ದಕ್ಷಿಣ ಕನ್ನಡ ಜಿಲ್ಲೆ ತರಬೇತಿ ಬಹಿಷ್ಕರಿಸಿದ ಶಿಕ್ಷಕರು
Dp ಬದಲಿಸಿ,ಸ್ಟೇಟಸ್ ಹಾಕಿ ತರಬೇತಿ ಬಹಿಷ್ಕರಿಸಿ ಹೋರಾಟವನ್ನು ಗೆಲ್ಲಿಸಿ
ತರಬೇತಿ ಬಹಿಷ್ಕಾರ
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ( ರಿ) ಬೆಂಗಳೂರು ವತಿಯಿಂದ ಸೇವಾ ನಿರತ ಪದವೀಧರ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರೆ ಕೊಟ್ಟಿರುವ ತರಬೇತಿ ಬಹಿಷ್ಕಾರದ ಹೋರಾಟವನ್ನು ಬೆಂಬಲಿಸಿ,ಇಂದು ಡಯಟ್ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ EMTIP ತರಬೇತಿಯನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ( ರಿ) ಬೆಂಗಳೂರು ,ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಬಹಿಷ್ಕರಿಸಿ ತರಬೇತಿ ಬಹಿಷ್ಕಾರದ ಮನವಿಯನ್ನು ಉಪನಿರ್ದೇಶಕರ ಪರವಾಗಿ ಡಯಟ್ ಹಿರಿಯ ಉಪನ್ಯಾಸಕರಾದ ಶ್ರೀ ಜೇಮ್ಸ್ ಕುಟಿನ್ಹೋ ಇವರಿಗೆ ನೀಡಲಾಯಿತು,
ಜಿಲ್ಲಾ ಸಂಘದ ಅಧ್ಯಕ್ಷರಾದ ಶ್ರೀ ಶಿವಪ್ರಸಾದ್ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ವಿಮಲ್ ನೆಲ್ಯಾಡಿ,ಉಪಾಧ್ಯಕ್ಷರಾದ ಶ್ರೀ ನವೀನ್,ಶ್ರೀಮತಿ ವಾಣಿ,ಕೋಶಾಧಿಕಾರಿ ರಾಜೇಶ್ ನೆಲ್ಯಾಡಿ,ಮಂಗಳೂರು ದಕ್ಷಿಣದ ಅಧ್ಯಕ್ಷರಾದ ಶ್ರೀ ಜಗದೀಶ್,ಮಂಗಳೂರು ಉತ್ತರದ ಅಧ್ಯಕ್ಷರಾದ ಶ್ರೀ ಜಯರಾಂ,ಮೂಡಬಿದರೆ ತಾಲೂಕು ಸಂಘದ ಅಧ್ಯಕ್ಷರಾದ ಶ್ರೀ ನಾಗೇಶ್ ,ರಾಜ್ಯ ಸಂಘದ ನಾಮನಿರ್ದೇಶಿತ ಸಂಘಟನಾ ಕಾರ್ಯದರ್ಶಿ ಹೇಮಲತಾ ಪ್ರದೀಪ್,ಜಿಲ್ಲಾ ಸಂಘದ ಪ್ರತಿನಿಧಿ ಧನಲಕ್ಷ್ಮೀ ಸುಳ್ಯ,ಬಂಟ್ವಾಳ ನೌಕರ ಸಂಘದ ಕಾರ್ಯದರ್ಶಿ ಶ್ರೀ ಸಂತೋಷ್,ತಾಲೂಕು ಸಂಘದ ಪದಾಧಿಕಾರಿಗಳಾದ ಶ್ರೀಮತಿ ಇಂದ್ರಾವತಿ,ಬಂಟ್ವಾಳದ ಶ್ರೀಮತಿ ಹೇಮಾ,ಮಂಗಳೂರು ದಕ್ಷಿಣದ ಪ್ರತಿನಿಧಿ ಶ್ರೀಮತಿ ಪ್ಲೇವಿ , ಶ್ರೀ ಕರಿಬಸಪ್ಪ ಹಾಗೂ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು
ರಾಜ್ಯ ಸಂಘದ ಮುಂದಿನ ನಿರ್ದೇಶನದ ವರೆಗೆ ಜಿಲ್ಲೆಯಲ್ಲಿ ನಡೆಯಲಿರುವ ಎಲ್ಲಾ ತರಬೇತಿಗಳನ್ನು ಬಹಿಷ್ಕರಿಸಿ ರಾಜ್ಯ ಸಂಘ ಕರೆ ಕೊಟ್ಟಿರುವ ನಮ್ಮ ನ್ಯಾಯಯುತ ಹೋರಾಟಕ್ಕೆ ಕೈ ಜೋಡಿಸಲು ಈ ಮೂಲಕ ವಿನಂತಿ ಮಾಡಿಕೊಳ್ಳುತ್ತಿದ್ದೇವೆ
ಅಧ್ಯಕ್ಷರು/ ಕಾರ್ಯದರ್ಶಿ/ ಸರ್ವ ಪದಾಧಿಕಾರಿಗಳು
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ ಬೆಂಗಳೂರು
ದಕ್ಷಿಣ ಕನ್ನಡ ಜಿಲ್ಲೆ