ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ
- ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ (Scholorship) ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿರುತ್ತದೆ.
- ಕರ್ನಾಟಕ ರಾಜ್ಯದಲ್ಲಿ ಅಧಿಕೃತವಾಗಿ ನೊಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳವರೆಗೆ ಪ್ರವೇಶವನ್ನು ಪಡೆದಿರುವ ಕರ್ನಾಟಕ ರಾಜ್ಯದ ರೈತರ ಎಲ್ಲಾ ಮಕ್ಕಳ ಬ್ಯಾಂಕ್‌ಗಳ ಖಾತೆಗಳಿಗೆ ನೇರ ನಗದು ವರ್ಗಾವಣೆ (Direct Benefit Transfer-08T) ಪದ್ಧತಿಯ ಮೂಲಕ ರೂ.2000/- ದಿಂದ ರೂ.11000/- ವರೆಗೆ 2021-22ನೇ ಆರ್ಥಿಕ ವರ್ಷದ ಸಾಲಿನಿಂದ ಜಾರಿಗೆ ಬರುವಂತೆ ಶಿಷ್ಯವೇತನದ ಹಣದ ಮೊತ್ತವನ್ನು ವಾರ್ಷಿಕ ಶಿಷ್ಯವೇತನದ ರೂಪದಲ್ಲಿ ಒದಗಿಸಲು ಮತ್ತು ಪಾವತಿಸಲು ಸರ್ಕಾರದಿಂದ ಅನುಮೋದನೆ ನೀಡಲಾಗಿರುತ್ತದೆ.
- ರೈತ ಕುಟುಂಬದ ಎಲ್ಲಾ ಮಕ್ಕಳು ಇತರೆ ಯಾವುದೇ ವಿದ್ಯಾರ್ಥಿವೇತನ ಪಡೆಯುತ್ತಿದ್ದರೂ ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ಪಡೆಯಲು ಅರ್ಹರಾಗಿತ್ತಾರೆ.
- ಪ್ರೌಢಶಿಕ್ಷಣ (8 ರಿಂದ 10 ನೇ ತರಗತಿ ವರೆಗೆ) ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳಿಗೆ 2021-22 ನೇ ಆರ್ಥಿಕ ವರ್ಷದಿಂದ ವಾರ್ಷಿಕವಾಗಿ ರೂ. 2000/- ಗಳ ವಿದ್ಯಾರ್ಥಿ ವೇತನ ಸೌಲಭ್ಯ ನೀಡಲಾಗಿದೆ.
- 2021-22 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಪೂರ್ವ ಶಿಕ್ಷಣ ಕೋರ್ಸಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ Sats ID ಮತ್ತು FID ಅನ್ವಯ ಅರ್ಹರನ್ನು ಗುರುತಿಸಿ ಪಾವತಿಸಲಾಗುವುದು.
- ಇತರೆ ಎಲ್ಲಾ ಕೋರ್ಸ್‌ಗಳ ರೈತರ ಮಕ್ಕಳು (ಜಾಲತಾಣ :https://ssp.postmatric.karnataka.gov.in) ದಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕಾಗಿ ಕೋರಿದೆ, ವಿದ್ಯಾರ್ಥಿಯು ತಮ್ಮಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮತ್ತು NPCI Mapping ಮಾಡಿಸಿರಬೇಕು ಹಾಗೂ ತಂದೆ ಅಥವಾ ತಾಯಿಯ ರೈತರ ಗುರುತಿನ ಸಂಖ್ಯೆ (ಈರು) ಹೊಂದಿರಬೇಕು.
- ನೊಂದಣಿ ಮಾಡಲು ಹತ್ತಿರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಲು ಕೋರಿದೆ.
ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ಕಾರ್ಯಕ್ರಮದಡಿ ನೀಡಲಾಗುವ ವಾರ್ಷಿಕ ಶಿಷ್ಯ ವೇತನದ ವಿವರ
ಕೋರ್ಸ್‌ನ ಹೆಸರು / ವಿದ್ಯಾರ್ಥಿನಿಯರು / ಅನ್ಯಲಿಂಗದವರು ಕೋರ್ಸ್‌ನ ವಿಧಗಳು
2000/- ಹೆಣ್ಣು ಮಕ್ಕಳಿಗೆ ಮಾತ್ರ
ರೂ.3000/-
ವಿದ್ಯಾರ್ಥಿಗಳು / ಪುರುಷರು
- ಪ್ರೌಢ ಶಿಕ್ಷಣ (8 ರಿಂದ 10 ನೇ ತರಗತಿ) 2000/ ಹೆಣ್ಣು ಮಕ್ಕಳಿಗೆ ಮಾತ್ರ
- ಪದವಿಯ ಮುಂಚೆ ಪಿ.ಯು.ಸಿ./ಐಟಿಐ/ಡಿಸೋಮಾ
ರೂ.2500/- ವಿದ್ಯಾರ್ಥಿಗಳು ರೂ.3000/ ವಿದ್ಯಾರ್ಥಿನಿಯರು - ಎಲ್ಲಾ ಬಿ.ಎ/ ಬಿ.ಎಸ್.ಸಿ/ ಬಿ.ಕಾಂ, ಇತ್ಯಾದಿ
(ಎಂ.ಬಿ.ಬಿ.ಎಸ್/ಬಿ.ಇ./ಬಿ.ಟೆಕ್ ಮತ್ತು ವೃತ್ತಿಪರ
ಕೋರ್ಸ್‌ಗಳನ್ನು ಹೊರತುಪಡಿಸಿ)
ರೂ 5000/-ವಿದ್ಯಾರ್ಥಿಗಳು
ರೂ.5500/-ವಿದ್ಯಾರ್ಥಿನಿಯರು - ಎಲ್.ಎಲ್.ಬಿ., ಪ್ಯಾರ ಮೆಡಿಕಲ್ / ಬಿ. ಫಾರ್ಮ್ /
ನರ್ಸಿಂಗ್ ಇತ್ಯಾದಿ, ವೃತ್ತಿಪರ ಕೋರ್ಸ್‌ಗಳು
ರೂ.7500/-ವಿದ್ಯಾರ್ಥಿಗಳು
ರೂ.8000/-ವಿದ್ಯಾರ್ಥಿನಿಯರು - ಎಂ.ಬಿ.ಎಸ್.) ಬಿ.ಇ/ಬಿಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್‌ಗಳು
ರೂ.10000/-ವಿದ್ಯಾರ್ಥಿಗಳು
11000/-ವಿದ್ಯಾರ್ಥಿನಿಯರು
ವಿಶೇಷ ಸೂಚನೆ : ಪುನರಾವರ್ತಿತ ವಿದ್ಯಾರ್ಥಿಗಳು (REPEATORS) ಅರ್ಹರಾಗಿರುವುದಿಲ್ಲ.