ನಾಡು ನುಡಿಯ ಬಗ್ಗೆ ಅಭಿಯಾನ ಮೂಡಿಸುವ,ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸುವ ಗೀತೆ,ಕವನಗಳನ್ನು ನಾಡಿನ
ಹೆಮ್ಮೆಯ ಕವಿಗಳು ರಚಿಸಿದ್ದು,ಇವುಗಳ ಕೇಳುವಿಕೆಯು ನಮ್ಮಲ್ಲಿ ಅಭಿಮಾನವನ್ನು ಮೂಡಿಸುತ್ತದೆ.ಈ ದೃಷ್ಟಿಯಿಂದ ಅಕ್ಟೋಬರ್ 28 ರಂದು
“ಕೋಟಿ ಕಂಠ ಗೀತಗಾಯನ” ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಆಯೋಜಿಸಲಾಗುತ್ತಿದ್ದು, ಈ ವಿಶೇಷ ಕಾರ್ಯಕ್ರಮದ ವಿವರಗಳು ಕೆಳಕಂಡಂತಿದೆ.
“ ನನ್ನ ನಾಡು – ನನ್ನ ಹಾಡು ‘ ಸಮೂಹ ಗೀತಗಾಯನ – ಅಕ್ಟೋಬರ್ 28 ರಂದು ಶುಕ್ರವಾರ ಕನ್ನಡ ನಾಡು-ನುಡಿಯ ಶ್ರೇಷ್ಠತೆಯನ್ನು ಸಾರುವ
1.ನಾಡಗೀತೆಯಾದ ‘ಜಯ ಭಾರತ ಜನನೀಯ ತನುಜಾತೆ’
2.’ಉದಯ ವಾಗಲಿ ನಮ್ಮ ಚೆಲುವ ಕನ್ನಡ ನಾಡು
3. ‘ಬಾರಿಸು ಕನ್ನಡ ಡಿಂಡಿಮವ’
4. ‘ಹಚ್ಚೇವು ಕನ್ನಡದ ದೀಪ’
5. ‘ವಿಶ್ವ ವಿನೂತನ ವಿದ್ಯಾಚೇತನ’
6. ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’
ಈ ಗೀತೆಗಳನ್ನು ಬೆಳಗ್ಗೆ:11.00 ಗಂಟೆಗೆ ಏಕಕಾಲದಲ್ಲಿ ಹಾಡುವುದು
ಕೋಟಿ ಕಂಠ ಗಾಯನದ ಹಾಡುಗಳು
ಕೋಟಿ ಕಂಠ ಗಾಯನದ ಹಾಡುಗಳ ಕರೋಕೆ
‘ಜಯ ಭಾರತ ಜನನೀಯ ತನುಜಾತೆ’
ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!ಜಯ ಸುಂದರ ನದಿ ವನಗಳ ನಾಡೇ, ಜಯ ಹೇ ರಸಋಷಿಗಳ ಬೀಡೆ! ಭೂದೇವಿಯ ಮಕುಟದ ನವಮಣಿಯೆ, ಗಂಧದ ಚಂದದ ಹೊನ್ನಿನ ಗಣಿಯೆ; ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ !
ಜನನಿಯ ಜೋಗುಳ ವೇದದ ಘೋಷ, ಜನನಿಗೆ ಜೀವವು ನಿನ್ನಾವೇಶಹಸುರಿನ ಗಿರಿಗಳ ಸಾಲೇ, ನಿನ್ನಯ ಕೊರಳಿನ ಮಾಲೆಕಪಿಲ ಪತಂಜಲ ಗೌತಮ ಜಿನನುತ, ಭಾರತ ಜನನಿಯ ತನುಜಾತೆ !
ಶಂಕರ ರಾಮಾನುಜ ವಿದ್ಯಾರಣ್ಯ, ಬಸವೇಶ್ವರ ಮಧ್ವರ ದಿವ್ಯಾರಣ್ಯರನ್ನ ಷಡಕ್ಷರಿ ಪೊನ್ನ, ಪಂಪ ಲಕುಮಿಪತಿ ಜನ್ನಕುಮಾರವ್ಯಾಸನ ಮಂಗಳ ಧಾಮ, ಕವಿ ಕೋಗಿಲೆಗಳ ಪುಣ್ಯಾರಾಮನಾನಕ ರಾಮಾನಂದ ಕಬೀರರ ಭಾರತ ಜನನಿಯ ತನುಜಾತೆ !
ತೈಲಪ ಹೊಯ್ಸಳರಾಳಿದ ನಾಡೇ, ಡಂಕಣ ಜಕಣರ ನಚ್ಚಿನ ಬೀಡೆಕೃಷ್ಣ ಶರಾವತಿ ತುಂಗ, ಕಾವೇರಿಯ ವರ ರಂಗಚೈತನ್ಯ ಪರಮಹಂಸ ವಿವೇಕರ, ಭಾರತ ಜನನಿಯ ತನುಜಾತೆ !
ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನಜನಕನ ಹೋಲುವ ದೊರೆಗಳ ಧಾಮ, ಗಾಯಕ ವೈಣಿಕರಾರಾಮಕನ್ನಡ ನುಡಿ ಕುಣಿದಾಡುವ ಗೇಹ, ಕನ್ನಡ ತಾಯಿಯ ಮಕ್ಕಳ ದೇಹ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ
ಸಾಹಿತ್ಯ: ಕುವೆಂಪು
ಉದಯ ವಾಗಲಿ ನಮ್ಮ ಚೆಲುವ ಕನ್ನಡ ನಾಡು
ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು || ಪ ||
ರಾಜನ್ಯರಿಪು ಪರಶುರಾಮನಮ್ಮನ ನಾಡು ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು ಓಜೆಯಿಂ ಮೆರೆದರಸುಗಳ ಸಾಹಸದ ಸೂಡು ತೇಜವನು ನಮಗೀವ ವೀರವೃಂದದ ಬೀಡು.
ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು.
ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು ಕಾವೇರಿ ಗೋದೆಯರು ಮೈದೊಳೆವ ನಲುನಾಡು ಆವಗಂ ಸ್ಪೂರ್ತಿಸುವ ಕಬ್ಬಿಗರ ನಡೆಮಾಡು ಕಾವ ಗದುಗಿನ ವೀರನಾರಾಯಣನ ಬೀಡು.
ಹುಯಿಲಗೋಳ ನಾರಾಯಣರಾಯರು
ಬಾರಿಸು ಕನ್ನಡ ಡಿಂಡಿಮವ’
ಬಾರಿಸು ಕನ್ನಡ ಡಿಂಡಿಮವ ಕರ್ನಾಟಕ ಹೃದಯ ಶಿವ
ಸತ್ತಂತಿಹರನು ಬಡಿದೆಚ್ಚರಿಸುಕಚ್ಚಾಡುವರನು ಕೂಡಿಸಿ ಒಲಿಸುಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸುಒಟ್ಟಿಗೆ ಬಾಳುವ ತೆರದಲಿ ಹರಸು
ಚೈತ ಶಿವೆತರ ಕೃತಿ ಕೃತಿಯಲ್ಲಿಮೂಡಲಿ ಮಂಗಳ ಮತಿ ಮತಿಯಲ್ಲಿಕವಿ ಋಷಿ ಸಂತರ ಆದರ್ಶದಲ್ಲಿಸರ್ವೋದಯವಾಗಲಿ ಸರ್ವರಲ್ಲಿ
ಕುವೆಂಪು
ಹಚ್ಚೇವ ಕನ್ನಡದ ದೀಪ’
ಹಚ್ಚೇವು ಕನ್ನಡದ ದೀಪಕರುನಾಡ ದೀಪ ಸಿರಿನುಡಿಯ ದೀಪಒಲವೆತ್ತಿ ತೋರುವಾ ದೀಪ | ಹಚ್ಚೇವು |
1ಬಹುದಿನಗಳಿಂದ ಮೈಮರೆವೆಯಿಂದಕೂಡಿರುವ ಕೊಳೆಯ ಕೊಚ್ಚೇವುಎಲ್ಲೆಲ್ಲಿ ಕನ್ನಡದ ಕಂಪು ಸೂಸ-ಲಲ್ಲಲ್ಲಿ ಕರಣ ಚಾಚೇವುನಡುನಾಡೆ ಇರಲಿ, ಗಡಿನಾಡೆ ಇರಲಿಕನ್ನಡದ ಕಳೆಯ ಕೆಚ್ಚೇವುಮರೆತೇವು ಮರೆವ, ತೆರೆದೇವು ಮನವ, ಎರೆದೇವು ಒಲವ- ಹಿಡಿ ನೆನಪನರನರವನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ
2ಕಲ್ಪನೆಯ ಕಣ್ಣು ಹರಿವನಕ ಸಾಲುದೀಪಗಳ ಬೆಳಕ ಬೀರೇವುಹಚ್ಚಿರುವ ದೀಪದಲಿ ತಾಯ ರೂಪಅಚ್ಚಳಿಯದಂತೆ ತೋರೇವುಒಡಲೊಡಲ ಕಿಚ್ಚಿನಾ ಕಿಡಿಗಳನ್ನುಗಡಿನಾಡಿನಾಚೆ ತೂರೇವುಹೊಮ್ಮಿರಲು ಪ್ರೀತಿ ಎಲ್ಲಿಯದು ಭೀತಿ?ನಾಡೊಲವೆ ನೀತಿ ಹಿಡಿ ನೆನಪಮನೆ ಮನೆಗಳಲ್ಲಿ ಮನಮನಗಳಲ್ಲಿಹಚ್ಚೇವು ಕನ್ನಡದ ದೀಪ
3ನಮ್ಮವರು ಗಳಿಸಿದಾ ಹೆಸರ ಉಳಿಸ-ಲೆಲ್ಲಾರು ಒಂದುಗೂಡೇವುನಮ್ಮೆದೆಯ ಮಿಡಿಯುವೀ ಮಾತಿನಲ್ಲಿಮಾತೆಯನು ಪೂಜೆ ಮಾಡೇವುನಮ್ಮುಸಿರು ತೀಡುವೀ ನಾಡಿನಲ್ಲಿಮಾಂಗಲ್ಯಗೀತ ಹಾಡೇವುತೊರೆದೇವು ಮರುಳ, ಕಡೆದೇವು ಇರುಳ, ಪಡೆದೇವು ತಿರುಳ- ಹಿಡಿ ನೆನಪಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ
ಡಿ ಎಸ್ ಕರ್ಕಿ
ವಿಶ್ವ ವಿನೂತನ ವಿದ್ಯಾಚೇತನ’
ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸoಸ್ಕಾರಿ ಜಯ ಭಾರತಿ ।।
ಕರುನಾಡ ಸರಸ್ವತಿ
ಗುಡಿ ಗೋಪುರ ಸುರ ಶಿಲ್ಪ ಕಲಾಕೃತಿ
ಕೃಷ್ಣೆ ತುoಗೆ ಕಾವೇರಿ
ಪವಿತ್ರಿತ ಕ್ಷೇತ್ರ ಮನೋಹಾರಿ || ವಿಶ್ವ ।।
ಗoಗ ಕದoಬ ರಾಷ್ಟ್ರಕೂಟ ಬಲ
ಚಾಲುಕ್ಯ ಹೊಯ್ಸಳ ಬಲ್ಲಾಳ
ಹಕ್ಕ ಬುಕ್ಕ ಪುಲಿಕೇಶಿ ವಿಕ್ರಮರ
ಚೆನ್ನಮ್ಮಾಜಿಯ ವೀರಶ್ರೀ || ವಿಶ್ವ ।।
ತ್ಯಾಗ ಭೋಗ ಸಮಯೋಗದ ದೃಷ್ಟಿ
ಬೆಳುವೊಲ ಮಲೆ ಕರೆ ಸುoದರ ಸೃಷ್ಟಿ
ಜ್ಞಾನದ ವಿಜ್ಞಾನದ ಕಲೆಯೈಸಿರಿ
ಸಾರೋದಯ ಧಾರಾ ನಗರಿ || ವಿಶ್ವ ।।
ಅರಿವೆ ಗುರುನುಡಿ ಜ್ಯೋತಿರ್ಲಿoಗ
ದಯವೇ ಧರ್ಮದ ಮೂಲ ತರoಗ
ವಿಶ್ವ ಭಾರತಿಗೆ ಕನ್ನಡದಾರತಿ
ಮೊಳಗಲಿ ಮಂಗಲ ಜಯಭೇರಿ || ವಿಶ್ವ ।।
ಸಾಹಿತ್ಯ – ಚನ್ನವೀರ ಕಣವಿ
ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು..
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು..
ಬದುಕಿದು ಜಟಕಾ ಬಂಡಿ..
ಇದು ವಿಧಿಯೋಡಿಸುವ ಬಂಡಿ..
ಬದುಕಿದು ಜಟಕಾ ಬಂಡಿ..
ವಿಧಿ ಅಲೆದಡಿಸುವ ಬಂಡಿ..
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು..
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು..
ಕಾಶೀಲಿ ಸ್ನಾನ ಮಾಡು..
ಕಾಶ್ಮೀರ ಸುತ್ತಿ ನೋಡು..
ಜೋಗದ ಗುಂಡಿ ಒಡೆಯ ನಾನೆಂದೂ ಕೂಗಿ ಹಾಡು..
ಅಜಂತಾ ಎಲ್ಲೋರನ ಬಾಳಲ್ಲಿ ಒಮ್ಮೆ ನೋಡು..
ಬಾದಾಮಿ ಐಹೊಳೆಯ ಚಂದಾ ನಾ ತೂಕ ಮಾಡು..
ಕಲಿಯೋಕೆ ಕೋಟಿ ಬಾಷೆ ಆಡೋಕೆ ಒಂದೇ ಬಾಷೆ..
ಕನ್ನಡ ಕನ್ನಡ ಕಸ್ತೂರಿ ಕನ್ನಡಾ….
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು..
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು..
ಬದುಕಿದು ಜಟಕಾ ಬಂಡಿ..
ಇದು ವಿಧಿಯೋಡಿಸುವ ಬಂಡಿ..
ಬದುಕಿದು ಜಾತಕ ಬಂಡಿ.. ವಿಧಿ
ಗುರಿ ತೋರಿಸುವ ಬಂಡಿ..
ದ್ಯಾನಕ್ಕೆ ಭೂಮಿ ಇದು..
ಪ್ರೇಮಕ್ಕೆ ಸ್ವರ್ಗ ಇದು..
ಸ್ನೇಹಕ್ಕೆ ಶಾಲೆ ಇದು.. ಜ್ಞಾನಕ್ಕೆ ಪೀಠ ಇದು…
ಕಾಯಕ್ಕೆ ಕಲ್ಪ ಇದು.. ಶಿಲ್ಪಕ್ಕೆ ಕಲ್ಪ ಇದು..
ನಾಟ್ಯಕ್ಕೆ ನಾಡಿ ಇದು.. ನಾದಾಂತರಂಗವಿದು..
ಕುವೆಂಪು ಬೇಂದ್ರೆ ಇಂದ.. ಕಾರಂತ ಮಾಸ್ತಿ ಇಂದ..
ಧನ್ಯವೀ ಕನ್ನಡ.. ಕಾಗಿನ ಕನ್ನಡಾ..
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು..
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು..
ಬದುಕಿದು ಜಟಕಾ ಬಂಡಿ..
ಇದು ವಿಧಿಯೋಡಿಸುವ ಬಂಡಿ..
ಬದುಕಿದು ಜಟಕಾ ಬಂಡಿ..
ವಿಧಿ ಧಡ ಸೇರಿಸುವ ಬಂಡಿ..
ಬಾಳಿನ ಬೆನ್ನು ಹತ್ತಿ.. ನೂರಾರು ಊರು ಸುತ್ತಿ..
ಏನೇನೋ ಕಂಡ ಮೇಲೂ.. ನಮ್ಮೂರೇ ನಮಗೆ ಮೇಲೂ..
ಕೈಲಾಸಂ ಕಂಡ ನಮಗೆ.. ಕೈಲಾಸ ಯಾಕೆ ಬೇಕು..
ದಾಸರ ಕಂಡ ನಮಗೆ.. ವೈಕುಂಟ ಯಾಕೆ ಬೇಕು..
ಮುಂದಿನ ನನ್ನ ಜನ್ಮ.. ಬರದಿಟ್ಟನಂತೆ ಬ್ರಹ್ಮ..
ಇಲ್ಲಿಯೇ ಇಲ್ಲಿಯೇ ಎಂದಿಗೂ ನಾನ್ ಇಲ್ಲಿಯೇ…
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು..
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು..
ಬದುಕಿದು ಜಟಕಾ ಬಂಡಿ. ಇದು ವಿಧಿಯೋಡಿಸುವ ಬಂಡಿ2