ಭಾರತ ಸರ್ಕಾರ ನವದೆಹಲಿ ರವರು THINQ-23-THE INDIAN NAVY QUIZ (AUG-NOV)2023 ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ
THINQ-23 ರಸಪ್ರಶ್ನೆ ಕಾರ್ಯಕ್ರಮವು ಆಗಸ್ಟ್ -2023 ರಿಂದ ನವೆಂಬರ್ 2023 ರವರೆಗೆ 2 ಹಂತದಲ್ಲಿನಡೆಸಲಾಗುತ್ತಿದ್ದು, ಯುವ ಶಾಲಾ ಮಕ್ಕಳಿಗೆ ಸ್ಪೂರ್ತಿ ನೀಡುವ ಗುರಿಯನ್ನು ಕಾರ್ಯಕ್ರಮವು ಹೊಂದಿದೆ. 75 ನೇಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಹಾಗೂ ಪ್ರಸಕ್ತ ಸಾಲಿನಲ್ಲಿ ಭಾರತವು ಪ್ರತಿಷ್ಠಿತ G20 ಅಧ್ಯಕ್ಷ ಸ್ಥಾನವನ್ನುವಹಿಸಿಕೊಂಡ ನೆನಪಿಗಾಗಿ ಭಾರತೀಯ ನೌಕಾಪಡೆಯ ವತಿಯಿಂದ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ರಾಷ್ಟ್ರ ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಈ ಸ್ಪರ್ಧೆಗಳುನಡೆಯಲ್ಲಿರುವುದರಿಂದ ಸ್ಪರ್ಧಿಗಳಿಗೆ ಹೆಚ್ಚಿನ ಅನುಭವ ದೊರೆಯಲಿದೆ ಹಾಗೂರಾಷ್ಟ್ರದ ನೌಕಾ ಪಡೆ ಮತ್ತು ರಕ್ಷಣಾಸೇವೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಲು ಈ ಕಾರ್ಯಕ್ರಮವು ಪ್ರೇರಣೆ ನೀಡಲಿದೆ.
ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವ ಶಾಲೆಗಳು ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಂಪೂರ್ಣವಿವರವನ್ನು ಈ ವೆಬ್ ಪೋರ್ಟಲ್ ನಿಂದ Www.theindiannavyquiz.in. ಪಡೆಯಬಹುದಾಗಿದೆ.ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾಗುವ ತಂಡಗಳಿಗೆ ಸೂಕ್ತ ಬಹುಮಾನದೊಂದಿಗೆ ಪ್ರಮಾಣ ಪತ್ರವನ್ನುವಿತರಿಸುವುದಾಗಿ ತಿಳಿಸಿರುತ್ತಾರೆ.ದಿನಾಂಕ: 08-06-2023 ರ ಪತ್ರವನ್ನು ಈ ಪತ್ರದೊಂದಿಗೆ ಅನುಬಂಧಿಸುತ್ತಾ, THINQ-23-THE INDIAN NAVY QUIZ – 2023 ರಸಪ್ರಶ್ನೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದಶಾಲೆಗಳು ತಮ್ಮ ಶಾಲಾ ವಿದ್ಯಾರ್ಥಿಗಳು ನೋಂದಾಯಿಸಿಕೊಂಡು ಭಾಗವಹಿಸುವಂತೆ ಅರಿವು ನೀಡಿ ಪ್ರೇರೇಪಿಸಲುಹಾಗೂ ಕಾರ್ಯಕ್ರಮದ ಪ್ರಯೋಜನ ಪಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಕೊನೆಯ ದಿನಾಂಕ : 31/07/2023