ಕರ್ನಾಟಕ ಸರ್ಕಾರ
ಕೇಂದ್ರೀಕೃತ ದಾಖಲಾತಿ ಘಟಕ, ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಕ.ಜಿ ರಸ್ತೆ, ಬೆಂಗಳೂರು
ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ವೃಂದಗಳ [PST-1-5, PE_Grade-II-1-8, GPT-6-8, CST-1-8, ಪ್ರೌಢ ಶಾಲಾ ಸಹ ಶಿಕ್ಷಕರ AM, PE-Grade-I] ಶಿಕ್ಷಕರ ಹುದ್ದೆಗಳನ್ನು ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ಕೆಲವು ಬೋಧಕ ಹುದ್ದೆಗಳಿಗೆ ನೇಮಕಾತಿ) (ವಿಶೇಷ) ನಿಯಮಗಳು, 2026 ಸಂಖ್ಯೆ: ಇಪಿ 80 ಡಿಪಿಐ 2026 ಬೆಂಗಳೂರು, ದಿನಾಂಕ: 10.08.2026 ರ ನಿಯಮಗಳನ್ವಯ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿಯಿಂದ ಭರ್ತಿ ಮಾಡುವ ಸಂಬಂಧ ನಿಯಮಾನುಸಾರ ಅರ್ಹರಾಗಿರುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿ, ಅಧಿಸೂಚನೆಗಳನ್ನು ಹೊರಡಿಸಲಾಗಿದ್ದು, ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿತ್ತು.
1.ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡುವ ಮುನ್ನ ವಿವಿಧ ವೃಂದಗಳು ಅಂದರೆ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ (PST – 1 ರಿಂದ 5ನೇ ತರಗತಿ, PE_Grade-II), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ (GPT – 6 ರಿಂದ 8ನೇ ತರಗತಿ, CST – 1 ರಿಂದ 8ನೇ ತರಗತಿ), ಪ್ರೌಢ ಶಾಲಾ ಸಹ ಶಿಕ್ಷಕರ AM, PE-Grade-I ಸಂಬಂಧಿಸಿದಂತೆ ಆಯಾ ಜಿಲ್ಲಾ/ವಿಭಾಗೀಯ ಪ್ರಾಧಿಕಾರಿಗಳು ಹೊರಡಿಸಿರುವ ಅಧಿಸೂಚನೆಗಳಲ್ಲಿ ಇರುವಂತೆ ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ, ಶುಲ್ಕ, ಮೀಸಲಾತಿ ಇತ್ಯಾದಿಗಳನ್ನು ಓದಿ ಅರ್ಥೈಸಿಕೊಳ್ಳುವುದು.
2.ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಒಂದೇ ಬಾರಿಯ ನೋಂದಣಿ ಪ್ರಕ್ರಿಯೆಯನ್ನು ಒಳಗೊಂಡಿದ್ದು, ಅಭ್ಯರ್ಥಿಗಳು ನೀಡಿರುವ ಮಾಹಿತಿಯನ್ನು ಈ ನೇಮಕಾತಿಯ ಮುಂದಿನ ಎಲ್ಲಾ ಹಂತದ ಪ್ರಕ್ರಿಯೆಗಳಲ್ಲಿ ಪರಿಗಣಿಸಲಾಗುವುದರಿಂದ ಅತ್ಯಂತ ಜಾಗರೂಕತೆಯಿಂದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡುವುದು.
3.ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಯು User ID ಮತ್ತು Passwordನ್ನು ಸೃಜಿಸಿಕೊಂಡು ಆನ್‌ಲೈನ್‌ನಲ್ಲಿ Login ಆಗಬೇಕು. ಅಭ್ಯರ್ಥಿಗಳು ಮುಂದಿನ ಹಂತಗಳಲ್ಲಿ ವೈಯಕ್ತಿಕ ವಿವರ, ಮೀಸಲಾತಿ ವಿವರ, ವೃತ್ತಿಪರ ಶಿಕ್ಷಣ ವಿದ್ಯಾರ್ಹತೆ ಮತ್ತು ಅರ್ಜಿ ಸಲ್ಲಿಸುತ್ತಿರುವ ಹುದ್ದೆಗಳ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.
4.ಅಭ್ಯರ್ಥಿಗಳು ಅರ್ಜಿಗಳನ್ನು Online ಮೂಲಕವೇ ಸಲ್ಲಿಸಬೇಕು. ಇತರ ಯಾವುದೇ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
5.ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೆ ಕಾಯದೇ ಮುಂಚಿತವಾಗಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು.
6.ಅಭ್ಯರ್ಥಿಗಳು ಒಂದೇ ಅರ್ಜಿಯಲ್ಲಿ ಅವರು ಅರ್ಹರಾಗಿರುವ ಎಲ್ಲಾ ವೃಂದದ ಹುದ್ದೆಗಳಿಗೆ ರಾಜ್ಯದ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಜಿಲ್ಲೆಗಳ ಅಥವಾ ವಿಭಾಗಗಳ ಅಧಿಸೂಚನೆಗಳಿಗೆ ಅರ್ಜಿಯನ್ನು ಸಲ್ಲಿಸುವುದು.
7.2026ನೇ ಸಾಲಿನ PST, GPT, AM ನೇಮಕಾತಿಗೆ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆದರೆ 2026ನೇ ಸಾಲಿನ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಲಾಗಿದೆ.
ಕ್ರಮ ಸಂಖ್ಯೆ ವಿಷಯ. ದಿನಾಂಕ
1| ಅಧಿಸೂಚನೆ ಹೊರಡಿಸಿದ ದಿನಾಂಕ. 10.08.2026
2| ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ. 18.08.2026
3| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. 07.09.2026
ಸದರಿ ಅಧಿಸೂಚನೆಯಲ್ಲಿ ನಮೂದಿಸಿದ ವಿವಿಧ ವೃಂದಗಳಿಗೆ (PST, GPT, AM) ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಒಂದೇ Online ಅರ್ಜಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
8.ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಒಂದು ವೃಂದದ ಒಂದು ಹುದ್ದೆಗೆ ಒಂದು ಜಿಲ್ಲೆಯನ್ನು ಮಾತ್ರ ಆಯ್ಕೆ ಮಾಡತಕ್ಕದ್ದು. ಒಂದು ಜಿಲ್ಲೆಯಲ್ಲಿ ಒಂದಕ್ಕಿಂತ ಹೆಚ್ಚಿನ ವೃಂದಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅದೇ ರೀತಿ, ಬೇರೆ ಬೇರೆ ವೃಂದದ ಬೇರೆ ಬೇರೆ ಹುದ್ದೆಗೆ ಬೇರೆ ಬೇರೆ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
9.ಪ್ರೌಢಶಾಲಾ ಸಹ ಶಿಕ್ಷಕರ (AM) ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್-I (PE-Grade-I) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಒಂದು ವೃಂದಕ್ಕೆ ಒಂದು (01) ವಿಭಾಗದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಯಾವುದಾದರೂ ಒಂದು ವಿಭಾಗದಲ್ಲಿ ಒಂದಕ್ಕಿಂತ ಹೆಚ್ಚಿನ ವೃಂದದ ಹುದ್ದೆಗಳಿಗೆ ಅಭ್ಯರ್ಥಿಯು ತನ್ನ ಅರ್ಹತೆಗೆ ತಕ್ಕಂತೆ ಅರ್ಜಿಯನ್ನು ಸಲ್ಲಿಸಬಹುದು. ಅದೇ ರೀತಿ ಬೇರೆ ಬೇರೆ ವೃಂದಕ್ಕೆ ಬೇರೆ ಬೇರೆ ವಿಭಾಗದಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಉದಾ: ಒಬ್ಬ ಅಭ್ಯರ್ಥಿಯು PST ವೃಂದದಲ್ಲಿ PST-ಸಾಮಾನ್ಯ, PE-Grade-II, ಎರಡೂ ಹುದ್ದೆಗೆ ಹಾಗೂ GPT ವೃಂದದಲ್ಲಿ GPT (KAN)/GPT (ENG)/GPT (SS)/GPT (M&S)/GPT (Bio-Science), GPT (CST 1 to 8)/ಪ್ರೌಢಶಾಲಾ ಸಹ ಶಿಕ್ಷಕರ (AM) ವೃಂದದಲ್ಲಿ AM (KAN)/AM (ENG)/AM (Arts)/AM (CBZ)/PE-Grade-I ಅಧಿಸೂಚಿತ ಮೂರೂ ವೃಂದದ ಹುದ್ದೆಗಳಿಗೂ ಅರ್ಹವಾಗಿದ್ದಲ್ಲಿ ಅಭ್ಯರ್ಥಿಯು ಬಯಸಿದಲ್ಲಿ, ಮೂರೂ ವೃಂದದ ಹುದ್ದೆಗಳಿಗೂ ಒಂದಕ್ಕಿಂತ ಹೆಚ್ಚಿನ ಜಿಲ್ಲೆಗಳಲ್ಲಿ/ವಿಭಾಗಗಳಲ್ಲಿ ಪ್ರತ್ಯೇಕ ಶುಲ್ಕದೊಂದಿಗೆ ಒಂದೇ ಅರ್ಜಿಯಲ್ಲಿ ಸಲ್ಲಿಸಬಹುದಾಗಿದ್ದು. ಆದರೆ ಒಂದು ವೃಂದದ ಒಂದು ಹುದ್ದೆಗೆ ಒಂದು ಜಿಲ್ಲೆಯಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಅಂದರೆ PST ವೃಂದದ ಅಭ್ಯರ್ಥಿಯು ಬಾಗಲಕೋಟೆ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದರೆ, ಬೇರೆ ಯಾವುದೇ ಜಿಲ್ಲೆಯಲ್ಲಿ PST ವೃಂದದ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅದೇ ರೀತಿ ಯಾವೊಬ್ಬ ಅಭ್ಯರ್ಥಿಯು GPT-SS ಹುದ್ದೆಗೆ ಮೈಸೂರು ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದಲ್ಲಿ ಆತನು ಬೇರೆ ಜಿಲ್ಲೆಯಲ್ಲಿ GPT-SS ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಆದರೆ, GPT-M & S, GPT-KAN, GPT-ENG, GPT-BIO-SCIENCE, CST-1 to 8 ಹುದ್ದೆಗಳಿಗೆ ಆತನು ವಿದ್ಯಾರ್ಹತೆಗೆ ತಕ್ಕಂತೆ ಮೈಸೂರು ಅಥವಾ ಬೇರೆ ಜಿಲ್ಲೆಯಲ್ಲಿ ನಿಗದಿತ ಶುಲ್ಕ ಪಾವತಿಸಿ, ಒಂದೇ ಅರ್ಜಿ ಸಲ್ಲಿಸುವುದು.
ಅದೇ ರೀತಿ ಯಾವೊಬ್ಬ ಅಭ್ಯರ್ಥಿಯು AM-ENG ಹುದ್ದೆಗೆ ಬೆಂಗಳೂರು ವಿಭಾಗದಲ್ಲಿ ಅರ್ಜಿ ಸಲ್ಲಿಸಿದಲ್ಲಿ ಆತನು AM-ENG ಹುದ್ದೆಗೆ ಬೇರೆ ವಿಭಾಗಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಆದರೆ ಆತನು AM-KAN, AM-CBZ, AM-Arts, PE-GRADE-1 ಹುದ್ದೆಗಳಿಗೆ ಬೇರೆ ವಿಭಾಗಗಳಲ್ಲಿ ತನ್ನ ವಿದ್ಯಾರ್ಹತೆಗೆ ತಕ್ಕಂತೆ ನಿಗದಿತ ಶುಲ್ಕ ಪಾವತಿಸಿ, ಒಂದೇ ಅರ್ಜಿ ಸಲ್ಲಿಸುವುದು.
10.ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ವೃಂದದ ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಲ್ಲಿ, ಅವರು ಯಾವ ವೃಂದದ ಯಾವ ಹುದ್ದೆಗೆ ಆಯ್ಕೆಯಾಗಲು ಬಯಸುತ್ತಾರೋ ಅಂತಹ ವೃಂದದ ಹುದ್ದೆಯ ತಾತ್ಕಾಲಿಕ ಆದ್ಯತೆಯನ್ನು ಅರ್ಜಿ ಸಲ್ಲಿಸುವಾಗ ನೀಡುವುದು ಕಡ್ಡಾಯವಾಗಿರುತ್ತದೆ.
11.ಅಭ್ಯರ್ಥಿಯು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬಯಸುವ ಜಿಲ್ಲೆಯ ಆದ್ಯತೆಯನ್ನು ಅರ್ಜಿಯಲ್ಲಿ ತಪ್ಪದೇ ನಮೂದಿಸತಕ್ಕದ್ದು. ಆದರೆ ಪರೀಕ್ಷಾ ಕೇಂದ್ರದ ಹಂಚಿಕೆಯನ್ನು ಅಭ್ಯರ್ಥಿಗಳ ಸಂಖ್ಯೆ, ಪರೀಕ್ಷಾ ಕೇಂದ್ರಗಳ ಲಭ್ಯತೆಯ ಆಧಾರದ ಮೇಲೆ ಮಾಡಲಾಗುವುದು.
12.ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳನ್ನು ಹಂಚಿಕೆ ಮಾಡುವಾಗ ವಿಶೇಷ ಚೇತನ ಮತ್ತು ಮಹಿಳಾ ಅಭ್ಯರ್ಥಿಗಳಿಗೆಆದ್ಯತೆಯನ್ನು ನೀಡಲಾಗುವುದು.
13.ಅಭ್ಯರ್ಥಿಯು Online ಅರ್ಜಿಯಲ್ಲಿ ಆಯ್ಕೆ ಮಾಡಿಕೊಂಡ ಹುದ್ದೆಯ ವೃಂದದ ಅಧಿಸೂಚನೆಗಳನ್ನು (PST ವೃಂದ, GPT ವೃಂದ, ಪ್ರೌಢಶಾಲಾ ಸಹ ಶಿಕ್ಷಕರ (AM) ವೃಂದ) ಸ್ಪಷ್ಟವಾಗಿ ನಮೂದಿಸಬೇಕು.
14.ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯ 07 ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ ಶೇ.80ರಷ್ಟು ಹುದ್ದೆಗಳಿಗೆ (LC) ಹಾಗೂ ಕಲ್ಯಾಣ ಕರ್ನಾಟಕ ಮಿಕ್ಕುಳಿದ ವೃಂದದ ಶೇ.20ರಷ್ಟು ಹುದ್ದೆಗಳಿಗೆ (RPC) ಹಾಗೂ ಅದೇ ರೀತಿಯಾಗಿ ಬೆಂಗಳೂರು ಉತ್ತರ ಜಿಲ್ಲೆ ಮತ್ತು ಬೆಂಗಳೂರು ಕೇಂದ್ರ ಜಿಲ್ಲೆಗಳಲ್ಲಿಯೂ ರಾಜ್ಯ ಮಟ್ಟದ ಸ್ಥಳೀಯ ವೃಂದ ಶೇ.8ರಷ್ಟು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಲಾಗಿದ್ದು, ಪ್ರತ್ಯೇಕವಾಗಿ ಪರೀಕ್ಷೆಯನ್ನು ನಡೆಸಲಾಗುತ್ತದೆ.
ವೇಳಾಪಟ್ಟಿಯನ್ನು ಎರಡೂ ವೃಂದಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಪ್ರತ್ಯೇಕವಾಗಿ ಅಧಿಸೂಚನೆಗಳನ್ನು ಆಯ್ಕೆ ಮಾಡುವುದರ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು. ಶುಲ್ಕವನ್ನು ಸಹಿತಕ್ಕಂತೆ ಪಾವತಿಸುವುದರ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು.
15.ಅಭ್ಯರ್ಥಿಗಳು ತಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ (ಗರಿಷ್ಟ: 50KB) ಮತ್ತು ಸಹಿಯನ್ನು (ಗರಿಷ್ಟ: 50KB) ಸ್ಕ್ಯಾನ್ ಮಾಡಿ ಅರ್ಜಿಯೊಂದಿಗೆ ಅಪ್‌ಲೋಡ್ ಮಾಡುವುದು ಕಡ್ಡಾಯ.
16.ಅಭ್ಯರ್ಥಿಗಳು Online ಅರ್ಜಿಯಲ್ಲಿ ಮಾಹಿತಿಗಳನ್ನು ಭರ್ತಿ ಮಾಡುವಾಗ ಪ್ರತಿಯೊಂದು ಹಂತದಲ್ಲಿಯೂ ಕಡ್ಡಾಯವಾಗಿ Submit ಮಾಡುವುದು.
17.Online ಅರ್ಜಿಯ ಪ್ರತಿಯೊಂದು ಹಂತದಲ್ಲಿ ಅಗತ್ಯವಿರುವ ಮಾಹಿತಿಯ ಅಧಿಕೃತ ದಾಖಲೆಗಳನ್ನು ಜಾಗರೂಕತೆಯಿಂದ ಮೊದಲೇ ಸಿದ್ಧಪಡಿಸಿಟ್ಟುಕೊಂಡು, ಸರಿಯಾದ ಮಾಹಿತಿ ಭರ್ತಿ ಮಾಡಿರುವುದನ್ನು ಖಾತರಿಪಡಿಸಿಕೊಂಡ ನಂತರವೇ ಆನ್‌ಲೈನ್ ಅರ್ಜಿಗಳನ್ನು ಪೂರ್ಣಗೊಳಿಸಿ Submit ಮಾಡುವುದು.
18.ಅಭ್ಯರ್ಥಿಯು ಅಂತಿಮವಾಗಿ Submit ಮಾಡಿ ಘೋಷಣೆ (Declaration) ನೀಡಿದ ನಂತರದಲ್ಲಿ ಅರ್ಜಿಯಲ್ಲಿ ಯಾವುದೇ ಮಾಹಿತಿಯನ್ನು ತಿದ್ದುಪಡಿ (Edit) ಮಾಡಲು ಅವಕಾಶವಿರುವುದಿಲ್ಲ.
19.ಅಭ್ಯರ್ಥಿಯು ಅಂತಿಮವಾಗಿ ಘೋಷಣೆ (Declaration) ಮಾಡುವ ಮೊದಲು ಅಭ್ಯರ್ಥಿಯು ತಮ್ಮ ವೈಯಕ್ತಿಕ ವಿವರ, ಮೀಸಲಾತಿ, ವಿದ್ಯಾರ್ಹತೆ, ಆಯ್ಕೆ ಮಾಡಿಕೊಂಡಿರುವ ವೃಂದ, ಹುದ್ದೆ, ಪರೀಕ್ಷೆಯನ್ನು ಬರೆಯುವ ಜಿಲ್ಲೆ ಇತ್ಯಾದಿ ಮಾಹಿತಿಗಳನ್ನು ಕ್ರಮಬದ್ಧವಾಗಿ ಭರ್ತಿ ಮಾಡಿರುವ ಬಗ್ಗೆ ಕೂಲಂಕಷವಾಗಿ ಓದಿ, ಸರಿಯಾದ ಮಾಹಿತಿ ಭರ್ತಿ ಮಾಡಿರುವ ಬಗ್ಗೆ ದೃಢಪಡಿಸಿಕೊಂಡ ನಂತರವೇ ಅರ್ಜಿಯನ್ನು Submit ಮಾಡುವುದು.
20.ಶೈಕ್ಷಣಿಕ ಹಾಗೂ ವೃತ್ತಿಪರ ಶಿಕ್ಷಣದ ಅಂಕ ವಿವರಗಳನ್ನು ಅಂಕಪಟ್ಟಿಯಲ್ಲಿ ಇರುವಂತೆ ಎಲ್ಲಾ ವರ್ಷಗಳ ಗರಿಷ್ಠ ಅಂಕಗಳು ಹಾಗೂ ಪಡೆದ ಅಂಕಗಳನ್ನು ನಿಗದಿತ ಅಂಕಣಗಳಲ್ಲಿ ಭರ್ತಿ ಮಾಡುವುದು.
21.ಅರ್ಜಿಯಲ್ಲಿ ಮಾಹಿತಿಗಳು ದೋಷಪೂರಿತ ಹಾಗೂ ತಪ್ಪಾಗಿದ್ದಲ್ಲಿ, ಅಭ್ಯರ್ಥಿಗಳೇ ಸಂಪೂರ್ಣವಾಗಿ ನೇರ ಜವಾಬ್ದಾರರಾಗಿರುತ್ತಾರೆ ಹಾಗೂ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
22.ಒಂದು ವೇಳೆ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದ ನಂತರ ತಿದ್ದುಪಡಿ ಮಾಡಲು ಬಯಸಿದಲ್ಲಿ, ಹೊಸದಾಗಿ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕವನ್ನು ಪಾವತಿಸತಕ್ಕದ್ದು.
23.ಶುಲ್ಕ ಪಾವತಿಸಿದ ನಂತರ ಅರ್ಜಿಯ ಪ್ರತಿಯನ್ನು ಮುದ್ರಿಸಿಕೊಂಡು ಮಾಹಿತಿಯು ಸರಿಯಾಗಿರುವ ಬಗ್ಗೆ ಪುನಃ ಓದಿ ಅಭ್ಯರ್ಥಿಯು ತಮ್ಮ ವೈಯಕ್ತಿಕ ವಿವರ, ಮೀಸಲಾತಿ, ವಿದ್ಯಾರ್ಹತೆ, ಆಯ್ಕೆ ಮಾಡಿಕೊಂಡಿರುವ ವೃಂದ, ಹುದ್ದೆ, ಪರೀಕ್ಷೆ ಬರೆಯುವ ಜಿಲ್ಲೆ ಇತ್ಯಾದಿ ಮಾಹಿತಿಗಳನ್ನು ಕ್ರಮಬದ್ಧವಾಗಿ ಭರ್ತಿ ಮಾಡಿರುವ ಬಗ್ಗೆ ಅಭ್ಯರ್ಥಿಯು ಮತ್ತೊಮ್ಮೆ ಓದಿ ಮಾಹಿತಿ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳುವುದು.
24.ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
25.ಶುಲ್ಕವನ್ನು “ONLINE” ಮೂಲಕ ಅಂದರೆ INTERNET BANKING / CREDIT CARD / DEBIT CARD ಅಥವಾ ಬ್ಯಾಂಕ್ ಚಲನ್ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್‌ನಲ್ಲಿ ಮಾತ್ರ ಚಲನ್ ಶುಲ್ಕ ಪಾವತಿಸುವುದು) ಮೂಲಕವೇ ಪಾವತಿಸತಕ್ಕದ್ದು. ಇನ್ನಾವುದೇ ರೂಪದಲ್ಲಿ ಶುಲ್ಕ ಪಾವತಿಸಲು ಅವಕಾಶವಿರುವುದಿಲ್ಲ.
INTERNET Crash ಅನ್ನು ತಪ್ಪಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೂ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸುವುದು. ಒಮ್ಮೆ ಪರೀಕ್ಷಾ ಶುಲ್ಕವನ್ನು ಪಾವತಿಸಿದ ನಂತರ ಯಾವುದೇ ಸಂದರ್ಭದಲ್ಲಿಯೂ ಹಿಂದಿರುಗಿಸಲಾಗುವುದಿಲ್ಲ, ಹಾಗೂ ಸದರಿ ಶುಲ್ಕವನ್ನು ಇತರೆ ಯಾವುದೇ ಪರೀಕ್ಷೆ ಅಥವಾ ನೇಮಕಾತಿಗಳಿಗೆ ಮರು ಹೊಂದಾಣಿಕೆ ಮಾಡಿಕೊಳ್ಳಲಾಗುವುದಿಲ್ಲ.
ವಿಶೇಷ ಸೂಚನೆ: ಅರ್ಜಿ ಶುಲ್ಕವನ್ನು ಚಲನ್ ಮೂಲಕ ಪಾವತಿಸುವವರು ಆನ್‌ಲೈನ್ ಚಲನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್‌ನಲ್ಲಿ ಅರ್ಜಿ ಶುಲ್ಕ ಪಾವತಿಸುವುದು. ಶುಲ್ಕ ಪಾವತಿಸಿದ ನಂತರ ಆನ್‌ಲೈನ್ ಅರ್ಜಿಯಲ್ಲಿ ಚಲನ್ ನಂಬರ್ (ATRN) ತಂತಾನೇ GENERATE ಆಗುತ್ತದೆ. ಚಲನ್ ನಂಬರ್ (ATRN) GENERATE ಆಗಲು 24 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ. ನಂತರವಷ್ಟೇ ಅರ್ಜಿಯ ಮುದ್ರಿತ ಪ್ರತಿಯನ್ನು ಪಡೆಯುವುದು.
26.ONLINE ಅರ್ಜಿಯಲ್ಲಿ ನೀಡಿರುವ ಮಾಹಿತಿಗಳನ್ನೇ ಆಧಾರವಾಗಿಟ್ಟುಕೊಂಡು ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯನ್ನು ನಡೆಸುವುದರಿಂದ, ಯಾವುದೇ ಹಂತದಲ್ಲಿ ಅಪೂರ್ಣ / ಅಸ್ಪಷ್ಟ / ತಪ್ಪು ಮಾಹಿತಿ ನೀಡಿದಲ್ಲಿ ಅಭ್ಯರ್ಥಿಗಳೇ ಸಂಪೂರ್ಣ ಹೊಣೆಗಾರರಾಗಿರುತ್ತಾರೆ ಹಾಗೂ ಅಂತಹ ಅಭ್ಯರ್ಥಿತನವನ್ನು ರದ್ದುಪಡಿಸಲಾಗುವುದು.
27.ಅರ್ಜಿಯಲ್ಲಿ ನಮೂದಿಸುವ ಮೊಬೈಲ್ ಸಂಖ್ಯೆಯ ಮತ್ತು ಇ-ಮೇಲ್ ವಿಳಾಸ ಅಭ್ಯರ್ಥಿಯದ್ದೇ ಆಗಿರತಕ್ಕದ್ದು, ಅದನ್ನು ನೇಮಕಾತಿ ಪ್ರಕ್ರಿಯೆ ಮುಗಿಯುವ ಮೊದಲು ಬದಲಾವಣೆ ಮಾಡಿದಲ್ಲಿ ಆಗಬಹುದಾದ ಪರಿಣಾಮಗಳಿಗೆ ಅಭ್ಯರ್ಥಿಗಳೇ ಹೊಣೆಗಾರರಾಗಿರುತ್ತಾರೆ.
28.ONLINE ಅರ್ಜಿಯಲ್ಲಿ ಮೀಸಲಾತಿ ಸೌಲಭ್ಯಕ್ಕಾಗಿ ಇರುವ ಅಂಕಣವನ್ನು, ಮೀಸಲಾತಿ ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಭರ್ತಿ ಮಾಡತಕ್ಕದ್ದು. ಅಂಕಣವನ್ನು ಖಾಲಿ ಬಿಟ್ಟಲ್ಲಿ ಅಥವಾ ತಪ್ಪಾಗಿ ನಮೂದಿಸಿದ್ದಲ್ಲಿ ಸಂಬಂಧಿಸಿದ ಮೀಸಲಾತಿಗಳಿಗೆ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದಿಲ್ಲ. ಅದರಿಂದಾಗುವ ತೊಂದರೆಗಳಿಗೆ ಅಭ್ಯರ್ಥಿಗಳೇ ನೇರ ಹೊಣೆಗಾರರಾಗಿರುತ್ತಾರೆ. ನಂತರ ಯಾವುದೇ ಹಂತದಲ್ಲಿ ಮೀಸಲಾತಿಯನ್ನು ಸೇರ್ಪಡೆ/ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ.
29.ಶುಲ್ಕ ಪಾವತಿಸಿದ ಕೂಡಲೇ ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಮುದ್ರಿತ ಮೂಲ ಪ್ರತಿಯನ್ನು ಪಡೆದುಕೊಂಡು ಮುಂದಿನ ಉಪಯೋಗಕ್ಕಾಗಿ ಸಂರಕ್ಷಿಸಿ ಇಟ್ಟುಕೊಳ್ಳುವುದು.
30.ಒಂದು ವೇಳೆ ಮುದ್ರಿತ ಅರ್ಜಿಯು ಕಳೆದುಹೋದಲ್ಲಿ ಮೇಲೆ ತಿಳಿಸಿದ ವೆಬ್‌ಸೈಟ್‌ನಲ್ಲಿ ನಿಮ್ಮ User ID and Password ಗಳನ್ನು ಭರ್ತಿ ಮಾಡಿ ಪ್ರತಿಯನ್ನು ಪಡೆದುಕೊಳ್ಳಬಹುದಾಗಿದೆ.
31.ಶೈಕ್ಷಣಿಕ ಹಾಗೂ ವೃತ್ತಿಪರ ಶಿಕ್ಷಣದ ಅಂಕ ವಿವರಗಳನ್ನು ಅಂಕಪಟ್ಟಿಯಲ್ಲಿ ಇರುವಂತೆ ಎಲ್ಲಾ ವರ್ಷಗಳ ಗರಿಷ್ಠ ಅಂಕಗಳು ಹಾಗೂ ಪಡೆದ ಅಂಕಗಳನ್ನು ನಿಗದಿತ ಅಂಕಣಗಳಲ್ಲಿ ಭರ್ತಿ ಮಾಡುವುದು.
32.ಕೆಲವು ವಿಶ್ವವಿದ್ಯಾಲಯಗಳ ಅಂಕಪಟ್ಟಿಯಲ್ಲಿ ಅಂಕಗಳಿಗೆ ಬದಲಾಗಿ ಗ್ರೇಡ್ ನಮೂದಿಸಿರುವ ಸಂದರ್ಭದಲ್ಲಿ ಸಂಬಂಧಪಟ್ಟ ವಿಶ್ವವಿದ್ಯಾಲಯದ ನಿಯಮಾನುಸಾರ ಗ್ರೇಡ್ ಅನ್ನು ಅಂಕಗಳಿಗೆ ಪರಿವರ್ತಿಸಿ ನಿಗದಿತ ಅಂಕಗಳಲ್ಲಿ ಅಂಕಗಳನ್ನು ಭರ್ತಿ ಮಾಡುವುದು. ಸಂಬಂಧಿತ ಬೋರ್ಡ್/ವಿಶ್ವವಿದ್ಯಾಲಯಗಳು ಗ್ರೇಡ್‌ನಿಂದ ಅಂಕಗಳಿಗೆ ಅಳವಡಿಸಲಾಗುವ ಅಂಕ ಪರಿವರ್ತನ ಪಟ್ಟಿಯನ್ನು ಸ್ಕ್ಯಾನ್ ಮಾಡಿ ಕಡ್ಡಾಯವಾಗಿ Upload ಮಾಡುವುದು.
(Scan and upload conversion table from Grade to Marks)
33. ಕೆಲವು ವಿಶ್ವವಿದ್ಯಾಲಯಗಳಲ್ಲಿ ಕೆಲವು ವಿಷಯಗಳನ್ನು (ಉದಾ: Constitution of India, Computer Fundamental ಇತ್ಯಾದಿ) ಪರೀಕ್ಷಾ ಪೂರಕ ವಿಷಯವಾಗಿ (Subsidiary Subject) ಅಧ್ಯಯನ ಮಾಡಬೇಕಾಗಿರುತ್ತದೆ. ಈ ವಿಷಯಗಳ ಅಂಕಗಳನ್ನು ವಿಶ್ವವಿದ್ಯಾಲಯವು ಒಟ್ಟು ಅಂಕಗಳಿಗೆ ಪರಿಗಣಿಸಿದ್ದಲ್ಲಿ, (ಪರಿಗಣಿಸುವ ಬಗ್ಗೆ ಅಂಕಪಟ್ಟಿಯ Footnote ನಲ್ಲಿ ನಮೂದಿಸಿದ್ದಲ್ಲಿ ಮಾತ್ರ) ಆ ಅಂಕಗಳನ್ನು ಸೇರಿಸಿ ಆನ್‌ಲೈನ್ ಅರ್ಜಿಯಲ್ಲಿ ಭರ್ತಿ ಮಾಡುವುದು.
ಪದವಿಯ / ಬಿ.ಇಡಿ ಯ ಎಲ್ಲಾ ವರ್ಷಗಳ ಅಂಕಪಟ್ಟಿಗಳಲ್ಲಿ ನಮೂದಿಸಲಾದ ಗರಿಷ್ಠ ಅಂಕಗಳು (Maximum marks) ಹಾಗೂ ಪಡೆದ ಅಂಕಗಳನ್ನು (Obtained Marks) ಪರಿಗಣಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಭರ್ತಿ ಮಾಡುವಾಗ ಹುದ್ದೆಗೆ ಪದವಿ / ಬಿ.ಇಡಿ ಇನ್ನಿತರೆ ನಿಗದಿತ ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿಗಳಲ್ಲಿರುವ ಸೂಚನೆಗಳನ್ನು ಪರಿಗಣಿಸಿ ಗರಿಷ್ಠ ಪಡೆದ ಅಂಕಗಳನ್ನು ಮತ್ತು ಶೇಕಡವಾರು ಅಂಕಗಳನ್ನು ಲೆಕ್ಕಾಚಾರ ಮಾಡಿ ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಬೇಕು.
34. ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಿದ ಅಭ್ಯರ್ಥಿಯ ಎಲ್ಲಾ ವಿವರಗಳು ಸಮರ್ಪಕವಾಗಿದ್ದವೆಂದು ದೃಢಪಡಿಸಿಕೊಂಡು ಘೋಷಣೆ ನೀಡಿದ ನಂತರದಲ್ಲಿ ಯಾವುದೇ ಬದಲಾವಣೆ ಅವಕಾಶ ಇರುವುದಿಲ್ಲ.
35. ಜಾತಿ, ಆದಾಯ ಪ್ರಮಾಣ ಪತ್ರ ಮತ್ತು ಹೈ.ಕ. ಮೀಸಲಾತಿ 371(ಜೆ) ಗೆ ಸಂಬಂಧಿಸಿದ ಮೀಸಲಾತಿಯ ಪ್ರಮಾಣ ಪತ್ರಗಳ ಆರ್.ಡಿ ನಂಬರ್‌ನ್ನು ನಮೂದಿಸಿದಲ್ಲಿ ಮಾತ್ರ ಸಂಬಂಧಿಸಿದ ಮೀಸಲಾತಿಯನ್ನು ಪರಿಗಣಿಸಲಾಗುವುದು.
36. ಪರೀಕ್ಷಾ ಪ್ರವೇಶ ಪತ್ರವನ್ನು ಪಡೆಯಲು ಮುಂದಿನ ದಿನಾಂಕದಲ್ಲಿ ಇಲಾಖಾ ವೆಬ್‌ಸೈಟ್ www.schooleducation.karnataka.gov.in ಅಥವಾ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗುವ ನಿಗದಿತ ದಿನಾಂಕದಂದು ನೋಂದಣಿ ಸಂಖ್ಯೆಯ ಮತ್ತು ಜನ್ಮ ದಿನಾಂಕ ನಮೂದಿಸಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಪ್ರವೇಶ ಪತ್ರವಿಲ್ಲದ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶವಿರುವುದಿಲ್ಲ.
37.ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
38.ಈ ಅಧಿಸೂಚನೆಗೆ ಅನುಸಾರವಾಗಿ ಸಲ್ಲಿಸಿದ ಅರ್ಜಿಯನ್ನು ಇಲಾಖೆಯು ನಡೆಸುವ ಇತರೆ ಅಧಿಸೂಚನೆಗಳ ಆಯ್ಕೆ ಪರೀಕ್ಷೆಗಳಿಗೆ ಪರಿಗಣಿಸಲಾಗುವುದಿಲ್ಲ.
39.ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಸಂದರ್ಭದಲ್ಲಿ ತಾಂತ್ರಿಕ ತೊಂದರೆ ಅಥವಾ ಪರೀಕ್ಷೆ ಸಂಬಂಧಿತ ಸಮಸ್ಯೆ ಎದುರಾದಲ್ಲಿ ಈ ಕೆಳಕಂಡ ಸ್ಥಿರ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಿ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ.
ಕೇಂದ್ರೀಕೃತ ದಾಖಲಾತಿ ಘಟಕ, ಬೆಂಗಳೂರು – ಸಹಾಯವಾಣಿ ಸಂಖ್ಯೆಗಳು:
- 22483145
- 22483140
- 9483024723
ಸಹಿ/-
ಜಂಟಿ ನಿರ್ದೇಶಕರು
ಶಾಲಾ ಶಿಕ್ಷಣ ಇಲಾಖೆ
ಬೆಂಗಳೂರು