2022-23ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಅಗತ್ಯತೆ/ಹೆಚ್ಚುವರಿಇರುವ ಹುದ್ದೆಗಳ ಗುರುತಿಸುವಿಕೆ ಹಾಗೂ ಮರು ಹೊಂದಾಣಿಕೆಪ್ರಕ್ರಿಯೆಗಳನ್ನು ಅನುಷ್ಠಾನಗೊಳಿಸುವ ಸಂದರ್ಭಗಳಲ್ಲಿ ಪರಿಗಣಿಸಬೇಕಾದಅಂಶಗಳ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ C.S ಷಡಕ್ಷರಿ ರವರು ಮಾನ್ಯ ಶಿಕ್ಷಣ ಸಚಿವರುಗಳಿಗೆ ಈ ಕೆಳಗಿನ ಅಂಶಗಳ ಕುರಿತು ಪರಿಗಣಿಸುವಂತೆ ಮನವಿ ಸಲ್ಲಿಸಿರುತ್ತಾರೆ
• ಸರ್ಕಾರದ ಸಾಮಾನ್ಯ ವರ್ಗಾವಣೆ ಮಾರ್ಗಸೂಚಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಪದಾಧಿಕಾರಿಗಳಿಗೆ ವಿನಾಯಿತಿ ನೀಡಿರುವ ಮಾದರಿಯಲ್ಲಿ ಹೆಚ್ಚುವರಿ ಶಿಕ್ಷಕರ ಗುರುತಿಸುವಿಕೆ ಹಾಗೂಹೊಂದಾಣಿಕೆ ಪ್ರಕ್ರಿಯೆಯಲ್ಲಿ ವಿನಾಯಿತಿ ನೀಡಿವುದು.
• ದೈಹಿಕ ಶಿಕ್ಷಕರು, ಆಂಗ್ಲ ಭಾಷೆ ಮತ್ತು ಹಿಂದಿ ಶಿಕ್ಷಕರನ್ನು ವಿದ್ಯಾರ್ಥಿಗಳ ಸಂಖ್ಯೆಯ ಆಧಾರದ ಮೇಲೆಹೆಚ್ಚುವರಿ ಎಂದು ಪರಿಗಣಿಸಬಾರದು.
• ಪ್ರಾಥಮಿಕ ಶಾಲಾ ಕನ್ನಡ ಭಾಷಾ ಶಿಕ್ಷಕರಂತೆ ಹಿಂದಿ ಶಿಕ್ಷಕರು ಪಿ.ಯು.ಸಿ. ವಿದ್ಯಾರ್ಹತೆಯೊಂದಿಗೆಟಿ.ಸಿ.ಹೆಚ್/ಡಿ.ಇ.ಡಿ. ವಿದ್ಯಾರ್ಹತೆ ಪಡೆದು ಹೆಚ್ಚುವರಿಯಾಗಿ ಪಿ.ಯು.ಸಿ.ಗೆ ತತ್ಸಮಾನವಾದ ಹಿಂದಿಭಾಷಾ ಪ್ರಚಾರ ಸಭಾಗಳು ನಡೆಸುವ ಸರ್ಟಿಫಿಕೇಟ್ ಕೋರ್ಸ್ ಹೊಂದಿರುವ ಕಾರಣ ಹಿಂದಿಶಿಕ್ಷಕರೆಂದು ನೇಮಕಾತಿ ಮಾಡಲಾಗಿದ್ದು, ಇಂತಹ ಹಿಂದಿ ಶಿಕ್ಷಕರನ್ನು ಕನ್ನಡ ಶಿಕ್ಷಕರೆಂದೇ ಪರಿಗಣಿಸಿಹೆಚ್ಚುವರಿ ಪ್ರಕ್ರಿಯೆಯಿಂದ ವಿನಾಯಿತಿ ನೀಡುವುದು.
• ಹಿಂದಿ ಶಿಕ್ಷಕರ ಅವಶ್ಯಕತೆ ಹಿರಿಯ ಪ್ರಾಥಮಿಕ ಶಾಲೆಗಳಿಗೆ (6-8 ತರಗತಿ) ಅವಶ್ಯವಿರುವುದರಿಂದಹಿಂದಿ ಶಿಕ್ಷಕರಿಗೆ ಹೆಚ್ಚುವರಿ ಪ್ರಕ್ರಿಯೆಯಿಂದ ವಿನಾಯಿತಿ ನೀಡುವುದು.
• ಹೆಚ್ಚುವರಿ ಪ್ರಕ್ರಿಯೆಗೆ ದಿನಾಂಕ: 31-12-2021ರ ದಾಖಲಾತಿಯನ್ನು ಪರಿಗಣಿಸಿರುವುದನ್ನುಮಾರ್ಪಡಿಸಿ ಪ್ರಸಕ್ತ ಸಾಲಿನ ಮಕ್ಕಳ ದಾಖಲಾತಿ ಅಂದರೆ; 30-09-2022ರವರೆಗಿನ ದಾಖಲಾತಿಯನ್ನುಪರಿಗಣಿಸುವುದು.
• ಅವಧಿ ಮುಗಿದಿರುವ ಸಿ.ಆರ್.ಪಿ/ಬಿ.ಆರ್.ಪಿ. ಗಳಿಗೆ ಹೆಚ್ಚುವರಿ ಪ್ರಕ್ರಿಯೆ ಕೈಗೊಳ್ಳುವ ಪೂರ್ವದಲ್ಲೇಕೌನ್ಸಿಲಿಂಗ್ ನಡೆಸಿ ಸ್ಥಳನಿಯುಕ್ತಿಗೊಳಿಸುವುದು
• ವಿಷಯವಾರು, ವೃಂದವಾರು ಹೆಚ್ಚುವರಿ ಪ್ರಕ್ರಿಯೆ ಕೈಗೊಳ್ಳುವ ಕ್ರಮವನ್ನು ಕೈಬಿಟ್ಟು ಶಾಲೆಯಲ್ಲಿಮಂಜೂರಾಗಿರುವ ಹುದ್ದೆ ಮತ್ತು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಗಳನ್ನು ಪರಿಗಣಿಸಿ ಮಕ್ಕಳು-ಶಿಕ್ಷಕರ ಅನುಪಾತದ ಆಧಾರದ ಮೇಲೆ ಮಂಜೂರಾದ ಹುದ್ದೆಗಳಿಗಿಂತ ಕರ್ತವ್ಯ ನಿರ್ವಹಿಸುತ್ತಿರುವಹುದ್ದೆಗಳು ಹೆಚ್ಚಾಗಿದ್ದರೆ ಮಾತ್ರ ಅಂತಹ ಹುದ್ದೆಗಳನ್ನು ಹೆಚ್ಚುವರಿ ಎಂದು ಪರಿಗಣಿಸುವುದು.
ಹೆಚ್ಚುವರಿ ಪ್ರಕ್ರಿಯೆಯಲ್ಲಿ ಪತಿ-ಪತ್ನಿ ಪ್ರಕರಣಗಳನ್ನು ಪರಿಗಣಿಸುವುದು ಎಂದು ನಮೂದಿಸಲಾಗಿದೆ.ಆದರೆ, ಇ.ಇ.ಡಿ.ಎಸ್.(ಶಿಕ್ಷಕ ಮಿತ್ರ)ತಂತ್ರಾಂಶದಲ್ಲಿ ವಿವರಗಳನ್ನು ದಾಖಲಿಸಲು ಅವಕಾಶ ಕಲ್ಪಿಸುವುದು.ಹೆಚ್ಚುವರಿ ಪ್ರಕ್ರಿಯೆ ಪೂರ್ವದಲ್ಲಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸೇವಾನಿರತಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ನೀಡುವುದರಿಂದ ಹೆಚ್ಚಿನ ಮಟ್ಟದಲ್ಲಿ ಖಾಲಿ ಹುದ್ದೆಗಳುಲಭ್ಯವಾಗಲಿವೆ, ಇದರಿಂದ ಹೆಚ್ಚುವರಿ ಶಿಕ್ಷಕರಿಗೆ ಅನುಕೂಲವಾಗಲಿದೆ.
ಶೈಕ್ಷಣಿಕ ಬೆಳವಣಿಗೆಗಳಿಗೆ ತೊಂದರೆಯಾಗದಂತೆ ಹೆಚ್ಚುವರಿ ಪ್ರಕ್ರಿಯೆಗಳನ್ನು ಶೈಕ್ಷಣಿಕ ವರ್ಷದಅಂತ್ಯದಲ್ಲಿ ಕೈಗೊಳ್ಳುವುದು.