2023-24ನೇ ಸಾಲಿನಲ್ಲಿ ವಿವಿಧ ಕೋರ್ಸುಗಳಲ್ಲಿ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಸೇವಾ ಸಿಂಧು ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸುವ ಕೊನೆಯ
ದಿನಾಂಕ:20.12.2023 ನಿಗದಿಪಡಿಸಲಾಗಿರುತ್ತದೆ.
ಸಾರ್ವಜನಿಕರು ಹಾಗೂ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ
ದಿನಾಂಕವನ್ನು ವಿಸ್ತರಿಸುವಂತೆ ಮನವಿ ಸಲ್ಲಿಸುತ್ತಿರುವುದರಿಂದ ಸದರಿ ಯೋಜನೆಗಳಿಗೆ
ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಈ ಕೆಳಕಂಡಂತೆ ವಿಸ್ತರಿಸಲಾಗಿದ್ದು, ಸದರಿ
ಯೋಜನೆಗಳಿಗೆ ವ್ಯಾಪಕ ಪ್ರ ಚಾರವನ್ನು ನೀಡಿ ಹೆಚ್ಚಿನ ಅರ್ಜಿಗಳು ಸ್ವೀಕೃತವಾಗುವಂತೆ ಕ್ರಮವಹಿಸಲು ಸೂಚಿಸಿದೆ.
ಯೋಜನೆಯ ಹೆಸರು
1.ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿವೇತನ
2.ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ (1 ರಿಂದ 8ನೇ
ತರಗತಿ ವಿದ್ಯಾರ್ಥಿಗಳಿಗೆ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. 31.12.2023
ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್, ಪಾರ್ಸಿ
ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯ, ಅಲ್ಪಸಂಖ್ಯಾತರ
ಕಲ್ಯಾಣ ಇಲಾಖೆಯು 2023-24ನೇ ಸಾಲಿಗೆ 1ನೇ ತರಗತಿಯಿಂದ
8ನೇ ತರಗತಿಯಲ್ಲಿ ವ್ಯಾಸಂಗ
ಮಾಡುತ್ತಿರುವ ಅರ್ಹ ಅಲ್ಪಸಂಖ್ಯಾತ
ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ನೀಡಲು
ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಆನ್ ಲೈನ್ ಅರ್ಜಿಗಾಗಿ ಈ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿ
https://ssp.karnataka.gov.in (ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್
SSP) ಮೇಲಿನ ಜಾಲತಾಣದ ಸಂಪರ್ಕಕೊಂಡಿಯು ಈ ಕೆಳಗಿನ
ಜಾಲತಾಣಗಳಲ್ಲಿಯೂ ಲಭ್ಯವಿರುತ್ತದೆ: https://dom.karnataka.gov.in
(ಅಲ್ಪಸಂಖ್ಯಾತರ ನಿರ್ದೇಶನಾಲಯ, ಕರ್ನಾಟಕ ಸರ್ಕಾರ)
ಹೊಸ ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಕೆ : ಮೆಟ್ರಿಕ್ ಪೂರ್ವ
ವಿದ್ಯಾರ್ಥಿವೇತನ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ : 30.11.2023
ಅರ್ಹತೆಗಳು
*. ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್, ಪಾರ್ಸಿ ಜನಾಂಗಕ್ಕೆ ಸೇರಿದವರಾಗಿರಬೇಕು
- ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
- ಹಿಂದಿನ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಟ 50% ಅಂಕಗಳನ್ನು
ಪಡೆದಿರಬೇಕು. - ಎಲ್ಲಾ ಮೂಲಗಳಿಂದ ವಿದ್ಯಾರ್ಥಿಯ/ ಪಾಲಕರ/ಪೋಷಕರ ವಾರ್ಷಿಕ
ಆದಾಯವು ರೂ. 1.00 ಲಕ್ಷಗಳನ್ನು ಮೀರಬಾರದು.
*1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಹೊಸ
ವಿದ್ಯಾರ್ಥಿಗಳೆಂದು ಪರಿಗಣಿಸಲಾಗುವುದು.
ಅರ್ಜಿಗಳನ್ನು ಸಲ್ಲಿಸುವ ವಿಧಾನ ಮತ್ತು ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ
ನಿರ್ದೇಶನಾಲಯದ ಅಧಿಕೃತ ವೆಬ್‌ಸೈಟ್ https://dom.karnataka.gov.in ಅನ್ನು
ವೀಕ್ಷಿಸಿ, ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಲ್ಪಸಂಖ್ಯಾತರ ಮಾಹಿತಿ
ಕೇಂದ್ರಗಳನ್ನು (MIC) ಸಂಪರ್ಕಿಸಿ.