ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮದ ಅಡುಗೆ ಸಿಬ್ಬಂದಿಯು ಸರ್ಕಾರದ ಪೂರ್ಣಕಾಲಿಕ ನೌಕರರಾಗಿರುವುದಿಲ್ಲ. ಅವರುಗಳು ನಿಗದಿತ ಗೌರವಧನ ಪಡೆದು ಪ್ರತಿ ದಿನ 4 ಗಂಟೆಗಳ ಅವಧಿಗೆ ಶಾಲೆಗಳಲ್ಲಿ
ಅಡುಗೆ ಕೆಲಸ ನಿರ್ವಹಿಸುತ್ತಾರೆ. ಆದ್ದರಿಂದ ಈ ಅಡುಗೆ ಸಿಬ್ಬಂದಿಯ ವಾಸಸ್ಥಳವನ್ನು ಪರಿಶೀಲಿಸಿ ಮಹಾತ್ಮಗಾಂಧಿ ನರೇಗಾ ಅಧಿನಿಯಮದನ್ವಯ ಜಾಬ್‌ಕಾರ್ಡ್ ನೀಡಲು ಮತ್ತು ಯೋಜನೆಯ ಕಾಮಗಾರಿಗಳಲ್ಲಿ ಕೆಲಸ ಒದಗಿಸಲು ಅಗತ್ಯ
ಕ್ರಮವಹಿಸುವಂತೆ ಉಲ್ಲೇಖ-2 ರ ಪತ್ರದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡುವಂತೆ ಆದೇಶಿಸಿರುತ್ತಾರೆ.
ಉಲ್ಲೇಖ-2ರಲ್ಲಿನ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಘನ ಅಧ್ಯಕ್ಷತೆಯಲ್ಲಿ ದಿ:11.05.2022 ರಂದು
ಬಿಸಿಯೂಟ ನೌಕರರ ವಿವಿಧ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ನಡೆದ ಸಭೆಯ ನಡವಳಿಯಂತೆ ಬಿಸಿಯೂಟ ತಯಾರಿಸುವ
ಸಿಬ್ಬಂದಿಗಳಿಗೆ MGNREGA ಯೋಜನೆಯಡಿ ಜಾಬ್ ಕಾರ್ಡ್ ನೀಡಿ ಕೆಲಸವನ್ನು ನಿರ್ವಹಿಸಲು ಅಗತ್ಯ ಕ್ರಮಕೈಗೊಳ್ಳಲು ತಿಳಿಸಿರುತ್ತಾರೆ
ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಒಳಪಡಿಸುವ ಬಗ್ಗೆ ಆದೇಶ
By kspstadk.com
Published On: