ಬಿಸಿಯೂಟದ ಸಿಬ್ಬಂದಿಗಳನ್ನು ಶ್ರಮಯೋಗಿ ಮಾನ್ ಧನ್ ಪಿಂಚಣಿಗೆ ಹೆಸರು ನೋಂದಾಯಿಸಲು ಆದೇಶ

ಅಸಂಘಟಿತ ಕಾರ್ಮಿಕ ವಲಯಕ್ಕೆ ವೃದ್ಧಾಪ್ಯದಲ್ಲಿ ಪಿಂಚಣಿ ಸೌಲಭ್ಯ ಪಡೆಯಲು ಭಾರತ ಸರಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ – ಧನ್ ಯೋಜನೆಯ ಫಲಾನುಭವಿಗಳ ವ್ಯಾಪ್ತಿಗೆ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬಿಸಿಯೂಟದ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರು ಮತ್ತು ಸಹಾಯಕ ಅಡುಗೆ ಸಿಬ್ಬಂದಿಗಳು ಕೂಡ ಒಳಪಡುವುದರಿಂದ ಅವರಿಗೆ ಈ ಕುರಿತ ಮಾಹಿತಿ ನೀಡಿ ಅಥವಾ ಕ್ಯಾಂಪ್ ಗಳನ್ನು ನಡೆಸಿ ಹೆಸರು ನೊಂದಾಯಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಮಾಡಿರುತ್ತಾರೆ.
