2022-23ನೇ ಸಾಲಿನಿಂದ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿನ 5 ಮತ್ತು 8ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ

ಪ್ರಸ್ತುತ ವರ್ಷದಲ್ಲಿ ಕಲಿಕಾ ಕೊರತೆಯನ್ನು ನೀಗಿಸಲು ಕಲಿಕಾ ಚೇತರಿಕೆಯನ್ನ ಅನುಷ್ಠಾನಗೊಳಿಸಿ ಕಲಿಕಾ ಪ್ರಗತಿಯು ಅನುಪಾಲನೆಯಲ್ಲಿದೆ. ಯಾವ ಮಗುವಿಗೆ ಯಾವ ಕಲಿಕಾ ಸಾಮರ್ಥ್ಯ/ಕಲಿಕಾಫಲ ಸಾಧಿಸಿಲ್ಲ ಎಂಬುದನ್ನು ವಿಷಯಾವಾರು ಕ್ಲಸ್ಟರ್ ವಾರು ತಿಳಿದು ಪೂರಕ ಕಲಿಕಾ ಪ್ರಕ್ರಿಯೆಗಳನ್ನು ನೀಡಲು ಏಕರೂಪದ ಮೌಲ್ಯಮಾಪನದ ಅಗತ್ಯವಿರುವ ನಿಟ್ಟಿನಲ್ಲಿ ಪ್ರಸ್ತುತ ವರ್ಷದಿಂದ 5ನೇ ಮತ್ತು 8ನೇ ತರಗತಿಗೆ ಮೌಲ್ಯಮಾಪನ ಮೌಲ್ಯಮಾಪನ ಮಾಡಿ ವಿಶ್ಲೇಷಣೆ ಮಾಡುವ ಮಾರ್ಗಸೂಚಿ ಸಿದ್ಧಪಡಿಸಿ ಅನುಬಂದಿಸಿದೆ.

1 ಪರೀಕ್ಷಾ ನೋಂದಣಿ ಪ್ರಕ್ರಿಯೆ:-
SATS ಆಧಾರದಲ್ಲಿ ವಿದ್ಯಾರ್ಥಿಗಳ ನೋಂದಣಿ ಮಾಡುವುದು.ಯಾವುದೇ ವಿದ್ಯಾರ್ಥಿಯು ಪರೀಕ್ಷಾ ವಂಚಿತರಾಗದಂತೆ ಎಚ್ಚರವಹಿಸುವುದು.

2 ಪರೀಕ್ಷಾ ನೋಂದಣಿ ಶುಲ್ಕ:-
ವಿದ್ಯಾರ್ಥಿಗಳಿಂದ ಪಡೆಯದೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಭರಿಸುವುದು.

3 ಪರೀಕ್ಷಾ ಕೇಂದ್ರಗಳ ಸ್ಥಾಪನೆ:-
5ನೇ ತರಗತಿಯ ಪರೀಕ್ಷಾಕೇಂದ್ರದಲ್ಲಿ ಕನಿಷ್ಠ 25ಮಕ್ಕಳು ಇರುವಂತೆ ಇಲ್ಲದಿದ್ದಲ್ಲಿ ಹತ್ತಿರದ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸೇರಿಸುವುದು.
8ನೇ ತರಗತಿ ವಿದ್ಯಾರ್ಥಿಗಳು ಕನಿಷ್ಠ 50ಮಕ್ಕಳು ಇರುವಂತೆ,ಇಲ್ಲದ ಪಕ್ಷದಲ್ಲಿ 2 ಕಿ.ಮೀ.ವ್ಯಾಪ್ತಿಯ ಹಿರಿಯ ಪ್ರಾಥಮಿಕ ಅಥವಾ ಪ್ರೌಢಶಾಲೆಗಳಲ್ಲಿ ಪರೀಕ್ಷೆ ನಡೆಸಲು ಕ್ರಮವಹಿಸುವುದು.

4 ಪರೀಕ್ಷಾ ಕೇಂದ್ರದ ಕಾರ್ಯನಿರ್ವಹಣೆ:-

ಪರೀಕ್ಷಾ ಕೇಂದ್ರದ ಮೂಲಭೂತ ಸೌಕರ್ಯಗಳನ್ನು ಆಯಾ ಶಾಲಾ ಮುಖ್ಯಶಿಕ್ಷಕರು ನಿರ್ವಹಿಸುವುದು. ಮೇಲ್ವಿಚಾರಕರಾಗಿ ಆಯಾ ಕ್ಲಸ್ಟರ್ ಶಿಕ್ಷಕರನ್ನು ಬದಲಾಯಿಸಿ ನಿಯೋಜನೆ ಮಾಡುವುದು.

5 ಪ್ರವೇಶಪತ್ರ ಮುದ್ರಣ ವಿನ್ಯಾಸ:-

ಪ್ರವೇಶ ಪತ್ರ ಆಯಾ ಶಾಲಾ ಮುಖ್ಯಗುರುಗಳು SATS ನಿಂದ ಆನ್‌ಲೈನ್ ನಲ್ಲಿ ಪಡೆದು ವಿತರಿಸುವುದು.

6 ಪ್ರಶ್ನೆ ಪತ್ರಿಕೆಯ ವಿನ್ಯಾಸ


ನವೆಂಬರದಿಂದ ಮಾರ್ಚ್ ವರೆಗಿನ ಕಲಿಕಾ ಫಲಗಳನ್ನಾಧರಿಸಿ ಪ್ರಶ್ನೆ ಪತ್ರಿಕೆ ರಚನೆ. SA-2 50 ಅಂಕಗಳಿಗೆ ಎರಡು ಗಂಟೆ ಅವಧಿ ನೀಡಿ ಪರೀಕ್ಷೆ ನಿಗದಿ.ಅದರಲ್ಲಿ 40ಲಿಖಿತ 10 ಮೌಖಿಕ. 40ಅಂಕದ ಪತ್ರಿಕೆಯಲ್ಲಿ 20ಅಂಕದ ಎಂ.ಸಿ.ಕ್ಯೂ.ಮತ್ತು 20 ಅಂಕದ ನೀಲನಕ್ಷೆಯನ್ನ ರಚಿಸಿ, ವಾಕ್ಯರೂಪದ ಬರವಣಿಗೆಯನ್ನಾಧರಿಸಿದ ಪ್ರಶ್ನೆ ಪತ್ರಿಕೆಯನ್ನು ರಚಿಸುವುದು.

7 ಪರೀಕ್ಷೆ ನಿರ್ವಹಣೆ ವೇಳಾಪಟ್ಟಿ:-

🔮 ಪರೀಕ್ಷೆ ನಿರ್ವಹಣೆ:- 9/3/23 ರಿಂದ 17/3/23 ರವರೆಗೆ.

🔮 ಮೌಲ್ಯಮಾಪನನಿರ್ವಹಣೆ:- 21/3/23 ರಿಂದ 28/3/23 ರವರೆಗೆ.

🔮 ಫಲಿತಾಂಶ ಸಿದ್ಧಪಡಿಸುವುದು:- 31/3/23 ರಿಂದ 5/4/23ರವರೆಗೆ.

🔮 ಫಲಿತಾಂಶಪ್ರಕಟಣೆ:- 8/4/23 ರಿಂದ 10/4/23 ರವರೆಗೆ.
(ಸಮುದಾಯದತ್ತ ಕಾರ್ಯಕ್ರಮದಂದು ಫಲಿತಾಂಶ ಪ್ರಕಟಿಸುವುದು.)

Sharing Is Caring:

Leave a Comment