ಮುಖ್ಯಗುರುಗಳ ಬಡ್ತಿಯ ಕುರಿತು Update ಮಾಹಿತಿ ಇಲ್ಲಿದೆ

ಫೆಬ್ರುವರಿ 23 ದಿನಾಂಕದಂದು ಮುಖ್ಯ ಗುರುಗಳ ಬಡ್ತಿ ಕೌನ್ಸಿಲಿಂಗ್ ಜರುಗುವ ಸಾಧ್ಯತೆ ಇದೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರಂತರವಾಗಿ ಬಡ್ತಿ ಪ್ರಕ್ರಿಯೆ ಕೌನ್ಸಿಲಿಂಗ್ ದಿನಾಂಕವನ್ನು
ಪ್ರಕಟಿಸುವ ಆದೇಶವನ್ನು ಹೊರಡಿಸಲು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ. ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದಂತೆ ಇಂದು ಅಥವಾ ನಾಳೆ ಸಂಜೆಯೊಳಗಾಗಿ ಬಡ್ತಿ ಕೌನ್ಸಿಲಿಂಗ್ ದಿನಾಂಕ ಪ್ರಕಟಿಸುವ ಆದೇಶ ಹೊರ ಬೀಳುವ ಸಾಧ್ಯತೆ ಇದೆ. ಫೆಬ್ರುವರಿ 23ಕ್ಕೆ ಮುಖ್ಯ ಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಪ್ರತಿ ಕೌನ್ಸಿಲಿಂಗ್ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ ಎಂಬ ಅಂಶವನ್ನು ರಾಜ್ಯದ ಸಮಸ್ತ ಶಿಕ್ಷಕರ ಗಮನಕ್ಕೆ ತರ ಬಯಸುತ್ತೇವೆ.

Sharing Is Caring:

Leave a Comment