ನಿಮ್ಮ ನಿವೃತ್ತಿ ಜೀವನ ಸುಖಕರವಾಗಲಿ
ದಶಕಗಳ ಕಾಲ ಸಾರ್ಥಕ ಸೇವೆಗೈದು ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.
ಶ್ರೀಮತಿ ಫ್ಲೋರಿನ್ ರೆಬೆಲ್ಲೊ
ಮುಖ್ಯ ಶಿಕ್ಷಕರು.
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬ್ರಹ್ಮರಕೂಟ್ಲು. ಬಂಟ್ವಾಳ
ದಿನಾಂಕ 21.04.1963 ರಂದು ಜನಿಸಿದ ಇವರು ದಿನಾಂಕ 07.02.1990 ರಲ್ಲಿ ಸೇವೆಗೆ ಸೇರಿದ ಇವರು ದ.ಕ.ಜಿ.ಪಂ.ಕಿ.ಪ್ರಾ.ಶಾಲೆ ಪದ್ಯಾಣ ಇಲ್ಲಿ ಸೇವೆ ಸಲ್ಲಿಸಿ ನಂತರ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬ್ರಹ್ಮರಕೂಟ್ಲು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ವರ್ಗಾವಣೆ ಗೊಂಡು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಪಲ್ಲಮಜಲು ಇಲ್ಲಿ ಸೇವೆ ಸಲ್ಲಿಸಿ ನಂತರ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬ್ರಹ್ಮರಕೂಟ್ಲು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಬಿ.ವಿ ಸೀತಾಲಕ್ಷ್ಮಿ
ಸ.ಹಿ.ಪ್ರಾ.ಶಾಲೆ ಆಜೇರು ಬಂಟ್ವಾಳ ತಾಲೂಕು.
ದಿನಾಂಕ 16.04.1963 ರಲ್ಲಿ ಬಿ.ಎಸ್ ವೆಂಕಟರಾವ್ ಮತ್ತು ಬಿ.ವಿ ಪದ್ಮಾವತಿ ದಂಪತಿಗಳ ಪುತ್ರಿಯಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಹೆಗ್ಗಳ ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಬಾಲಕಿಯರ ಪ್ರೌಢಶಾಲೆ ವಿರಾಜಪೇಟೆ ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಸರ್ವೋದಯ ಮಹಿಳೆಯರ ತರಬೇತಿ ಸಂಸ್ಥೆ ವಿರಾಜಪೇಟೆ ಇಲ್ಲಿ ಪೂರೈಸಿ, ಇವರು ದಿನಾಂಕ 29.09.1982 ರಲ್ಲಿ ಸ.ಕಿ.ಪ್ರಾ.ಶಾಲೆ ಹುಲುಗುಂದ ಸೋಮವಾರ ಪೇಟೆ ಕೊಡಗು ಜಿಲ್ಲೆ ಇಲ್ಲಿ ಸೇವೆಗೆ ಸೇರಿದ ಇವರು ನಂತರ ವರ್ಗಾವಣೆ ಗೊಂಡು ಸ.ಕಿ.ಪ್ರಾ.ಶಾಲೆ ಬೇಟೋಳಿ ವಿರಾಜಪೇಟೆ ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಮಾ.ಹಿ.ಪ್ರಾ.ಶಾಲೆ ಮೂಡಂಬೈಲು ಬಂಟ್ವಾಳ ತಾಲೂಕು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಆಜೇರು ಬಂಟ್ವಾಳ ತಾಲೂಕು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಸುಮತಿ ಬಾಯಿ
ಮುಖ್ಯ ಶಿಕ್ಷಕರು
ಸ.ಉ.ಹಿ.ಪ್ರಾ.ಶಾಲೆ ತೆಂಕ ಎಕ್ಕಾರು. ಮಂಗಳೂರು ಉತ್ತರ
ದಿನಾಂಕ 27.08.1993 ರಲ್ಲಿ ಸೇವೆಗೆ ಸೇರಿದ ಇವರು ಸ.ಕಿ.ಪ್ರಾ.ಶಾಲೆ ಮಟ್ಲುಪಾಡಿ ಕಾರ್ಕಳ ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಕೋಟ ಉಡುಪಿ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಉ.ಹಿ.ಪ್ರಾ.ಶಾಲೆ ಸದಾಶಿವ ನಗರ ಇಲ್ಲಿ ಸೇವೆ ಸಲ್ಲಿಸಿದ ಇವರು ನಂತರ ವರ್ಗಾವಣೆ ಗೊಂಡು ಸ.ಹಿ.ಪ್ರಾ.ಶಾಲೆ ಬೈಕಂಪಾಡಿ ಫಿಶರೀಶ್ ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಒಡ್ಯ ಪುತ್ತೂರು ಹಾಗೂ ಸ.ಉ.ಹಿ.ಪ್ರಾ.ಶಾಲೆ ಗಾಂಧಿ ನಗರ ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಪ್ರೇಮಲತಾ ಎನ್
ಸ.ಕಿ.ಪ್ರಾ.ಶಾಲೆ ಸೇವಾಜೆ.
ಸುಳ್ಯ ತಾಲೂಕು
ದಿನಾಂಕ 12.04.1963 ರಂದು ಶ್ರೀ ಜನಾರ್ಧನ ನಾಯಕ್ ಹಾಗೂ ಶ್ರೀಮತಿ ಪ್ರಭಾವತಿ ಎನ್ ದಂಪತಿಗಳ ಪುತ್ರಿಯಾಗಿ ಜನಿಸಿದ ಇವರು ಪಿ ಯು ಸಿ ಶಿಕ್ಷಣವನ್ನು ಸರಕಾರಿ ಜ್ಯೂನಿಯರ್ ಕಾಲೇಜು ಪುಂಜಾಲಕಟ್ಟೆ ಬೆಳ್ತಂಗಡಿ ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಮಹಿಳಾ ಶಿಕ್ಷಕಿಯರ ತರಬೇತಿ ಸಂಸ್ಥೆ ಬಲ್ಮಠ ಮಂಗಳೂರು ಇಲ್ಲಿ ಪೂರೈಸಿ ದಿನಾಂಕ 17.11.1999 ರಲ್ಲಿ ಸ.ಕಿ.ಪ್ರಾ.ಶಾಲೆ ಸೇವಾಜೆ ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸುಮಾರು 24 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ಪೂವಪ್ಪ ಗೌಡ ಕೆ
ಸ.ಹಿ.ಪ್ರಾ ಶಾಲೆ ಪಂಜ
ಸುಳ್ಯ ತಾಲೂಕು
ಪೂವಪ್ಪಗೌಡ .ಕೆ .ಇವರು ಶ್ರೀಮತಿ ಬಾಲಕಿ ಮತ್ತು ದಾಸಪ್ಪ ಗೌಡ ಇವರ ಪುತ್ರರಾಗಿ ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಕೋಲ್ಪೆ ಮನೆತನದಲ್ಲಿ 10 4 1963 ರಂದು ಜನಿಸಿದರು. ಇವರು ಟಿಸಿಎಚ್ ತರಬೇತಿಯನ್ನು ಮಂಗಳೂರಿನ ಕೋಡಿಯಾಲ್ ಬೈಲು ಇಲ್ಲಿ ಪೂರೈಸಿರುತ್ತಾರೆ. 26 9 1994 ರಂದು ಬೆಳ್ತಂಗಡಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತಬಾಗಿಲು ಇಲ್ಲಿ ಕರ್ತವ್ಯಕ್ಕೆ ಸೇರಿರುತ್ತೀರಿ ತದನಂತರ 27 9 1997ರಿಂದ ಪುತ್ತೂರುತಾಲೂಕಿನ ಬಂಟ್ರಶಾಲೆ ಯಲ್ಲಿ ಕರ್ತವ್ಯ ನಿರ್ವಹಿಸಿ, 26 7 2003 ರಿಂದ 30 4 2023 ರವರೆಗೆ ಪಂಜ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ,ಶಿಕ್ಷಕ ವೃತ್ತಿ ಯಿಂದ ನಿವೃತ್ತಿ ಹೊಂದಿರುತ್ತೀರಿ. ಇದರ ಮಧ್ಯೆ ನಿಯೋಜನೆ ಮೇರೆಗೆ ಹರಿಪುರ ಮತ್ತು ಕರಿಂಬಿಲ ಶಾಲೆಯಲ್ಲಿ ಕರ್ತವ್ಯವನ್ನು ನಿರ್ವಹಿಸಿರುತ್ತೀರಿ. ಒಟ್ಟು 28 ವರ್ಷ 8 ತಿಂಗಳು ಕರ್ತವ್ಯವನ್ನು ನಿರ್ವಹಿಸಿರುತ್ತೀರಿ. ನಿಮ್ಮ ನಿವೃತ್ತಿ ಜೀವನವು ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ಶೋಭಾ ಎಸ್
ದ.ಕ.ಜಿ.ಪಂ.ಕಿ.ಪ್ರಾ.ಶಾಲೆ ಮೂಲಾರು ಬೆಳ್ತಂಗಡಿ.
ದಿನಾಂಕ 27.08.1992 ರಲ್ಲಿ ದ.ಕ.ಜಿ.ಪ.ಕಿ.ಪ್ರಾ.ಶಾಲೆ ಕುತ್ತಿನ ಬೆಳ್ತಂಗಡಿ ಇಲ್ಲಿ ಸೇವೆಗೆ ಸೇರಿದ ಇವರು ನಂತರ ದಿನಾಂಕ 17.06.1998 ರಲ್ಲಿ ದ.ಕ.ಜಿ.ಪ.ಹಿ.ಪ್ರಾ.ಶಾಲೆ ಚಾರ್ಮಾಡಿ ಬೆಳ್ತಂಗಡಿ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 31.07.1012 ರಲ್ಲಿ ದ.ಕ.ಜಿ.ಪ.ಕಿ.ಪ್ರಾ.ಶಾಲೆ ಮೂಲಾರು ಬೆಳ್ತಂಗಡಿ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ರೀಚಲ್ ಡಿಸೋಜ
ಸ.ಹಿ.ಪ್ರಾ ಶಾಲೆ ಪಾವೂರು
ಮಂಗಳೂರು ದಕ್ಷಿಣ
20.2.2020 ರಂದು ಪಾವೂರು ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ಸೇರಿದ ಇವರು 30.4.2023 ರಂದು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಸೇವೆಯಿಂದ ನಿವೃತ್ತಿಯೇ ಹೊರತು ಪ್ರವೃತ್ತಿಯಿಂದ ಅಲ್ಲ ಎನ್ನುವ ಮಾತಿನಂತೆ ತಮ್ಮ ಸೇವೆಯು ನಿರಂತರವಾಗಿ ಸಮಾಜಕ್ಕೆ ಇನ್ನಷ್ಟು ದೊರಕಲಿ ಎನ್ನುವ ಆಶಯದೊಂದಿಗೆ ತಮಗೆ ದೇವರು ಆಯುರಾರೋಗ್ಯ, ಐಶ್ವರ್ಯ, ನೆಮ್ಮದಿ ಕರುಣಿಸಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತಿದ್ದೇವೆ