ ವ್ಯಕ್ತಿಗಳು ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆಗೊಳಿಸಲು ಅರ್ಹರಾಗಿರುತ್ತಾರೆ

💎 ಸಂಬಂಧಿಸಿದ ನಮೂನೆ ಮತ್ತು ಪದವಿಯ ಮೂರು ವರ್ಷದ ಅಂಕಪಟ್ಟಿಯನ್ನು ಗೆಜೆಟೆಡ್ ಅಧಿಕಾರಿಗಳಿಂದ ಮೇಲುರುಜು ಹಾಕಿಸಿ ತಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ ತಮ್ಮ ವ್ಯಾಪ್ತಿಯ ತಾಲೂಕು ಕಚೇರಿಗೆ ನೀಡಿ ತಮ್ಮ ಹೆಸರು ಮತದಾರ ಪಟ್ಟಿಯಲ್ಲಿ ಬರುವಂತೆ ಎಲ್ಲರೂ ಕ್ರಮ ಕೈಗೊಳ್ಳುವುದು.

💎 ತಾವು ಯಾವ ತಾಲೂಕ್ ಕಚೇರಿ ವ್ಯಾಪ್ತಿಗೆ ಒಳಪಡುತ್ತೀರೋ ಅಲ್ಲೇ ನೀಡಿ ತಮ್ಮ ತಮ್ಮ ಹೆಸರನ್ನು ಸೇರಿಸುವುದು.

💎 ಈ ಪ್ರಕ್ರಿಯೆಯನ್ನು ಎಲ್ಲರೂ ಅಕ್ಟೋಬರ್ 25-2023ರ ಮೊದಲು ಪೂರ್ಣಗೊಳಿಸುವುದು..

IMG 20240504 WA0065
IMG 20240504 WA0064

ನೈರುತ್ಯ ಪದವೀಧರ ಕ್ಷೇತ್ರದ ಒಳಪಡುವ ಜಿಲ್ಲೆಗಳು.

ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಮಡಿಕೇರಿ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ಚೆನ್ನಗಿರಿ ತಾಲೂಕು.

ವಿಶೇಷ ಸೂಚನೆ : ಪ್ರತಿ ಸಲದ ಚುನಾವಣೆಗೆ ಹೊಸದಾಗಿ ಹೆಸರನ್ನು ಮತ ಪಟ್ಟಿಗೆ ಸೇರಿಸುವುದು ಕಡ್ಡಾಯ

ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಪೂರೈಸಿದ ಎಲ್ಲಾ ಶಿಕ್ಷಕ ಬಂಧುಗಳು ಮತ್ತು ನಿಮ್ಮ ಪರಿಚಯದ ಪದವಿ ಪೂರೈಸಿದ ಅರ್ಹ ಪದವೀಧರರಿಗೆ ಮತ ಪಟ್ಟಿಗೆ ಹೆಸರನ್ನು ಸೇರ್ಪಡೆ ಗೊಳಿಸಲು ಕ್ರಮ ಕೈಗೊಳ್ಳುವಂತೆ ಈ ಮೂಲಕ ವಿನಂತಿ

ಅಧ್ಯಕ್ಷರು / ಕಾರ್ಯದರ್ಶಿ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ ಬೆಂಗಳೂರು

ದಕ್ಷಿಣ ಕನ್ನಡ ಜಿಲ್ಲೆ

ಮತ್ತು ಎಲ್ಲಾ ತಾಲೂಕಿನ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು

WhatsApp Group Join Now
Telegram Group Join Now
Sharing Is Caring:

Leave a Comment