ಹಿಮಾಚಲಪ್ರದೇಶದ NPS ನೌಕರರ ಸಂಘಟನೆಯು NMOPS ನ ಸಹಯೋಗದೊಂದಿಗೆ ಬೃಹತ್ ಆಂದೋಲನ ರೂಪಿಸಿದ್ದು,ಬೃಹತ್ ಸಂಖ್ಯೆಯ ನೌಕರರು ನಿನ್ನೆಯ ಚಳವಳಿಯಲ್ಲಿ ಪಾಲ್ಗೊಂಡರು. ಸರಕಾರದ ನೀತಿಗಳು ನೌಕರ ಸ್ನೇಹಿಯಾಗಿರದೆ ನೌಕರರ ಸಂಧ್ಯಾಕಾಲದ ಜೀವನವನ್ನು ಹೈರಾಣಾಗಿಸುವ ಹುನ್ನಾರವನ್ನು ಸೃಷ್ಟಿಸಿದೆ.
ಪ್ರತಿಭಟನೆಯ ಕಾವು ತೀವ್ರಗೊಳ್ಳುವುದನ್ನು ಅರಿತ ಹಿಮಾಚಲ ಪ್ರದೇಶ ಸರ್ಕಾರ NPS ಯೋಜನೆಯ ಸಾಧಕ ಬಾಧಕಗಳ ಕುರಿತು ವಿಸ್ತ್ರತ ವರದಿಗಾಗಿ ಸಮಿತಿ ರಚನೆಗೆ ಮುಂದಾಗಿದ್ದು, ಸರಕಾರದ ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಈ ಸಂಬಂಧ ಸುತ್ತೋಲೆ ಹೊರಡಿಸಿರುತ್ತಾರೆ.ನೌಕರರ ಪರವಾಗಿ ಸಮಿತಿಯ ಬರಲಿ ಎಂಬುವುದು ನೌಕರರ ಪ್ರತಿಕ್ರಿಯೆಯಾಗಿದೆ.
ಕರ್ನಾಟಕದಲ್ಲಿಯೂ ಮಾನ್ಯ ಸಭಾಪತಿ ಶ್ರೀ ಬಸವರಾಜ್ ಹೊರಟ್ಟಿ ಇವರು nps ವಿರುದ್ಧ ಸರಕಾರ ಸರಿಯಾಗಿ ಸ್ಪಂದಿಸದೆ ಇರುವುದಕ್ಕೆ ವಿಷಾದ ವ್ಯಕ್ತ ಪಡಿಸಿರುತ್ತಾರೆ