---Advertisement---

ಬ್ರೇಕಿಂಗ್ ನ್ಯೂಸ್: ರಾಜ್ಯದ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ 2500 ಮಾಹಿತಿ ತಂತ್ರಜ್ಞಾನ (IT) ಶಿಕ್ಷಕರ ಹುದ್ದೆಗಳ ಸೃಜನೆಗೆ ಸರ್ಕಾರಿ ಆದೇಶ

By kspstadk.com

Published On:

Follow Us
IT Teacher Posts in Karnataka
---Advertisement---
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದ ಶಾಲಾ ಶಿಕ್ಷಣ ಇಲಾಖೆಯ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ (KPS) ಗುಣಮಟ್ಟದ ಐಟಿ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಶಾಲಾ ಶಿಕ್ಷಣ ಇಲಾಖೆಯಡಿ ಖಾಲಿ ಇದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳನ್ನು ಮರು ಹೊಂದಾಣಿಕೆ (Rationalisation) ಮಾಡಿ, ಹೊಸದಾಗಿ 2,500 ಮಾಹಿತಿ ತಂತ್ರಜ್ಞಾನ (IT) ಶಿಕ್ಷಕರ ಹುದ್ದೆಗಳನ್ನು ಸೃಜಿಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಜೂನ್ 08, 2026 ರಂದು ಹೊರಡಿಸಲಾದ ಸರ್ಕಾರಿ ಆದೇಶದ (ಆದೇಶ ಸಂಖ್ಯೆ: ಇಪಿ 50 ಡಿಪಿಐ 2026) ಪ್ರಮುಖ ವಿವರಗಳು ಈ ಕೆಳಗಿನಂತಿವೆ:

ಮುಖ್ಯಾಂಶಗಳು:

  • ಹುದ್ದೆಗಳ ಪರಿವರ್ತನೆ: ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮರು ಹಂಚಿಕೆಯ ನಂತರ ಉಳಿದಿದ್ದ ಒಟ್ಟು 6,117 ಪ್ರಾಥಮಿಕ ಶಾಲಾ ಶಿಕ್ಷಕರ (PST) ಹುದ್ದೆಗಳ ಪೈಕಿ 2,500 ಹುದ್ದೆಗಳನ್ನು ಈಗ ‘ಮಾಹಿತಿ ತಂತ್ರಜ್ಞಾನ ಶಿಕ್ಷಕರ’ ಹುದ್ದೆಗಳನ್ನಾಗಿ ಪರಿವರ್ತಿಸಲಾಗಿದೆ.
  • ವೇತನ ಶ್ರೇಣಿ: ಈ ನೂತನ ಐಟಿ ಶಿಕ್ಷಕರ ಹುದ್ದೆಗಳಿಗೆ ರೂ. 44,425 – 83,700 ರ ಭರ್ಜರಿ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.
  • ಪ್ರತ್ಯೇಕ ನಿಯಮಾವಳಿ: ಮಾಹಿತಿ ತಂತ್ರಜ್ಞಾನ ಶಿಕ್ಷಕರ ವೃಂದಕ್ಕೆ ಪ್ರತ್ಯೇಕವಾಗಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು (C&R Rules) ಶೀಘ್ರದಲ್ಲೇ ರಚಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಇಲಾಖೆಗಳ ಸಹಮತಿ: ಈ ಆದೇಶವನ್ನು ಕಾನೂನು ಇಲಾಖೆ (14.05.2026), ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (20.05.2026) ಹಾಗೂ ಆರ್ಥಿಕ ಇಲಾಖೆಯ (06.06.2026) ಸಹಮತಿಯನ್ವಯ ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅವರು ಹೊರಡಿಸಿದ್ದಾರೆ.

ಈ ನಿರ್ಧಾರದಿಂದಾಗಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಆಧುನಿಕ ಕಂಪ್ಯೂಟರ್ ಹಾಗೂ ತಂತ್ರಜ್ಞಾನ ಶಿಕ್ಷಣ ಸಿಗಲಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಹೊಸದೊಂದು ಸುವರ್ಣಾವಕಾಶ ಮುಕ್ತಾವಾಗಲಿದೆ.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment