ರಾಜ್ಯಾಧ್ಯಕ್ಷರಿಂದ 7 ನೇ ವೇತನ ಆಯೋಗದ ಕುರಿತು ಅಧಿಕೃತ ಮಾಹಿತಿ

IMG 20221119 WA0040
WhatsApp Group Join Now
Telegram Group Join Now

ಮಾನ್ಯ ರಾಜ್ಯದ ಸರ್ಕಾರಿ ನೌಕರ ಬಾಂಧವರೇ

7ನೇ ವೇತನ ಆಯೋಗದ ಸಮಿತಿ ರಚನೆ ಹಾಗೂ ಮಾರ್ಗಸೂಚಿಗಳನ್ನು ಒಳಗೊಂಡ ಸಂಪೂರ್ಣ ಅಧಿಕೃತ ಆದೇಶವನ್ನು ಇಂದು ಸರ್ಕಾರವು ಹೊರಡಿಸಲಿದೆ

ಮಾನ್ಯ ಮುಖ್ಯಮಂತ್ರಿಗಳು ನಿನ್ನೆ ಅಧಿಕೃತವಾಗಿ ಕಡತದಲ್ಲಿ ಅನುಮೋದನೆಯನ್ನು ಮಾಡಿರುತ್ತಾರೆ. ಮುಖ್ಯಮಂತ್ರಿಗಳಿಗೆ ರಾಜ್ಯದ ನೌಕರರ ಪರವಾಗಿ ಧನ್ಯವಾದಗಳು

ಈ ಹಿಂದೆ ವೇತನ ಆಯೋಗದ ಸಮಿತಿ ರಚನೆ -ಅವರಿಗೆ ಕಚೇರಿ ಸಿಬ್ಬಂದಿ -ಅನುದಾನ ಹಾಗೂ ಮಾರ್ಗಸೂಚಿಗಳನ್ನೂಳಗೊಂಡ ಆದೇಶಗಳನ್ನು 3-4 ಹಂತಗಳಲ್ಲಿ 3 ತಿಂಗಳ ಅವಧಿಯಲ್ಲಿ ಹೊರಡಿಸಲಾಗುತ್ತಿತ್ತು

ಆದರೆ ಈ ಬಾರಿ ಈ ಎಲ್ಲಾ ಒಗ್ಗೂಡಿದ ಆದೇಶವನ್ನು ಒಂದೇ ಬಾರಿಗೆ ಹೊರಡಿಸಲು ಒಂದು ವಾರ ವಿಳಂಬವಾಗಿದೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಲಾಗುತ್ತಿದೆ

ಮಾರ್ಚ್ ಅಂತ್ಯದೊಳಗೆ ಏಳನೇ ವೇತನ ಆಯೋಗದ ಪರಿಷ್ಕೃತ ವೇತನದ ಸೌಲಭ್ಯವನ್ನು ನಾವೆಲ್ಲರೂ ಪಡೆಯೋಣ ಎಂದು ತಿಳಿಸುತ್ತಾ ಇಂದು ಸಂಜೆ ಆದೇಶವಾದ ನಂತರ ತಮಗೆ ಸಾಮಾಜಿಕ ಜಾಲತಾಣದಲ್ಲಿ ಆದೇಶವನ್ನು ಕಳಿಸಲಾಗುವುದು

ಸರ್ಕಾರಿ ನೌಕರ ಸಂಘದ ನಿರಂತರ ಪ್ರಯತ್ನದಿಂದ ಈ ಎಲ್ಲಾ ಕಾರ್ಯವು ತ್ವರಿತಗತಿಯಲ್ಲಿ ಆಗಿದೆ ಎಂಬ ಅಂಶವನ್ನು ತಮ್ಮಗಳ ಗಮನಕ್ಕೆ ತರುತ್ತ ..ಸಹಕಾರಕ್ಕಾಗಿ ತಮಗೆಲ್ಲರಿಗೂ ಧನ್ಯವಾದಗಳು.

 ಸಿ .ಎಸ್. ಷಡಕ್ಷರಿ. ರಾಜ್ಯಧ್ಯಕ್ಷರು
WhatsApp Group Join Now
Telegram Group Join Now
Sharing Is Caring:

Leave a Comment