ಎಸ್.ಎಸ್.ಎಲ್.ಸಿ. ತೇರ್ಗಡೆಯಾದ ಅಭ್ಯರ್ಥಿಗಳ ಅಂಕಪಟ್ಟಿಯಲ್ಲಿ ಅಭ್ಯರ್ಥಿ ಹೆಸರು/ಪೋಷಕರ ಹೆಸರು ಮತ್ತು ಜನ್ಮದಿನಾಂಕ ಇನ್ನಿತರೆ ತಿದ್ದುಪಡಿ ಮಾಡುವ ವಿಧಾನದ ಮಾಹಿತಿ

ಎಸ್.ಎಸ್.ಎಲ್.ಸಿ. ತೇರ್ಗಡೆಯಾದ ಅಭ್ಯರ್ಥಿಗಳ ಅಂಕಪಟ್ಟಿಯಲ್ಲಿ ಅಭ್ಯರ್ಥಿ ಹೆಸರು/ಪೋಷಕರ ಹೆಸರು ಮತ್ತು ಜನ್ಮದಿನಾಂಕ ಇನ್ನಿತರೆ ತಿದ್ದುಪಡಿ ಮಾಡುವ ಸಂಬಂಧಮಾರ್ಗಸೂಚಿಯನ್ನು ಅನುಸರಿಸುವ ಕುರಿತು

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯಲ್ಲಿ, ಎಸ್.ಎಸ್.ಎಲ್.ಸಿ.
ಉತ್ತೀರ್ಣಗೊಂಡ ನಂತರ ಅಂಕಪಟ್ಟಿಯಲ್ಲಿ, ಅಭ್ಯರ್ಥಿಯ ಹೆಸರು, ಪೋಷಕರ ಹೆಸರು, ಇನಿಷಿಯಲ್, ಸ್ಪೆಲಿಂಗ್ ಹಾಗೂ ಜನ್ಮದಿನಾಂಕ ತಿದ್ದುಪಡಿಗಳನ್ನು ಉಲ್ಲೇಖಿತ(1)ರ ಸರ್ಕಾರದ ಸುತ್ತೋಲೆಯಲ್ಲಿ ಸೂಚಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಉಪನಿರ್ದೇಶಕರುಗಳಿಂದ ಸ್ವೀಕೃತವಾಗುವ ಪ್ರಸ್ತಾವನೆಗಳನ್ನು ಸಲ್ಲಿಸುವ ಸಾಮಾನ್ಯ ತಿದ್ದುಪಡಿ ಪ್ರಕರಣಗಳು ಮತ್ತು ನ್ಯಾಯಾಲಯದಿಂದ ಆದೇಶವಾಗುವ ತಿದ್ದುಪಡಿ ಪ್ರಕರಣಗಳಲ್ಲಿ ಕೆಳಕಂಡ ಅಂಶಗಳನ್ನು ಗಮನಿಸಿ, ತಿದ್ದುಪಡಿ ಪ್ರಸ್ತಾವನೆಗಳನ್ನು ಮಂಡಲಿಗೆ ಸಲ್ಲಿಸುವ ಪೂರ್ವದಲ್ಲಿ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿರುತ್ತದೆ.

ಎಸ್.ಎಸ್.ಎಲ್.ಸಿ ಪಾಸಾದ ನಂತರದಲ್ಲಿ, ಯಾವುದೇ ಅಭ್ಯರ್ಥಿಯ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯಲ್ಲಿ
ಅಭ್ಯರ್ಥಿ ಹೆಸರು, ಪೋಷಕರ ಹೆಸರು Initial, Spelling ಹಾಗೂ ಅಭ್ಯರ್ಥಿಯ ಜನ್ಮದಿನಾಂಕ ತಪ್ಪಾಗಿದ್ದಲ್ಲಿ, ಮಂಡಲಿಯ ಮಾರ್ಗಸೂಚಿಯನ್ವಯ ಎಲ್ಲಾ ಶಾಲಾ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನಂತರ ಸಂಬಂಧಪಟ್ಟ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಜ್ಞಾಪನ ಹೊರಡಿಸಿ, ಶಾಲಾ ದಾಖಲಾತಿಗಳನ್ನು ದೃಢೀಕರಿಸಿ, ಮೂಲ ಎಸ್.ಎಸ್.ಎಲ್.ಸಿ ಅಂಕಪಟ್ಟಿಯೊಂದಿಗೆ ನಿಗಧಿತ ಶುಲ್ಕವನ್ನು ಪಾವತಿಸಿ, ನೇರವಾಗಿ ಮಂಡಲಿ ಮತ್ತು ವಿಭಾಗೀಯ ಕಛೇರಿಗಳಿಗೆ ಭೌತಿಕವಾಗಿ ಪ್ರಸ್ತಾವನೆ ಸಲ್ಲಿಸುವ ಕ್ರಮವನ್ನು ಅನುಸರಿಸಲಾಗುತ್ತಿತ್ತು.

ಪ್ರಸ್ತುತ ಉಲ್ಲೇಖ-4ರ ಸುತ್ತೋಲೆಯನ್ವಯ ಶಾಲಾ ಮುಖ್ಯಶಿಕ್ಷಕರ ಮುಖಾಂತರ ಅಂಕಪಟ್ಟಿ ತಿದ್ದುಪಡಿ
ಪ್ರಸ್ತಾವನೆಗಳನ್ನು Online ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಆದ್ದರಿಂದ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಮತ್ತು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿದ್ದುಪಡಿಗೆ ಪ್ರಸ್ತಾವನೆಯನ್ನು ಸಲ್ಲಿಸುವ ಪೂರ್ವದಲ್ಲಿ ಕೆಳಕಂಡಂತೆ ಸೂಚಿಸಿರುವ ಕ್ರಮಗಳನ್ನು ಅನುಸರಿಸುವುದು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಂತದಲ್ಲಿ ಪರಿಶೀಲಿಸಬೇಕಾದ ಅಂಶಗಳು

ಎಸ್.ಎಸ್.ಎಲ್.ಸಿ. ಪಾಸಾದ ನಂತರದಲ್ಲಿ, ಯಾವುದೇ ಅಭ್ಯರ್ಥಿಗಳ ಎಸ್.ಎಸ್.ಎಲ್.ಸಿ ಅಂಕಪಟ್ಟಿಯಲ್ಲಿ ತಿದ್ದುಪಡಿ ಬಯಸಿದ್ದಲ್ಲಿ, ಶಾಲಾ ದಾಖಲೆಗಳಲ್ಲಿ ಅಭ್ಯರ್ಥಿಗಳ ವಿವರಗಳು ಸರಿ ಇದ್ದಲ್ಲಿ ಮಾತ್ರ ಪರಿಶೀಲಿಸಿ ತಿದ್ದುಪಡಿಗೆ ಜ್ಞಾಪನಾ ನೀಡಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಾಲಾ ದಾಖಲಾತಿ ವಹಿಯ ಉದೃತಭಾಗವನ್ನು ದೃಢೀಕರಿಸುವುದು.

ಶಾಲಾ ದಾಖಲಾತಿ ವಹಿಯಲ್ಲಿ ವಿದ್ಯಾರ್ಥಿಯ ವಿವರಗಳನ್ನು ತಿದ್ದುಪಡಿ ಮಾಡಿದ ಪ್ರಕರಣಗಳಿಗೂ ಸಹ ಜ್ಞಾಪನಾ ನೀಡುವುದನ್ನು ಗಮನಿಸಲಾಗಿದೆ. ಇಂತಹ ಪ್ರಕರಣಗಳಿಗೆ ಸರ್ಕಾರದ ಸುತ್ತೋಲೆ ಸಂಖ್ಯೆ: ಇಡಿ 100 ಡಿಟಿಬಿ 2014 ದಿನಾಂಕ: 26-10-2015 ಅನುಸಾರ ಕ್ರಮವಹಿಸಲು ಸಂಬಂಧಪಟ್ಟ ಶಾಲಾ ಮುಖ್ಯಶಿಕ್ಷಕರು ಮತ್ತು ಅಭ್ಯರ್ಥಿಗೆ ಸೂಕ್ತ ನಿರ್ದೇಶನ ನೀಡುವುದು.

ಜನ್ಮ ದಿನಾಂಕ ತಿದ್ದುಪಡಿ ಪ್ರಕರಣಗಳಿಗೆ ಜ್ಞಾಪನಾ ನೀಡುವಾಗ ಪ್ರಾಥಮಿಕ ಶಾಲೆಗೆ ದಾಖಲಾಗುವ ಅವಧಿಯಲ್ಲಿ ಶಾಲಾ ಹಂತದಲ್ಲಿ ಪಡೆದಿರುವ ಪೂರಕ ದಾಖಲೆಗಳನ್ನು(ಜನನ ಪ್ರಮಾಣ ಪತ್ರ) ತಪ್ಪದೇ ಪರಿಶೀಲಿಸುವುದು.

ಸರ್ಕಾರದ ಸುತ್ತೋಲೆ ಸಂಖ್ಯೆ: ಇಡಿ 100 ಡಿಟಿ ಟಿ 2014 ದಿನಾಂಕ: 26-10-2015 ರನ್ವಯ ನ್ಯಾಯಾಲಯ ಡಿಕ್ರಿ ಪಡೆದು ಬಂದ ದತ್ತು ಪ್ರಕರಣಗಳಲ್ಲಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನುಷ್ಠಾನಗೊಳಿಸುವ ಪ್ರಾಧಿಕಾರಿಗಳಾಗಿರುವುದರಿಂದ ಶಾಲಾ ದಾಖಲೆಗಳನ್ನು ಪರಿಶೀಲಿಸಿ ಜ್ಞಾಪನಾ ಹೊರಡಿಸತಕ್ಕದ್ದು.

ಜಿಲ್ಲಾ ಉಪನಿರ್ದೇಶಕರು(ಆಡಳಿತ) ರವರ ಕಛೇರಿಯಲ್ಲಿ ನ್ಯಾಯಾಲಯ ಪ್ರಕರಣಗಳಲ್ಲಿ ಪರಿಶೀಲಸಬೇಕಾದ ಅಂಶಗಳು

 • ಸರ್ಕಾರದ ಸುತ್ತೋಲೆ ಸಂಖ್ಯೆ: ಇಡಿ 100 ಡಿಪಿ 2014 ದಿನಾಂಕ: 26-10-2015 ಅನುಸಾರ ನ್ಯಾಯಾಲಯ ಪ್ರಕರಣಗಳಿಗೆ ಜಿಲ್ಲಾ ಉಪನಿರ್ದೇಶಕರು(ಆಡಲಿತ) ರವರು ಅನುಷ್ಠಾನಗೊಳಿಸುವ ಪ್ರಾಧಿಕಾರಿಗಳಾಗಿರುವುದರಿಂದ ಎಸ್.ಎಸ್.ಎಲ್.ಸಿ. ಉತ್ತೀರ್ಣಗೊಂಡ ಅಭ್ಯರ್ಥಿಗಳ ಅಂಕಪಟ್ಟಿಯಲ್ಲಿ ಅಭ್ಯರ್ಥಿ ಹೆಸರು, ಪೋಷಕರ ಹೆಸರುಗಳು ಮತ್ತು ಜನ್ಮದಿನಾಂಕವನ್ನು ಮಾರ್ಪಡಿಸಲು ಬಯಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ ಪ್ರಕರಣಗಳಿಗೆ ಶಾಲೆಗಳಿಂದ ಮಾಹಿತಿಯನ್ನು ಪಡೆದು ಕಂಡಿಕೆವಾರು ಉತ್ತರ ಮತ್ತು ಆಕ್ಷೇಪಣಾ ಹೇಳಿಕೆಯನ್ನು ದಾಖಲಿಸಿ ಪ್ರಕರಣವನ್ನು ಇತ್ಯರ್ಥಪಡಿಸಲು ಅಗತ್ಯ ಕ್ರಮವಹಿಸುವುದು. ತಪ್ಪಿದ್ದಲ್ಲಿ ನ್ಯಾಯಾಲಯವು ಪ್ರತಿ ವಾದಿಗಳನ್ನು EX-PARTE ಮಾಡಿ ಏಕಪಕ್ಷೀಯವಾಗಿ ತೀರ್ಪು ನೀಡಲಾಗುತ್ತಿರುವುದನ್ನು ಬಹುತೇಕ ಪ್ರಕರಣಗಳಲ್ಲಿ ಗಮನಿಸಲಾಗಿದೆ.
 • ನ್ಯಾಯಾಲಯದಿಂದ ಡಿಕ್ರಿ ಪಡೆದ ಪ್ರಕರಣಗಳಿಗೆ ಸಂಬಂಧಪಟ್ಟಂತೆ, ನ್ಯಾಯಾಲಯದ ಡಿಕ್ರಿ ಆದೇಶಗಳಲ್ಲಿನ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ತಿದ್ದುಪಡಿಗೆ ಜ್ಞಾಪನವನ್ನು ನೀಡಬೇಕಾಗಿರುತ್ತದೆ. ಆದರೆ ಕೆಲವು ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಬಹುದಾದ ಪ್ರಕರಣಗಳಿಗೆ ತಿದ್ದುಪಡಿ ಮಾಡಲು ಜ್ಞಾಪನಾ ನೀಡಿ ಮಂಡನೆಗೆ ಪ್ರಸ್ತಾವನೆಯನ್ನು ಸಲ್ಲಿಸಿರುವುದು ಕಂಡು ಬಂದಿರುತ್ತದೆ.
  (ಉದಾಹರಣೆ: 1 ಅಭ್ಯರ್ಥಿಯ ಹೆಸರು MANJULA AKಬದಲಿಗೆ MANJULAGURU _05_No. 88/2012 ಹಾಗೂM ANNAPOORNAMMA @SALMA PARVEEN, OS No 169/2019)
 • ನ್ಯಾಯಾಲಯದ ಪ್ರಕರಣಗಳಲ್ಲಿ ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರ ಕಛೇರಿಯಿಂದ ಹೊರಡಿಸಲಾದ ಜ್ಞಾಪನದಲ್ಲಿ, ಡಿಕ್ರಿಯಲ್ಲಿನ ಆದೇಶದ ಭಾಗವನ್ನು ನಮೂದಿಸಿ, ಅಂಕಪಟ್ಟಿಯಲ್ಲಿ ತಿದ್ದುಪಡಿ ಮಾಡಬೇಕಾದ ವಿವರಗಳನ್ನು ಆಂಗ್ಲಭಾಷೆಯಲ್ಲಿಯೇ ನಮೂದಿಸತಕ್ಕದ್ದು.
 • ಜನ್ಮ ದಿನಾಂಕ ತಿದ್ದುಪಡಿ ಮಾಡಲು ನ್ಯಾಯಾಲಯದಿಂದ ಡಿಕ್ರಿ ಪಡೆದಂತಹ ಪ್ರಕರಣಗಳಲ್ಲಿ ಜನ್ಮದಿನಾಂಕ ತಿದ್ದುಪಡಿಗೆ ಜ್ಞಾಪನ ಹೊರಡಿಸುವ ಪೂರ್ವದಲ್ಲಿ ಉಲ್ಲೇಖ(3&4)ರಲ್ಲಿ ಆಯುಕ್ತರು ಶಾ.ಶಿ.ಇಲಾಖೆ, ಮತ್ತು ಮಂಡಲಿಯಿಂದ ಹೊರಡಿಸಿರುವ ಸುತ್ತೋಲೆಗಳಲ್ಲಿ ಸೂಚಿಸಿರುವ ಅಂಶಗಳನ್ನು ತಪ್ಪದೇ ಪಾಲಿಸುವುದು.
 • ಎಸ್.ಎಸ್.ಎಲ್.ಸಿ. ಉತ್ತೀರ್ಣಗೊಂಡ ಐದು ವರ್ಷಗಳ ನಂತರದಲ್ಲಿ ಯಾವುದೇ ಅಭ್ಯರ್ಥಿಯ ಜನ್ಮದಿನಾಂಕ
  ಮಾರ್ಪಾಡಾಗಬೇಕಾದಲ್ಲಿ, ಮಂಡಲಿಯ ಮಾರ್ಗಸೂಚಿಯನ್ವಯ ಅಭ್ಯರ್ಥಿಯು ರಾಜ್ಯ / ಕೇಂದ್ರ ಹಾಗೂ
  ಅರೆಸರ್ಕಾರಿ ನೌಕರಿಯಲ್ಲಿ ಇರುವ / ಇಲ್ಲದಿರುವ ಬಗ್ಗೆ ಉಪನಿರ್ದೇಶಕರು(ಆಡಳಿತ) ರವರ ಹಂತದಲ್ಲಿ
  ಪರಿಶೀಲಿಸುವುದು ಹಾಗೂ ಈ ಸಂಬಂಧದಲ್ಲಿ ತಹಶೀಲ್ದಾರ್‌ರವರ ಕಛೇರಿಯಿಂದ ಗಣಕೀಕೃತ ನಿರುದ್ಯೋಗ
  ಪ್ರಮಾಣ ಪತ್ರವನ್ನು (NEC) ಪಡೆದು ನಂತರ ಜ್ಞಾಪನ ಹೊರಡಿಸುವುದು. ಈ ಅಂಶವನ್ನು ಜ್ಞಾಪನಾ ಪತ್ರದಲ್ಲಿಯೂ
  ಸಹ ಉಲ್ಲೇಖಿಸುವುದು.
 • ನ್ಯಾಯಾಲಯದ ಡಿಕ್ರಿ ಪ್ರಕರಣಗಳಲ್ಲಿ ಅಭ್ಯರ್ಥಿಯ ಅಂಕಪಟ್ಟಿಯಲ್ಲಿನ ವಿವರಗಳ ತಿದ್ದುಪಡಿ ಸಂಬಂಧ
  ಗೊಂದಲವಿದ್ದಲ್ಲಿ, ಕಾನೂನು ಸಲಹೆ ಪಡೆದು, ವಿವಾದ ಉಂಟಾಗಬಹುದಾದ ಪ್ರಕರಣವಾಗಿದ್ದಲ್ಲಿ, ಅಂತಹ ದಾವೆಗಳ
  ವಿರುದ್ಧ ಕಾಲಮಿತಿಯೊಳಗೆ ಮೇಲ್ಮನವಿ ಸಲ್ಲಿಸತಕ್ಕದ್ದು.
 • ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯದ ಪ್ರಕರಣಗಳು ಹೆಚ್ಚಾಗಿರುವುದರಿಂದ ಅನುಷ್ಠಾನಗೊಳಿಸುವ
  ಪ್ರಾಧಿಕಾರಿಗಳು ನ್ಯಾಯಾಲಯದ ಡಿಕ್ರಿಯಲ್ಲಿನ ಅಂಶಗಳನ್ನು ಪರಿಶೀಲಿಸಿ, ಆದೇಶ ಭಾಗವನ್ನು ಸರಿಯಾಗಿ
  ಅರ್ಥೈಸಿಕೊಂಡು ಜ್ಞಾಪನ ಹೊರಡಿಸುವುದು ಜಿಲ್ಲಾ ಉಪನಿರ್ದೇಶಕರ ಜವಾಬ್ದಾರಿಯಾಗಿರುತ್ತದೆ. ಇಲ್ಲವಾದಲ್ಲಿ
  ಮುಂದಿನ ಆಗುಹೋಗುಗಳಿಗೆ ಜಿಲ್ಲಾ ಉಪನಿರ್ದೇಶಕರೇ ನೇರವಾಗಿ ಹೊಣೆಗಾರರಾಗಿರುತ್ತೀರಿ.

ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಎಸ್.ಎಸ್.ಎಲ್.ಸಿ. ಪಾಸಾದ
ನಂತರದಲ್ಲಿನ ಅಭ್ಯರ್ಥಿಗಳ ಅಂಕಪಟ್ಟಿಯಲ್ಲಿ ತಿದ್ದುಪಡಿ ಪ್ರಸ್ತಾವನೆಗಳನ್ನು ಮಂಡಲಿಗೆ / ವಿಭಾಗೀಯ ಕಛೇರಿಗಳಿಗೆ
ಆನ್‌ಲೈನ್‌ನಲ್ಲಿ ಸಲ್ಲಿಸುವ ಪೂರ್ವದಲ್ಲಿ ಕಾಲಕಾಲಕ್ಕೆ ಹೊರಡಿಸುವ ಸರ್ಕಾರದ ಮತ್ತು ಇಲಾಖೆಯ ಸುತ್ತೋಲೆಗಳಲ್ಲಿನ
ಅಂಶಗಳನ್ನು ಹಾಗೂ ಮೇಲಿನ ಸೂಚನೆಗಳನ್ನು ಪಾಲಿಸುವುದು.

ಮುಂದುವರೆದು ಉಪನಿರ್ದೇಶಕರು (ಆಡಳಿತ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಲ್ಲಾ ಶಾಲಾ ಮುಖ್ಯಶಿಕ್ಷಕರುಗಳಿಗೆ ತಿದ್ದುಪಡಿಗೆ ಜ್ಞಾಪನ ಪಡೆದ 03 ತಿಂಗಳುಗಳ ಒಳಗಾಗಿ ಮಂಡಲಿ / ವಿಭಾಗೀಯ ಕಛೇರಿಗಳಿಗೆ
ಪ್ರಸಾವನೆಯನ್ನು ಸಲ್ಲಿಸುವಂತೆ ಹಾಗೂ ಒಂದುವೇಳೆ ನಿಗದಿತ ಅವಧಿಯಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಲು ವಿಳಂಬ
ಮಾಡಿದಲ್ಲಿ ಪುನಃ ಪ್ರಸ್ತುತ ದಿನಾಂಕಕ್ಕೆ ಪರಿಷ್ಕೃತ ಜ್ಞಾಪನಾ ಪಡೆದು ಪ್ರಸ್ತಾವನೆಯನ್ನು ಸಲ್ಲಿಸಲು ಸೂಕ್ತ ಮಾರ್ಗದರ್ಶನ
ನೀಡಲು ಸೂಚಿಸಿದೆ.

image 125
image 129
image 132
image 130
IMG 20240213 WA0007
image 127
image 133
image 131
image 128
image 126
Sharing Is Caring:

Leave a Comment