ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಬ್ರವರಿ ತಿಂಗಳಲ್ಲಿ ನಿವೃತ್ತರಾದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವರ ಇಲ್ಲಿದೆ ಗುರುಭ್ಯೋ ನಮಃ

WhatsApp Group Join Now
Telegram Group Join Now

ನಿಮ್ಮ ನಿವೃತ್ತಿ ಜೀವನ ಸುಖಕರವಾಗಲಿ

ದಶಕಗಳ ಕಾಲ ಸಾರ್ಥಕ ಸೇವೆಗೈದು ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.

IMG 20240229 WA0160

ಶ್ರೀ ವಿಜಯ ಕುಮಾರ್
ದೈಹಿಕ ಶಿಕ್ಷಣ ಶಿಕ್ಷಕರು
ಸ.ಉ.ಪ್ರಾ.ಶಾಲೆ ಅಂಡಿಂಜೆ
ಬೆಳ್ತಂಗಡಿ ತಾಲೂಕು

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೆಗ್ಗುಂಜೆ ಗ್ರಾಮದ ಶ್ರೀ ನಾರಾಯಣ ಶೆಟ್ಟಿ ಮತ್ತು ಶ್ರೀಮತಿ ಲಚ್ಚಮ್ಮ ದಂಪತಿಗಳ ಪುತ್ರನಾಗಿ ದಿನಾಂಕ 25.02.1964 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಹೆಗ್ಗುಂಜೆಯಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಮಂದಾರ್ತಿಯಲ್ಲಿ ಪೂರೈಸಿ ಕಾಲೇಜು ಶಿಕ್ಷಣವನ್ನು ಪದವಿ ಪೂರ್ವ ಕಾಲೇಜು ಕೊಕ್ಕರ್ಣೆಯಲ್ಲಿ ಪೂರೈಸಿ ದಿನಾಂಕ 04.12.2003 ರಲ್ಲಿ ಸ.ಹಿ.ಪ್ರಾ.ಶಾಲೆ ಕಾಶಿಪಟ್ಣ ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸುಮಾರು 9 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 22.06.2012 ರಲ್ಲಿ ಸ.ಉ.ಪ್ರಾ.ಶಾಲೆ ಅಂಡಿಂಜೆ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20240229 WA0159

ಶ್ರೀ ನಿತ್ಯಾನಂದ ಆರ್ ಪೂಜಾರಿ
ಸಹ ಶಿಕ್ಷಕರು
ಸ.ಹಿ.ಪ್ರಾ.ಶಾಲೆ ಮೂರ್ಜೆ ಬಂಟ್ವಾಳ ತಾಲೂಕು.

ದಿನಾಂಕ 12.01.1996 ರಲ್ಲಿ ಸ.ಹಿ.ಪ್ರಾ.ಶಾಲೆ ಕಕ್ಕೂರು ಪುತ್ತೂರು ತಾಲೂಕು ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 17.04.2002 ರಲ್ಲಿ ಸಿ.ಆರ್.ಪಿ ಯಾಗಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಹಾರಾಡಿ ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 12.01.2006 ರಲ್ಲಿ ಸ.ಹಿ.ಪ್ರಾ.ಶಾಲೆ ಕುಡಿಪಾಡಿ ಪುತ್ತೂರು ಇಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಂತರ ದಿನಾಂಕ 07.07.2009 ರಲ್ಲಿ ಚೆನ್ನೈತ್ತೋಡಿ ಕ್ಲಸ್ಟರ್ ಬಂಟ್ವಾಳ ತಾಲೂಕು ಇಲ್ಲಿ ಸಿ.ಆರ್.ಪಿ ಯಾಗಿ ಸೇವೆ ಸಲ್ಲಿಸಿದ ಇವರು ನಂತರ ದಿನಾಂಕ 01.01.2015 ರಲ್ಲಿ ಸ.ಹಿ.ಪ್ರಾ.ಶಾಲೆ ಮೂರ್ಜೆ ಬಂಟ್ವಾಳ ತಾಲೂಕು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20240229 WA0158

ಶ್ರೀ ಹಮೀದ್ ಪಿ
ಮುಖ್ಯ ಶಿಕ್ಷಕರು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಉಳಿ ಬಂಟ್ವಾಳ ತಾಲೂಕು.

ಬಂಟ್ವಾಳ ತಾಲೂಕು ಬಡಗ ಕಜೆಕಾರು ಗ್ರಾಮದ ಪಾಂಡವರ ಕಲ್ಲು ಶ್ರೀ ಉಂಞ ಬ್ಯಾರಿ ಹಾಗೂ ಶ್ರೀಮತಿ ಖತೀಜ ದಂಪತಿಗಳ ಪುತ್ರನಾಗಿ ದಿನಾಂಕ 16.02.1964 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಕಿ.ಪ್ರಾ.ಶಾಲೆ ಪಾಂಡವರ ಕಲ್ಲು ಹಾಗೂ ಗಾರ್ಡಿಯನ್ ಏಂಜಲ್ಸ್ ಹಿ.ಪ್ರಾ.ಶಾಲೆ ಮಡಂತ್ಯಾರು ಇಲ್ಲಿ ಪೂರೈಸಿ ಪದವಿ ಪೂರ್ವ ಶಿಕ್ಷಣವನ್ನು ಸ.ಪದವಿ ಪೂರ್ವ ಕಾಲೇಜು ಪುಂಜಾಲಕಟ್ಟೆ ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಮಂಗಳೂರು ಡಯಟ್ ನಲ್ಲಿ ಪೂರೈಸಿ ದಿನಾಂಕ 10.08.1992 ರಲ್ಲಿ ಸ.ಹಿ.ಪ್ರಾ.ಶಾಲೆ ಪಾಂಡವರ ಕಲ್ಲು ಬಂಟ್ವಾಳ ತಾಲೂಕು ಇಲ್ಲಿ ಸೇವೆಗೆ ಸೇರಿದ ಇವರು ನಂತರ ದಿನಾಂಕ 20.02.2020 ರಲ್ಲಿ ಸ.ಹಿ.ಪ್ರಾ.ಶಾಲೆ ಉಳಿ ಕಕ್ಯಪದವು ಇಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20240229 WA0155

ಶ್ರೀ ಗೋಪಾಲ ರಾವ್ ಯನ್
ಸ.ಹಿ.ಪ್ರಾ.ಶಾಲೆ ವಿದ್ಯಾವಿಹಾರ ಕಲ್ಲಚೇರ ಅಳಿಕೆ
ಬಂಟ್ವಾಳ ತಾಲೂಕು.

ಶ್ರೀ ಶ್ರೀನಿವಾಸ ಬಳ್ಳಕ್ಕುರಾಯ ಹಾಗೂ ಶ್ರೀಮತಿ ಸರಸ್ವತಿ.ಎಸ್.ಬಳ್ಳಕ್ಕುರಾಯ ದಂಪತಿಗಳ ಪುತ್ರನಾಗಿ ದಿನಾಂಕ 10.02.1964 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಕಿ.ಪ್ರಾ.ಶಾಲೆ ನಾರ್ಶ್ಯ ಮೈದಾನ ಹಾಗೂ ಸ.ಹಿ.ಪ್ರಾ.ಶಾಲೆ ಬೋಳಂತೂರು ಇಲ್ಲಿ ಪೂರೈಸಿ ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಸರಸ್ವತಿ ಶಿಕ್ಷಕರ ತರಬೇತಿ ಕೇಂದ್ರ ಮಡಿಕೇರಿಯಲ್ಲಿ ಪೂರೈಸಿದ ಇವರು ದಿನಾಂಕ 17.11.1990 ರಲ್ಲಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಹನುಮಾನ್ ನಗರ ಕಲ್ಲಡ್ಕ ಇಲ್ಲಿ ಸೇವೆಗೆ ಸೇರಿದ ಇವರು ಸೇವೆ ಸಲ್ಲಿಸಿ ನಂತರ ದಿನಾಂಕ 15.01.1999 ರಲ್ಲಿ ಸ.ಹಿ.ಪ್ರಾ.ಶಾಲೆ ವೀರಮಂಗಲ ಪುತ್ತೂರು ತಾಲೂಕು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 18.08.2006 ರಲ್ಲಿ ಸ.ಹಿ.ಪ್ರಾ.ಶಾಲೆ ನಾರ್ಶ್ಯ ಮೈದಾನ ಬಂಟ್ವಾಳ ತಾಲೂಕು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 04.06.2019 ರಲ್ಲಿ ಸ.ಹಿ.ಪ್ರಾ.ಶಾಲೆ ವಿದ್ಯಾವಿಹಾರ ಕಲ್ಲಚೇರ ಅಳಿಕೆ ಬಂಟ್ವಾಳ ತಾಲೂಕು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20240229 WA0157 5

ಶ್ರೀಮತಿ ದೇವಕಿ
ಮುಖ್ಯ ಶಿಕ್ಷಕರು
ಸ.ಹಿ.ಪ್ರಾ.ಶಾಲೆ ಜಪ್ಪಿನಮೊಗರು
ಮಂಗಳೂರು ದಕ್ಷಿಣ

ದಿನಾಂಕ 06.09.1993 ರಲ್ಲಿ ಸೇವೆಗೆ ಸೇರಿದ ಇವರು ಸುಮಾರು 31ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20240229 WA0154

ಶ್ರೀಮತಿ ಇಂದಿರಾ
ಸ.ಕಿ.ಪ್ರಾ.ಶಾಲೆ ಪೆದಮಲೆ
ಮಂಗಳೂರು ದಕ್ಷಿಣ

ದಿನಾಂಕ 21.02.1964 ರಲ್ಲಿ ಜನಿಸಿದ ಇವರು ದಿನಾಂಕ 22.11.1996 ರಲ್ಲಿ ಸೇವೆಗೆ ಸೇರಿದ ಇವರು ಸುಮಾರು 28 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20240229 WA0153

ಶ್ರೀಮತಿ ಮೋಹಿನಿ
ಮುಖ್ಯ ಶಿಕ್ಷಕರು.
ಸ.ಹಿ.ಪ್ರಾ.ಶಾಲೆ ಬದ್ರಿಯಾ ನಗರ ಮಂಗಳೂರು ದಕ್ಷಿಣ.

ದಿನಾಂಕ 25.02.1964 ರಲ್ಲಿ ಜನಿಸಿದ ಇವರು ದಿನಾಂಕ 04.07.1991 ರಲ್ಲಿ ಸೇವೆಗೆ ಸೇರಿದ ಇವರು ಸ.ಹಿ.ಪ್ರಾ.ಶಾಲೆ ಕಾಡಬೆಟ್ಟು ಬಂಟ್ವಾಳ ಹಾಗೂ ಸ.ಹಿ.ಪ್ರಾ.ಶಾಲೆ ಪಲ್ಲಿಪಾಡಿ ಪೊಳಲಿ ಬಂಟ್ವಾಳ ತಾಲೂಕು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ನೆಲ್ಲಿಕಾರು ಮೂಡುಬಿದಿರೆ ಇಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಇವರು ನಂತರ ಸ.ಹಿ.ಪ್ರಾ.ಶಾಲೆ ಒಂಟಿಕಟ್ಟೆ ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಬದ್ರಿಯಾ ನಗರ ಮಂಗಳೂರು ದಕ್ಷಿಣ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20240229 WA0152

ಶ್ರೀಮತಿ ನ್ಯಾನ್ಸಿ ಡಿಸೋಜ
ಸ.ಹಿ.ಪ್ರಾ.ಶಾಲೆ ವರ್ಣಬೆಟ್ಟು ಮೂಡುಬಿದಿರೆ ತಾಲೂಕು

ಲೂಯಿಸ್ ಡಿಸೋಜ ಹಾಗೂ ಶ್ರೀಮತಿ ಮೇರಿ ಡಿಸೋಜ ದಂಪತಿಗಳ ಪುತ್ರಿಯಾಗಿ ದಿನಾಂಕ 10.02.1964 ರಲ್ಲಿ ಜನಿಸಿದ ಇವರು ದಿನಾಂಕ 14.01.1999 ರಲ್ಲಿ ಸ.ಹಿ.ಪ್ರಾ.ಶಾಲೆ ವರ್ಣಬೆಟ್ಟು ಮೂಡುಬಿದಿರೆ ಇಲ್ಲಿ ಸೇವೆಗೆ ಸೇರಿದ ಇವರು ಸುಮಾರು 25 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20240229 WA0151

ಶ್ರೀಮತಿ ಚಂದ್ರಪ್ರಭಾ ಎಸ್ ಮುಖ್ಯಗುರುಗಳು
ಸ.ಹಿ.ಪ್ರಾ. ಶಾಲೆ ಕುಡಿಪಾಡಿ
ಪುತ್ತೂರು ತಾಲೂಕು


ಜನ್ಮ ದಿನಾಂಕ:22-02-1964
ಸೇವೆಗೆ ಸೇರಿದ ದಿನಾಂಕ: 28-07-1994
ನಿವೃತ್ತಿ ದಿನಾಂಕ:29-02-2024
ಕರ್ತವ್ಯ ನಿರ್ವಹಿಸಿದ ಶಾಲೆಗಳ ಹೆಸರು
1.ಸ.ಹಿ.ಪ್ರಾ.ಶಾಲೆ ಸರ್ವೆ ಕಲ್ಪಣೆ
2.ಸ.ಹಿ.ಪ್ರಾ.ಶಾಲೆ ಮುಕ್ವೆ
3.ಸ.ಹಿ.ಪ್ರಾ.ಶಾಲೆ ಮುರ
4.ಸ.ಮಾ.ಉ.ಹಿ.ಪ್ರಾ.ಶಾಲೆ ಉಪ್ಪಿನಂಗಡಿ
5.ಸ.ಹಿ.ಪ್ರಾ.ಶಾಲೆ ಪರ್ಲಡ್ಕ
6.ಸ.ಹಿ.ಪ್ರಾ.ಶಾಲೆ ಕುಡಿಪಾಡಿ
ಸೇವಾ ಭಡ್ತಿ :30-04-2022

ತನ್ನ 30 ವರ್ಷಗಳ ಸೇವಾವಧಿಯಲ್ಲಿ ಅಪಾರ ವಿದ್ಯಾರ್ಥಿ ಬಳಗವನ್ನು ಹೊಂದಿರುವ ತಾವು ಶಾಲೆಗಳಲ್ಲಿ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿರುವಿರಿ. ನಿಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಕೆಗಳು.

IMG 20240229 WA0150

ಶ್ರೀಮತಿ ಸವಿತ ಕುಮಾರಿ ಎಂ ಡಿ
ಸಹಶಿಕ್ಷಕಿ
ಸ.ಹಿ.ಪ್ರಾ. ಶಾಲೆ ಶಾಂತಿಗೋಡು
ಪುತ್ತೂರು ತಾಲೂಕು

ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾವಿನ ಕೆರೆ ಗ್ರಾಮದ ಕಳಸ ದ ಮುನ್ನೂರು ಪಾಲು ಎಂಬಲ್ಲಿ ಎಂ ದೇವ ಪ್ಪಯ್ಯ ಮತ್ತು ಕೃಷ್ಣಕುಮಾರಿ ದಂಪತಿಗಳ ಪುತ್ರಿಯಾಗಿ ದಿನಾಂಕ:12/02/1964 ಜನಿಸಿದ ಇವರು ದಿನಾಂಕ 05 / 08 / 1993 ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಹಿ ಪ್ರಾ ಶಾಲೆ ಬಾಳೆಹೊಳೆ ಇಲ್ಲಿ 5 ವರ್ಷ ಸೇವೆ ಸಲ್ಲಿಸಿ ದಿನಾಂಕ:08/07/1998 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಸಹಿಪ್ರಾ ಶಾಲೆ ಶಾಂತಿಗೋಡಿಗೆ ಅಂತರಜಿಲ್ಲಾ ವರ್ಗಾವಣೆಗೊಂಡು ಇಲ್ಲಿ ಸುಮಾರು 25 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ತನ್ನ ಸೇವಾವಧಿಯಲ್ಲಿ ಅಪಾರ ವಿದ್ಯಾರ್ಥಿ ಬಳಗವನ್ನು ಹೊಂದಿರುವ ತಾವು ಶಾಲೆಗಳಲ್ಲಿ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿರುವಿರಿ. ನಿಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಕೆಗಳು.

IMG 20240229 WA0149

ಶ್ರೀ ಗಂಗಾಧರ ಪಿ
ಸ.ಕಿ.ಪ್ರಾ.ಶಾಲೆ ಕಲ್ಪತ್ತಬೈಲು.
ಸುಳ್ಯ ತಾಲೂಕು

ದಿನಾಂಕ 21.01.1997 ರಲ್ಲಿ ಸ.ಕಿ.ಪ್ರಾ.ಶಾಲೆ ಕಾಯರ್ತಡ್ಕ ಇಲ್ಲಿ ಸೇವೆಗೆ ಸೇರಿದ ಇವರು ದಿನಾಂಕ 28.06.2012 ರವರೆಗೆ ಸೇವೆ ಸಲ್ಲಿಸಿ ನಂತರ ದಿನಾಂಕ 29.06.2012 ರಲ್ಲಿ ಸ.ಕಿ.ಪ್ರಾ.ಶಾಲೆ ಕಲ್ಪತ್ತಬೈಲು ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

WhatsApp Group Join Now
Telegram Group Join Now
Sharing Is Caring:

Leave a Comment