2021-22 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾ ಕೂಟವು ದಿನಾಂಕ 11/03/2022 ಮತ್ತು 12/03/2022 ರಂದು ಮಂಗಳ ಕ್ರೀಡಾಂಗಣ ಮಂಗಳೂರು ಇಲ್ಲಿ ನಡೆಯಲಿದೆ ಹೆಚ್ಚಿನ ಮಾಹಿತಿ ಇಲ್ಲಿದೆ

IMG 20220307 WA0032

ದಕ್ಷಿಣ ಕನ್ನಡ ಜಿಲ್ಲಾಡಳಿತ , ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಜಿಲ್ಲಾ ಘಟಕ ದಕ್ಷಿಣ ಕನ್ನಡ ಜಿಲ್ಲೆಯ ಸಹಯೋಗದೊಂದಿಗೆ 2021_ 22 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ದಿನಾಂಕ 11-03- 2022 ರಂದು ಪೂರ್ವಾಹ್ನ 09 – 00 ಗಂಟೆಗೆ ಮಂಗಳೂರು ನಗರದ ಮಂಗಳಾ ಕ್ರೀಡಾಂಗಣದಲ್ಲಿ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ದಿನಾಂಕ 12 – 03 2022 ನೇ ಪೂರ್ವಹ್ನ 09-00 ಗಂಟೆಗೆ ಸರಕಾರಿ ನೌಕರರ ಸಭಾ ಭವನ ಮಂಗಳೂರು ಇಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ.

ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಲು ನಿಯಮಾವಳಿಗಳು

1.ಸದರಿ ಕ್ರೀಡಾಕೂಟದಲ್ಲಿ ರಾಜ್ಯ ಸರ್ಕಾರದ ಎಲ್ಲಾ ಕಾಯಂ ನೌಕರರು ಭಾಗವಹಿಸಲು ಅರ್ಹರಾಗಿರುತ್ತಾರೆ.

2. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿನ ತರಬೇತುದಾರರು ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಕರು ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಕ್ರೀಡಾ ಕೋಟಾದಡಿ ನೇಮಕಗೊಂಡ ನೌಕರರು ಭಾಗವಹಿಸಲು ಅರ್ಹರಾಗಿರುವುದಿಲ್ಲ.

3.ಎಲ್ಲಾ ಕ್ರೀಡಾಪಟುಗಳು ಇಲಾಖೆ ಮುಖ್ಯಸ್ಥರಿಂದ ನೀಡಲಾದ ಅಧಿಕೃತ ಗುರುತಿನ ಚೀಟಿ ಕಡ್ಡಾಯವಾಗಿ ಸಲ್ಲಿಸತಕ್ಕದ್ದು .

4. ಸಂಗೀತ-ನೃತ್ಯ ಮತ್ತು ಕಲಾ ಶಿಕ್ಷಕರು , ಸಂಗೀತ-ನೃತ್ಯ ಮತ್ತು ಕರಕುಶಲ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುವುದಿಲ್ಲ.

5. ದಿನಗೂಲಿ ನೌಕರರು ಅರೆಕಾಲಿಕ ನೌಕರರು ಕ್ಷೇಮಾಭಿವೃದ್ಧಿ ನೌಕರರು ಗುತ್ತಿಗೆ ನೌಕರರು ಮತ್ತು ಇತರೆ ಕಾಯಂ ಅಲ್ಲದ ನೌಕರರು ಭಾಗವಹಿಸಲು ಅರ್ಹರಾಗಿರುವುದಿಲ್ಲ.

6. ಪೊಲೀಸ್ ಇಲಾಖೆ ಅರಣ್ಯ ಇಲಾಖೆ ಗಳಲ್ಲಿ ಸಮವಸ್ತ್ರ ವೃಂದಕ್ಕೆ ಪ್ರತ್ಯೇಕ ಕ್ರೀಡಾಕೂಟಗಳಿರುವುದರಿಂದ ಈ ಎರಡೂ ಇಲಾಖೆಗಳ ಕಚೇರಿ ಹಾಗೂ ಲಿಪಿಕ ನೌಕರರು /ಕಚೇರಿ ಸಿಬ್ಬಂದಿ ಮಾತ್ರ ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿದೆ

7. ಅಗ್ನಿಶಾಮಕ ಇಲಾಖೆ ಮತ್ತು ಅಬಕಾರಿ ಇಲಾಖೆಯ ಲಿಪಿಕ ನೌಕರರು / ಕಚೇರಿ ಸಿಬ್ಬಂದಿ ಮಾತ್ರ ಭಾಗವಹಿಸಬಹುದು ಆದರೆ ಈ ಇಲಾಖೆಯ ಉಳಿದ ಅಧಿಕಾರಿ ನೌಕರರಲ್ಲಿ ಕ್ರೀಡಾ ಕೋಟಾದಡಿ ನೇಮಕವಾದವರು ಹಾಗೂ ಸಮವಸ್ತ್ರ ಸಿಬ್ಬಂದಿಯವರು ಭಾಗವಹಿಸಲು ಅವಕಾಶವಿಲ್ಲ ಈ ಬಗ್ಗೆ ಕ್ರೀಡಾಕೂಟದ ಸಂದರ್ಭದಲ್ಲಿ ಮೇಲಧಿಕಾರಿಗಳ ದೃಢೀಕರಣ ಹಾಗೂ ನೇಮಕಾತಿ ಆದೇಶ ಪತ್ರ ಒದಗಿಸತಕ್ಕದ್ದು.

8. 1 ಟ್ರ್ಯಾಕ್ ಮತ್ತು 2 ಫೀಲ್ಡ್ ಅಥವಾ 2 ಟ್ರ್ಯಾಂಕ್ ಮತ್ತು 1 ಫೀಲ್ಡ್ ಸೇರಿ ಒಟ್ಟು ಮೂರು ಆಟಗಳಲ್ಲಿ ಮಾತ್ರ ಭಾಗವಹಿಸತಕ್ಕದ್ದು.

9. 45 ವರ್ಷ ಮೇಲ್ಪಟ್ಟ ಸ್ಪರ್ಧಿಗಳು 45 ವರ್ಷ ಕ್ಕೊಳಪಟ್ಟವರಿಗೆ ಇರುವ ಸ್ಪರ್ಧೆಗಳಲ್ಲಿ ಸ್ವಂತ ಜವಾಬ್ದಾರಿ ಮೇಲೆ ಭಾಗವಹಿಸಬಹುದು. 45 ವರ್ಷ ಕ್ಕೊಳಪಟ್ಟವರು 45 ವರ್ಷ ಮೇಲ್ಪಟ್ಟವರ ಜೊತೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.

10. ಭಾಗವಹಿಸಲಿಚ್ಚಿಸುವ ಎಲ್ಲಾ ಖಾಯಂ ಸರ್ಕಾರಿ ನೌಕರರು ತಮ್ಮ ಭಾವಚಿತ್ರದೊಂದಿಗೆ ಇಲಾಖೆಯ ಮುಖ್ಯಸ್ಥರಿಂದ ದೃಢೀಕರಿಸಲು ಪಟ್ಟ ಪ್ರಮಾಣಪತ್ರವನ್ನು ತರತಕ್ಕದ್ದು (ಜನ್ಮದಿನಾಂಕ ದೊಂದಿಗೆ) ಗುಂಪು ಭಾವಚಿತ್ರವನ್ನು ತರಲು ಅವಕಾಶವಿರುವುದಿಲ್ಲ

11. ಸದರಿ ಕ್ರೀಡಾಕೂಟದಲ್ಲಿ ಭಾಗವಹಿಸಲಿಚ್ಛಿಸುವವರು ಪ್ರವೇಶ ಪತ್ರವನ್ನು ಇಲಾಖೆಯ ಇಲಾಖೆಯಿಂದ ಭಾಗವಹಿಸಲಿರುವ ಎಲ್ಲಾ ಕ್ರೀಡಾಪಟುಗಳ ಪಟ್ಟಿಯನ್ನು ಇಲಾಖೆಯ / ಕಚೇರಿಯ ಮುಖ್ಯಸ್ಥರದೃಢೀಕರಣದೊಂದಿಗೆ ಸಲ್ಲಿಸುವುದು.

12. ಪ್ರವೇಶ ಪತ್ರದಲ್ಲಿ ಮೊಟ್ಟಮೊದಲ ಕೆಜಿಐಡಿ ನಂಬರ್ ಕ್ರೀಡಾಪಟುವಿನ ಹೆಸರು ಇಲಾಖೆ ಹೆಸರು ಪದನಾಮ ಹಾಗೂ ಭಾಗವಹಿಸುವ ಕ್ರೀಡೆಗಳ ವಿವರಗಳನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು

13. ಕರಕುಶಲ ವಸ್ತು ಪ್ರದರ್ಶನದಲ್ಲಿ ಸಿದ್ಧವಿರುವ ವಸ್ತುಗಳ ಪ್ರದರ್ಶನಕ್ಕೆ ಅವಕಾಶವಿರುವುದಿಲ್ಲ ಸ್ಥಳದಲ್ಲಿ ತಯಾರಾಗಿ ಮೊದಲನೇ ದಿನ ಇಡಬೇಕು ಎರಡನೇ ದಿನ ತೀರ್ಪುಗಾರರಿಂದ ಪರಿಶೀಲಿಸಲಾಗುವುದು

14. ಸ್ಪರ್ಧೆ ನಡೆಯದ ಕ್ರೀಡೆಗಳಲ್ಲಿ ಆಯ್ಕೆಯಾದ ಕ್ರೀಡಾಪಟುಗಳಿಗೆ ಕ್ರೀಡಾ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ನೀಡಲಾಗುವುದಿಲ್ಲ.

15 . ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ, ತಕರಾರಿಗೆ ಅವಕಾಶವಿರುವುದಿಲ್ಲ. ವೈಯಕ್ತಿಕ ಸ್ಪರ್ಧೆಗಳಲ್ಲಿ ಕನಿಷ್ಠ ಐದು ಸ್ಪರ್ಧಿಗಳು ( ಕುಸ್ತಿ, ವೈಟ್ ಲಿಫ್ಟಿಂಗ್ , ದೇಹದಾರ್ಡ್ಯ ಸೇರಿದಂತೆ) ಗುಂಪು ಆಟಗಳಲ್ಲಿ ಕನಿಷ್ಠ ಮೂರು ತಂಡಗಳು ಭಾಗವಹಿಸದಿದ್ದಲ್ಲಿ ಅಂತಹ ಕ್ರೀಡೆಗಳಲ್ಲಿ ಸ್ಪರ್ಧೆಯನ್ನು ನಡೆಸಲಾಗುವುದಿಲ್ಲ. ಆದರೆ ಆಯ್ಕೆಯನ್ನು ನಡೆಸಿ ರಾಜ್ಯಮಟ್ಟಕ್ಕೆ ಅವಕಾಶವನ್ನು ಮಾಡಿಕೊಡಲಾಗುವುದು. ಏಕಕಾಲದಲ್ಲಿ ಪದಗಳನ್ನು ನಡೆಸಲಿದ್ದು ಯಾವುದೇ ಕಾರಣಕ್ಕೂ ಸ್ಪರ್ಧಿಗಳನ್ನು ಕಾಯುವುದಿಲ್ಲ.

16. ಸಂಘಟಕ ರೊಡನೆ ಅಥವಾ ತೀರ್ಪುಗಾರರಲ್ಲಿ ಅಸಭ್ಯವಾಗಿ ವರ್ತಿಸುವ ಕ್ರೀಡಾಪಟುಗಳನ್ನು ಕ್ರೀಡಾ ಸ್ಪರ್ಧೆಯಿಂದ ಹೊರ ಹಾಕುವುದಲ್ಲದೆ ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರ ಗಮನಕ್ಕೆ ತಂದು ತಪ್ಪಿತಸ್ಥ ಕ್ರೀಡಾಪಟುವಿನ ಮೇಲೆ ಸೇವಾ ನಿಯಮಗಳ ರೀತಿಯ ಶಿಸ್ತಿನ ಕ್ರಮ ಜರುಗಿಸಲು ಶಿಫಾರಸು ಮಾಡಲಾಗುವುದು

17. ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಪ್ರಾರಂಭವಾಗುವ ನಿಗದಿತ ಸಮಯಕ್ಕೆ ಕನಿಷ್ಠ ಒಂದು ಗಂಟೆ ಮುಂಚಿತವಾಗಿ ಹಾಜರಿದ್ದು ಕ್ರೀಡಾ ಸಂಘಟನಾ ಅಧಿಕಾರಿಗಳಲ್ಲಿ ವರದಿ ಮಾಡಿಕೊಳ್ಳತಕ್ಕದ್ದು

18 . ಕ್ರೀಡಾ ಸ್ಪರ್ಧೆಗಳಲ್ಲಿ ಸಂಗೀತ ನೃತ್ಯ ಹಾಗೂ ನಾಟಕಗಳಲ್ಲಿ ಭಾಗವಹಿಸುವ ಸ್ಪರ್ಧಿಗಳು ತಮ್ಮದೇ ಆದ ಸಲಕರಣೆಗಳನ್ನು ತರತಕ್ಕದ್ದು.

19. ಸಂಗೀತ ಮತ್ತು ನೃತ್ಯ ಸ್ಪರ್ಧೆಗಳಲ್ಲಿ ಚಲನ ಚಿತ್ರಗೀತೆಯ ತುಣುಕು ಇತ್ಯಾದಿಗಳಿಗೆ ಅವಕಾಶವಿಲ್ಲ .( ಫಿಲಂ ಟ್ಯೂನ್)

20 . ಸಂಗೀತ ಮತ್ತು ನೃತ್ಯ ಸ್ಪರ್ಧೆಗಳಲ್ಲಿ ( ಪುರುಷರು ಮತ್ತು ಮಹಿಳೆಯರು ಸೇರಿ) ಭಾಗವಹಿಸುವಾಗ ತಂಡ ಸ್ಪರ್ಧೆಗಳು ಕೇವಲ ಎರಡು ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಬಹುದುಜಾನಪದ ನೃತ್ಯ ಹೊರತುಪಡಿಸಿ ವೈಯಕ್ತಿಕ ಸ್ಪರ್ಧೆಯಲ್ಲಿ ಭಾಗವಹಿಸುವವರು ಕೇವಲ ಮೂರು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಬಹುದು

21. ಸಂಗೀತ , ನೃತ್ಯ , ನಾಟಕ ಸ್ಪರ್ಧೆಗಳಲ್ಲಿ ಪ್ರತ್ಯೇಕವಾಗಿ ಪುರುಷರಿಗೆ ಮತ್ತು ಮಹಿಳೆಯರಿಗೆ ಸ್ಪರ್ಧೆಗಳು ಇರುವುದಿಲ್ಲ.

22 . ಪ್ರವೇಶ ಪತ್ರದಲ್ಲಿ ನಮೂದಿಸಿರುವ ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ

23 . ಸ್ಪರ್ದೆಗಳು ಉದ್ಘಾಟನಾ ಸಮಾರಂಭ ಪಥಸಂಚಲನದಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ. ಉದ್ಘಾಟನಾ ಸಮಾರಂಭಕ್ಕೆ ಮೊದಲು ನೊಂದಾವಣಿ ಮಾಡಿಕೊಳ್ಳುವ ಕ್ರೀಡಾಪಟುಗಳಿಗೆ ಮಾತ್ರ ಹಾಜರಾತಿ ನೀಡಲಾಗುವುದು.

24 . ಕೋವಿಡ್ 19 ರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವುದು

25. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ 2ದಿನಗಳ ವಿಶೇಷ ಸಾಂದರ್ಭಿಕ ರಜೆ ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವವರಿಗೆ ಮೂರುದಿನಗಳ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲಾಗುವುದು.

26. ಗುಂಪು ಪಂದ್ಯಾಟಗಳಲ್ಲಿ ವಿಜೇತ ತಂಡದಿಂದ ಶೇಕಡಾ 50 ದ್ವೀತಿಯ ಸ್ಥಾನ ಪಡೆದ ತಂಡದಿಂದ ಶೇಕಡಾ 30 ಹಾಗೂ ಪರಾಜಿತ ತಂಡಗಳಿಂದ ಶೇಕಡಾ 20ರಷ್ಟು ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ರಾಜ್ಯಮಟ್ಟದ ಪಂದ್ಯಾಟಕ್ಕೆ ತಂಡವನ್ನು ಕಳುಹಿಸಲಾಗುವುದು

ವಿಶೇಷ ಸೂಚನೆ

IMG 20220307 WA0031 3
Sharing Is Caring:

Leave a Comment