ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ(1) ರ ಸರ್ಕಾರದ ಆದೇಶದಲ್ಲಿ ಸೇವೆ/ಯೋಜನೆಗಳ ಕರ್ನಾಟಕ ರಾಜ್ಯ ನಿವಾಸಿ ಅರ್ಜಿದಾರರಿಂದ ಕುಟುಂಬ ಗುರುತಿನ ಸಂಖ್ಯೆ(ಪಡಿತರ ಚೀಟಿ)ಯನ್ನು ಕಡ್ಡಾಯವಾಗಿ ಸೆರೆಹಿಡಿಯುವಂತೆ ತಿಳಿಸಲಾಗಿದೆ. ಉಲ್ಲೇಖ (2) ಅಧಿಸೂಚನೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ-ಸಾರ್ವಜನಿಕ ಶಿಕ್ಷಣ ಇಲಾಖೆ/ ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಟ್(SATS) ತಂತ್ರಾಂಶದಲ್ಲಿ ಕುಟುಂಬ ಗುರುತಿನ ಸಂಖ್ಯೆಯನ್ನು ಸೆರೆಹಿಡಿಯಲು
ಅಧಿಸೂಚಿಸಲಾಗಿದೆ. ಅದರನ್ವಯ, SATS ತಂತ್ರಾಂಶದಲ್ಲಿ ಕುಟುಂಬ ಗುರುತಿನ ಸಂಖ್ಯೆಯನ್ನು ಅಳವಡಿಸಲು ಈಗಾಗಲೇ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ.
ಪ್ರಸ್ತುತ ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಮ(SATS) ತಂತ್ರಾಂಶದಲ್ಲಿ ಲಭ್ಯವಿರುವ ಮಾಹಿತಿ ಬಳಸಿ 55 ಲಕ್ಷ ವಿದ್ಯಾರ್ಥಿಗಳ ಕುಟುಂಬ ಗುರುತಿನ ಸಂಖ್ಯೆಯನ್ನು ಅಳವಡಿಸಲಾಗಿದೆ. ಕುಟುಂಬ ಗುರುತಿನ ಸಂಖ್ಯೆ ಅಳವಡಿಸಲು ಬಾಕಿ ಇರುವ ವಿದ್ಯಾರ್ಥಿಗಳ ಶಾಲಾವಾರು ಪಟ್ಟಿಯನ್ನು SATS ತಂತ್ರಾಂಶದಲ್ಲಿ “sts/karnataka.govin* ಲಿಂಕ್‌ನಲ್ಲಿ ಒದಗಿಸಲಾಗಿದೆ. ಈ ಲಿಂಕ್‌ನಲ್ಲಿರುವ ವಿದ್ಯಾರ್ಥಿಗಳ ಪೋಷಕರ ಬಳಿ ಪಡಿತರ ಚೀಟಿ ಲಭ್ಯವಿದ್ದಲ್ಲಿ ಅದನ್ನು ಪಡೆದು SATS ತಂತ್ರಾಂಶದಲ್ಲಿ ಇಂದೀಕರಿಸಲು ಕ್ರಮವಹಿಸಲು ಸೂಚಿಸಿದೆ.
SATS ತಂತ್ರಾಂಶ