ತಾಲೂಕು ವ್ಯಾಪ್ತಿಯ ಎಲ್ಲಾ ಸರಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಗಮನಕ್ಕೆ:
2023-24 ನೇ ಸಾಲಿನ ಪಠ್ಯಪುಸ್ತಕಗಳನ್ನು ಈಗಾಗಲೇ ಮಕ್ಕಳಿಗೆ ವಿತರಣೆ ಮಾಡಿದ್ದು, ಇದನ್ನು SATS ತಂತ್ರಾಂಶದಲ್ಲಿ Distribution to Student ಈ ಪ್ರಕ್ರಿಯೆಯನ್ನು ತಕ್ಷಣ ಮಾಡಿ ಮುಗಿಸಬೇಕಾಗಿದೆ.
SATS ನಲ್ಲಿ textbook distribution ಮಾಡುವ ವಿಧಾನ:
👉SATS ನಲ್ಲಿ Textbook distribution ಮಾಡಬೇಕಿದ್ರೆ ನಾವು ಕೊಟ್ಟ Textbook DC receive ಮಾಡಿ final submit ಕೊಟ್ಟಿರಬೇಕು ಮತ್ತು SATS ನಲ್ಲಿ ಪ್ರತೀ class ನ ಮಕ್ಕಳ promotion & admission ಆಗಿರಬೇಕು.
ಹಂತಗಳು:
👉Textbook management ➡️Textbook distribution ➡️Textbook distribution to student
👉ಎರಡು ಮಾಧ್ಯಮ ಇರುವ ಶಾಲೆಯವರು ಒಮ್ಮೆ Kannada ಮತ್ತೆ English ಆಯ್ಕೆ ಮಾಡಿ distribution ಮಾಡಬೇಕು..👉Class ಆಯ್ಕೆ ಮಾಡಿದಾಗ ಆ ತರಗತಿಯ ಎಲ್ಲಾ titles ಕಾಣಿಸಿಕೊಳ್ತದೆ. 10 ಕ್ಕಿಂತ ಹೆಚ್ಚು titles ಇದ್ದ ಪಕ್ಷದಲ್ಲಿ (ವಿಶೇಷವಾಗಿ English medium ನವರು) ಬದಿಯಲ್ಲಿ ಇರುವ show entries ನಲ್ಲಿ 25 ಅಂತ select ಮಾಡಿ
👉ಆ ತರಗತಿಯ ಎಲ್ಲಾ titles display ಆದ ಮೇಲೆ ಬಲ ಮೂಲೆಯಲ್ಲಿರುವ select all ಗೆ right mark ಹಾಕಿ search ಕೊಡಿ. ಈಗ ಆ ತರಗತಿಯ ಎಲ್ಲಾ ಮಕ್ಕಳ ಹೆಸರು ಕಾಣಿಸುತ್ತದೆ. ಮತ್ತೊಮ್ಮೆ ಬಲಬದಿಯಲ್ಲಿರುವ select all ಗೆ right mark ಹಾಕಿ submit ಕೊಟ್ಟರೆ ಆ ತರಗತಿಯ ಎಲ್ಲಾ ಮಕ್ಕಳಿಗೆ at a time ಎಲ್ಲಾ titles distribute ಆಗ್ತದೆ.
👉RTE ಮಕ್ಕಳು ಇರುವ Unaided ಶಾಲೆಯವರು distribution ಮಾಡುವಾಗ RTE ಮಕ್ಕಳು ಇರುವ ತರಗತಿಯಲ್ಲಿ ಅವರ ಹೆಸರಿನ ಎದುರು by default RTE ಅನ್ನುವ button ಇರುತ್ತದೆ. ನೀವೂ select all ಕೊಟ್ರೆ sale ಮತ್ತು RTE at a time distribute ಆಗ್ತದೆ