CAMS ಬಯೋಮೆಟ್ರಿಕ್ ಹಾಜರಾತಿ ಆಪ್ ಹಾಗೂ HRMS 2.0 ಲೊಕೇಶನ್‌ಗೆ ಸಂಬಂಧಿಸಿದಂತೆ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗಳಿಗೆ ನೀಡಿರುವ ಪರಿಹಾರದ ಮಾಹಿತಿ ಇಲ್ಲಿದೆ
📍 1. ಲ್ಯಾಟಿಟ್ಯೂಡ್ ಮತ್ತು ಲಾಂಜಿಟ್ಯೂಡ್ (Lat & Long) ತಿದ್ದುಪಡಿ ಪ್ರಕ್ರಿಯೆ
A. ಎದುರಾಗುವ ಸಮಸ್ಯೆ:
ಶಾಲೆಯ ಲೊಕೇಶನ್ ವ್ಯಾಪ್ತಿ ತಪ್ಪಾಗಿದ್ದಲ್ಲಿ ಅಥವಾ ಲೊಕೇಶನ್ ಅಪ್ಡೇಟ್ ಆಗದಿದ್ದಲ್ಲಿ ಆಪ್‌ನಲ್ಲಿ “Out of Facilities Area” ಎಂಬ ಕೆಂಪು ಬಣ್ಣದ ದೋಷ ಸಂದೇಶ ಬರುತ್ತದೆ. ಆಗ Check-In/Check-Out ಆಗುವುದಿಲ್ಲ.
B. ಸಂಪೂರ್ಣ ಪರಿಹಾರದ ಹಂತಗಳು:
- ಶಾಲೆಗಳ ಪಟ್ಟಿ ಲಭ್ಯ: CEG ಅವರು ಈಗಾಗಲೇ ರಾಜ್ಯದ ಎಲ್ಲಾ ಶಾಲೆಗಳ ಪಟ್ಟಿಯನ್ನು ಆಯಾ DDO ಲಾಗಿನ್‌ನ HRMS 2.0 ಪೋರ್ಟಲ್‌ನಲ್ಲಿ ಲಭ್ಯವಾಗಿಸಿದ್ದಾರೆ.
- HM ಅಸೈನ್ಮೆಂಟ್: ಮೊದಲು ಆ ಶಾಲೆಯ ಮುಂಭಾಗದಲ್ಲಿ ನಿಂತುಕೊಂಡು, ಸಂಬಂಧಪಟ್ಟ ಮುಖ್ಯೋಪಾಧ್ಯಾಯರ (HM) KGID ಸಂಖ್ಯೆಯನ್ನು ನಮೂದಿಸಬೇಕು. ನಂತರ ಅವರನ್ನು
Nominated Employeeಎಂದು ಅಸೈನ್ ಮಾಡಬೇಕು. - Geo Update Option: HM ಅಸೈನ್ ಆದ ತಕ್ಷಣ, ಆ HM ಅವರ
HRMS ESS 2.0 Payslip Appಪ್ರೊಫೈಲ್‌ನ ಕೆಳಭಾಗದಲ್ಲಿGeo Updateಎಂಬ ನೀಲಿ ಬಣ್ಣದ ಪಟ್ಟಿ/ಬಟನ್ ಸ್ವಯಂಚಾಲಿತವಾಗಿ ಕಾಣಿಸಿಕೊಳ್ಳುತ್ತದೆ. - 5 ಹಂತದ ಲೊಕೇಶನ್ ಅಪ್ಡೇಟ್: HM ಅವರು
Geo Updateಮೇಲೆ ಕ್ಲಿಕ್ ಮಾಡಿ, ತಮ್ಮ ಶಾಲೆಯ ಆವರಣದಲ್ಲಿ ಅಥವಾ ಮೈದಾನದಲ್ಲಿ ನಿಂತುಕೊಂಡು Mobile GPS ಆನ್ ಮಾಡಿ Live Location ಅನ್ನು ಒಟ್ಟು 5 ಹಂತಗಳಲ್ಲಿ/Points ನಲ್ಲಿ ಅಪ್ಡೇಟ್ ಮಾಡಬೇಕು. ಇದರಿಂದ ಶಾಲೆಯ ನಿಖರ ವ್ಯಾಪ್ತಿ ನಿರ್ಧಾರವಾಗುತ್ತದೆ. - CEG ಡೇಟಾ ಫೆಚ್: HM ರಿಂದ ಲೊಕೇಶನ್ ಸರಿಯಾಗಿ ಅಪ್ಡೇಟ್ ಆದ ಬಳಿಕ, CEG ಅಧಿಕಾರಿಗಳು ಆ ಡೇಟಾವನ್ನು CAMS ಸರ್ವರ್‌ಗೆ Fetch ಮಾಡುತ್ತಾರೆ. ತದನಂತರ ಆ ಶಾಲೆಯ ಎಲ್ಲಾ ಶಿಕ್ಷಕರಿಗೆ ಯಾವುದೇ ತೊಂದರೆಯಿಲ್ಲದೆ Check-In ಮತ್ತು Check-Out ಮಾಡಲು ಸಾಧ್ಯವಾಗುತ್ತದೆ.
⏰ 2. ಟೈಮ್ ಸ್ಲ್ಯಾಬ್ (Time Slab) ಸಮಸ್ಯೆ ಮತ್ತು ಸ್ಕೂಲ್ ಮ್ಯಾಪಿಂಗ್
A. ಎದುರಾಗುವ ಸಮಸ್ಯೆ:
ಕೆಲವು ಶಿಕ್ಷಕರಿಗೆ CAMS ಆಪ್‌ನಲ್ಲಿ ಶಾಲೆಯ ನಿಗದಿತ ಸಮಯ ಬದಲು ಕೇವಲ ಬೆಳಗ್ಗೆ 10:00 ರಿಂದ ಸಂಜೆ 5:30 ರವರೆಗಿನ ಸಮಯ ಮಾತ್ರ ಕಾಣಿಸುತ್ತಿರುತ್ತದೆ.
B. ಸಮಸ್ಯೆಗೆ ಕಾರಣ:
ಇಂತಹ ಶಿಕ್ಷಕರನ್ನು HRMS 2.0 ಸಿಸ್ಟಮ್‌ನಲ್ಲಿ ಸದ್ಯಕ್ಕೆ Office Staff / ಕಚೇರಿ ಸಿಬ್ಬಂದಿ ಎಂದು ಪರಿಗಣಿಸಲಾಗಿರುತ್ತದೆ.
ಅವರ ಪ್ರೊಫೈಲ್‌ನಲ್ಲಿ ಹೆಸರಿನ ಕೆಳಗೆ Office Address ಜಾಗದಲ್ಲಿ ಶಾಲೆಯ ಹೆಸರು ಇರದೆ ಕೇವಲ ಡ್ಯಾಶ್ - ಚಿಹ್ನೆ ಇರುತ್ತದೆ. ಅಂದರೆ ಅವರಿಗೆ ಇನ್ನು ಯಾವುದೇ ಶಾಲೆ Assign ಆಗಿರುವುದಿಲ್ಲ.
C. ಪರಿಹಾರ:
ಇಂತಹ ಶಿಕ್ಷಕರು HRMS 2.0 ನಲ್ಲಿ ತಮಗೆ ಕಡ್ಡಾಯವಾಗಿ School Mapping ಮಾಡಿಸಿಕೊಳ್ಳಬೇಕು.
School Mapping ಆಗದ ಹೊರತು ಅವರ Lat/Long 0 ಎಂದು ತೋರಿಸುತ್ತದೆ. ಆದ್ದರಿಂದ ತಕ್ಷಣವೇ ಸಂಬಂಧಪಟ್ಟ DDO ಕಚೇರಿಯನ್ನು ಸಂಪರ್ಕಿಸಿ School Map ಮಾಡಿಸಿಕೊಳ್ಳಬೇಕು.
School Mapping ಪೂರ್ಣಗೊಂಡ ನಂತರ ಮಾತ್ರ ಸರಿಯಾದ ಶಾಲಾ ಸಮಯದ Time Slab ಆಪ್‌ನಲ್ಲಿ ಮುಕ್ತವಾಗುತ್ತದೆ.
🔄 3. ವರ್ಗಾವಣೆಯಾದ (Transferred) ಶಿಕ್ಷಕರ ಗಮನಕ್ಕೆ
A. ಪ್ರಸ್ತುತ ಸ್ಥಿತಿ:
ಬೇರೆ ಬ್ಲಾಕ್ ಅಥವಾ ಜಿಲ್ಲೆಯಿಂದ ವರ್ಗಾವಣೆಯಾಗಿ ಬಂದಿರುವ ಶಿಕ್ಷಕರ ಮಾಹಿತಿಯನ್ನು CEG ಯವರು ಈಗಾಗಲೇ Transfer ಮಾಡಿ, ಸಂಬಂಧಪಟ್ಟ ಹೊಸ DDO ಲಾಗಿನ್‌ಗೆ ರವಾನಿಸಿರುತ್ತಾರೆ.
ಆದರೆ ತಾಂತ್ರಿಕ ಕಾರಣದಿಂದ ಶಿಕ್ಷಕರ CAMS ಆಪ್‌ನಲ್ಲಿ ನೇರವಾಗಿ ಹೊಸ ಶಾಲೆಯ ಹೆಸರು ಇನ್ನೂ ಕಾಣಿಸುತ್ತಿರುವುದಿಲ್ಲ.
B. ಪರಿಹಾರದ ಕ್ರಮ:
- ಹೊಸ DDO ಲಾಗಿನ್‌ನಲ್ಲಿ ವರ್ಗಾವಣೆಗೊಂಡ ಶಿಕ್ಷಕರ ಮಾಹಿತಿ ಬಂದ ತಕ್ಷಣ, ಆಯಾ DDO ಅವರು ಸದರಿ ಶಿಕ್ಷಕರನ್ನು ಸಂಬಂಧಪಟ್ಟ ಹೊಸ ಶಾಲೆಗೆ
Assignಮಾಡಬೇಕು. - ಶಿಕ್ಷಕರನ್ನು Assign ಮಾಡಿದ ನಂತರ, ಆ ಹೊಸ ಶಾಲೆಯ Lat & Long ಅನ್ನು ಮೇಲೆ ತಿಳಿಸಿರುವ ಹಂತ-1 ರಂತೆ HM ಮೂಲಕ ಅಪ್ಡೇಟ್ ಮಾಡಿಸಬೇಕು.
- ಈ ಎರಡು ಪ್ರಕ್ರಿಯೆಗಳು ಪೂರ್ಣಗೊಂಡಾಗ ಮಾತ್ರ ವರ್ಗಾವಣೆಗೊಂಡ ಶಿಕ್ಷಕರಿಗೆ ಹೊಸ ಶಾಲೆಯಲ್ಲಿ Check-In ಮತ್ತು Check-Out ಪ್ರಕ್ರಿಯೆ ಲಭ್ಯವಾಗುತ್ತದೆ.
📩 4. ನಿರಂತರ ಆಪ್ (Nirantara App) & Grievance ಸಲ್ಲಿಕೆ ವಿಧಾನ
A. ಲಾಗಿನ್ ಬಗ್ಗೆ ಮಾಹಿತಿ:
CAMS ಅಥವಾ Nirantara ಆಪ್‌ಗೆ ಸಂಬಂಧಿಸಿದಂತೆ ಬ್ಲಾಕ್ ಮಟ್ಟದಲ್ಲಾಗಲಿ ಅಥವಾ ಜಿಲ್ಲಾ ಮಟ್ಟದಲ್ಲಾಗಲಿ ಯಾವುದೇ ಪ್ರತ್ಯೇಕ ಲಾಗಿನ್‌ಗಳು/Password ಗಳು ಇರುವುದಿಲ್ಲ.
B. Grievance ಸಲ್ಲಿಕೆ ಹೇಗೆ:
ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ನೇರವಾಗಿ CEG ಅವರಿಗೆ ದೂರು ಸಲ್ಲಿಸಲು ಆಪ್‌ನಲ್ಲಿ Grievance ಅವಕಾಶವಿದೆ.
ಇದರಲ್ಲಿ Attendance Issues, Registration Issues, Technical Issues, Data Mismatch ಸೇರಿದಂತೆ 5-6 ಪ್ರಮುಖ ಆಯ್ಕೆಗಳನ್ನು ನೀಡಲಾಗಿದೆ.
C. ದೂರು ಪರಿಹಾರ ಪ್ರಕ್ರಿಯೆ:
- Grievance ನಲ್ಲಿ ದೂರು ದಾಖಲಿಸಿದಾಗ CEG ತಾಂತ್ರಿಕ ತಂಡವೇ ಆ ದೋಷವನ್ನು ಪರಿಶೀಲಿಸಿ ಸರಿಪಡಿಸುತ್ತಾರೆ.
- ಸಮಸ್ಯೆ ಬಗೆಹರಿದ ತಕ್ಷಣ ಶಿಕ್ಷಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ
SMSಮೂಲಕ ಮಾಹಿತಿ ಬರುತ್ತದೆ. - ಶಿಕ್ಷಕರು
ಅನುಬಂಧ-3(C)ನಮೂನೆಯಲ್ಲಿ ಎಲ್ಲಾ ಮಾಹಿತಿ ಭರ್ತಿ ಮಾಡಿ ಕಳುಹಿಸಿದರೆ, CEG ಕಡೆಯಿಂದ CAMSನಲ್ಲಿ ಅದನ್ನು ತಕ್ಷಣ ಸರಿಪಡಿಸಲಾಗುತ್ತದೆ.
D. ಮಕ್ಕಳ ಪಟ್ಟಿ ಅಪ್ಡೇಟ್ ಬಗ್ಗೆ:
ಸಹಾಯಕ ನಿರ್ದೇಶಕರಾದ ಗೋಪಾಲಗೌಡ ಸರ್ ಅವರ ಮಾಹಿತಿ ಪ್ರಕಾರ —
Nirantara ಆಪ್ SATS ಸಾಫ್ಟ್‌ವೇರ್ ಜೊತೆಗೆ ನಿರಂತರವಾಗಿ ಡೇಟಾ Fetch ಮಾಡುತ್ತಿರುತ್ತದೆ. ಇದು ಸಾಮಾನ್ಯವಾಗಿ ವಾರಕ್ಕೊಮ್ಮೆ ಅಥವಾ ನಿಯಮಿತವಾಗಿ ನಡೆಯುತ್ತದೆ.
ಹಾಗಾಗಿ ನಾವು ಆಪ್ ಅನ್ನು ಒಮ್ಮೆ Logout ಮಾಡಿ ಮತ್ತೆ Login ಮಾಡಿದಾಗ ಮಕ್ಕಳ ಪಟ್ಟಿ ತಾನಾಗಿಯೇ ಅಪ್ಡೇಟ್ ಆಗಿ ಸರಿಯಾಗುತ್ತದೆ.
ಒಂದು ವೇಳೆ ಹಾಗೆ ಆಗದಿದ್ದರೆ, Grievance Raise ಮಾಡಿದಾಗ ಸಂಪೂರ್ಣವಾಗಿ ಸರಿಯಾಗುತ್ತದೆ.
💡 ಮುಖ್ಯ ಸೂಚನೆ
DDO ಮಟ್ಟದಲ್ಲಿ ಈ ಮೇಲಿನ ಎಲ್ಲಾ ತಾಂತ್ರಿಕ ಕ್ರಮಗಳನ್ನು ಕೈಗೊಂಡ ಒಂದೂ ವಾರದ ಒಳಗಾಗಿ ಶಿಕ್ಷಕರಿಗೆ ಆಯಾ ಶಾಲೆಗಳಲ್ಲಿ Check-In ಹಾಗೂ Check-Out ಪ್ರಕ್ರಿಯೆ ಸುಲಭವಾಗಿ ಲಭ್ಯವಾಗುತ್ತಿದೆ.
ಆದ್ದರಿಂದ ತೊಂದರೆ ಇರುವ ಶಿಕ್ಷಕರು ತಡಮಾಡದೆ ಕೂಡಲೇ ಸಂಬಂಧಪಟ್ಟ HM ಮತ್ತು DDO ಅವರನ್ನು ಸಂಪರ್ಕಿಸಿ ಈ ಕ್ರಮಗಳನ್ನು ಅನುಸರಿಸಿ.