Covid19 , ಒಮಿಕ್ರಾನ್ ತಡೆಗಟ್ಟುವಿಕೆಯ ಲ್ಲಿ ಶಾಲೆಗಳಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು

ಕೋವಿಡ್ 19, ಓಮಿಕ್ರಾನ್ ತಡೆಗಟ್ಟುವಿಕೆಯಲ್ಲಿ ಶಾಲೆಗಳಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು.

ಎಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚಿಸುವುದೇನೆಂದರೆ ರಾಜ್ಯದಲ್ಲಿ ಕೋವಿಡ್ 19 ಹಾಗೂ ಓಮಿಕ್ರಾನ್ ಬಹಳಷ್ಟು ವೇಗವಾಗಿ ಹರಡುತ್ತಿರುವುದರಿಂದ ಅದು ತಮಗೂ ಹಾಗೂ ಶಾಲೆಯಲ್ಲಿ ಓದುತ್ತಿರುವ ಅಮೂಲ್ಯ ರತ್ನಗಳಾದ ಮಕ್ಕಳಿಗೆ ಹರಡದೆ ಇರಬೇಕಾದರೆ ಶಾಲೆಗಳಲ್ಲಿ ಈ ಕೆಳಗಿನ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಕಟ್ಟುನಿಟ್ಟಾಗಿ ಪಾಲಿಸಬೇಕು.

👍 ಪ್ರತಿನಿತ್ಯ ಶಾಲೆ ಪ್ರಾರಂಭದ ಪೂರ್ವದಲ್ಲಿ ಎಲ್ಲಾ ಮಕ್ಕಳ ದೇಹದಲ್ಲಿ ಉಷ್ಣತೆ ಪರೀಕ್ಷಿಸಬೇಕು.

👍 ಜ್ವರ, ಕೆಮ್ಮು, ಶೀತದಿಂದ ಬಳಲುವ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮೂಹ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸುವುದು.

👍 ಈ ರೋಗದ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ತರಗತಿಗೆ ಹಾಜರಾಗಲು ಅನುವುಮಾಡಿಕೊಡದೆ ಮನೆಯಲ್ಲಿಯೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯಲು ತಿಳಿಸುವುದು.

👍 ರೋಗ ಲಕ್ಷಣಗಳಿರುವ ಮಕ್ಕಳು ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದ ನಂತರ ಶಾಲೆಗೆ ಬರಲು ತಿಳಿಸುವುದು.

👍 ಎಲ್ಲಾ ಶಿಕ್ಷಕರು ಹಾಗೂ ಮಕ್ಕಳು ಪ್ರತಿನಿತ್ಯ ಕಡ್ಡಾಯವಾಗಿ ಸ್ವಚ್ಛವಾದ ಮುಖಗವಸು ಧರಿಸುವುದು.

👍 ಆಗಾಗ್ಗೆ ಶಿಕ್ಷಕರು ಹಾಗೂ ಮಕ್ಕಳು ಕೈಗಳಿಗೆ ಸ್ಯಾನಿಟೈಸರ್ ಹಾಕಿ ತೊಳೆದುಕೊಳ್ಳುವುದು.

👍 ಮಕ್ಕಳಿಗೆ ಕೈ ತೊಳೆಯಲು ಬಕೆಟ್ ನಲ್ಲಿ ನೀರು ಹಾಗೂ ಸಾಬೂನು ಇಡುವುದು

👍ಮಕ್ಕಳಿಗೆ ಕುಡಿಯಲು ಶುದ್ಧ ಕಾಯಿಸಿ ಆರಿಸಿದ ಕುಡಿಯುವ ನೀರನ್ನು ಕೊಡುವುದು.

👍 ಮನೆಯಿಂದ ತಿಂಡಿ ಪದಾರ್ಥಗಳನ್ನು ತಂದು ಪರಸ್ಪರ ಹಂಚಿಕೊಂಡು ತಿನ್ನಲು ಮಕ್ಕಳಿಗೆ ಆಸ್ಪದ ಕೊಡಬಾರದು

👍 ಪ್ರತಿದಿನ ಶಾಲಾ ಆವರಣ, ತರಗತಿ ಕೊಠಡಿ, ಬಿಸಿಯೂಟ ಕೊಠಡಿ, ಶೌಚಾಲಯ ಸ್ವಚ್ಛತೆಯಿಂದ ಇರುವಂತೆ ನೋಡಿಕೊಳ್ಳುವುದು.

👍 ತರಗತಿಯಲ್ಲಿ ಮಕ್ಕಳು ಗುಂಪುಗೂಡಿ ಕಲಿಕೆಯಲ್ಲಿ ತೊಡಗದಂತೆ ನೋಡಿಕೊಳ್ಳುವುದು.

👍 ಶಾಲೆಯಲ್ಲಿ ಯಾವುದೇ ಗುಂಪು ಚಟುವಟಿಕೆಗಳಿಗೆ ( ಆಟೋಟಗಳಿಗೆ ) ಅವಕಾಶ ನೀಡಬಾರದು.

👍 ಒಂದು ಆಸನದಲ್ಲಿ (ಡೆಸ್ಕ್ ನಲ್ಲಿ ) ಇಬ್ಬರು ವಿದ್ಯಾರ್ಥಿಗಳು ಕೂಡಲು ಅನುವುಮಾಡಿಕೊಡಬೇಕು.

👍ಶಾಲಾ ಆವರಣ ವಿಶಾಲವಾಗಿದ್ದು ಮರದ ನೆರಳಿದ್ದರೆ, ಕಾರಿಡಾರ್ ನಲ್ಲಿ ಧೈಹಿಕ ಅಂತರ ಕಾಪಾಡಿಕೊಂಡು ತರಗತಿ ನಡೆಸಬಹುದು

👍 ಅಕ್ಷರ ದಾಸೋಹದ ಸಿಬ್ಬಂದಿಗಳೂ ಸಹ ಪ್ರತಿನಿತ್ಯ ದೈಹಿಕ ಉಷ್ಣತೆ ಪರೀಕ್ಷೆ ಮಾಡಿಸಿಕೊಳ್ಳಬೇಕು.

👍 ಈ ರೋಗದ ಲಕ್ಷಣಗಳು ಕಂಡುಬಂದರೆ ಮುಖ್ಯೋಪಾಧ್ಯಾಯರಿಗೆ ತಿಳಿಸಿ ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದ ನಂತರ ಮತ್ತೆ ಕರ್ತವ್ಯಕ್ಕೆ ಹಾಜರಾಗಬೇಕು.

👍 ಅಡುಗೆ ತಯಾರಕರು ಪ್ರತಿನಿತ್ಯ ಅಡುಗೆ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಮುಖಗವಸು ಮತ್ತು ಕೈಗವಸು ಧರಿಸಬೇಕು.

👍 ಕ್ಷೀರ ಭಾಗ್ಯದಡಿ ಮಕ್ಕಳಿಗೆ ಬೆಳೆಗ್ಗೆ ಕೊಡಮಾಡುವ ಹಾಲನ್ನು ತಮ್ಮ ತಮ್ಮ ಲೋಟಗಳಲ್ಲಿ ಕುಡಿಯಲು ತಿಳಿಸಬೇಕು.

👍 ಯಾವುದೇ ಕಾರಣಕ್ಕೂ ಒಂದೇ ಲೋಟದಲ್ಲಿ ಹಲವು ಮಕ್ಕಳು ಹಾಲು ಕುಡಿಯದಂತೆ ನೋಡಿಕೊಳ್ಳಬೇಕು

👍 ಮಧ್ಯಾಹ್ನದ ಬಿಸಿಯೂಟದ ಸಂಧರ್ಭದಲ್ಲಿ ಮಕ್ಕಳು ದೂರ ದೂರ ಕುಳಿತು ಊಟ ಮಾಡಲು ತಿಳಿಸಬೇಕು.

👍 ಯಾವುದೇ ಕಾರಣಕ್ಕೂ ಒಂದೇ ತಟ್ಟೆಯಲ್ಲಿ ಇಬ್ಬರು ಅಥವಾ ಹೆಚ್ಚು ಮಕ್ಕಳ ಸಹಭೋಜನಕ್ಕೆ ಆಸ್ಪದ ಕೊಡಬಾರದು.

👍 ತರಗತಿಯಲ್ಲಿ ಮಕ್ಕಳನ್ನು ಸಮೂಹಗೂಡಿಸಿ (ಒಂದುಗೂಡಿಸಿ ) ಶೆಕ್ಷಣಿಕ ಮಾರ್ಗದರ್ಶನ ಮಾಡದೇ ವಯಕ್ತಿಕವಾಗಿ ಮಾರ್ಗದರ್ಶನ ಮಾಡುವುದು

👍 ಜೀವ ಇದ್ದರೆ ತಾನೇ ಜೀವನ ಎಂಬುದನ್ನು ಅರ್ಥೈಸಿ ಇಂತಹ ಸಂಕಷ್ಟ ಕಾಲದಲ್ಲಿ ಈ ರೋಗಕ್ಕೆ ಬಲಿಯಾಗದೆ ಬದುಕುಳಿದು ಹೇಗೆ ಶಿಕ್ಷಣ ಫಡೆ ಯಬೇಕೆಂಬುದನ್ನು ತಿಳಿಸುವುದು

👍 ಮುಖ್ಯಶಿಕ್ಷಕರು ತಮ್ಮ ಶಾಲೆಗಳಲ್ಲಿ ಸಿಬ್ಬಂದಿಗಾಗಲಿ, ಮಕ್ಕಳಿಗಾಗಲಿ ಈ ರೋಗ ಹರಡಿದ್ದೇ ಆದರೆ ತಕ್ಷಣವೇ ಸಮೂಹ ಸಂಪನ್ಮೂಲ ವ್ಯಕ್ತಿಯ ಮೂಲಕ ಇಲಾಖಾ ಗಮನಕ್ಕೆ ತರುವುದು.
ಒಟ್ಟಾರೆ ಮಕ್ಕಳ ಶಿಕ್ಷಣದ ಅಳಿವು ಉಳಿವು ಈ ಸಂಧರ್ಭದಲ್ಲಿ ನಾವು ಹೇಗೆ ಜೀವನ ಸಾಗಿಸುತ್ತೇವೆ ಎಂಬುದರ ಮೇಲೆ ನಿರ್ಧಾರವಾಗಿದೆ.
ಇಂದು ನಾವುಗಳು ಈ ಸಾಂಕ್ರಾಮಿಕ ರೋಗದ ಮಧ್ಯೆ ಇದ್ದುಕೊಂಡು ನಾವು ನಮ್ಮ ಗುರಿ ಸಾಧಿಸಬೇಕಿದೆ.
ಬನ್ನಿ ಎಲ್ಲರೂ ಸೇರಿ ಸರಕಾರ ಹೊರಡಿಸುವ ಮಾರ್ಗಸೂಚಿಯನ್ನು ಅನುಸರಿಸಿ ಇದರಿಂದ ಮುಕ್ತಿ ಹೊಂದೋಣ.
ಉಪ ನಿರ್ದೇಶಕರು (ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ.

Sharing Is Caring:

Leave a Comment