ದಿನಾಂಕ: 01.07.2022 ರಿಂದ ದಿನಾಂಕ: 28.08.2022 ರವರೆಗೆ ಯೋಗಥಾನ್-2022 ರ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದ್ದು ಸದರಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ದಿನಾಂಕ: 28.08.2022 ರಂದು
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಯೋಗ ಪ್ರದರ್ಶನ ನೀಡುವ ಮೂಲಕ ವಿಶ್ವದಾಖಲೆಯನ್ನು ನಿರ್ಮಿಸುವ ಗುರಿ
ಹೊಂದಲಾಗಿದೆ
ಇದಕ್ಕಾಗಿ ಯೋಗ ತರಬೇತಿ ಹೊಂದಿರುವ ಮತ್ತು ಪ್ರಮಾಣ ಪತ್ರ ಇರುವ ಶಿಕ್ಷಕರು ಲಭ್ಯವಿಲ್ಲದ ಕಾರಣ
ಇವರುಗಳನ್ನು ನೋಂದಣಿ ಮಾಡಿಕೊಂಡು ಅವರಿಗೆ ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಪ್ ಯೋಗ,
ನವದೆಹಲಿ ಅವರು ಆನ್‌ಲೈನ್ ಮೂಲಕ 36 ಗಂಟೆಗಳ ತರಬೇತಿ ನೀಡಿ, ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ನೀಡಲಿದ್ದಾರೆ,ಯೋಗಾಭ್ಯಾಸಕ್ಕಾಗಿ ಯೋಗ ಪಟುಗಳು ಹಾಗೂ ಆಸಕ್ತ ಶಿಕ್ಷಕರುಗಳ ಹೆಸರನ್ನು ಆಯುಷ್ ಟಿವಿ ಪ್ರೈಲಿ ಬೆಂಗಳೂರು ಇವರು
ರಚಿಸಲಾಗಿರುವ ವೆಬ್‌ಸೈಟ್ ಮೂಲಕ ವೈಯಕ್ತಿಕವಾಗಿ ಹೆಸರು ನೋಂದಾಯಿಸಬೇಕಾಗಿದ್ದು, ಗುಂಪಾಗಿ ನೋಂದಣಿಯನ್ನು
ಶಾಲೆಗಳ ಶಿಕ್ಷಕರ ಮೂಲಕ ಮಾಡಬೇಕಾಗಿರುತ್ತದೆ ಎಂದು ತಿಳಿಸಿರುತ್ತಾರೆ.
ಪ್ರಸ್ತುತ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಸರ್ಕಾರಿ ಮತ್ತು ಅನುದಾನಿತ/ಅನುದಾನ ರಹಿತ
ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರುಗಳು ಯೋಗ ಪರಿಣಿತಿ ಹೊಂದಿದ್ದು, ಪ್ರಮಾಣ ಪತ್ರ ಹೊಂದಿರದ ವಿಷಯ ಶಿಕ್ಷಕರು ಇರುವ ಕಾರಣ ಅವರು ವೆಬ್‌ಸೈಟ್ ಮೂಲಕ ನೋಂದಾವಣೆ ಮಾಡಿಕೊಂಡು ಪ್ರಮಾಣ ಪತ್ರ ಪಡೆಯಲು ಹಾಗೂ ತಮ್ಮ ಶಾಲೆಯ ವಿದ್ಯಾರ್ಥಿಗಳು ಕೂಡ ನೋಂದಣಿ ಮಾಡಿಕೊಂಡು ವಿಶ್ವದಾಖಲೆ ನಿರ್ಮಿಸಲು ರಚಿಸಿರುವ ಪ್ರೋಟೋಕಾಲ್ ನಂತೆ ಅಭ್ಯಾಸ ನಡೆಸಿ, ಪ್ರತಿ ಭಾನುವಾರ ಒಟ್ಟಿಗೆ ಸೇರಿ ಸಮತೋಲನಗೊಳಿಸಿಕೊಂಡು ದಿನಾಂಕ: 28.08.2022 ರಂದು ವಿಶ್ವದಾಖಲೆ ನಿರ್ಮಿಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಇಲಾಖೆಯು ಆದೇಶಿಸಿರುತ್ತದೆ.
ರೆಫರಲ್ ಕೋಡ್ (ಐಚ್ಛಿಕ)/Referral code (optional):YG2022-112470