ವಿಶೇಷ ಸೂಚನೆ : ನಮೂನೆಗಳು ಕೇವಲ ಮಾದರಿಗಾಗಿ ಮಾತ್ರ ಕೊಡಲಾಗಿದೆ. ಇವೆ ಅಂತಿಮ ಅಲ್ಲ ನಿಮ್ಮ ಶಾಲಾ ಪರಿಸರಕ್ಕೆ ತಕ್ಕಂತೆ ನಮೂನೆಗಳನ್ನು ಹಾಕಿಕೊಳ್ಳಬಹುದು.
ಮತ್ತು ಪ್ರವೇಶ ಪತ್ರಗಳನ್ನು ಹಾಗೂ AML sheet ಗಳನ್ನು ಇಲಾಖೆಯ ಆದೇಶ ಬಂದರೆ ಮಾತ್ರ ಬಳಸಬಹುದು.
KSEEB ಬೆಂಗಳೂರು ಮಂಡಳಿಯಿಂದ 5, 8, 9,ನೇ ಮೌಲ್ಯಂಕನ ಪರೀಕ್ಷೆಯ ಕುರಿತು ಇಂದಿನ ವಿಡಿಯೋ ಕಾನ್ಫರೆನ್ಸ್ ನಲ್ಲಿ ನೀಡಿದ ಮಾಹಿತಿಗಳು
1.ಪರೀಕ್ಷೆಯ ದಿನಾಂಕ ಮಾರ್ಚ್ 11 ರಿಂದ 18 ಮಧ್ಯಾಹ್ನದ ಅವಧಿ.
2.KSEEB ಮಂಡಳಿಯಿಂದ ಕೇವಲ ಪ್ರಶ್ನೆ ಪತ್ರಿಕೆಗಳನ್ನು ಮಾತ್ರ ವಿತರಣೆ ಮಾಡಲಾಗುತ್ತದೆ. ಎಲ್ಲಾ ಮಕ್ಕಳಿಗೂ ವಿವರಗಳನ್ನು ಕುರಿತ ಫೇಸ್ ಶೀಟ್ ನೀಡಲಾಗುವುದು.
3.ಉತ್ತರ ಪತ್ರಿಕೆಗಳನ್ನು ಮಕ್ಕಳ ತರುವುದು. ಮಕ್ಕಳು ತರುವ ಎಲ್ಲಾ ಉತ್ತರ ಪತ್ರಿಕೆಗಳು ಏಕರೂಪದಲ್ಲಿರುವಂತೆ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಮಾಹಿತಿ ನೀಡುವುದು.
4.ಮೌಲ್ಯಮಾಪನವನ್ನು ಬ್ಲಾಕ್ ಹಂತದಲ್ಲಿ ನಡೆಸಲಾಗುವುದು.
5.ಇಲಾಖೆಯಿಂದ ಸರಬರಾಜಾದ ಪ್ರಶ್ನೆ ಪತ್ರಿಕೆಗಳನ್ನು ಮಕ್ಕಳಿಗೆ ನೀಡಿ ಸದರಿ ಪ್ರಶ್ನೆ ಪತ್ರಿಕೆಯ ಕವರ್ ನಲ್ಲಿ ಉತ್ತರ ಪತ್ರಿಕೆಗಳನ್ನು ಬಂಡಲ್ ಮಾಡಿ ಮೌಲ್ಯಮಾಪನಕ್ಕೆ ಕಳುಹಿಸುವುದು.
6.ಆಯಾ ದಿನದ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಗಳನ್ನು ಅಂದೆ ಸರಬರಾಜು ಮಾಡಲಾಗುವುದು. ಪರೀಕ್ಷೆಯ ನಂತರ ಅದೇ ದಿನ ಆ ವಿಷಯದ ಉತ್ತರ ಪತ್ರಿಕೆಗಳನ್ನು ತಾವು ಪ್ರಶ್ನೆ ಪತ್ರಿಕೆಗಳನ್ನು ಪಡೆದುಕೊಂಡ ಕೇಂದ್ರದಲ್ಲಿಯೇ ಮರಳಿಸುವುದು.
7.ದಿ 01-02-24 ರಾ ಸ್ಯಾಟ್ಸ್ ಅಂಕಿ ಅಂಶಗಳ ಮಾಹಿತಿಯಂತೆ ಪ್ರಶ್ನೆ ಪತ್ರಿಕೆಗಳನ್ನು ಮುದ್ರಣಕ್ಕೆ ಕಳುಹಿಸಲಾಗಿರುತ್ತದೆ.
8.ಮೌಲ್ಯಮಾಪನದ ನಂತರ ಉತ್ತರ ಪತ್ರಿಕೆಗಳನ್ನು ಪಡೆದು ಮುಖ್ಯೋಪಾಧ್ಯಾಯರು ಆನ್ಲೈನ್ ನಲ್ಲಿ ಮಕ್ಕಳ ಗ್ರೇಡ್ಗಳನ್ನು ನಮೂದಿಸುವುದು.
9.ದೈಹಿಕ ಶಿಕ್ಷಣ ಪ್ರಶ್ನೆ ಪತ್ರಿಕೆಯು ಸರಬರಾಜು ಆಗುವುದಿಲ್ಲ ತಮ್ಮ ಶಾಲಾ ಹಂತದಲ್ಲಿ ತಾವೇ ಸಿದ್ಧಪಡಿಸಿಕೊಳ್ಳುವುದು 8 ಮತ್ತು 9 ಕ್ಕೆ ಮಾತ್ರ.
10.ಮಾರ್ಚ್ 4 ರಿಂದ 7ನೇ ತಾರೀಕಿನೊಳಗೆ ಮೌಖಿಕ ಪರೀಕ್ಷೆಯನ್ನು ಪೂರ್ಣಗೊಳಿಸಿ ಅಂಕವಹಿಗಳನ್ನು ದಾಖಲಿಸಿ ಇಟ್ಟುಕೊಳ್ಳುವುದು. ಮೌಖಿಕ ಪ್ರಶ್ನೆ ಪತ್ರಿಕೆಯನ್ನು ಆಯಾ ವಿಷಯವಾರು ಬೋಧಿಸುವ ಶಿಕ್ಷಕರೇ ತಯಾರಿಸಿಕೊಳ್ಳುವುದು.