ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಗೌರವಾನ್ವಿತ ಸಚಿವರು ಈ ದಿನ ನಮ್ಮ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಹಲವು ವರುಷಗಳಿಂದ ಕೇವಲ ಬೇಡಿಕೆಯಾಗಿ ಉಳಿದಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದ ಗೌರವಾನ್ವಿತ ಸಚಿವರಾದ ಮಾನ್ಯ ಎಸ್ ಮಧು ಬಂಗಾರಪ್ಪ ಇವರನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಜಿಲ್ಲಾಧ್ಯಕ್ಷರಾದ ಶ್ರೀ ಶಿವಪ್ರಸಾದ್ ಶೆಟ್ಟಿ ಇವರ ನೇತೃತ್ವದಲ್ಲಿ ಅಭಿನಂದಿಸಿ ಜಿಲ್ಲೆಗೆ ಪ್ರೀತಿಪೂರ್ವಕ ಸ್ವಾಗತ ಕೋರಲಾಯಿತು . ಈ ಸಂದರ್ಭದಲ್ಲಿ ಈ ಕೆಳಗಿನ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ನೀಡಲಾಯಿತು
40 % ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸೇವಾಜೇಷ್ಠತೆಯೊಂದಿಗೆ ಜಿ.ಪಿ.ಟಿ ವೃಂದಕ್ಕೆ ಭಡ್ತಿ ನೀಡಲು ಅನುಕೂಲವಾಗುವಂತೆ ಶಿಕ್ಷಕ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಪ್ರಕ್ರಿಯೆಯ ಕಡತವನ್ನು ಚಾಲ್ತಿಯಲ್ಲಿರುವ ಜಿ.ಪಿ.ಟಿ ಶಿಕ್ಷಕರ ನೇಮಕಾತಿಗೂ ಪೂರ್ವವೇ ಪೂರ್ತಿಗೊಳಿಸಿ ಪಿ.ಎಸ್.ಟಿ ಶಿಕ್ಷಕರಿಗೆ ನ್ಯಾಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿ ಮಾಡಲಾಯಿತು
ಪ್ರಸ್ತುತ ಜಿಲ್ಲೆಯಲ್ಲಿ 30 ಶೇಕಡಕ್ಕಿಂತ ಅಧಿಕ ಶಿಕ್ಷಕ ಹುದ್ದೆಗಳು ಖಾಲಿ ಇದ್ದು ಖಾಲಿ ಇರುವ ಎಲ್ಲಾ ಹುದ್ದೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿಗೆ ಅವಕಾಶ ಮಾಡಿ ಕೊಡುವಂತೆ ವಿನಂತಿ ಮಾಡಲಾಯಿತು
ಭಡ್ತಿ ಹೊಂದಿದ ಮುಖ್ಯ ಗುರುಗಳ ಕಾಲಮಿತಿ ಭಡ್ತಿ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಿ ವೇತನ ವ್ಯತ್ಯಾಸವನ್ನು ಸರಿದೂಗಿಸಲು ಕ್ರಮ ಕೈಗೊಳ್ಳುವುದು ಮತ್ತು ಪ್ರಭಾರ ಮುಖ್ಯ ಗುರುಗಳಿಗೆ ಪ್ರಭಾರ ಭತ್ಯೆ ಮಂಜೂರಾತಿಗೆ ಅವಕಾಶ ಮಾಡಿ ಕೊಡುವಂತೆ ವಿನಂತಿ ಮಾಡಲಾಯಿತು
ಗ್ಯಾಸ್ ಖರೀದಿಗಾಗಿ ಪ್ರಸ್ತುತ ಇರುವ ದರವು ಪ್ರತೀ ಮಗುವಿನ ಲೆಕ್ಕಾಚಾರದಂತೆ ನೋಡಿದರೆ ಕಿರಿಯ ಪ್ರಾಥಮಿಕ ಹಾಗೂ ಕಡಿಮೆ ಮಕ್ಕಳಿರುವ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸಾಕಾಗುತ್ತಿಲ್ಲ. ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಗ್ಯಾಸ್ ಮತ್ತು ಇನ್ನಿತರ ವಸ್ತುಗಳ ಖರೀದಿಗೆ ನೀಡಲಾಗುತ್ತಿರುವ ಅನುದಾನವನ್ನು ಹೆಚ್ಚಿಸುವಂತೆ ಮನವಿ ಮಾಡಲಾಯಿತು
ಮೊಟ್ಟೆ, ತರಕಾರಿ ಗೆ ನೀಡುತ್ತಿರುವ ಸಾದಿಲ್ವಾರು ಮೊತ್ತವು ಮಾರುಕಟ್ಟೆಯ ಬೆಲೆಗಿಂತ ಕಡಿಮೆ ಇದ್ದು ಮಾರುಕಟ್ಟೆಯ ಬೆಲೆಗೆ ಅನುಗುಣವಾಗಿ ಹೆಚ್ಚುವರಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ವಿನಂತಿ ಮಾಡಲಾಯಿತು
ಜಿಲ್ಲೆಯ ಹಲವು ಶಾಲೆಗಳಲ್ಲಿ ನೆಟ್ ವರ್ಕ್ ಸಮಸ್ಯೆಯಿದ್ದು ಆನ್ಲೈನ್ ಮಾಹಿತಿ ನೀಡಲು ಮತ್ತು ಆನ್ಲೈನ್ ಕಲಿಕೆಗೆ ತೊಂದರೆಯಾಗುತ್ತಿದೆ.ಆದುದರಿಂದ ನೆಟ್ವರ್ಕ್ ಸಮಸ್ಯೆ ಇರುವ ಶಾಲೆಗಳಿಗೆ ಬೂಸ್ಟರ್ ಅಳವಡಿಸುವುದರ ಮೂಲಕ ನೆಟ್ವರ್ಕ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಒದಗಿಸುವಂತೆ ಮನವಿ
ಮಾಡಲಾಯಿತು
ಸರ್ಕಾರಿ ಶಾಲೆಗಳ ವಿದ್ಯುತ್ ಬಿಲ್ ಮತ್ತು ನೀರಿನ ಬಿಲ್ಲುಗಳನ್ನು ಪಂಚಾಯತ್ ವತಿಯಿಂದ ಭರಿಸಲು ಸೂಕ್ತ ಆದೇಶ ನೀಡುವಂತೆ ವಿನಂತಿ ಮಾಡಲಾಯಿತು.
ನೂತನವಾಗಿ ರಚನೆಯಾಗಿರುವ ಕಡಬ ,ಉಳ್ಳಾಲ, ಮುಲ್ಕಿ ಶೈಕ್ಷಣಿಕ ತಾಲ್ಲೂಕುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಂಜೂರುಗೊಳಿಸಿ ಅಧಿಕಾರಿ ಮತ್ತು ಸಿಬ್ಬಂದಿಗಳ ನೇಮಕಾತಿಗೆ ಅವಕಾಶ ಕಲ್ಪಿಸಿ ಕೊಡುವುದು
ನೂತನವಾಗಿ ರಚನೆ ಆಗಿರುವ ತಾಲೂಕುಗಳಿಗೆ ಕ್ರೀಡೆ,ಸಾಂಸ್ಕೃತಿಕ ಸ್ಪರ್ಧೆಗಳು ,ಮತ್ತು ಶಿಕ್ಷಕರ ದಿನಾಚರಣೆ ಪ್ರತ್ಯೇಕವಾಗಿ ಹಮ್ಮಿಕೊಳ್ಳಲು ಅವಕಾಶ ನೀಡುವುದು ಮತ್ತು ನೂತನ ತಾಲೂಕಿಗೆ ಜಿಲ್ಲಾ ಶಿಕ್ಷಕ ಪ್ರಶಸ್ತಿಗೆ ಪ್ರತ್ಯೇಕ ಅವಕಾಶ ನೀಡಲು ಕ್ರಮ ಕೈಗೊಳ್ಳುವಂತೆ ವಿನಂತಿ ಮಾಡಲಾಯಿತು.
BLO ಕರ್ತವ್ಯದಿಂದ ಶಿಕ್ಷಕರನ್ನು ಬಿಡುಗಡೆಗೊಳಿಸಿ ಬೋಧನೆಗೆ ಹೊರತಾದ ಕೆಲಸಗಳಿಗೆ ಶಿಕ್ಷಕರನ್ನು ನೇಮಿಸದಂತೆ ಆದೇಶ ಹೊರಡಿಸುವಂತೆ ವಿನಂತಿ ಮಾಡಲಾಯಿತು
ನಲಿಕಲಿ ತರಗತಿಯ ಪಠ್ಯ ಪುಸ್ತಕ ಬದಲಾವಣೆ ಆಗಿದ್ದು ನಲಿಕಲಿ ಬೋಧನೆಯನ್ನು ಪರಿಣಾಮಕಾರಿಯಾಗಿಸಲು ಒಂದು,ಎರಡು ಮತ್ತು ಮೂರನೇ ತರಗತಿಗೆ ಪ್ರತ್ಯೇಕ ಬೋಧನೆಗೆ ಅವಕಾಶ ಮಾಡಿ ಕೊಡುವಂತೆ ವಿನಂತಿ ಮಾಡಲಾಯಿತು
ಆಂಗ್ಲ ಮಾಧ್ಯಮ ಬೋಧಿಸುವ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಬೋಧನೆಗೆ ಅನುಕೂಲವಾಗುವಂತೆ ಹೆಚ್ಚುವರಿ ಶಿಕ್ಷಕರ ನೇಮಕಕ್ಕೆ ಅವಕಾಶ ಮಾಡಿಕೊಡುವಂತೆ ವಿನಂತಿ ಮಾಡಲಾಯಿತು
ಬಂಟ್ವಾಳ, ಮಂಗಳೂರು ದಕ್ಷಿಣ ವಲಯ ಕ್ಷೇತ್ರಾಧಿಕಾರಿಗಳವರು ಅವಧಿ ಮೀರಿದ ಅಂದರೆ 25 ವರ್ಷದಷ್ಟು ಹಳೆಯದಾದ ಸರಕಾರಿ ವಾಹನ ಬಳಸುತ್ತಿದ್ದು ಹೊಸ ವಾಹನ ಖರೀದಿಗೆ ಅವಕಾಶ ಮಾಡಿಕೊಡುವಂತೆ ವಿನಂತಿ ಮಾಡಲಾಯಿತು
ಹಾಗೂ ಪುತ್ತೂರು ತಾಲೂಕಿನಲ್ಲಿ ಖಾಸಗಿ ವ್ಯವಸ್ಥೆಯ ವಾಹನವಿದ್ದು ಸರಕಾರಿ ವಾಹನ ಖರೀದಿಗೆ ಅವಕಾಶ ಮಾಡಿ ಕೊಡುವಂತೆ ವಿನಂತಿ ಮಾಡಲಾಯಿತು
ಅಕ್ಷರ ದಾಸೋಹ ನಿರ್ವಹಣೆಗೆ SDMC ಅಧ್ಯಕ್ಷರ ಮತ್ತು ಮುಖ್ಯ ಗುರುಗಳ ಜಂಟಿ ಖಾತೆ ತೆರೆಯುವ ಆದೇಶವನ್ನು ಮರು ಪರಿಶೀಲಿಸಿ ಮೊದಲಿನಂತೆ ಮುಖ್ಯ ಗುರುಗಳು ಮತ್ತು ಮುಖ್ಯ ಅಡುಗೆಯವರ ಹೆಸರಿನಲ್ಲಿ ಜಂಟಿ ಖಾತೆ ತೆರೆಯಲು ಮರು ಆದೇಶ ಮಾಡುವಂತೆ ವಿನಂತಿ ಮಾಡಲಾಯಿತು
ಸರಕಾರಿ ನೌಕರರಿಗೆ ಎನ್.ಪಿ.ಎಸ್. ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಮಾನ್ಯ ಮುಖ್ಯ ಮಂತ್ರಿಗಳಿಗೆ ಒತ್ತಾಯಿಸುವಂತೆ ವಿನಂತಿ ಮಾಡಲಾಯಿತು
2005 ರಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಿ 2006 ರ ನಂತರ ನೇಮಕಾತಿ ಆಗಿರುವ ಶಿಕ್ಷಕರಿಗೆ ಕೇಂದ್ರದ ಮಾದರಿಯಲ್ಲಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಲು ಒತ್ತಾಯಿಸಲಾಯಿತು
ಸರ್ಕಾರಿ ಶಾಲೆಗಳ ವಿದ್ಯುತ್ ಬಿಲ್ ಮತ್ತು ನೀರಿನ ಬಿಲ್ಲುಗಳನ್ನು ಪಂಚಾಯತ್ ವತಿಯಿಂದ ಭರಿಸಲು ಅಥವಾ ಉಚಿತವಾಗಿ ಬಳಸಲು ಸೂಕ್ತ ಆದೇಶ ನೀಡುವಂತೆ ವಿನಂತಿ ಮಾಡಲಾಯಿತು
ಬಿ.ಐ.ಇ.ಆರ್.ಟಿ.ಗಳಿಗೆ ಈ ಹಿಂದೆ ನೀಡುತ್ತಿದ್ದಂತೆ ನಿಗದಿತ ಪ್ರಯಾಣ ಭತ್ಯೆ ಮತ್ತು ವಿಶೇಷ ಭತ್ಯೆ ನೀಡುವುದು. ಎಸ್.ಆರ್.ಪಿ. ಕೇಂದ್ರಗಳ ನಿರ್ವಹಣೆಗೆ ಪ್ರತ್ಯೇಕ ಅನುದಾನ ಒದಗಿಸುವುದು. ಪ್ರೌಢ ಬಿ.ಐ.ಇ.ಆರ್.ಟಿ. ಖಾಲಿ ಹುದ್ದೆಗಳಿಗೆ ವಿದ್ಯಾರ್ಹತೆ ಇರುವ ಪ್ರಾಥಮಿಕ ಬಿ.ಐ.ಇ.ಆರ್.ಟಿ.ಗಳಿಗೆ ಭಡ್ತಿ ನೀಡಲು ಕ್ರಮ ಕೈಗೊಳ್ಳುವಂತೆ ವಿನಂತಿ ಮಾಡಲಾಯಿತು
2007, 2008 ಹಾಗೂ ಬೇರೆ ಬೇರೆ ಅವಧಿಯಲ್ಲಿ ನೇಮಕವಾದ ಶಿಕ್ಷಕರ ಮೂಲ ವೇತನಕ್ಕೆ ಸಂಬಂಧಿಸಿದಂತೆ ಜಿಲ್ಲಾವಾರು ವ್ಯತ್ಯಾಸವಿದ್ದು ವೇತನ ವ್ಯತ್ಯಾಸವನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು
ನಮ್ಮ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ಬೀಳುತ್ತಿದ್ದು, ಜಿಲ್ಲೆಯ ಹಲವು ಶಾಲೆಗಳು ಶಿಥಿಲಾವಸ್ಥೆಯಲ್ಲಿ ಇರುವುದರಿಂದ, ಸುರಕ್ಷತೆಯ ದೃಷ್ಟಿಯಿಂದ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ವಿಶೇಷ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಯಿತು
ಮೊಟ್ಟೆ ಬೆಲೆಯು
ಮಾನ್ಯ ಸಚಿವರು ಅತ್ಯಂತ ತಾಳ್ಮೆಯಿಂದ ಮನವಿಯನ್ನು ಸ್ವೀಕರಿಸಿ ಸಮಸ್ಯೆಯನ್ನು ಆಲಿಸಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳು ,ತಾಲೂಕು ಅಧ್ಯಕ್ಷರು ,ಕಾರ್ಯದರ್ಶಿಗಳು ಪದಾಧಿಕಾರಿಗಳು , ನಾಮನಿರ್ದೇಶಿತ ಸದಸ್ಯರು ಮತ್ತು ಶಿಕ್ಷಕ ಬಂಧುಗಳು ಹಾಜರಿದ್ದರು