ನಿರಂತರ (NIRANTARA) ಆಪ್‌ನಲ್ಲಿನ ತಾಂತ್ರಿಕ ಸಮಸ್ಯೆಗಳನ್ನು Grievance ಮೂಲಕ ಸರಿಪಡಿಸುವ ವಿಧಾನ
ನಿರಂತರ ವಿದ್ಯಾರ್ಥಿ ಹಾಜರಾತಿ ಆಪ್ ಬಳಸುವಾಗ ಎದುರಾಗುವ ಸಮಸ್ಯೆಗಳನ್ನು ಆಪ್ನ ‘Grievance’ ವಿಭಾಗದಲ್ಲಿ ಹೇಗೆ ಬಗೆಹರಿಸಿಕೊಳ್ಳುವುದು ಎಂಬುದರ ಕುರಿತು ಈ ಕೆಳಗಿನ ಹಂತಗಳನ್ನು ಅನುಸರಿಸಿ:
1. ತರಗತಿ ಅಥವಾ ಸೆಕ್ಷನ್ ಮಾಹಿತಿ ಲಭ್ಯವಿಲ್ಲದಿರುವಾಗ (Registration Issue):
ವಿದ್ಯಾರ್ಥಿ ನೋಂದಣಿ ಮಾಡುವಾಗ ‘Get Student List’ ಬಟನ್ ಕೆಲಸ ಮಾಡದಿದ್ದರೆ ಅಥವಾ ತರಗತಿ/ಸೆಕ್ಷನ್ ಕಾಣಿಸದಿದ್ದರೆ:
ಆಪ್‌ನಲ್ಲಿ ‘Grievance’ ಬಟನ್ ಕ್ಲಿಕ್ ಮಾಡಿ.
’Select Issue Type’ ನಲ್ಲಿ ‘Registration Issue’ ಎಂದು ಆಯ್ಕೆ ಮಾಡಿ.
ವಿವರಣೆಯಲ್ಲಿ (Description): “Class and section details are not showing up at the time of student registration” ಎಂದು ಬರೆಯಿರಿ.
ತೊಂದರೆ ಕಾಣಿಸುತ್ತಿರುವ ಸ್ಕ್ರೀನ್‌ನ ಫೋಟೋ ತೆಗೆದು ಪ್ಲಸ್ (+) ಬಟನ್ ಬಳಸಿ ಅಪ್‌ಲೋಡ್ ಮಾಡಿ, ನಂತರ ‘Submit’ ಮಾಡಿ.
2. ಹಳೆಯ ವರ್ಷದ ವಿದ್ಯಾರ್ಥಿಗಳ ಪಟ್ಟಿ ಕಾಣಿಸುತ್ತಿದ್ದರೆ (Data Issue):
ಪ್ರಸ್ತುತ 2026-27ನೇ ಸಾಲಿನ ಬದಲಿಗೆ ಹಳೆಯ ವರ್ಷದ ಲಿಸ್ಟ್ ಕಾಣಿಸುತ್ತಿದ್ದರೆ:
’Grievance’ ವಿಭಾಗದಲ್ಲಿ ‘Data Issue’ ಎಂದು ಆಯ್ಕೆ ಮಾಡಿ.
ವಿವರಣೆಯಲ್ಲಿ: “While registering students, the list of students from the previous academic year is being displayed. Please update it to show the current academic year 2026-27 list” ಎಂದು ಬರೆಯಿರಿ.
ಹಳೆಯ ಲಿಸ್ಟ್‌ನ ಸ್ಕ್ರೀನ್‌ಶಾಟ್ ಅಪ್‌ಲೋಡ್ ಮಾಡಿ ‘Submit’ ಮಾಡಿ.
3. ವಿದ್ಯಾರ್ಥಿಗಳ ಫೋಟೋ ತಪ್ಪಾಗಿ ಅಪ್‌ಲೋಡ್ ಆಗಿದ್ದರೆ (Photo Correction):
ಒಬ್ಬ ವಿದ್ಯಾರ್ಥಿಯ ಬದಲಾಗಿ ಮತ್ತೊಬ್ಬರ ಫೋಟೋ ಅಪ್‌ಲೋಡ್ ಆಗಿದ್ದರೆ:
’Registration Issue’ ಆಯ್ಕೆ ಮಾಡಿ.
ವಿವರಣೆಯಲ್ಲಿ: “Student [ವಿದ್ಯಾರ್ಥಿಯ ಹೆಸರು], STS ID [ವಿದ್ಯಾರ್ಥಿಯ ಐಡಿ] is being registered. However, during the registration time, another student’s photograph was captured. Kindly provide an option to update the correct photograph of the student” ಎಂದು ಬರೆಯಿರಿ.
ಆ ತಪ್ಪಾದ ಫೋಟೋ ಅಥವಾ ಸ್ಕ್ರೀನ್‌ಶಾಟ್ ಲಗತ್ತಿಸಿ ‘Submit’ ಮಾಡಿ.
ಗಮನಿಸಿ:
ನೀವು ಸಲ್ಲಿಸಿದ ದೂರಿನ ಪ್ರಗತಿಯನ್ನು ನೋಡಲು ಆಪ್‌ನಲ್ಲಿರುವ ನೀಲಿ ಬಣ್ಣದ ‘Raised Grievance’ ಬಟನ್ ಕ್ಲಿಕ್ ಮಾಡಿ.
ಈ ದೂರು ಸಲ್ಲಿಸುವಾಗ ನಿಮ್ಮ ಶಾಲೆಯ ಲೊಕೇಶನ್ ಮತ್ತು ಸರಿಯಾದ ಸಂಪರ್ಕ ಸಂಖ್ಯೆಯನ್ನು ತಪ್ಪದೇ ನಮೂದಿಸಿ.