ಪ್ರಾಥಮಿಕ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಕರು ದಯವಿಟ್ಟು ಮಾಹಿತಿ ನೀಡಿ | ರಾಜ್ಯ ಸರಕಾರಿ ನೌಕರ ಸಂಘದಿಂದ ಮಾಹಿತಿ ಕೇಳಿದ್ದಾರೆ

ಪ್ರಾಥಮಿಕ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಕರು ದಯವಿಟ್ಟು ಮಾಹಿತಿ ನೀಡಿ.

ರಾಜ್ಯ ಸರಕಾರಿ ನೌಕರ ಸಂಘದಿಂದ ಮಾಹಿತಿ ಕೇಳಿದ್ದಾರೆ.

ಕೊನೆಯ ದಿನಾಂಕ 05/11/21

IMG 20211030 WA0015 min
WhatsApp Group Join Now
Telegram Group Join Now
Sharing Is Caring:

11 thoughts on “ಪ್ರಾಥಮಿಕ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಕರು ದಯವಿಟ್ಟು ಮಾಹಿತಿ ನೀಡಿ | ರಾಜ್ಯ ಸರಕಾರಿ ನೌಕರ ಸಂಘದಿಂದ ಮಾಹಿತಿ ಕೇಳಿದ್ದಾರೆ”

 1. ಹೆಸರು : ವೇದಾವತಿ ಭಟ್,
  ಹು. ದಿ :04/08/67
  ಸೇವೆಗೆ ಸೇರಿದ ದಿನಾಂಕ :25/07/94
  ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ.
  ಬಡ್ತಿ ದಿನಾಂಕ:- 09/07/2008.
  ಜುಲೈ 2021 ಕ್ಕೆ 27 ವರ್ಷಗಳ ಸೇವೆ ಮುಗಿದಿದೆ. 10ವರ್ಷಗಳ ಕಾಲಮಿತಿ (Time bond) ಅಷ್ಟೇ ತೆಗೆದುಕೊಂಡಿರುತ್ತೇನೆ. 15,20,25 ವರ್ಷ ಗಳ time bond ತೆಗೆದುಕೊಂಡಿರುವುದಿಲ್ಲ. ಇಷ್ಟೇ ಸೇವೆ ಸಲ್ಲಿಸಿರುವ ಪ್ರಾಥಮಿಕ ಶಾಲಾ ಶಿಕ್ಷಕರು ನನಗಿಂತಲೂ ಹೆಚ್ಚಿನ ವೇತನ ಪಡೆಯುತ್ತಿದ್ದಾರೆ. ಅಲ್ಲದೇ ಕಡ್ಡಾಯ ವರ್ಗಾವಣೆ ಸಂದರ್ಭ ದಲ್ಲಿ ಮಾತ್ರ ಸೇವೆಗೆ ಸೇರಿದ ದಿನಾಂಕ ಪರಿಗಣನೆ ಎಂದು ಹೇಳಿದ್ದಾರೆ. ನ್ಯಾಯ ಎಲ್ಲಿದೆ?

  Reply
   • ಕರಿಯಪ್ಪ. ಎ. ಕೆ. ಸಹಶಕ್ಷಕರು. ಸ. ಕಿ. ಪ್ರಾ. ಶಾಲೆ. ಉಣ್ಣಾಲು. ಕೊಯ್ಯುರು. (ಪೋಸ್ಟ್ ). ಬೆಳ್ತಂಗಡಿ (ತಾಲೂಕು ). ದಕ್ಷಿಣಕನ್ನಡ (ಜಿಲ್ಲೆ ). ಪಿನ್.574214. 2007-08.ಏಜ್ ಅಂಡ್ ಮೆರಿಟ್ ಬ್ಯಾಚ್. ನಾನು ಜಾಯಿನ್ ಅದ ದಿನಾಂಕ .21/08/2008. ಆದರೆ. 30/07/2008. ಕ್ಕೆ. ಜಾಯಿನ್ ಆದವರಿಗೆ . ಪ್ರೆಸೆಂಟ್ ಬೇಸಿಕ್.31150. ಈಗ ನನ್ನ ಬೇಸಿಕ್.33450. ವ್ಯತ್ಯಾಸ.2 ಇಂಕ್ರೆಮೆಂಟ್. ಜೂಲೈ 2021. ಕ್ಕೆ. ಟೋಟಲ್ ವ್ಯತ್ಯಾಸ. 2201. Rs. ಒಂದೆ ದಿನ cet ಬರೆದು ಒಂದೇ ದಿನ ಕೌಂನ್ಸೆಲ್ಲಿಂಗ್ ಆಗಿ. ಜಾಯಿನ್ ಆಗುವಾಗ ಗ್ರೂಪಿನವರಿಗೆ ಸಿಂಧುತ್ವ ತರುವಾಗ ಲೇಟ್ ಆಗಿ ಜಾಯಿನ್ ಆಗಿದ್ದೇವೆ. ಆದರೆ ನಮಗೆ ಯಾಕೆ ಈ ವೇತನ ವ್ಯತ್ಯಾಸ.

    Reply
    • ಮೊದಲ ಮೆಸ್ಸೇಜ್ ನಲ್ಲಿ.30/07/2008. ಜಾಯಿನ್ ಆದವರಿಗೆ ಪ್ರೆಸೆಂಟ್ ಬೇಸಿಕ್.35150. ಆಗಬೇಕು.

     Reply
 2. ಮಾನ್ಯರೆ.ಈ ಕೆಳಗೆ ಇರುವ ನನ್ನ ಮಾಹಿತಿಯನ್ನು ತಮ್ಮ ಗಮನಕ್ಕೆ ತರುತ್ತೇನೆ. ದೊಡ್ಡವೀರಪ್ಪ ವಿ ಗೌಡಪ್ಪನವರ ಸಹ ಶಿಕ್ಷಕರು KHPS.no 4ಸಂಪಗಾವಿ.ತಾ,ಬೈಲಹೊಂಗಲ.ಜಿ ಬೆಳಗಾವಿ. KGID no 1758489 ಇದ್ದು.ನಾನು 1998 ರ ಕೃಪಾಂಕ ಸಹಿತ ಸಿಲೆಕ್ಷನ್ ಲಿಸ್ಟಿನಲ್ಲಿದ್ದು ನಂತರ ಅಡಿಸನಲ್ ಲೀಸ್ಟ್ನಲ್ಲಿ 14.01.1999 ರಲ್ಲಿ ಆದೇಶ ನೀಡಿದರು.ಸರ್ 1998 ಆಗಸ್ಟ್ ನಲ್ಲಿ ಆದೇಶ್ ಪಡೆದವರಿಗೆ ಮೂಲ ವೇತನ 43100 ಇದೆ.ಈಗ ನನ್ನ ಮೂಲ ವೇತನ 36950.ಇದೆ.ಈಗ ಅವರಿಗೂ ಮತ್ತು ನಮಗೂ 6150 ರು ಗಳು ವ್ಯತ್ಯಾಸ ಇದೆ ನಮ್ಮನ್ನು ಗ್ರಾಮೀಣ ಕೃಪಾಂಕ ದಿಂದ ತಗೆದ ನಂತರ ಆದೇಶ್ ನೀಡಿದಮೇಲೆ ಮೂಲ ವೇತನ ದಲ್ಲಿ 6160 ರೂಪಾಯಿ ವ್ಯತ್ಯಾಸವಿದೆ. ಸರ್ ಅದನ್ನು ಸರಿಪಡಿಸಿ ಕೊಡಿ ಎಂದು ತಮ್ಮಲ್ಲಿ ವಿನಂತಿಸುವೆ.

  Reply
 3. ಮಾನ್ಯ ಅಧ್ಯಕ್ಷರೇ ನನ್ನ ವಿನಂತಿ ಏನೆಂದರೆ
  1997 ರಲ್ಲಿ ನೇಮಕಾತಿ ಹೊಂದಿದ್ದವರಿಗೂ 1998 ರಲ್ಲಿ ನೇಮಕವಾದವರಿಗೂ 3 ವೇತನ ಬಡ್ತಿ ವ್ಯತ್ಯಾಸ ಇದೆ . 1997 ಮತ್ತು1998 ರ ನೇಮಕಾತಿ ಅದರರಲ್ಲಿ ಒ೦ದು ವೇತನ ಬಡ್ತಿ
  ಬದಲು ಮೂರು ವೇತನ ಬಡ್ತಿ ಮಾಡಿದ್ದಾರೆ
  ಫಿಟ್ ಮೆಂಟ್ ಮಾಡುವಾಗ ಯಾವ ನಿಯಮದ ಪ್ರಕಾರ ಮೂರು ವೇತನ ಬಡ್ತಿ ನೀಡಿ 1998 ನೇಮಕಗೊಂಡ ನೌಕರರ ನಡುವೆ ಇರುವ ವ್ಯತ್ಯಾಸ ಸರಿಪಡಿಸಲು ವಿನಂತಿ
  ============================
  1997 ಮೂಲ ವೇತನ 46400 ಇದೆ
  1998 ಮೂಲ ವೇತನ 43100 ಈ ವ್ಯತ್ಯಾಸ ಗಮನಿಸಿ ರಾಜ್ಯದ ಎಲ್ಲಾ ಶಿಕ್ಷಕರಿಗೆ ಸರಿದೂಗಿಸಿ ಕೊಡಬೇಕೆಂದು ತಮ್ಮಲ್ಲಿ ಮತ್ತೊಮ್ಮೆ ವಿನಂತಿಸುತ್ತೇನೆ

  Reply
 4. ಮಾನ್ಯರೆ

  ವಿಷಯ: ಪ್ರಾಥಮಿಕ ಶಾಲಾ ಶಿಕ್ಷಕರ ಮೂಲ ವೇತನವನ್ನು ಸರಿಪಡಿಸುವ ಬಗ್ಗೆ

  ಉಲ್ಲೇಖಗಳು :1) ಸರ್ಕಾರದ ಆದೇಶ ಸಂಖ್ಯೆ ಇಡಿ 195 ಪಿಬಿಎಸ್ 2006 ದಿನಾಂಕ 31 8 2007 ಮತ್ತು 3 9 2007

  2) ಜಿಲ್ಲಾ ಉಪನಿರ್ದೇಶಕರು ಆಡಳಿತ ಹಾಗೂ ನೇಮಕಾತಿ ಪ್ರಾಧಿಕಾರ ಸಾ,ಶಿ ಇಲಾಖೆ ಮಂಗಳೂರು ಇವರ ಅಧಿಸೂಚನೆ ಸಂಖ್ಯೆ ಸಿ3(1):ಪ್ರಾ,ಶಾ,ಶಿ,ವಿ,ನೇ/2007.08 ದಿನಾಂಕ 20 12 2007
  3) ಸರ್ಕಾರಿ ಆದೇಶ ಸಂಖ್ಯೆ ಎಫ್.ಡಿ 31 ಎಸ್. ಆರ್. ಪಿ 2007 ಬೆಂಗಳೂರು 28 ನೇ ಆಗಸ್ಟ್ 2008

  ಮೇಲ್ಕಂಡ ಉಲ್ಲೇಖ 1 ಮತ್ತು2 ರ ನೇಮಕಾತಿ ಆದೇಶದಡಿಯಲ್ಲಿ ನಾವು (Age cum merit batch)ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಯನ್ನು ಹೊಂದಿದ್ದು ಆಗಸ್ಟ್-ಸೆಪ್ಟೆಂಬರ್ 2008ರಲ್ಲಿ ಹಾಜರಾಗಿರುತ್ತೇವೆ. ಪ್ರಸ್ತುತ ನಮ್ಮ ಮೂಲ ವೇತನ ₹ 33450 ಇದೆ. ಆದರೆ ಜುಲೈ 2008 ರಲ್ಲಿ ಹಾಜರಾದವರ ಮೂಲ ವೇತನ ₹35150 ಇದೆ. ವ್ಯತ್ಯಾಸ ₹1700 ಇದೆ.

  ದಿನಾಂಕ 15 3 2008ರಂದು ಒಂದೇ ದಿನ ಪರೀಕ್ಷೆ ಬರೆದು ಒಂದೇ ಬಾರಿ ನೇಮಕಾತಿಯಾಗಿ ದಿನಾಂಕ 2 7 2008ರಂದು ಒಂದೇ ದಿನ ಕೌನ್ಸಲಿಂಗ್ ಆಗಿ ಸ್ಥಳ ಆಯ್ಕೆ ಮಾಡಿಕೊಂಡು ಒಂದೇ ವಿಧದ ಶಾಲೆಗಳಲ್ಲಿ, PST ವೃಂದದಲ್ಲಿ ಕರ್ತವ್ಯ ಮಾಡುತ್ತಿದ್ದೇವೆ.

  ಆರನೇ ವೇತನ ಆಯೋಗ ಜಾರಿಯಾಗುವುದದಕ್ಕಿಂತ ಮೊದಲು ನಮ್ಮ ಮೂಲ ವೇತನದಲ್ಲಿ ಯಾವುದೇ ತಾರತಮ್ಯ ಇರಲಿಲ್ಲ ಆದರೆ ವಿಶೇಷ ಭತ್ತೆ ಗೊಂದಲದಿಂದ ಜುಲೈ 2018 ಆರನೇ ವೇತನ ಆಯೋಗದಲ್ಲಿ ಎರಡು ರೀತಿಯ ಮೂಲವೇತನ ಮಾಡಿರುವುದರಿಂದ
  ತಾರತಮ್ಯ ಉಂಟಾಗಿದೆ.

  ದಿನಾಂಕ 15 3 2008ರಂದು ಒಂದೇ ದಿನ ಪರೀಕ್ಷೆ ಬರೆದು ಒಂದೇ ಬಾರಿ ನೇಮಕಾತಿಗಯಾಗಿ ದಿನಾಂಕ 2 7 2008 ರಂದು ಒಂದೇ ದಿನ ಕೌನ್ಸಲಿಂಗ್ ಆಗಿ ಸ್ಥಳ ಆಯ್ಕೆ ಮಾಡಿಕೊಂಡು ಒಂದೇ ವಿಧದ ಶಾಲೆಗಳಲ್ಲಿ ಒಂದೇ PST ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಜನರಲ್ ಮೆರಿಟ್ ನಲ್ಲಿ ಆಯ್ಕೆಯಾದವರು ಜುಲೈ 2008ರಲ್ಲಿ ಸೇರ್ಪಡೆಗೊಂಡು ₹35150 ಮೂಲ ವೇತನ ಪಡೆಯುತಿದ್ದಾರೆ.ನಾವು
  ಮೀಸಲಾತಿಯಲ್ಲಿ ಆಯ್ಕೆಯಾಗಿರುವುದರಿಂದ ಸರ್ಕಾರದ ವಿವಿಧ ಶಾಲೆಗಳಿಂದ ಹಾಗೂ ವಿವಿಧ ಆಫೀಸು ಗಳಿಂದ ಸಿಂಧುತ್ವ ಪ್ರಮಾಣ ಪತ್ರಗಳ ಅವಶ್ಯಕತೆ ಇರುತ್ತದೆ ಸಿಂಧುತ್ವ ಪ್ರಮಾಣ ಪತ್ರಗಳನ್ನು ಒದಗಿಸಿ 2008ರ ಆಗಸ್ಟ್ ಸೆಪ್ಟೆಂಬರ್ ತಿಂಗಳೊಳಗೆ ಸೇರಿಕೊಂಡು ₹33450 ಮೂಲ ವೇತನ ಪಡೆಯುತಿದ್ದೇವೆ.

  ಜನರಲ್ ಮೆರಿಟ್ ನಲ್ಲಿ ಆಯ್ಕೆಯಾದವರಿಗೆ ಮೂಲವೇತನ ಬೇರೆ ಮೀಸಲಾತಿಯಲ್ಲಿ ಆಯ್ಕೆಯಾದವರಿಗೆ ಮೂಲವೇತನ ಬೇರೆ ಯಾಗಿರುತ್ತದೆ ಒಂದೇ ನೇಮಕಾತಿಯಲ್ಲಿ ಸೇರ್ಪಡೆ ಆದವರಿಗೆ ಒಂದೇ ವೇತನ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ತತ್ವದಡಿಯಲ್ಲಿ ಮೂಲವೇತನ ಸರಿಪಡಿಸಿ ಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

  @ ನಾವು 29 ವರ್ಷ ವಯೋಮಿತಿ ಮೀರಿ ಆಯ್ಕೆಯಾಗಿರುವುದರಿಂದ ಸೇವಾವಧಿಯ ಕೇವಲ 20 ರಿಂದ 29 ವರ್ಷಗಳು ಮಾತ್ರ ಸಿಗುತ್ತದೆ.

  @ ಎನ್ಪಿಎಸ್ ಎಂಬ ಅನಿಶ್ಚಿತ ಪಿಂಚಣಿ ವ್ಯವಸ್ಥೆಯ ಇದ್ದೇವೆ.

  @ ಮೂಲವೇತನ ಕಡಿಮೆ ಇರುವುದರಿಂದ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದೇವೆ.

  @ ದಿನಾಂಕ 1 8 2008ರ ನಂತರ ಹಾಜರಾಗಿದ್ದರು ಚಿಕ್ಕಬಳ್ಳಾಪುರ ರಾಯಚೂರು ಧಾರವಾಡ ಚಿತ್ರದುರ್ಗ ಚಾಮರಾಜನಗರ ಜಿಲ್ಲೆಗಳ ಕೆಲವು ತಾಲೂಕುಗಳಲ್ಲಿ ನಮಗಿಂತ ಹೆಚ್ಚಿನ ಮೂಲವನ್ನು ನೀಡುತ್ತಿರುವುದಾಗಿ ತಿಳಿದುಬಂದಿದೆ.

  ಆದ್ದರಿಂದ ತಾವು ದಯಮಾಡಿ ಮತ್ತೊಮ್ಮೆ ಪರಿಶೀಲಿಸಿ ನಮಗೆ ಮೂಲ ವೇತನವನ್ನು ಸರಿಪಡಿಸಿ ಕೊಡಬೇಕೆಂದು ತಮ್ಮಲ್ಲಿ ಸವಿನಯದಿಂದ ವಿನಂತಿಸಿಕೊಳ್ಳುತ್ತೇವೆ.

  ವಂದನೆಗಳೊಂದಿಗೆ

  ತಮ್ಮ ವಿಶ್ವಾಸಿಗಳು
  1 8 2008ರ ನಂತರ ಹಾಜರಾಗಿರುವ ಏಜ್ ಕಮ್ ಮೆರಿಟ್ ಬ್ಯಾಚಿನ ಶಿಕ್ಷಕರು

  Reply
  • ವಿಷಯ: ಏಜ್ ಕಮ್ ಮೆರಿಟ್ ಬ್ಯಾಚ್ 2008 ರ ಪ್ರಾಥಮಿಕ ಶಾಲಾ ಶಿಕ್ಷಕರ ಮೂಲವೇತನ ತಾರತಮ್ಯ ಸರಿಪಡಿಸುವ ಬಗ್ಗೆ .

   Reply

Leave a Comment