ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ನಿವೃತ್ತರಾಗುವ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವರ ಇಲ್ಲಿದೆ | ಗುರುಭ್ಯೋ ನಮಃ

IMG 20220531 WA0031
IMG 20220531 WA0044

ಅಕ್ಷರ ಸೇವಕರಾಗಿ ತಮ್ಮ ಸೇವೆಯನ್ನು ಸಲ್ಲಿಸಿ ವಿದ್ಯಾರ್ಥಿಗಳ ಬಾಳಲ್ಲಿ ಅಕ್ಷರ ಬೆಳಕನ್ನು ಮೂಡಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ

ಶ್ರೀ ಮೋನಪ್ಪ.ಕೆ
ದ.ಕ.ಜಿಲ್ಲಾ ಉತ್ತಮ ಶಿಕ್ಷಕ ಪುರಸ್ಕೃತರು.
ಪದವೀಧರೇತರ ಮುಖ್ಯ ಶಿಕ್ಷಕರು, ಕರ್ನಾಟಕ ಪಬ್ಲಿಕ್ ಸ್ಕೂಲ್, ಪುಂಜಾಲಕಟ್ಟೆ.

ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಕೆದುಮೂಲೆಯಲ್ಲಿ 1962ರಲ್ಲಿಜನಿಸಿದರು ಇವರು ಪ್ರಾಥಮಿಕ ಶಿಕ್ಷಣವನ್ನು ಕೊಳ್ಳತ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಮೊಡಂಕಾಪು ದೀಪಿಕಾ ಪ್ರೌಢಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ಹಾಗೂ ಶಿಕ್ಷಕ ತರಬೇತಿಯನ್ನು ಶಿಕ್ಷಕರ ತರಬೇತಿ ಕೇಂದ್ರ ಕೋಡಿಯಾಲಬೈಲು ಇಲ್ಲಿ ಪೂರೈಸಿ, ಮೈಸೂರು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ,ಸ‌ಹಕಾರಿ ತರಬೇತಿ ಸಂಸ್ಥೆ ಮಡಿಕೇರಿ ಮಡಿಕೇರಿಯಲ್ಲಿ ಇಲ್ಲಿ ಜಿ ಡಿ ಸಿ ( ಸಹಕಾರಿ ತರಬೇತಿ) ಪಡೆದು,1988ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸ.ಮಾ.ಹಿ.ಪ್ರಾ.ಶಾಲೆ,ಚೆನ್ನೈತ್ತೋಡಿ ಶಾಲೆಯಲ್ಲಿ ಕರ್ತವ್ಯಕ್ಕೆ ಸೇರಿ 14ವರ್ಷಗಳ ಕಾಲ ಸೇವೆ ಸಲ್ಲಿಸಿ, ನಂತರ 1ವರ್ಷಗಳ ಕಾಲ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕೆದಿಲ ಕ್ಲಸ್ಟರ್ ನಲ್ಲಿ ಕರ್ತವ್ಯ ನಿರ್ವಹಿಸಿ ನಂತರ 2002ರಲ್ಲಿ ಮುಖ್ಯ ಗುರುಗಳಾಗಿ ಭಡ್ತಿ ಹೊಂದಿ ಸ.ಹಿ.ಪ್ರಾ.ಶಾಲೆ ಇಲ್ಲಿ ಸೇವೆ ಸಲ್ಲಿಸಿ ನಂತರ 2013ರಲ್ಲಿ ಪದವೀಧರೇತರ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿ ಪ್ರಸ್ತುತ ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು,2004-2005ರಲ್ಲಿವಿಟ್ಲ ಅಧ್ಯಾಪಕರ ಸೇವಾ ಸಹಕಾರಿ ಸಂಘ ನಿಯಮಿತ ಇದರ ನಿರ್ದೇಶಕರಾಗಿ ಆಯ್ಕೆಯಾಗಿ,2015ರಲ್ಲಿ ಉಪಾಧ್ಯಕ್ಷರಾಗಿ ದಿನಾಂಕ 10.03.2018ರಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇವರಿಗೆ 2002ರಲ್ಲಿ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ,2004ರಲ್ಲಿ ಬಂಟ್ವಾಳ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದಾರೆ.ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀ ಬಾಬು ನಾಯ್ಕ ಕೆ

ದ.ಕ.ಜಿ.ಪಂ.ಹಿ.ಪ್ರಾ.ಶಾಲೆ, ಮೂಡಂಬೈಲು.

ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ದಿ.ವೆಂಕಪ್ಪ ನಾಯ್ಕ ಹಾಗೂ ಶ್ರೀಮತಿ ದೇವಕಿ ದಂಪತಿಗಳ ಪ್ರಥಮ ಪುತ್ರನಾಗಿ ದಿನಾಂಕ 01.06.1962ರಂದು ಜನಿಸಿದ ಇವರು ಉತ್ತಮ ವಿದ್ಯಾಭ್ಯಾಸ ಪಡೆದು ದಿನಾಂಕ 04.12.1989ರಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸ.ಕಿ.ಪ್ರಾ.ಶಾಲೆ ಮೇಸಾಗರ ಇಲ್ಲಿ ಸೇವೆಯನ್ನು ಆರಂಭಿಸಿ 1990-91ನೇ ಸಾಲಿನಲ್ಲಿ ಈ ಶಾಲೆಗೆ ಉತ್ತಮ ಶಾಲೆ ಪ್ರಶಸ್ತಿ ಬರುವಲ್ಲಿ ಶ್ರಮಿಸಿ, ನಂತರ ದಿನಾಂಕ 05.10.1995ರಲ್ಲಿ ವರ್ಗಾವಣೆಗೊಂಡು ಬಂಟ್ವಾಳ ತಾಲೂಕಿನ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಅಜ್ಜಿನಡ್ಕ ಇಲ್ಲಿ 24ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 05.09.2020ರಿಂದ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 06.05.2022ರಂದು ಮುಖ್ಯ ಶಿಕ್ಷಕರಾಗಿ ಪದೋನ್ನತಿ ಹೊಂದಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಇಲ್ಲಿ ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀ ಮುರಳೀಧರ ರಾವ್
ಮೂಳೂರು ಶಾಲೆ

ಬಂಟ್ವಾಳ ತಾಲೂಕಿನ ಕುರ್ನಾಡು ಗ್ರಾಮದ ವೇದಮೂರ್ತಿ ನಾರಾಯಣ ಕಲ್ಲೂರಾಯ ಮತ್ತು ಗುಲಾಬಿ ದಂಪತಿಗಳ ಸುಪುತ್ರನಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಶ್ರೀ ಭಾರತೀ ಶಾಲೆ ಮತ್ತು ಪ್ರೌಢ ಶಿಕ್ಷಣವನ್ನು ಸರಕಾರಿ ಜ್ಯೂನಿಯರ್ ಕಾಲೇಜು ಮುಡಿಪು ಇಲ್ಲಿ ಪೂರೈಸಿ, ಮೈಸೂರು ವಿಶ್ವವಿದ್ಯಾಲಯದ ಮೂಲಕ ಬಿ.ಎ ಪದವಿ ಮತ್ತು ಧಾರವಾಡ ವಿಶ್ವವಿದ್ಯಾಲಯದ ಮೂಲಕ ಎಂ.ಎ ಪದವಿಯನ್ನು ಪಡೆದ ಇವರು ಹಿಂದಿರತ್ನ ಪದವಿಯನ್ನು ಪಡೆದ ಪ್ರತಿಭಾನ್ವಿತರು.ಇವರು ಪುತ್ತೂರಿನ ಗೋಳಿದಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಪ್ರಾಥಮಿಕ ಶಾಲೆ ಮಂಚಿ ಕುಕ್ಕಾಜೆ ಶಾಲೆಯಲ್ಲಿ ಸೇವೆ ಸಲ್ಲಿಸಿದ ನಂತರ ಇದೀಗ ಬಾಳೆ ಪುಣಿ ಗ್ರಾಮದ ಮೂಳೂರಿನಲ್ಲಿ ಶಿಕ್ಷಕ ವೃತ್ತಿಯನ್ನು ಮುಂದುವರಿಸಿ ವ್ರೃತ್ತಿ ಜೀವನದಲ್ಲಿ ಮಕ್ಕಳಿಗೆ ಯೋಗಾಭ್ಯಾಸ ಸಂಸ್ಕೃತಾಭ್ಯಾಸ, ವಿಜ್ಞಾನ ಮಾದರಿ ತಯಾರಿ,ಹಿಂದಿ ಇಂಗ್ಲಿಷ್ ಭಾಷಾ ತರಬೇತಿ, ಚೆಸ್ ಕ್ರೀಡೆಯಲ್ಲಿ ಮಕ್ಕಳನ್ನು ತರಬೇತುಗೊಳಿಸಿದ ಇವರು ಓರ್ವ ಸಂಪನ್ಮೂಲ ವ್ಯಕ್ತಿಯಾಗಿ ಬಹುಸಂಖ್ಯೆಯ ಮಕ್ಕಳ ಪ್ರೀತಿಗ ಗೌರವಗಳಿಗೆ ಪಾತ್ರರಾಗಿದ್ದಾರೆ.ಇವರು 21ವರ್ಷ 6ತಿಂಗಳುಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ನಳಿನಿ.ಕೆ
ದ.ಕ.ಜಿ.ಪಂ.ಹಿ.ಪ್ರಾ.ಶಾ
ಲೆ, ನಡುಮೊಗರು ಬಂಟ್ವಾಳ ತಾಲೂಕು.

ದಿನಾಂಕ 01.06.1962ರಂದು ಕೊರಗಪ್ಪ ಮತ್ತು ಪೂವಮ್ಮ ದಂಪತಿಗಳ ಸುಪುತ್ರಿಯಾಗಿ ಜನಿಸಿದ ಇವರು 1ರಿಂದ 5ನೇ ತರಗತಿಯ ಶಿಕ್ಷಣವನ್ನು ಸೆಂಟ್ರಲ್ ಮುಸ್ಲಿಂ ಹಿರಿಯ ಪ್ರಾಥಮಿಕ ಮಲಾರ್ ಬಂಟ್ವಾಳ ತಾಲೂಕು ಇಲ್ಲಿ ಪೂರೈಸಿ 6ರಿಂದ 7ನೇತರಗತಿ ಶಿಕ್ಷಣವನ್ನು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ, ಇನೋಳಿ ಮಂಗಳೂರು ತಾಲೂಕು ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಶ್ರೀ ರಾಮಕೃಷ್ಣ ಪ್ರೌಢ ಶಾಲೆ ಹರೇಕಳ ಮಂಗಳೂರು ತಾಲೂಕು ಇಲ್ಲಿ ಪೂರೈಸಿ, ದಿನಾಂಕ 29.01.1986ರಂದು ಹರೇಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯಕ್ಕೆ ಸೇರಿ ದಿನಾಂಕ 28.01.1996ರ ವರೆಗೆ ಕರ್ತವ್ಯ ನಿರ್ವಹಿಸಿ ನಂತರ ವರ್ಗಾವಣೆ ಗೊಂಡು ದಿನಾಂಕ 29.01.1996ರಿಂದ 04.05.2007ರವರೆಗೆ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ರಾಜಗುಡ್ಡೆ ಮಂಗಳೂರು ಇಲ್ಲಿ ಸೇವೆ ಸಲ್ಲಿಸಿ ನಂತರ ಅಲ್ಲಿಂದ ವರ್ಗಾವಣೆ ಗೊಂಡು 05.05.2007ರಿಂದ 11.08.2016ರವರೆಗೆ ಸ.ಹಿ.ಪ್ರಾ.ಶಾಲೆ ಕಿನ್ಯ ಮಂಗಳೂರು ಇಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ದಿನಾಂಕ 12.08.2016ರಿಂದ 31.05.2022ರವರೆಗೆ ಹಿ.ಪ್ರಾ.ಶಾಲೆ.ನಡುಮೊಗರು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಬೆನೆಡಿಕ್ಟ್ ತಾವ್ರೊ
ಸ.ಹಿ.ಪ್ರಾ.ಶಾಲೆ.ಪೆರಾಜೆ.
ಶ್ರೀ ಲೊರೆನ್ಸ್ ತಾವ್ರೊ ಶ್ರೀಮತಿ ಹೆಲೆನ್ ಲೋಬೊ ದಂಪತಿಗಳ ಪುತ್ರಿಯಾಗಿ ದಿನಾಂಕ 21.05.1962ರಂದು ಕಂದಾವರ ಗ್ರಾಮದಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಪೊಂಪೈ ಹಿರಿಯ ಪ್ರಾಥಮಿಕ ಶಾಲೆ ಕಂದಾವರ ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ರೋಸ ಮಿಸ್ತಿಕಾ ಪ್ರೌಢ ಶಾಲೆ ಕಿನ್ನಿಕಂಬಳ ಹಾಗೂ ಶಿಕ್ಷಕ ತರಬೇತಿಯನ್ನು ರೋಸ ಮಿಸ್ತಿಕಾ ಶಿಕ್ಷಕಿಯರ ತರಬೇತಿ ಸಂಸ್ಥೆ ಕಿನ್ನಿಕಂಬಳ ಇಲ್ಲಿ ಪೂರೈಸಿ, ದಿನಾಂಕ 09.02.1996ರಂದು ಪ್ರಾಥಮಿಕ ಶಾಲಾ ಸಹ ಶಿಕ್ಷಕಿಯಾಗಿ ಸೇವೆ ಆರಂಭಿಸಿ ಸ.ಹಿ.ಪ್ರಾ.ಶಾಲೆ,ಸತ್ತಿಕಲ್ಲು ಹಾಗೂ ಸ.ಹಿ.ಪ್ರಾ.ಶಾಲೆ ಸುಜೀರು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಪೆರಾಜೆ ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ನಾಗವೇಣಿ
ಸ.ಕಿ.ಪ್ರಾ.ಶಾಲೆ,ಮಂಚಕಲ್ಲು.

ದಿನಾಂಕ 13.05.1962ರಂದು ಮಂಗಳೂರು ತಾಲೂಕಿನ ಮಿಜಾರು ದಡ್ಡಿ ಎಂಬಲ್ಲಿ ನಾಗೇಶ ಶೆಟ್ಟಿಗಾರ್ ಮತ್ತು ಜಯಂತಿ ದಂಪತಿಗಳ ಸುಪುತ್ರಿಯಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಕಿ.ಪ್ರಾ.ಶಾಲೆ ದಡ್ಡಿ ಹಾಗೂ ಸ.ಮಾ.ಹಿ.ಪ್ರಾ.ಶಾಲೆ ಎಡಪದವು ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಎಡಪದವು ಇಲ್ಲಿ ಪೂರೈಸಿ, ಶಿಕ್ಷಕರ ಶಿಕ್ಷಣ ತರಬೇತಿಯನ್ನು ರೋಸ ಮಿಸ್ತಿಕಾ ಶಿಕ್ಷಕಿಯರ ತರಬೇತಿ ಸಂಸ್ಥೆ ಇಲ್ಲಿ ಪೂರೈಸಿ, ದಿನಾಂಕ 22.09.1994ರಂದು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸ.ಹಿ.ಪ್ರಾ.ಶಾಲೆ ಅನಂತಾಡಿ ಬಂಟ್ವಾಳ ಇಲ್ಲಿ ಸೇವೆಯನ್ನು ಆರಂಭಿಸಿ ನಾಲ್ಕು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಂತರ ವರ್ಗಾವಣೆ ಗೊಂಡು ಸ.ಮಾ.ಹಿ.ಪ್ರಾ.ಶಾಲೆ ಎಡಪದವು ಇಲ್ಲಿ ಸೇವೆ ಸಲ್ಲಿಸಿ ನಂತರ 2016ರಲ್ಲಿ ವರ್ಗಾವಣೆಗೊಂಡು ಸ.ಕಿ.ಪ್ರಾ.ಶಾಲೆ ಮಂಚಕಲ್ಲು ಇಲ್ಲಿ ಸೇವೆ ಸಲ್ಲಿಸಿ ದಿನಾಂಕ 31.05.2022ರಂದು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀ ರಾಜೇಂದ್ರ ನಾಯ್ಕ
ಸ.ಹಿಪ್ರಾ.ಶಾಲೆ,ಕೋಡಪದವು.

ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಕನ್ನರಡ್ಕದಲ್ಲಿ ಶ್ರೀ ಅಪ್ಪು ಮಾಸ್ಟರ್ ಹಾಗೂ ಲಕ್ಷ್ಮಿ ದಂಪತಿಗಳ ಸುಪುತ್ರನಾಗಿ ದಿನಾಂಕ 01.06.1962ರಲ್ಲಿ ಜನಿಸಿದ ಇವರು ಪಿ.ಯು.ಸಿ.ಮತ್ತು ಶಿಕ್ಷಕ ಶಿಕ್ಷಣ ತರಬೇತಿಯನ್ನು ಪೂರೈಸಿದ ಇವರು ಶಿಕ್ಷಣ ಕ್ಷೇತ್ರದಲ್ಲಿನ ಆಸಕ್ತಿಯಿಂದ ಸ.ಹಿ.ಪ್ರಾ.ಶಾಲೆ ಓದೆಪಡ್ಪು, ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಜೋಕಟ್ಟೆ ಹಾಗೂ ಸ.ಹಿ.ಪ್ರಾ.ಶಾಲೆ ಅಜಿಲಮೊಗರು ಇಲ್ಲಿ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಿರುತ್ತಾರೆ.ದಿನಾಂಕ 28.03.1990ರಂದು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸ.ಹಿ.ಪ್ರಾ.ಶಾಲೆ ಕೇಡೇಲು ನಾವರ ಗ್ರಾಮ ಬೆಳ್ತಂಗಡಿ ಇಲ್ಲಿ ಸೇವೆ ಆರಂಭಿಸಿ ನಂತರ ಸ.ಹಿ.ಪ್ರಾ.ಶಾಲೆ ಸುಲ್ಕೇರಿಮೊಗ್ರು ಇಲ್ಲಿಗೆ ನಿಯೋಜನೆಗೊಂಡು ನಂತರ ದಿನಾಂಕ 16.06.1992ರಂದು ವರ್ಗಾವಣೆಗೊಂಡು ಸ.ಹಿ.ಪ್ರಾ.ಶಾಲೆ ನೆಗಳಗುಳಿ ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 24.07.1997ರಿಂದ25.03.2006ರವರೆಗೆ ಸ.‌ಹಿ.ಪ್ರಾ.ಶಾಲೆ ವಿದ್ಯಾಗಿರಿ ಪಡಿಬಾಗಿಲು ಇಲ್ಲಿ ಸೇವೆ ಸಲ್ಲಿಸಿ ನಂತರ ವರ್ಗಾವಣೆ ಗೊಂಡು 25.03.2006ರಿಂದ14.03.2011ರವರೆಗೆ ಸ.ಹಿ.ಪ್ರಾ.ಶಾಲೆ ನೀರ್ಕಜೆ ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 14.03.2011ರಲ್ಲಿ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿ ಸ.ಹಿ .ಪ್ರಾ.ಶಾಲೆ ದೊಂಪದಪಲ್ಕೆ ಉಜಿರೆ ಗ್ರಾಮ ಬೆಳ್ತಂಗಡಿ ಇಲ್ಲಿ ಸೇವೆ ಸಲ್ಲಿಸಿ ನಂತರ ಇಲ್ಲಿಂದ ವರ್ಗಾವಣೆ ಗೊಂಡು ಸ.ಹಿ.ಪ್ರಾ.ಶಾಲೆ ಕೋಡಪದವು ವಿಟ್ಲ ಪಡ್ನೂರು ಬಂಟ್ವಾಳ ಇಲ್ಲಿ ಸೇವೆ ಸಲ್ಲಿಸಿದ ಇವರು ಉತ್ತಮ ಸೇವೆಗೆ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ ಹಾಗೂ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ.ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಶಶಿಕಲಾ.ಎನ್
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಪಡಿಬಾಗಿಲು.


ಈಶ್ವರ ಭಟ್ ಎನ್ ಹಾಗೂ ಎನ್ ಪಾರ್ವತಿ ದಂಪತಿಗಳ ಸುಪುತ್ರಿಯಾಗಿ ಜನಿಸಿದ ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದು ಶಿಕ್ಷಕರ ಶಿಕ್ಷಣ ತರಬೇತಿಯನ್ನು ಪಡೆದು ದಿನಾಂಕ 25.10.1982ರಂದು ಗೌರವ ಶಿಕ್ಷಕಿಯಾಗಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕೋಡಪದವು ಇಲ್ಲಿ 3ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಯಾಗಿ ದಿನಾಂಕ 17.06.1985ರಲ್ಲಿಕೋಡಪದವುಶಾಲೆಯಲ್ಲಿ ತಮ್ಮ ಸೇವೆಯನ್ನು ಆರಂಭಿಸಿ ದಿನಾಂಕ 08.06.1988ರವರೆಗೆ ಈ ಶಾಲೆಯಲ್ಲಿ ಸೇವೆ ಸಲ್ಲಿಸಿ ನಂತರ ವರ್ಗಾವಣೆ ಗೊಂಡು ದಿನಾಂಕ 09.06.1988ರಿಂದ 29.07.1994ರವರೆಗೆ ದ.ಕ.ಜಿ.ಪಂಹಿ.ಪ್ರಾ.ಶಾಲೆ ಕೆಲಿಂಜ ಇಲ್ಲಿ ಸೇವೆ ಸಲ್ಲಿಸಿ ನಂತರ ವರ್ಗಾವಣೆ ಗೊಂಡು ದಿನಾಂಕ 30.07.1994ರಿಂದ 26.03.2007ರವರೆಗೆ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮೇಗಿನಪೇಟೆ ವಿಟ್ಲ ಇಲ್ಲಿ ಸೇವೆ ಸಲ್ಲಿಸಿ ನಂತರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಯಾಗಿ ಪದೋನ್ನತಿ ಹೊಂದಿ ದಿನಾಂಕ 26.03.2007ರಿಂದ 31.05.2022ರವರೆಗೆ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಪಡಿಬಾಗಿಲು ಇಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಲೀನಾ ಸೆರಾವೋ
ದ.ಕ.ಜಿ.ಪಂ.ಮಾ.ಹಿ.ಪ್ರಾಥಮಿಕ ಶಾಲೆ ಕೋಡಿಕಲ್.

ಮಂಗಳೂರು ಉತ್ತರ
ದಿನಾಂಕ 05.08.1998 ರಂದು ಸೇವೆಗೆ ಸೇರಿದ ಇವರು
ದ.ಕ.ಜಿ.ಪಂ.ಮಾ.ಹಿ.ಪ್ರಾ.ಶಾಲೆ ಕೋಡಿಕಲ್ ಮಂಗಳೂರು ನಗರ ಉತ್ತರದಲ್ಲಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತಿ ಜೀವನದ ಶುಭಾಶಯಗಳು

ಶ್ರೀಮತಿ ಪ. ಸತ್ಯಭಾಮಾ
ಸ.ಹಿ.ಪ್ರಾ ಶಾಲೆ ಕಾಟಿ
ಪಳ್ಳ 2ನೆ ಬ್ಲಾಕ್
ಮಂಗಳೂರು ಉತ್ತರ

02.07.1985 ರಲ್ಲಿ ಸೇವೆಗೆ ಸೇರಿದ ಇವರು ಸ. ಹಿ. ಪ್ರಾ ಶಾಲೆ ಕೆರೆಕಾಡುವಿನಲ್ಲಿ ಸೇವೆ ಸಲ್ಲಿಸಿ ಅಲ್ಲಿಂದ ವರ್ಗಾವಣೆಗೊಂಡು ನಂತರ ಸ. ಹಿ. ಪ್ರಾ.ಶಾಲೆ ಕಾಟಿಪಳ್ಳ 2 ನೇ ವಿಭಾಗದಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಸರೋಜ ಎಸ್
ಸ.ಹಿ.ಪ್ರಾ ಶಾಲೆ ಬೆಲ್ಮದೋಟ
ಮಂಗಳೂರು ದಕ್ಷಿಣ

09-09-1985ರಲ್ಲಿ ಸ.ಹಿ.ಪ್ರಾ ಶಾಲೆ ಕಣತಿ ಚಿಕ್ಕಮಗಳೂರು ಇಲ್ಲಿ ಸೇವೆಗೆ ಸೇರಿದ ಇವರು ನಂತರದಲ್ಲಿ ವರ್ಗಾವಣೆಗೊಂಡು ಸ.ಕಿ.ಪ್ರಾ ಶಾಲೆ ದಡ್ಡಿ ಮಂಗಳೂರು, ಸ.ಹಿ.ಪ್ರಾ ಶಾಲೆ ಆಮ್ಲಮೊಗರು ಶಾಲೆಗಳಲ್ಲಿ ಸೇವೆ ಸಲ್ಲಿಸಿ ಇದೀಗ ಸ.ಹಿ.ಪ್ರಾ ಶಾಲೆ
ಬೆಲ್ಮದೋಟದಲ್ಲಿ ಒಟ್ಟು 38 ವರ್ಷಗಳ ಸೇವೆಯೊಂದಿಗೆ ಈ ತಿಂಗಳು ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಸುಜಾತಾ ಪಿ
ಸ.ಹಿ.ಪ್ರಾ ಶಾಲೆ ಬೋಳಾರ
ಮಂಗಳೂರು ದಕ್ಷಿಣ


26.10.1993. ಸ. ಹಿ. ಪ್ರಾ ಶಾಲೆ ಮಳಲಿಯಲ್ಲಿ ಸೇವೆಗೆ ಸೇರಿ 2009 ರಲ್ಲಿ ಸ.ಹಿ.ಪ್ರಾ ಶಾಲೆ ಕಿಲೆಂಜಾರು, 2011ರಲ್ಲಿ ತಿರುವೈಲು CRP ಯಾಗಿ ಕಾರ್ಯ ನಿರ್ವಹಿಸಿ, 2014 ರಲ್ಲಿ ಸ.ಹಿ.ಪ್ರಾ.ಶಾಲೆ ಬಜಾಲ್ ಪಡ್ಪುವಿನಲ್ಲಿ ಸೇವೆ ಸಲ್ಲಿಸಿ, 2022 ರಿಂದ ಮುಖ್ಯ ಶಿಕ್ಷಕಿಯಾಗಿ ಸ.ಹಿ.ಪ್ರಾ ಶಾಲೆ ಬೋಳಾರಕ್ಕೆ ಭಡ್ತಿಗೊಂಡು ಈ ತಿಂಗಳು ಒಟ್ಟು 29 ವರ್ಷಗಳ ತಮ್ಮ ಸೇವೆಯಿಂದ ನಿವೃತ್ತರಾಗುತ್ತಿರುವ ಇವರಿಗೆ ನಿವೃತ್ತ ಜೀವನದ ಶುಭಾಶಯಗಳು

ಶ್ರೀಮತಿ ಲಿಲ್ಲಿ ಡಿ ಸೋಜ
ಸಹಶಿಕ್ಷಕಿ ಸರ್ಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ


01-06-1962ರಂದು ಅಲೆಕ್ಸ್ ಡಿಸೋಜ ಹಾಗೂ ಫ್ಲೋರ ಕ್ರಾಸ್ತ ದಂಪತಿಗಳ ಪುತ್ರಿಯಾಗಿ ಜನಿಸಿದ ತಾವು ಪ್ರಾಥಮಿಕ ಶಿಕ್ಷಣವನ್ನು ಸುಳ್ಯ ತಾಲೂಕಿನ ನಾರ್ಣಕಜೆ ಹಾಗೂ ಕೇರಳದ ಕಾಸರಗೋಡು ತಾಲೂಕು ಬೇಳ ಗ್ರಾಮದ ಸಂತ ಬಾರ್ಥೊಲೋಮಿಯ ಶಾಲೆಯಲ್ಲಿ ಪಡೆದರು. ಪ್ರೌಢಶಿಕ್ಷಣವನ್ನು ಉಡುಪಿ ಜಿಲ್ಲೆಯ ಬಾರ್ಕೂರಿನ ಮೇರಿನೋಲ್ ಗರ್ಲ್ಸ್ ಹೈ ಸ್ಕೂಲ್ ನಲ್ಲಿ ಪಡೆದರು. ಪಿಯುಸಿ ಶಿಕ್ಷಣವನ್ನು ಜೂನಿಯರ್ ಕಾಲೇಜು ಸುಳ್ಯ ಹಾಗೂ ಟಿಸಿಎಚ್ ಶಿಕ್ಷಣವನ್ನು ಸರಸ್ವತಿ ಟೀಚರ್ಸ್ ಟ್ರೈನಿಂಗ್ ಕಾಲೇಜು ಮಡಿಕೇರಿ ಕೊಡಗು ಜಿಲ್ಲೆ ಇಲ್ಲಿ ಮಾಡಿದರು. 1989 ಫೆಬ್ರವರಿ 16 ರಂದು ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಮಾದಪ್ಪ ಕಿರಿಯ ಪ್ರಾಥಮಿಕ ಶಾಲೆ ಇಲ್ಲಿ ಸರ್ಕಾರಿ ಸೇವೆಗೆ ಸೇರಿದ್ದರು. ಅಲ್ಲಿಂದ ವರ್ಗಾವಣೆಗೊಂಡು ದಿನಾಂಕ 03-06-1992ರಂದು ಪುತ್ತೂರು ತಾಲೂಕಿನ ಹಾರಾಡಿ ಶಾಲೆಗೆ ಸೇರಿದರು. ಇಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ನಿವೃತ್ತರಾಗುವ ತಾವು ಅಪಾರ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿರುವಿರಿ. ಗಂಡ ಆಲ್ಫೋನ್ಸ್ ಡಿಸೋಜ ಹಾಗೂ ಮೂರು ಜನ ಹೆಣ್ಣು ಮಕ್ಕಳೊಂದಿಗೆ ಸುಖ ಸಂಸಾರವನ್ನು ಸಾಗಿಸುವ ನಿಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.

ಬಿ. ತಾಬ್ರ
ಪಧವೀಧರೇತರ ಮುಖ್ಯ ಗುರುಗಳು
ಸ.ಮಾ.ಹಿ.ಪ್ರಾ.ಶಾಲೆ ಆರ್ಯಾಪು ಪುತ್ತೂರು ತಾಲೂಕು


ಸೇವೆಗೆ ಸೇರಿದ ದಿನಾಂಕ:10-07-1989 ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಡಿತಡ್ಕ ಇಲ್ಲಿ ಸೇವೆಗೆ ಸೇರಿ ಸುಮಾರು ಹತ್ತು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಓಜಾಲ ಬಂಟ್ವಾಳ ತಾಲೂಕು ಇಲ್ಲಿಗೆ ವರ್ಗಾವಣೆಗೊಂಡು ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದರು.2001-02ರಲ್ಲಿ ಪೂರ್ಣಕಾಲಿಕ ಮುಖ್ಯ ಶಿಕ್ಷಕರಾಗಿ ಬಡ್ತಿಗೊಂಡು ಪುತ್ತೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲ್ನಾಡು ಇಲ್ಲಿ ಸೇರಿದ್ದೀರಿ.2009-10ರಲ್ಲಿ ಪದವಿಧರೇತರ ಮುಖ್ಯ ಶಿಕ್ಷಕರಾಗಿ ಭಡ್ತಿಗೊಂಡು ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೋಳಂತೂರು ಇಲ್ಲಿ ಸುಮಾರು ಐದು ವರ್ಷಗಳ ಕಾಲ ಸೇವೆ ಸಲ್ಲಿಸಿ 2014ರಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆರ್ಯಾಪು ಪುತ್ತೂರು ತಾಲೂಕುಗೆ ವರ್ಗಾವಣೆಗೊಂಡು ಇದುವರೆಗೆ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿರುವಿರಿ.ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅಪಾರ ವಿದ್ಯಾರ್ಥಿ ಸಮೂಹಕ್ಕೆ ಜ್ಞಾನಾರ್ಜನೆಗೈದು ಅವರ ಬಾಳಿನ ಬೆಳಕಾಗಿದಿರಿ.ನಿಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.

ಶ್ರೀಮತಿ ರುಕ್ಮಿಣಿ ಡಿ
ಮುಖ್ಯ ಗುರುಗಳು ಸ.ಹಿ.ಪ್ರಾ.ಶಾಲೆ 34ನೇ ನೆಕ್ಕಿಲಾಡಿ ಪುತ್ತೂರು ತಾಲೂಕು


ಸರ್ಕಾರಿ ಸೇವೆಗೆ ಸೇರಿದ ದಿನಾಂಕ- 09- 11-1993 ರಂದು ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಮುಗೇರಡ್ಕ ಶಾಲೆ.ಅಲ್ಲಿ 1998 ಡಿಸೆಂಬರ್ ವರೆಗೆ ಕರ್ತವ್ಯ ನಿರ್ವಹಣೆ.ಅಲ್ಲಿಂದ ವರ್ಗಾವಣೆ ಗೊಂಡು 1999 ಜನವರಿಯಲ್ಲಿ ಕೋಡಿಂಬಾಡಿ ಶಾಲೆಯಲ್ಲಿ ಕರ್ತವ್ಯ. ಅಲ್ಲಿಂದ 2016 ಅಕ್ಟೋಬರ್ ನಲ್ಲಿ ಉಪ್ಪಿನಂಗಡಿ ಮಠ ಶಾಲೆಗೆ ವರ್ಗಾವಣೆ 2022 ಏಪ್ರಿಲ್ 30 ರವರೆಗೆ ಆದನಂತರ ಮುಖ್ಯ ಗುರುಗಳಾಗಿ ಭಡ್ತಿ ಗೊಂಡು ಮೇ 7 2022 ರಂದು ಸ ಹಿ ಪ್ರಾ ಶಾಲೆ 34ನೇ ನೆಕ್ಕಿಲಾಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಾವು ಇಂದು ನಿವೃತ್ತಿಯಾಗುತ್ತಿರುವಿರಿ.ನಿಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.

ಶ್ರೀಮತಿ ಪುಷ್ಪಾವತಿ.ಯು
ಹಿ.ಪ್ರಾ.ಶಾಲೆ, ಸವಣೂರು ಮೊಗರು.


ಇವರು ದಿನಾಂಕ 16.07.1985ರಲ್ಲಿ ಬೆಳ್ತಂಗಡಿ ತಾಲೂಕಿನ ಕಣಿಯೂರು ಕಸಬಾ ಹಿ.ಪ್ರಾ.ಶಾಲೆ ಇಲ್ಲಿ ಸೇವೆಗೆ ಸೇರಿ ನಂತರ 1988ರಿಂದ 2007ರವರೆಗೆ ಪುತ್ತೂರು ತಾಲೂಕಿನ ನೆಕ್ಕಿಲಾಡಿ ಹಿ.ಪ್ರಾ.ಶಾಲೆಯಲ್ಲಿ ಸೇವೆ ಸಲ್ಲಿಸಿ ನಂತರ ವರ್ಗಾವಣೆ ಗೊಂಡು 2007ರಿಂದ 2019ರವರೆಗೆ ಪುತ್ತೂರು ತಾಲೂಕಿನ ಬೊಳುವಾರು ಹಿ.ಪ್ರಾ.ಶಾಲೆಯಲ್ಲಿ ಸೇವೆ ಸಲ್ಲಿಸಿ ನಂತರ 2019ರಿಂದ 2020ರವರೆಗೆ ಸುಳ್ಯ ತಾಲೂಕಿನ ತಂಟೆಪಾಡಿ ಶಾಲೆ ಯಲ್ಲಿ ಸೇವೆ ಸಲ್ಲಿಸಿ ನಂತರ 2020ಫೆಬ್ರವರಿಯಿಂದ ಹಿ.ಪ್ರಾ.ಶಾಲೆ ಸವಣೂರು ಮೊಗರಿನಲ್ಲಿ ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು

ಅಕ್ಷರ ದೀಪದ ಬೆಳಕನ್ನಿತ್ತು ದಶಕಗಳ ವೃತ್ತಿಬದುಕಿನ ಸಾರ್ಥಕ ಸೇವೆಯಿಂದ ವಿರಮಿಸುತ್ತಿರುವ ತಮ್ಮ ಮುಂದಿನ ದಿನಗಳು ಆಯುರಾರೋಗ್ಯದಿಂದ ಕೂಡಿರಲಿ. ಸಮೃದ್ಧಿಯ ತಮ್ಮ ನಿವೃತ್ತ ಜೀವನಕ್ಕೆ ಆತ್ಮೀಯ ಶುಭ ಹಾರೈಕೆಗಳು.

Sharing Is Caring:

Leave a Comment