ಜಿಲ್ಲೆಯಲ್ಲಿ ಪ್ರಸ್ತುತ ಲಭ್ಯವಿರುವ ಖಾಲಿ ಹುದ್ದೆಗಳಿಗೆ ಎದುರಾಗಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ
ಮುಖ್ಯಶಿಕ್ಷಕರಾಗಿ, ಮುಖ್ಯ ಶಿಕ್ಷಕರಿಗೆ, ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಸಕ್ಷಮ ಪ್ರಾಧಿಕಾರಿಗಳಾದ
ಆಯಾ ಜಿಲ್ಲಾ ಉಪನಿರ್ದೆಶಕರು(ಆಡಳಿತ)ರವರುಗಳ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಕ್ಕೆ ರಾಜ್ಯದಾದ್ಯಂತ
ಏಕಕಾಲದಲ್ಲಿ ಉಲ್ಲೇಖ-9ರ ದಿನಾಂಕ: 09/01/2024ರಲ್ಲಿನ ಎಲ್ಲಾ ಸೂಚನೆಗಳು ಮತ್ತು ಷರತ್ತು ಮತ್ತು
ಮಾರ್ಗಸೂಚಿ ಅಂಶಗಳು
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಜೇಷ್ಟತಾ
ನಿಯಮಾನುಸಾರ ಆಯಾ ವೃಂದವಾರು ಪ್ರಕಟಿಸಲಾಗಿರುವ ಜಿಲ್ಲಾ ಅಂತಿಮ ಜೇಷ್ಟತಾ ಪಟ್ಟಿಗೆ ಅನುಗುಣವಾಗಿ
ಬಡ್ತಿಯನ್ನು ನೀಡಬೇಕಾಗಿದ್ದು ಉಲ್ಲೇಖ-9 ರ ಅಧಿಸೂಚನೆಯಲ್ಲಿ ಪ್ರಕಟಿತ ವೇಳಾಪಟ್ಟಿಯಂತೆ ಜಿಲ್ಲಾ ಹಂತದಲ್ಲಿ ಎಲ್ಲಾ ಪೂರ್ವಭಾವಿ ಕ್ರಮಗಳನ್ನು ಕೈಗೊಂಡು ಬಡ್ತಿಗೆ ಅರ್ಹರಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಮತ್ತು ಮುಖ್ಯಶಿಕ್ಷಕರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ಭಾವಿಸಲಾಗಿದೆ.
ಖಾಲಿ ಹುದ್ದೆಗಳನ್ನು ಪರಿಗಣಿಸುವ ಕುರಿತು
ಬಡ್ತಿಗೆ ಅರ್ಹರಿರುವ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಮುಖ್ಯ
ಶಿಕ್ಷಕರ ಅಂತಿಮ ಜೇಷ್ಟತಾ ಪಟ್ಟಿಯನ್ನು ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು ಪ್ರಕಟಿಸತಕ್ಕದ್ದು, ದಿನಾಂಕ:31/01/2024
ರಲ್ಲಿದ್ದಂತೆ ಜಿಲ್ಲೆಯಲ್ಲಿ ನಿವೃತ್ತಿ ಮರಣ ರಾಜೀನಾಮೆ ಇತ್ಯಾದಿ ಕಾರಣಗಳಿಂದ ತೆರವಾಗಿ ಲಭ್ಯವಿರುವ / ಇ.ಇ.ಡಿ.ಎಸ್
ನಲ್ಲಿ ಇಂದೀಕರಣವಾಗಿರುವ ಮುಖ್ಯ ಶಿಕ್ಷಕರ ಮತ್ತು ಹಿರಿಯ ಮುಖ್ಯ ಶಿಕ್ಷಕರ ಖಾಲಿ ಹುದ್ದೆಗಳ ಸಂಖ್ಯೆಯನ್ನು ಮತ್ತ ಈಗಾಗಲೇ ಇಲಾಖೆಯಿಂದ ವರ್ಗಾವಣೆ ನಂತರ ನಿಗಧಿಪಡಿಸಿದ (ತಂತ್ರಾಂಶದಲ್ಲಿ) ಹೊರಡಿಸಲಾಗಿರುವ ಇ-ರಿಜಿಸ್ಟರ್‌ನಲ್ಲಿ ಮಂಜೂರಾಗಿರುವ ವೃಂದವಾರು/ ತಾಲ್ಲೂಕುವಾರು/ ಜಿಲ್ಲಾವಾರು ಹುದ್ದೆ ಮಂಜೂರಾತಿಯ ಮಿತಿಯೊಳಗೆ (ಗಾಗಲೇದಿನಾಂಕ: 03/02/2024ರಂದು ವಲಯ ವರ್ಗಾವಣೆ ಪ್ರಕ್ರಿಯೆಯಲ್ಲಿ ಅಂತಿಮಗೊಳಿಸಿಕೊಂಡಂತೆ ಖಾಲಿಹುದ್ದೆಗಳು ಲಭ್ಯವಿರುವ ಬಗ್ಗೆ ತಂತ್ರಾಂಶದಲ್ಲಿ ಮತ್ತೊಮ್ಮೆ ಪರಿಶೀಲಿಸಿ ಖಚಿತಪಡಿಸಿಕೊಳ್ಳತಕ್ಕದ್ದು.
ಶಾಲಾವಾರು ಇ-ರಿಜಿಪ್ಟ್ ನಲ್ಲಿ ನಿಗಧಿಪಡಿಸಿರುವ ಹುದ್ದೆ ಮಂಜೂರಾತಿಯಂತೆ ಖಾಲಿ ಹುದ್ದೆಯನ್ನು
ಪರಿಗಣಿಸಲಾಗಿದೆ. ಒಂದು ವೇಳೆ ಸದರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ ಮುಂದಿನ ದಿನದಲ್ಲಿ ನಡೆಯುವ
ಹೆಚ್ಚುವರಿ (Rationalization) ಪಕ್ರಿಯೆಯಲ್ಲಿ ನಿಯಮಾನುಸಾರ ಹಿರಿಯ ಮುಖ್ಯಶಿಕ್ಷಕರು /ಮುಖ್ಯಶಿಕ್ಷಕರ ಹುದ್ದೆ ಹೆಚ್ಚುವರಿ ಎಂದು ಗುರುತಿಸಿ ನಿಯಮಾನುಸಾರ ಅಗತ್ಯವಿರುವೆಡೆ ಸ್ಥಳಾಂತರಗೊಳಿಸಲಾಗುವುದು.
ಅಂಗವಿಕಲ ಮೀಸಲಾತಿ ಕ್ರಮಗಳು :
“ದಿನಾಂಕ: 28/03/2023ರ ಆದೇಶಸಂಖ್ಯೆ: ಸಿ.ಆಸು.ಇ 121 ಸೇ.ನೆ.ನಿ 2020ರ
ಆದೇಶದ ದಿನಾಂಕದ ಪೂರ್ವದಲ್ಲಿ ಆದೇಶ ಸಂಖ್ಯೆ ಸಿಆಸುಇ 02 ಸೆಹೆಮ್ 2022 ದಿನಾಂಕ: 28/12/2022ರ
ಅನುಬಂಧದಲ್ಲಿರುವ ರೋಷ್ಟರಿನನ್ವಯ ಗುಂಪು-‘ಸಿ’ ಮತ್ತು ಗುಂಪು-‘ಡಿ’ ಹುದ್ದೆಗಳಿಗೆ ಮುಂಬಡ್ತಿ ನೀಡಿದ್ದಲ್ಲಿ
ಯಾವ ಬಿಂದುವಿನವರೆಗೆ ಮುಂಬಡ್ತಿ ನೀಡಲಾಗಿದೆಯೋ ಆ ನಂತರ ಬಿಂದುವಿನಿಂದ ಮುಂದುವರೆಸತಕ್ಕದ್ದು”
ರೋಷ್ಟರ್ ಮತ್ತು ಬಿಂದು ಗುರುತಿಸುವಿಕೆಯ ಬಗ್ಗೆ ಬಡ್ತಿ ವಹಿಯಲ್ಲಿ ಸ್ಪಷ್ಟವಾಗಿ ನಮೂದಿಸತಕ್ಕದ್ದು. ಇದನ್ನು
ಕಛೇರಿಯ ಅಧಿಕೃತ ಶಾಶ್ವತ ದಾಖಲೆಯನ್ನಾಗಿ ನಿರ್ವಹಿಸತಕ್ಕದ್ದು.
- ಕರ್ನಾಟಕ ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮ-2019 ರಾಜ್ಯ ಪತ್ರ ಆದೇಶ ಸಂಖ್ಯೆ: WCD 209 PHP 2017
(Part-2) Date: 30/8/2019 ರ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿರುವಂತೆ 21 ವಿಧದ ದೈಹಿಕ ಅಂಗವೈಕಲ್ಯತೆಯ
ಕುರಿತಾಗಿ ನಮೂನೆ 4, 5 ಮತ್ತು 6 ರಲ್ಲಿ ನಿಗಧಿಪಡಿಸಿರುವ ನಮೂನೆಯಲ್ಲಿರುವಂತೆ ವೈದ್ಯಕೀಯ ಮಂಡಳಿಯಿಂದ
ಪ್ರಮಾಣ ಪತ್ರವನ್ನು ಪಡೆದಿರುವ ಶಿಕ್ಷಕರನ್ನು ಮಾತ್ರ ಅಂಗವೈಕಲ್ಯತೆಯ ಮೀಸಲಾತಿಯಲ್ಲಿ ಅರ್ಹತೆ ಇದಲ್ಲಿ
ನಿಯಮಾನುಸಾರ ಪರಿಗಣಿಸುವುದು. ಶಾಶ್ವತ ಅಂಗವಿಕಲತೆಯ ಪ್ರಮಾಣ ಪತ್ರವನ್ನು (UDID) ಪಡೆದಿದ್ದರೂ ಸಹ
ಸದರಿ Unique Disability ID ನಲ್ಲಿ ಅಂಗವಿಕಲತೆಯ (CATEGORY ABBREVIATIONS) ವಿಧದ ಬಗ್ಗೆ ಸ್ಪಷ್ಟತೆ
ಇಲ್ಲದಿರುವುದರಿಂದ ಹಾಗೂ ಅಂಗವೈಕಲ್ಯತೆಯ Annexure-1 ರಲ್ಲಿ ನಿಗಧಿಪಡಿಸಿರುವ ಅಂಗವೈಕಲ್ಯತೆಯ
ಪ್ರಮಾಣ ಮತ್ತು ವಿಧವನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ ನಮೂನೆಯಲ್ಲಿರುವಂತೆ ಅಂಗವಿಕಲ ಶಿಕ್ಷಕರು
ತ್ರಿಸದಸ್ಯ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರವನ್ನು ಪಡೆದಿರಬೇಕಾಗುತ್ತದೆ. ಇದನ್ನು ಉಪನಿರ್ದೆಶಕರು
ಕಡ್ಡಾಯವಾಗಿ ಖಚಿತಪಡಿಸಿಕೊಳ್ಳತಕ್ಕದ್ದು. - ಯಾವುದೇ ಶಿಕ್ಷಕರು ಸುಳ್ಳು ಮಾಹಿತಿ/ದಾಖಲೆ ನೀಡಿ ಬಡ್ತಿ ಪಡೆದಿದ್ದಲ್ಲಿ ಅಂತಹಾ ಶಿಕ್ಷಕರ ಬಡ್ತಿಯನ್ನು
ರದ್ದುಪಡಿಸಲಾಗುವುದು
ಶಿಕ್ಷಕರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮವನ್ನು
ಕೈಗೊಳ್ಳಲಾಗುವುದು. ಅಂಗವೈಕಲ್ಯತೆ ಹೊಂದಿದ್ದ ಶಿಕ್ಷಕರನ್ನು ಮಾತ್ರ ಬಡ್ತಿಗೆ ನಿಯಮಾನುಸಾರ ಪರಿಗಣಿಸುವುದು.
ಶಿಕ್ಷಕರ ಅವಲಂಬಿತರು ಅಂಗವೈಕಲ್ಯತೆಯನ್ನು ಹೊಂದಿದ್ದಲ್ಲಿ ಆಧ್ಯತೆಯನ್ನು /ಮೀಸಲಾತಿಯನ್ನು ಬಯಸಿದ್ದಲ್ಲಿ ಅಂತಹ ಪ್ರಕರಣವನ್ನು ಬಡ್ತಿಗೆ ಪರಿಗಣಿಸಲು ಅವಕಾಶವಿರುವುದಿಲ್ಲ.
- ಅಂಗವಿಕಲ ಮೀಸಲಾತಿಯಲ್ಲಿ ಬಡ್ತಿ ಪಡೆದ ಶಿಕ್ಷಕರ ತ್ರಿಸದಸ್ಯ ವೈದ್ಯಕೀಯ ಮಂಡಳಿಯ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಉಪನಿರ್ದೇಶರು(ಆಡಳಿತ) ಇವರು ತಮ್ಮ ಕಛೇರಿ ಕಡತದಲ್ಲಿ ಸಂರಕ್ಷಿಸಿಡತಕ್ಕದ್ದು. ಸದರಿ ಪ್ರಮಾಣ ಪತ್ರದ ದೃಢೀಕೃತ ಜೆರಾಕ್ಸ್ ಪ್ರತಿಯನ್ನು ಹಾಗೂ ಜಿಲ್ಲಾ ಹಂತದ ಬಡ್ತಿ
ಪ್ರಕ್ರಿಯೆಯಲ್ಲಿ ಕೈಗೊಂಡ ಕ್ರಮದ ವಿವರವಾದ ಅಂಕಿ ಅಂಶಗಳ ವರದಿಯನ್ನು ಆಯಾ ವ್ಯಾಪ್ತಿಯ ವಿಭಾಗೀಯ ಸಹನಿರ್ದೇಶಕರಿಗೆ ಬಡ್ತಿ ಪ್ರಕ್ರಿಯೆ ಮುಕ್ತಾಯವಾದ ಒಂದು ವಾರದ ಒಳಗಾಗಿ ಕಡ್ಡಾಯವಾಗಿ ವರದಿ ಸಲ್ಲಿಸತಕ್ಕದ್ದು.