ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 2022-23 ನೇ ಸಾಲಿನ ಮೊದಲನೆಯ ಸಮುದಾಯದತ್ತ ಶಾಲಾ
ಕಾರ್ಯಕ್ರಮವನ್ನು ಕ್ರಮವಾಗಿ ದಿನಾಂಕ: 29.10.2022 ಮತ್ತು 31.10.2022 ಗಳಂದು ಉಲ್ಲೇಖ-01 ರ
ಅನುಸಾರ ನಿಗದಿಪಡಿಸಲಾಗಿತ್ತು.
ಪ್ರಸ್ತುತ ರಾಜ್ಯದ ಶಾಲೆಗಳಲ್ಲಿ ಸಂಕಲನಾತ್ಮಕ ಮೌಲ್ಯಮಾಪನ-1 (ಎಸ್.ಎ-I) ಕಾರ್ಯಚಟುವಟಿಕೆಯನ್ನು
ಉಲ್ಲೇಖ-02 ರ ಅನುಸಾರ ಮುಂದೂಡಲಾಗಿದ್ದು, ಶಾಲಾ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯ ವಿಶ್ಲೇಷಣಾ
ವರದಿ ಪ್ರಸ್ತುತ ಅಲಭ್ಯವಾಗುವುದರಿಂದ ಅದರ ಆಧಾರದ ಮೇಲೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ
ಶಾಲೆಗಳಲ್ಲಿ ಮೇಲ್ಕಂಡ ದಿನಾಂಕಗಳಂದು ಕೈಗೊಳ್ಳಬೇಕಾಗಿರುವ 2022-23 ನೇ ಸಾಲಿನ ಮೊದಲನೆಯ
ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ರಾಜ್ಯದ ಎಲ್ಲಾ
ಪ್ರಾಥಮಿಕ ಶಾಲೆಗಳಲ್ಲಿ ದಿನಾಂಕ: 28.11.2022 ರಂದು ಮತ್ತು ರಾಜ್ಯದ ಎಲ್ಲಾ ಪ್ರೌಢ ಶಾಲೆಗಳಲ್ಲಿ
30.11.2022 ರಂದು ನಿರ್ವಹಿಸಲು ಸೂಚಿಸಿ, ದಿನಾಂಕವನ್ನು ಮರು-ನಿಗದಿಪಡಿಸಲಾಗಿದೆ
ಹೊಸ ಆದೇಶದಂತೆ ರಾಜ್ಯದ ಎಲ್ಲಾ
ಪ್ರಾಥಮಿಕ ಶಾಲೆಗಳಲ್ಲಿ ದಿನಾಂಕ: 28.11.2022 ರಂದು ಮತ್ತು ರಾಜ್ಯದ ಎಲ್ಲಾ ಪ್ರೌಢ ಶಾಲೆಗಳಲ್ಲಿ
30.11.2022 ರಂದು ಮೊದಲ ಸಮುದಾಯದತ್ತ ಕಾರ್ಯಕ್ರಮ ನಿರ್ವಹಿಸಲು ಸೂಚಿಸಲಾಗಿದೆ