ಹಿರಿಯ ಪ್ರಾಥಮಿಕ
ಕ್ಷೇತ್ರ : ಸಣ್ಣ ಕಥೆಗಳು
- ಪಠ್ಯಪುಸ್ತಕದಲ್ಲಿ ಅಥವಾ ಗ್ರಂಥಾಲಯದಲ್ಲಿನ ಪುಸ್ತಕಗಳಲ್ಲಿ ಇರುವ ನೀತಿ ಕಥೆಯನ್ನು ಹೇಳುವುದು.
- ಶೌರ್ಯ ಪ್ರಶಸ್ತಿ ಪುರಸ್ಕೃತ ಮಕ್ಕಳ ಯಶೋಗಾಥೆಗಳನ್ನು ಸಂಗ್ರಹಿಸಿ ಹೇಳುವುದು.
- ಪಂಚತಂತ್ರ ಕಥೆಗಳನ್ನು ಸಂಗ್ರಹಿಸಿ ಹೇಳುವುದು
- ಪಠ್ಯದಲ್ಲಿರುವ/ತನಗಿಷ್ಟವಾದ ಕಥೆಯನ್ನು ಇಂಗ್ಲಿಷ್ ಭಾಷೆಯಲ್ಲಿ ಹೇಳುವುದು. ಕ್ಷೇತ್ರ : ರಾಷ್ಟ್ರೀಯತೆ
- ಪಠ್ಯ/ಶಿಕ್ಷಕರ ಸಹಾಯದಿಂದ ದೇಶಭಕ್ತಿ ಗೀತೆಗಳನ್ನು ಸಂಗ್ರಹಿಸಿ ಹಾಡುವುದು .
- ರಾಷ್ಟ್ರಧ್ವಜದ ಪರಿಚಯ ಮತ್ತು ಮಹತ್ವ ತಿಳಿಸುವುದು.
- ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹೋರಾಟದಲ್ಲಿ ಭಾಗವಹಿಸಿದ ಕನ್ನಡಿಗರ ಪರಿಚಯ ಮಾಡುವುದು. * ಸ್ವಾತಂತ್ರ್ಯ ದಿನಾಚರಣೆಯ ದಿನ ಸಹಪಾಠಿಗಳೊಂದಿಗೆ ದೇಶಭಕ್ತಿ ಗೀತೆಗಳು ನೃತ್ಯ ಮಾಡುವುದು.
ಕ್ಷೇತ್ರ : ಮೌಲ್ಯ ಶಿಕ್ಷಣ
- ಮಕ್ಕಳು ದಿನನಿತ್ಯ ಜೀವನದಲ್ಲಿ ಮನೆಯವರಿಗೆ ಮತ್ತು ನೆರೆಹೊರೆಯವರಿಗೆ ಹೇಗೆ ಮತ್ತು ಯಾವ ರೀತಿಯ ಸಹಕಾರ ಮತ್ತು ಸಹಾಯ ಮಾಡಬಹುದು ಎಂದು ಪ್ರಸ್ತುತಪಡಿಸುವುದು.
- ಮಕ್ಕಳಲ್ಲಿ ಸ್ವಯಂಶಿಸ್ತು ಮತ್ತು ಸಮಯ ಪಾಲನೆ ಮೂಡಿಸುವಂತಹ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಅರ್ಥ ಮಾಡಿಸುವುದು.
- ಅನುಭೂತಿ ಮತ್ತು ಸಹಾನುಭೂತಿ ಮೌಲ್ಯಗಳನ್ನು ಮಕ್ಕಳಿಗೆ ಪರಿಚಯಿಸುವುದು.
*ಮಕ್ಕಳು ಶಿಕ್ಷಕರಿಗೆ, ಹಿರಿಯರಿಗೆ ಮತ್ತು ಕಿರಿಯರಿಗೆ ಹೇಗೆ ಸ್ಪಂದಿಸುತ್ತೇವೆ ಮತ್ತು ಗೌರವಿಸುತ್ತೇವೆ ಎಂಬುದನ್ನು ತಿಳಿಸುವುದು. ರಾಷ್ಟ್ರೀಯ ಸದ್ಭಾವನ ದಿನಾಚರಣೆ. - ಸಮಾಜದಲ್ಲಿ ಶಾಂತಿ ಮತ್ತು ಸಾಮರ್ಥ್ಯವನ್ನು ಕಾಪಾಡುವ ಬಗ್ಗೆ ಮಕ್ಕಳು ಪ್ರಜ್ಞೆ ಮೂಡಿಸುವರು.
- ಕ್ಷೇತ್ರ :ಕ್ರೀಡೆಗಳು
- ಕ್ರೀಡೆಗಳ ಪರಿಚಯ ಮಾಡುವುದು.
- ಕಬಡ್ಡಿ ಕೋಕೋ ವಾಲಿಬಾಲ್ ಕ್ರೀಡೆಗಳನ್ನು ಆಟವಾಡಲು ಬೇಕಾದ ಆಟಗಾರರ ಸಂಖ್ಯೆ, ಆಟದ ನಿಯಮಗಳು ಅಂಕಣದ ಅಳತೆ ಮತ್ತು ಪ್ರಶಸ್ತಿಗಳ ಬಗ್ಗೆ ತಿಳಿಸುವುದು.
- ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆಡಲು ಇರುವ ಅವಕಾಶಗಳನ್ನು ತಿಳಿಸುವುದು.
- ಕ್ರೀಡೆಯಲ್ಲಿ ಸಾಧನೆ ಮಾಡಿದ ಸಾಧಕರ ಹೆಸರುಗಳು ಮತ್ತು ಅವರಿಗೆ ದೊರೆತ ಪ್ರಶಸ್ತಿಗಳನ್ನು ತಿಳಿಸುವುದು.
- ರಾಷ್ಟ್ರೀಯ ಕ್ರೀಡಾ ದಿನಾಚರಣೆ
ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನ. ಅವರ ಬಗ್ಗೆ ಮಕ್ಕಳು ವಿವರಿಸುವರು.
ಕಿರಿಯ ಪ್ರಾಥಮಿಕ
ಕ್ಷೇತ್ರ :ಸಣ್ಣ ಕಥೆಗಳು
- ಪಠ್ಯಪುಸ್ತಕದಲ್ಲಿ ಅಥವಾ ಗ್ರಂಥಾಲಯದಲ್ಲಿನ ಪುಸ್ತಕದಲ್ಲಿರುವ ನೀತಿ ಕಥೆಯನ್ನು ಓದುವುದು.
- ಪಂಚತಂತ್ರ ಕಥೆಗಳನ್ನು ಸಂಗ್ರಹಿಸಿ ಹೇಳುವುದು.
- ಪಠ್ಯದಲ್ಲಿರುವ ಅಥವಾ ತನಗೆ ಇಷ್ಟವಾದ ಕಥೆಯನ್ನು ಇಂಗ್ಲಿಷ್ ಭಾಷೆಯಲ್ಲಿ ಹೇಳುವುದು. ಕ್ಷೇತ್ರ :ರಾಷ್ಟ್ರೀಯತೆ
- ಪಠ್ಯ /ಶಿಕ್ಷಕರ ಸಹಾಯದಿಂದ ದೇಶಭಕ್ತಿ ಗೀತೆಗಳನ್ನು ಸಂಗ್ರಹಿಸಿ ಹಾಡುವುದು.
- ರಾಷ್ಟ್ರಧ್ವಜದ ಪರಿಚಯ ಮತ್ತು ಮಹತ್ವ ತಿಳಿಸುವುದು. * ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಾಗವಹಿಸಿದ ಕನ್ನಡಿಗರ ಪರಿಚಯ ಮಾಡುವುದು.
ಕ್ಷೇತ್ರ : ಛದ್ಮವೇಷ/ ಅಭಿನಯ
- ಹಿರಿಯರ/ ಶಿಕ್ಷಕರ ಸಹಾಯದಿಂದ ಕ್ಯಾಲೆಂಡರ್ ನಲ್ಲಿ ನೀಡಿರುವ ಗಣ್ಯ ವ್ಯಕ್ತಿಗಳ ಛದ್ಮವೇಷ ಧರಿಸುವುದು. ಮಾತಿನ ಅನುಕರಣೆ ಮಾಡಬಹುದು. ರಾಷ್ಟ್ರೀಯ ಸದ್ಭಾವನಾ ದಿನಾಚರಣೆ
ರಾಜೀವಗಾಂಧಿಯವರ ಜನ್ಮದಿನ. ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ಕಾಪಾಡುವ ಬಗ್ಗೆ ಮಕ್ಕಳು ಪ್ರಜ್ಞೆ ಮೂಡಿಸುವರು. ಕ್ಷೇತ್ರ : ಸಮುದಾಯದ ಸೇವಕರು - ಹಿರಿಯರ ಶಿಕ್ಷಕರ ಸಹಾಯದಿಂದ ಸಮುದಾಯ ಸೇವಕರ ಕೆಲಸದ ಕುರಿತು ಹೇಳುವುದು.
- ಸಮಾಜಕ್ಕೆ ಅವರ ಕೊಡುಗೆಗಳನ್ನು ತಿಳಿಸುವುದು.
*ಸಾಧನೆ ಮಾಡಿದ ಸಮುದಾಯ ಸೇವಕರ ಚಿತ್ರ ಪ್ರದರ್ಶನ ಮಾಡಬಹುದು .
ರಾಷ್ಟ್ರೀಯ ಕ್ರೀಡಾ ದಿನ
ಹಾಕಿ ಮಂತ್ರಿಕ ಅವರ ಜನ್ಮದಿನ ಧ್ಯಾನ್ ಚಂದ್ ಅವರ ಸಾಧನೆ ಬಗ್ಗೆ ಮಕ್ಕಳು ವಿವರಿಸುವರು.