ರಾಜ್ಯ ಸರ್ಕಾರಿ ನೌಕರರ 2023-24ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ
ಸ್ಪರ್ಧೆಗಳನ್ನು ಆಯೋಜಿಸಲು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸುತ್ತೋಲೆ ಹೊರಡಿಸಿದ್ದು,
ಅದರಂತೆ ಕೆಲವು ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದು, ಇನ್ನೂ
ಕೆಲವು ಜಿಲ್ಲೆಗಳಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಬೇಕಾಗಿದ್ದು, ಈ ಕೆಳಕಂಡ ಅಂಶಗಳ ಬಗ್ಗೆ ಗಮನಹರಿಸಿ
ಕಾರ್ಯಪ್ರವೃತ್ತರಾಗಲು ಸೂಚಿಸಿದೆ.
- ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈವರೆಗೆ ಜಿಲ್ಲಾ ಮಟ್ಟದ
ಕ್ರೀಡಾಕೂಟಗಳನ್ನು ಆಯೋಜಿಸದೇ ಇರುವಂತಹ ಜಿಲ್ಲೆಗಳು ದಿನಾಂಕ: 13-03-2024ರೊಳಗಾಗಿ
ಜಿಲ್ಲಾ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸುವುದು. - ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳ ಮಾಹಿತಿಯನ್ನು ತಮ್ಮ ಜಿಲ್ಲೆಯ
ಯುವಬಸಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೆಶಕರ ಮುಖಾಂತರ ಆಯುಕ್ತರ
ಕಛೇರಿಗೆ ಕಳುಹಿಸಲು ಕ್ರಮವಹಿಸುವುದು. - ರಾಜ್ಯ ಸಂಘವು ಬಿಡುಗಡೆ ಮಾಡಿರುವ Online link https://bit.ly/ksgeasls2024 ರಲ್ಲಿ
ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳು ಹೆಸರನ್ನು
ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ತಿಳಿಸುವುದು. - ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳ ಟ್ರಾಕ್‌ಸೂಟ್ ಅಳತೆ ಸೇರಿದಂತೆ Online link
ನಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಪೂರ್ಣವಾಗಿ ಭರ್ತಿಮಾಡುವುದು. - Onlineನಲ್ಲಿ ನೋಂದಣಿ ಮಾಡಿಕೊಳ್ಳುವ ಕ್ರೀಡಾಪಟುಗಳಿಗೆ ಮಾತ್ರ ರಾಜ್ಯ ಮಟ್ಟದ
ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು.