ಶಿಕ್ಷಕರ ಸಂಘದಿಂದ ಶಿಕ್ಷಕರ ಕಲ್ಯಾಣ ನಿಧಿಯಲ್ಲಿ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ

WhatsApp Group Join Now
Telegram Group Join Now

ಶಿಕ್ಷಕರ ಸಂಘದ ವತಿಯಿಂದ ಶಿಕ್ಷಕರ ಕಲ್ಯಾಣ ನಿಧಿಗೆ ಸಂಬಂಧಿಸಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ನೀಡಲಾಗಿದ್ದು ಪ್ರಮುಖ ಬೇಡಿಕೆಗಳು ಇಂತಿವೆ* ಕ್ಲಸ್ಟರ್ ಪ್ರತಿಭಾ ಕಾರಂಜಿಗಳಿಗಾಗಿ ನೀಡುವ ಸಂಘಟನಾತ್ಮಕ ವೆಚ್ಚವನ್ನು ಕನಿಷ್ಠ ಕ್ಲಸ್ಟರ್‌ ಮಟ್ಟಕ್ಕೆ25000/- ರೂಪಾಯಿಗಳನ್ನು ನಿಗದಿಪಡಿಸಬೇಕಾಗಿ ವಿನಂತಿ

* ಈಗಾಗಲೇ ರಾಜ್ಯಾದ್ಯಂತ ಹೊಸ ತಾಲ್ಲೂಕುಗಳು ಶೈಕ್ಷಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದು,ಹಿಂದಿನ ತಾಲ್ಲೂಕುಗಳಲ್ಲಿ 1 ಹಿರಿಯ ಪ್ರಾಥಮಿಕ ಶಾಲೆಗೆ ಹಾಗೂ 1 ಕಿರಿಯ ಪ್ರಾಥಮಿಕ ಶಾಲೆಗೆ ಒಂದೊಂದು ಪ್ರಶಸ್ತಿಯನ್ನು ನಿಗದಿಗೊಳಿಸಿದ್ದು, ಹೊಸ ತಾಲ್ಲೂಕುಗಳಿಗೂ ಕೂಡ ಜಿಲ್ಲಾ ಶಿಕ್ಷಕರ ಪ್ರಶಸ್ತಿಯನ್ನು ನೀಡಬೇಕಾಗಿ ವಿನಂತಿ

* ಶಿಕ್ಷಕರ ಸಹ ಪಠ್ಯದ ಜೊತೆಗೆ ಶಿಕ್ಷಕರಿಗಾಗಿ ತಾಲ್ಲೂಕು/ಜಿಲ್ಲೆ/ರಾಜ್ಯ ಮಟ್ಟದ ಕ್ರೀಡಾಕೂಟಗಳನ್ನುಕೂಡ ಆಯೋಜಿಸಬೇಕೆಂದು ರಾಜ್ಯದ ಬಹುತೇಕ ಶಿಕ್ಷಕರ ಕೋರಿಕೆಯಾಗಿದ್ದು, ಇದರಿಂದ ಹೆಚ್ಚಿನಆರ್ಥಿಕ ಹೊರೆ ಬರುವುದಿಲ್ಲ. ಕಾರಣ ರಾಜ್ಯ ಸಮಿತಿಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನಕೈಗೊಳ್ಳಬೇಕಾಗಿ ವಿನಂತಿ.

ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಜಿಲ್ಲಾ/ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ನೀಡುವ ಗೌರವಧನವನ್ನು ಹೆಚ್ಚಿಸಬೇಕಾಗಿ ವಿನಂತಿ

1. ಜಿಲ್ಲಾ ಪ್ರಶಸ್ತಿಗೆ:- 5000/-ರೂಪಾಯಿಗಳಿಂದ 25000/- ರೂಪಾಯಿಗಳಿಗೆ ಹೆಚ್ಚಿಸಬೇಕು

2. ರಾಜ್ಯ ಪ್ರಶಸ್ತಿಗೆ:- 10000/- ರೂಪಾಯಿಗಳಿಂದ 50000/- ರೂಪಾಯಿಗಳಿಗೆ ಹೆಚ್ಚಿಸಬೇಕು

3. ರಾಷ್ಟ್ರ ಪ್ರಶಸ್ತಿಗೆ:- 25000/- ರೂಪಾಯಿಗಳಿಂದ 100000/- ರೂಪಾಯಿಗಳಿಗೆ ಹೆಚ್ಚಿಸಬೇಕು

* ಈಗಾಗಲೇ ಜಿಲ್ಲಾ ಗುರುಭವನ ಸಮಿತಿಗಳು ಜಿಲ್ಲಾ ಹಂತದಲ್ಲಿ ಅಸ್ತಿತ್ವದಲ್ಲಿದ್ದು, ಆದರೆ ಬಹುತೇಕಜಿಲ್ಲೆಗಳಲ್ಲಿ ಶಿಕ್ಷಕರ ಕಲ್ಯಾಣ ನಿಧಿಯಿಂದ ನಿಗದಿಪಡಿಸಿದ ಸಮಿತಿಯ ಮಾದರಿಯಲ್ಲಿರಚನೆಯಾಗಿರುವುದಿಲ್ಲ. ಹಾಗೂ ಪ್ರಸ್ತುತ ವ್ಯವಸ್ಥೆಗನುಗುಣವಾಗಿ ಮತ್ತೊಮ್ಮೆ ಜಿಲ್ಲಾ ಗುರುಭವನ”ಸಮಿತಿಗಳ ಪುನರ್‌ ರಚನೆ ಮಾಡುವ ಅವಶ್ಯಕತೆ ಇದ್ದು, ಮಾನ್ಯರವರು ರಾಜ್ಯ ಸಮಿತಿಯಲ್ಲಿರುವಶಿಕ್ಷಕರ ಸಂಘಟನೆಗಳೊಂದಿಗೆ ಚರ್ಚಿಸಿ ಜಿಲ್ಲಾ ಗುರುಭವನ ಸಮಿತಿಗಳನ್ನು ಪುನರ್ ರಚಿಸಬೇಕಾಗಿವಿನಂತಿ. 

 

ಶಿಕ್ಷಕರ ಕಲ್ಯಾಣ ನಿಧಿಯ ಅಜೀವ ಸದಸ್ಯತ್ವ ಹೊಂದಲು 3500 ರೂಪಾಯಿಗಳನ್ನುನಿಗದಿಪಡಿಸಿದ್ದು, ಈ ಮೊತ್ತದಲ್ಲಿ 2500 ರೂಪಾಯಿಗಳನ್ನು ಕಲ್ಯಾಣ ನಿಧಿಗೆ ಹಾಗೂ 1000ರೂಪಾಯಿಗಳನ್ನು ಶಿಕ್ಷಕರ ಸಂಘದ ಶೈಕ್ಷಣಿಕ ಚಟುವಟಿಕೆಗಳಿಗೆ ನಿಗದಿಪಡಿಸಿರುವ ಷರತ್ತಿಗೆಒಳಪಟ್ಟಿರುವುದರಿಂದ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರು ಯಾರು ಸದಸ್ಯತ್ವ ಹೊಂದಿಲ್ಲ.

ದಿನಾಂಕ:31-10-2022ರ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿತೀರ್ಮಾನಿಸಿದಂತೆ ಎಲ್ಲರ ಸದಸ್ಯತ್ವವನ್ನು ವೇತನದಲ್ಲೇ ಕಟ್ಟಾಯಿಸಿ HRMS ಮೂಲಕ EEDSಮಾಹಿತಿಯೊಂದಿಗೆ ಅಜೀವ ಸದಸ್ಯತ್ವ ಹೊಂದುವುದರಿಂದ ಶಿಕ್ಷಕರ ಕಲ್ಯಾಣ ನಿಧಿಗೆ ಕನಿಷ್ಠ 20 ರಿಂದ 25 ಕೋಟಿ ರೂಪಾಯಿಗಳು ಒಟ್ಟಿಗೆ ಸಂದಾಯವಾಗುವುದು ಇದರ ಬಗ್ಗೆ ಸೂಕ್ತ ನಿರ್ಣಯಕೈಗೊಳ್ಳಬೇಕಾಗಿ ವಿನಂತಿ.

ಶಿಕ್ಷಕರಿಗೆ ಸುಲಭ ಕಂತು ಹಾಗೂ ಬಡ್ಡಿದರದಲ್ಲಿ ಮನೆ ಸಾಲ ಹಾಗೂ ವಾಹನ ಸಾಲವನ್ನುನೀಡುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿ ವಿನಂತಿ.

* ಶಿಕ್ಷಕರ ವೈದ್ಯಕೀಯ ಮರುಪಾವತಿ ವೆಚ್ಚದ ಮಿತಿಯನ್ನು ಕನಿಷ್ಠ 3 ಲಕ್ಷದವರೆಗೂ ಹೆಚ್ಚಿಸಿಮರುಪಾವತಿಸಲು ಅವಕಾಶ ಕಲ್ಪಿಸಬೇಕಾಗಿ ವಿನಂತಿ.

WhatsApp Group Join Now
Telegram Group Join Now
Sharing Is Caring:

Leave a Comment