ಇನ್ನು ಮುಂದೆ ನೌಕರರ ಮೊಬೈಲ್ ಗೆ ಬರಲಿದೆ ವೇತನದ ವಿವರ pay slip pdf ನೌಕರರ ಸಂಘದಿಂದ ನೌಕರರಿಗಾಗಿ ಮತ್ತೊಂದು ಮನವಿ

IMG 20220224 WA0042

ರಾಜ್ಯದ ಸರ್ಕಾರಿ ನೌಕರರ ಆದ್ಯ ಗಮನಕ್ಕೆ
ರಾಜ್ಯದ ಸರ್ಕಾರಿ ನೌಕಕರಿಗೆ ಸಂಬಂಧಿಸಿದ ಪ್ರತಿ ತಿಂಗಳ ವೇತನದ ವಿವರ ಹಾಗೂ ಪಿಡಿಎಫ್ ಪೇ-ಸ್ಲಿಪ್ ಲಿಂಕ್ ನ್ನು ಪ್ರತಿಯನ್ನು ನೌಕರರ ಮೊಬೈಲ್ ಸಂಖ್ಯೆಗೆ ತಲುಪಿಸುವಂತೆ ಹೆಚ್.ಆರ್.ಎಂ.ಎಸ್-2.0 ಯೋಜನಾ ನಿರ್ದೇಶಕರಾದ ಶ್ರೀಮತಿ ದೀಪ್ತಿ ಆದಿತ್ಯ ಕಾನಡೆ, ಐ.ಎ.ಎಸ್ ಅವರನ್ವು ರಾಜ್ಯಾಧ್ಯಕ್ಷರಾದ ಷಡಾಕ್ಷರಿರವರು ಭೇಟಿ ಮಾಡಿ ಮನವಿ ಮಾಡಿದರು.

    ಸಂಘದ ಮನವಿಯಂತೆ ಮಾರ್ಚ್-2022ನೇ ತಿಂಗಳಿನಿಂದ ನೌಕರರ ವೇತನದ ವಿವರ ಹಾಗೂ ಪೇ-ಸ್ಲಿಪ್ ಪಿಡಿಎಫ್ ಲಿಂಕನ್ನು ಆಯಾ ನೌಕರರ ಮೊಬೈಲ್ ಸಂಖ್ಯೆಗೆ ಕಳುಹಿಸುವ ವ್ಯವಸ್ಥೆಯನ್ನು ಪ್ರಾರಂಭಿಸಲಾಗುವುದೆಂಬ ಭರವಸೆಯನ್ನು ನೀಡಿರುತ್ತಾರೆ.

ಹಾಗಾಗಿ ಹೆಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ಸರ್ಕಾರಿ ನೌಕರರು ತಮ್ಮ ಮೊಬೈಲ್ ಸಂಖ್ಯೆಯನ್ನು ಹಾಗೂ ಇ-ಮೇಲ್ ಐ.ಡಿ-ವಿವರಗಳನ್ನು ಕಡ್ಡಾಯವಾಗಿ update ಮಾಡಿ ಸೌಲಭ್ಯವನ್ನು ಸದುಪಯೋಗಪಡಿಸುವಂತೆ ಕೋರಿದೆ
Sharing Is Caring:

Leave a Comment