ಶಿಕ್ಷಕರ ವರ್ಗಾವಣೆ ಮತ್ತು ಹೆಚ್ಚುವರಿ ಪ್ರಮುಖ ಮಾಹಿತಿ

WhatsApp Group Join Now
Telegram Group Join Now

ಶಿಕ್ಷಕರ ವರ್ಗಾವಣೆ ಮತ್ತು ಹೆಚ್ಚುವರಿಯ
ಬಗ್ಗೆ ಪ್ರಮುಖವಾದ ಮಾಹಿತಿ

ಮಾನ್ಯ ಪ್ರಾಥಮಿಕ ಶಿಕ್ಷಣ ನಿರ್ದೇಶಕರಾದ ಪ್ರಸನ್ನ ಕುಮಾರ್ ಅವರನ್ನು ಭೇಟಿ ಮಾಡಲಾಯಿತು

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಹಾಗೂ ಬೀದ‌ರ್
ತಾಲೂಕಿನ ಪದಾಧಿಕಾರಿಗಳು ಆಗಮಿಸಿದ ಸಂದರ್ಭದಲ್ಲಿ ಅವರೊಂದಿಗೆ
ಪ್ರಾಥಮಿಕ ಶಿಕ್ಷಣ ನಿರ್ದೇಶಕರನ್ನು ಭೇಟಿ ಮಾಡಿ ಬೀದರ್ ಜಿಲ್ಲೆಯ ಹೆಚ್ಚುವರಿ
ಶಿಕ್ಷಕರ ಸಮಸ್ಯೆಗಳ ಬಗ್ಗೆ, ಚಿತ್ರಕಲಾ ಶಿಕ್ಷಕರು, ಹಿಂದಿ ಶಿಕ್ಷಕರು, ದೈಹಿಕ ಶಿಕ್ಷಕರು,
ಜಿ.ಪಿ.ಟಿ. ಇಂಗ್ಲಿಷ್ ಶಿಕ್ಷಕರ ಸಮಸ್ಯೆ, ಒಟ್ಟಾರೆ ಹೆಚ್ಚುವರಿ ಶಿಕ್ಷಕರ
ಸಮಸ್ಯೆಗಳ ಬಗ್ಗೆ ಸುರ್ದೀಘ್ರವಾಗಿ ಚರ್ಚಿಸಲಾಯಿತು. ಬರುವ 22ನೇ ತಾರೀಖು
ಹೆಚ್ಚುವರಿ ಶಿಕ್ಷಕರ ಪಟ್ಟಿ ಪ್ರಕಟಗೊಳ್ಳಲಿದ್ದು, ಅದಕ್ಕೂ ಕೂಡ ಆಕ್ಷೇಪಣೆ ಕರೆಯಲು
ವಿನಂತಿಸಲಾಗಿದೆ. 22ನೇ ದಿನಾಂಕದಂದು ಹೆಚ್ಚುವರಿ ಶಿಕ್ಷಕರ ಪಟ್ಟಿ ಬಿ.ಇ.ಒ ಲಾಗಿನ್
ನಲ್ಲಿ ಪ್ರಕಟಗೊಳ್ಳಲಿದ್ದು, ಬಹುತೇಕ ಹೆಚ್ಚುವರಿ ಶಿಕ್ಷಕರ ಪಟ್ಟಿಯಲ್ಲಿರುವ ಸಾಕಷ್ಟು
ಗೊಂದಲಗಳು ನಿವಾರಣೆಯಾಗಲಿದ್ದು, ಈಗಾಗಲೇ ವಿಷಯವಾರು, ವೃಂದವಾರು
ಹೆಚ್ಚುವರಿ ಮಾಡಬಾರದೆಂದು ವಿನಂತಿಸಿಕೊಳ್ಳಲಾಗಿದ್ದು, ಅದರನ್ವಯ

1) ಪಿ.ಎಸ್.ಟಿ. ಶಿಕ್ಷಕರು ಬಹುತೇಕ ಹೆಚ್ಚುವರಿ ಆಗುವುದಿಲ್ಲ
2) ಜಿ.ಪಿ.ಟಿ ಇಂಗ್ಲಿಷ್ ಶಿಕ್ಷಕರು ಹೆಚ್ಚುವರಿಯಾಗುವ ಸಾಧ್ಯತೆ
ಕಡಿಮೆಯಿದೆ.
3) ಹಿಂದಿ ಶಿಕ್ಷಕರು ಹಿರಿಯ ಪ್ರಾಥಮಿಕ ಶಾಲೆಗಳಿದ್ದರೆ
ಅವರಿಗೂ ಕೂಡ ತಾತ್ಕಾಲಿಕ ಹುದ್ದೆ ಮಂಜೂರಿಸಿ ನ್ಯಾಯ
ಒದಗಿಸಲಾಗುವುದು.
4) ದೈಹಿಕ ಶಿಕ್ಷಕರಿಗೆ ಹೆಚ್ಚಿನ ಪ್ರಮಾಣದಲ್ಲಿ ನ್ಯಾಯ
ದೊರಕಿಸಿಕೊಡಲಾಗುತ್ತಿದೆ
5)ಚಿತ್ರಕಲಾ ಶಿಕ್ಷಕರು ಹಾಗೂ ಇನ್ನುಳಿದ ಬಹುತೇಕ
ಶಿಕ್ಷಕರು ಹೆಚ್ಚುವರಿಯಿಂದ ಕೈಬಿಡುವ ಸಾಧ್ಯತೆ ಇದ್ದು, 22ನೇ ತಾರೀಖಿನಂದು ಬಿಡುಗಡೆಯಾಗುವ ಪಟ್ಟಿ ಗಮನಿಸಬೇಕೆಂದು
ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.

WhatsApp Group Join Now
Telegram Group Join Now
Sharing Is Caring:

Leave a Comment