ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಣಿ,ಬಂಟ್ವಾಳ ತಾಲೂಕು ಇಲ್ಲಿಯ ಶಿಕ್ಷಕಿ ಶ್ರೀಮತಿ ಎಮರಿಟ ಉಷಾ ಪಾಯಸ್ ಕೊರೋನ ಗೆ ಬಲಿ.

ಮೃತರ ಆತ್ಮಕ್ಕೆ ಶಾಂತಿ ಸಿಗಲಿ.

ಓಂಶಾಂತಿ…

ನಮ್ಮೆಲ್ಲರ ಆತ್ಮೀಯರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಣಿ , ಬಂಟ್ವಾಳ ಇಲ್ಲಿನ ಶಿಕ್ಷಕಿಯಾಗಿರುವ ಶ್ರೀಮತಿ ಎಮೆರಿಟ ಉಷಾ ಪಾಯಸ್(43 ವರ್ಷ) ಇವರು ಕೊರೋನಾ ಪಾಸಿಟಿವ್ ಆಗಿ ನಮ್ಮೆಲ್ಲರನ್ನು ಆಗಲಿರುತ್ತಾರೆ. ಇವರ ನಿಧನಕ್ಕೆ ಜಿಲ್ಲೆಯ ಎಲ್ಲಾ ಶಿಕ್ಷಕರ ಪರವಾಗಿ ಇಲಾಖಾಧಿಕಾರಿಗಳ ಪರವಾಗಿ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇವೆ.ಬಂಟ್ವಾಳ ತಾಲೂಕಿನ ಒಬ್ಬ ದಕ್ಷ ಶಿಕ್ಷಕಿಯನ್ನು ನಾವೆಲ್ಲರೂ ಕಳೆದುಕೊಂಡಿದ್ದೇವೆ. ಮೃತರು ಬಂಟ್ವಾಳ ತಾಲೂಕಿನ ಸೂರಿಕುಮೇರು ನಿವಾಸಿಯಾಗಿದ್ದು, ಪತಿ ಮತ್ತು ಇಬ್ಬರು ಮಕ್ಕಳನ್ನು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂಬುದಾಗಿ ಈ ಮೂಲಕ ಪ್ರಾರ್ಥಿಸುತ್ತಿದ್ದೇವೆ.

IMG 20210519 WA0023 min
Sharing Is Caring:

Leave a Comment