ಶಾಲೆಗಳಲ್ಲಿ ಪ್ಲಾಸ್ಟಿಕ್ ಬಳಸುತಿದ್ದೀರಾ? ಎಚ್ಚರ

ಪ್ಲಾಸ್ಟಿಕ್ ಬಳಸಿದ ಉಡುಗೊರೆ ನೀಡುವ ಶಾಲಾ ಕಾಲೇಜು ಮತ್ತು ಶಿಕ್ಷಣ ಇಲಾಖೆಯ ಕಛೇರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ

ರಾಜ್ಯದಾದ್ಯಂತ ಶಾಲಾ ಕಾಲೇಜುಗಳಿಗೆ ಶಿಕ್ಷಣ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಅವರ ಗೌರವಾರ್ಥ ಪ್ಲಾಸ್ಟಿಕ್ ಸುತ್ತಿದ ಹೂಗುಚ್ಚ, ಪ್ಲಾಸ್ಟಿಕ್ ಲಕೋಟೆ ಸುತ್ತಿದ ಪುಸ್ತಕ ಸೇರಿದಂತೆ ಇನ್ನಿತರೆ ಪ್ಲಾಸ್ಟಿಕ್ ಸಂಬಂಧಿಸಿದ ಉಡುಗೊರೆ ನೀಡಿರುವುದನ್ನು ಗಮನಿಸಿ ಈಗಾಗಲೇ ಜಾರಿಯಲ್ಲಿರುವ ಪ್ಲಾಸ್ಟಿಕ್ ನಿಷೇಧ ಕಾಯ್ದೆಯನ್ವಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ರಾಜ್ಯದ ಎಲ್ಲಾ ಉಪನಿರ್ದೇಶಕರಿಗೆ ಆದೇಶ ನೀಡಿರುತ್ತಾರೆ.

ಆ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಾವುಟ, ಭಿತ್ತಿ ಚಿತ್ರ, ಲೋಟ ಚಮಚ, ಕ್ಯಾರಿಬ್ಯಾಗ್ ಮುಂತಾದ ಎಲ್ಲಾ ರೀತಿಯ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

Sharing Is Caring:

Leave a Comment