ಪರಿಸರ ಹಬ್ಬ ಚಟುವಟಿಕೆಗಳು :
1.ಎಲೆನೋಡು – ಸಸ್ಯ ಗುರುತಿಸು ನಿಸರ್ಗದೆಡೆಗೆ ನಮ್ಮ ನಡಿಗೆ
ಬೇಕಾಗುವ ಸಾಮಗ್ರಿ ವಿವಿಧ ರೀತಿಯ ಎಲೆಗಳು, ಬಿಳಿಹಾಳೆ, ಪೆನ್ನು ಪೆನ್ಸಿಲ್/ಚಾಕ್
ಪೂ ರ್ವ ತಯಾರಿ: ಶಿಕ್ಷಕರು ಈ ಮೊದಲೇ ವಿವಿಧ ರೀತಿಯ ಪರಿಚಿತ ಎಲೆಗಳನ್ನು (ಸುಮಾರು 20) ಸಂಗ್ರಹಿಸಿ ತಂದು,ಸಭಾಂಗಣದ ಒಂದು ಪಾರ್ಶ್ವದಲ್ಲಿ ನೆಲದ ಮೇಲೆ ಸಾಲಾಗಿ ಜೋಡಿಸಿ ಪ್ರತಿಯೊಂದಕ್ಕೆ ಕ್ರಮಸಂಖ್ಯೆಯನ್ನು ನೀಡುವುದು
ಮಾಡುವ ವಿಧಾನ : ವಿದ್ಯಾರ್ಥಿಗಳಿಗೆ ಸಾಲಾಗಿ ಹೋಗಿ ತಮ್ಮ ಪುಸ್ತಕದಲ್ಲಿ, ಆಯಾಯ ಕ್ರಮ ಸಂಖ್ಯೆಯ ಮುಂದೆಆಯಾಯ ಎಲೆಗಳ ಹೆಸರನ್ನು ಕ್ರಮಪ್ರಕಾರವಾಗಿ ಬರೆಯಲು ನಿಗದಿತ ಕಾಲಾವಕಾಶ ನೀಡುವುದು, ಆ ಬಳಿಕ ಅವರುಬರೆದಿರುವ ಹಾಳೆಗಳನ್ನು ಸಂಗ್ರಹಿಸಿ ಪರಿಶೀಲಿಸುವುದು,• 4 ರಿಂದ ನೇತರಗತಿಯಮಕ್ಕಳುಈ ಚಟುವಟಿಕೆಗಳಲ್ಲಿ ಭಾಗವಹಿಸಲಿ.
ಮಾಡುವ ವಿಧಾನ : ವಿದ್ಯಾಾರ್ಥಿಗಳಿಗೆ ಸಾಲಾಗಿ ಹೋಗಿ ತಮ್ಮ ಪುಸ್ತಕದಲ್ಲಿ, ಆಯಾಯ ಕ್ರಮ ಸಂಖ್ಯೆಯ ಮುಂದೆ ಆಯಾಯ ಎಲೆಗಳ ಹೆಸರನ್ನು ಕ್ರಮಪ್ರಕಾರವಾಗಿ ಬರೆಯಲು ನಿಗದಿತ ಕಾಲಾವಕಾಶ ನೀಡುವುದು, ಆ ಬಳಿಕ ಅವರುಬರೆದಿರುವ ಹಾಳೆಗಳನ್ನು ಸಂಗ್ರಹಿಸಿ ಪರಿಶೀಲಿಸುವುದು,• 4 ರಿಂದ9ನೇ ತರಗತಿಯ ಮಕ್ಕಳು ಈಚಟುವಟಿಕೆಗಳಲ್ಲಿ ಭಾಗವಹಿಸಲಿ.
2. ಅರಿತು ಬೆರೆಯೋಣ ನಿಸರ್ಗದ ಮಡಿಲಲಿ
ಬೇಕಾಗುವ ಸಾಮಗ್ರಿ : ಪುಸ್ತಕ ಪೆನ್ನು ಪೆನ್ಸಿಲ್
ಮಾಡುವ ವಿಧಾನ :ವಿದ್ಯಾರ್ಥಿಗಳನ್ನು 3-4ತಂಡಗಳನ್ನಾಗಿ ವಿಂಗಡಿಸಿ, ಶಾಲಾ ಪರಿಸರದ ಸುತ್ತ-ಮುತ್ತ ಸುತ್ತಾಡಲು 10ನಿಮಿಷನೀಡುವುದು, 1ನೇ ತಂಡ ತಾವು ಆಲಿಸಿದ ಪ್ರಾಣಿ/ಪಕ್ಷ ಕೀಟಗಳ ಸದ್ದು ಮನುಷ್ಯರ ಸಮ್ಮು, ವಸ್ತುಗಳ ಶಬ್ದ ಹಾಗೂ ವಾಹನಗಳ ಶಬ್ದ ಆಲಿಸಿ ಅವುಗಳನ್ನು ಪಟ್ಟಿ ಮಾಡಲು ತಿಳಿಸುವುದು, ಅಂತೆಯೇ ಉಳಿದ ತಂಡಗಳಿಗೆ ವಿವಿಧ ಹೂಗಳು, ಹಾರುವ ಜೀವಿಗಳು, ಗಿಡ-ಮರಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಲು ತಿಳಿಸಿ ಕಾಲಾವಕಾಶ ಮುಗಿದಬಳಿಕ ಒಂದು ಮರದ ಅಡಿಯಲಿ /ಸಭಾಂಗಣದಲ್ಲಿ ಒಟ್ಟು ಸೇರಿ ತಾವು ಪಟ್ಟಿ ಮಾಡಿದ ಅಂಶಗಳನ್ನು ಒಬ್ಬೊಬ್ಬರಾಗಿ ಹೇಳುವುದು ಮತ್ತು ಅನುಕರಣೆ ಮಾಡುವುದು,• 4 ರಿಂದ 9ನೇ ತರಗತಿಯ ಮಕ್ಕಳು ಈ ಚಟುವಟಿಕೆಗಳಲ್ಲಿ ಭಾಗವಹಿಸಲಿ.
3. ನಿಸರ್ಗ ದೂಡಲಿನ ಬಣ್ಣದೋಕುಳಿ
ಬೇಕಾಗುವ ಸಾಮಗ್ರಿ : ವಿವಿಧ ಹಣ್ಣು, ತರಕಾರಿ, ಮಸಿ, ವಿವಿಧ ಬಣ್ಣದ ಕಲ್ಲುಗಳ, ಪಾಸ್ಮಿಕ್ ಲೋಟಿ, ನೀರು, ಎಲೆಗಳು, ಅರಶಿನ ಹುಡಿ,ಸುಣ, ದಾಸವಾಳ ಹೂ ಇತ್ಯಾದಿ
ಪೂರ್ವತಯಾರಿ : ವಿದ್ಯಾರ್ಥಿಗಳಿಗೆ 2ದಿನ ಮುಂಚಿತವಾಗಿ ಮೇಲಿನ ಸಾಮಾಗ್ರಿಗಳನ್ನು ತರಲು ತಿಳಿಸುವುದು,ಮಾಡುವ ವಿಧಾನ ವಿದ್ಯಾರ್ಥಿಗಳು ತಾವು ತಂದಿರುವ ನೈಸರ್ಗಿಕ ವಸ್ತುಗಳಿಂದ ವಿವಿಧ ಬಣ ತಯಾರಿಸುವುದು, ಉದಾ: ಮಸಿಯನ್ನು ತೇದು ಕಪ್ಪು ಬಣ, ಅರಶಿನ ಹುಡಿಗೆ ನೀರು ಮಿಶ್ರ ಮಾಡಿದಾಗ ಹಳದಿ ಬಣ, ಈ ಮಿಶ್ರಣಕ್ಕೆ, ಸ್ಪ, ಸುಣ್ಣ ಹಾಕಿದರೆ ಕೆಂಪು ಬಣ, ಇತ್ಯಾದಿ,[ ವಿವಿಧ ರೀತಿಯ ಬಣ ಬಿಡುಗಡೆ ಮಾಡುವ ಹಣು, ತರಕಾರಿ, ಹೂಗಳನ್ನು, ಕಲುಗಳನ್ನು ತೇದು ಬಣ್ಣ ತಯಾರಿಸಬಹುದು] ಈ ಬಣ್ಣವನ್ನೇ ಬಳಸಿಕೊಂಡು ಚಿತ್ರ ತಯಾರಿಸಲು ಹೇಳಬಹುದು,• 4 ರಿಂದ 8 ನೇ ತರಗತಿಯ ಮಕ್ಕಳು ಈ ಚಟುವಟಿಕೆಗಳಲ್ಲಿ ಭಾಗವಹಿಸಲಿ.
4. ಮುಟ್ಟಿ ನೋಡು ಕಟ್ಟಿ, ಹೇಳು(ಪಂಚೇಂದ್ರಿಯಗಳಿಂದ ಕಲಿಕೆ)
ಬೇಕಾಗುವ ಸಾಮಗ್ರಿ :ವಿವಿಧ ಧಾನ, ಕಾಳುಗಳು, ಬಟ್ಟೆ ತುಂಡುಗಳು, ತಂತಿ, ದಾರ, ಪುಸ್ತಕ, ಪೆನ್ನು
ಪೂರ್ವತಯಾರಿ : ಶಿಕ್ಷಕರು ಈ ಮೊದಲೇ ಸುಮಾರು 10ರಿಂದ 200ತಿಯ ವಿವಿಧ ಧಾನ, ಕಾಳುಗಳನ್ನು ತಂದು ಅವುಗಳನ್ನು ಸಣ್ಣ-ಸಣ, ಬಟ್ಟೆಯ ತುಂಡುಗಳಲ್ಲಿ ದಾರದ ಸಹಾಯದಿಂದ ಕಟ್ಟಿ, ಒಂದು ಉದ್ದನೆಯತಂತಿಯನ್ನು ಕಿಟಕಿಯ ಸರಳುಗಳಿಗೆ ಬಿಗಿದು ಈ ಧಾನ್ಯಗಳ ಕಟ್ಟುಗಳನ್ನು ಕ್ರಮಾನುಗತವಾಗಿ ತಂತಿಗೆ ತೂಗು ಹಾಕಿ ಅವುಗಳಿಗೆ ಕ್ರಮಸಂಖ್ಯೆ ನೀಡಬೇಕು.
ಮಾಡುವ ವಿಧಾನ : ವಿದ್ಯಾರ್ಥಿಗಳನ್ನು ಸಾಲಾಗಿ ನಿಸಿ ಧಾನ್ಯಗಳನ್ನು ಸ್ಪರ್ಶಿಸಿ ಗುರುತಿಸಲು ತಿಳಿಸುವುದು,ಗುರುತಿಸಿದ ಧಾನ್ಯಗಳ ಹೆಸರನ್ನು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಲು ತಿಳಿಸುವುದು,●4 ರಿಂದ ನೇತರಗತಿಯ ಮಕ್ಕಳು ಈ ಚಟುವಟಿಕೆಗಳಲ್ಲಿ ಭಾಗವಹಿಸಲಿ,[ ಇದೇ ರೀತಿ ವಾಸನೆ ಗ್ರಹಿಸಿ, ರುಚಿ ನೋಡಿ ಗುರುತಿಸುವಚಟುವಟಿಕೆಯನ್ನು ಮಾಡಿಸಬಹುದು]
5.ನಟನ ವೀಕ್ಷಿಸು ಚಟುವಟಿಕೆ ಗುರುತಿಸು(ಆಶುನಟನೆ)
ಬೇಕಾಗುವ ಸಾಮಗ್ರಿ :ಚೀಟಿ, ಡಬ್ಬ
ಪೂರ್ವತಯಾರಿ : ಶಿಕ್ಷಕರು ಚೀಟಿಯಲ್ಲಿ ವಿವಿಧ ವಿಷಯಗಳನ್ನು ಬರೆದು ಮಡಚಿ ಡಬ್ಬದಲ್ಲಿ ಹಾಕಿಡುವುದು,ಮಾಡುವ ವಿಧಾನ : ವಿದ್ಯಾರ್ಥಿಗಳನ್ನು ಅರ್ಧ ವೃತ್ತಾಕಾರವಾಗಿ ಕುಳ್ಳಿರಿಸಿ, ಮುಂಭಾಗದಲ್ಲಿ, ಡಬ್ಬ ಇಟ್ಟು,ಸರದಿಯಲ್ಲಿ ವಿದ್ಯಾರ್ಥಿಗಳು ಬಂದು ಒಂದೊಂದು ಚೀಟಿ ಆಯುಕೊಂಡು ಅಲ್ಲಿನ ವಿಷಯುಕ ಪರಿಯಾಗಿಮೂಕಾಭಿನಯಿಸುವುದು, ಉಳಿದ ವಿದ್ಯಾರ್ಥಿಗಳು ಅಭಿನಯವನ್ನು ವೀಕ್ಷಿಸಿ, ವಿಷಯ ಯಾವುದೆಂದು ತಿಳಿಸಲಿ,[ ವಿದ್ಯಾರ್ಥಿಗಳು ಸಿದ್ಧತೆಗಾಗಿ 2ನಿಮಿಷ ಬಳಸಿಕೊಳ್ಳಲಿ.]ಉದಾ : ಚಹಾ ತಯಾರಿಸುವಂತೆ ನಟಿಸುವುದು,.4 ರಿಂದ 10ನೇತರಗತಿಯ ಮಕ್ಕಳು ಈ ಚಟುವಟಿಕೆಗಳಲ್ಲಿ ಭಾಗವಹಿಸಲಿ,
6.ನಿಯಮ ತಿಳಿ ರಸ್ತೆಗಿಳಿ
ಬೇಕಾಗುವ ಸಾಮಗ್ರಿ : ರಸ್ತೆ ಸಂಕೇತದ ಫಲಕಗಳು
ಪೂರ್ವತಯಾರಿ : ವಿವಿಧ ರಸ್ತೆ ಸಂಕೇತ ಹೊಂದಿರುವ ಫಲಕಗಳನ್ನು ಸಿದ್ಧಮಾಡಿಕೊಳ್ಳುವುದು
ಮಾಡುವ ವಿಧಾನ : ಶಾಲಾ ಮೈದಾನದ ಸುತ್ತ ವೃತ್ತಾಕಾರದಲ್ಲಿಅಲ್ಲಲ್ಲಿ ರಸ್ತೆ ಸಂಕೇತ ಹಿಡಿದುಕೊಂಡಿರುವ ವಿದ್ಯಾರ್ಥಿಗಳನ್ನು ನಿಲಿಸುವುದು. ಓರ್ವ ಟ್ರಾಫಿಕ್ ಪೋಲೀಸ್ಆಗಿ ಸೂಚನೆ ನೀಡುತ್ತಿರಬೇಕು. ಕೆಲವು ವಿದ್ಯಾರ್ಥಿಗಳನ್ನು ದ್ವಿಚಕ್ರ, ತ್ರಿಚಕ್ರ, 4ಹಾಗೂ 6ಚಕ್ರಗಳ ವಾಹನ ಸವಾರರಾಗಿ ಅಭಿನಯಿಸಲು ಹೇಳುವುದು, ಅವರು ಮೈದಾನದ ಸುತ್ತ ವಾಹನ ಓಡಿಸಿದಂತೆ ನಟಿಸುತ್ತಾ, ರಸ್ತೆ ಸಂಕೇತ ಕಂಡಾಗ ಅದರ ಅರ್ಥ ತಿಳಿಸಿ ಅದರಂತೆ ಪಾಲಿಸಬೇಕು.
7. ಕೇಸರಿ ನಡುವೆ ಹಸಿರು ನೋಡು
ಬೇಕಾಗುವ ಸಾಮಗ್ರಿ :ಮಣು, ನೀರು, ರಾಗಿ, ಒಂದೇ ಗಾತ್ರದ ಕಲ್ಲು, ಅಥವಾ ಸುಟ್ಟ ಇಟ್ಟಿಗೆ
ಪೂರ್ವತಯಾರಿ : ಅಗತ್ಯವಿರುವಷ್ಟು ರಾಗಿಯನ್ನು ತಂದಿಟ್ಟುಕೊಳ್ಳುವುದು, ಸುಟ್ಟ ಇಟ್ಟಿಗೆ ಅಥವಾ ಒಂದೇ ಗಾತ್ರದ ಕಲ್ಲುಗಳನ್ನು ಸಂಗ್ರಹಿಸಿ ತಂದಿಟ್ಟು ಕೊಳ್ಳುವುದು
ಮಾಡುವ ವಿಧಾನ :
ಶಾಲಾ ಪ್ರಾರಂಭದ ಮೊದಲನೇ ದಿನ ಮೇಲೆ ಹೇಳಿರುವ ಪರಿಕರಗಳನ್ನು ತಂದಿಟ್ಟುಕೊಳ್ಳುವುದು.2ನೇ ದಿನ ಮಕ್ಕಳೇ ಶಾಲಾ ಮೈದಾನದಲ್ಲಿ, ಭಾರತ/ಕರ್ನಾಟಕ/ಜಿ ಗ್ರಾಮ ನಕಾಶೆಯನ್ನು ದೊಡ್ಡ ಗಾತ್ರದಲ್ಲಿ,ಚಿತ್ರಿಸಿ, ಅದರ ಹೊರ ಅಂಚಿನ ಮೇಲೆ ಕಲ್ಲು ಇಟ್ಟಿಗೆಗಳನ್ನು ಸಾಲಾಗಿ ಜೋಡಿಸುವುದು, ನಂತರ ಇದರೊಳಗೆ2ಇಂಚು ದಪ್ಪಕೆ, ಮಣನ್ನು ಸುರಿದು ಅದಕ್ಕೆ ನೀರು ಚಿಮುಕಿಸಿ ರಾಗಿಯನ್ನು ಆ ಭಾಗಕ್ಕೆ ಮಣ್ಣಿನ ಮೇಲೆಮಂದವಾಗಿ ಚೆಲಬೇಕು. ನಂತರ ಪ್ರತಿ ದಿನ 3ಬಾರಿ ನೀರು ಚಿಮುಕಿಸುತ್ತಿರಬೇಕು, 3-4ದಿನದ ಬಳಿಕ ರಾಗಿ ಮೊಳೆತುಭಾರತ/ಕರ್ನಾಟಕದ ನಕಾಶೆ ಹಚ್ಚ ಹಸುರಾಗಿ ಕಂಗೊಳಿಸುವುದು,• 6ಮತ್ತು 9ನೇತರಗತಿಯ ಮಕ್ಕಳುಈ ಚಟುವಟಿಕೆಗಳಲ್ಲಿ ಭಾಗವಹಿಸಲಿ,ಸೂಚನೆ : ಈ ಚಟುವಟಿಕೆಗಾಗಿ ಮಕ್ಕಳ ಹಬ್ಬದ ಮೊದಲ ದಿನವೇ ಸೂಚನೆ ಕೊಟ್ಟು 2 ನೇದಿನಬಿತ್ತನೆ ಮಾಡಲಿ.ಏಳನೇ ದಿನ ಕಸರ ನಡುವಿನ ಹಸಿರು ನೋಡಿ ಸಂಭ್ರಮಿಸಲಿ,
8.ಮರಗಳ ಸಹಿ ಸಂಗ್ರಹ
ಬೇಕಾಗುವ ಸಾಮಗ್ರಿ :ಬಿಳಿ ಹಾಳೆ, ಬಣದ ಕಲುಗಳು, ಮಸಿ, ಪೆನ್ನು
ಮಾಡುವ ವಿಧಾನ : ವಿದ್ಯಾರ್ಥಿಗಳನ್ನು ಬಿಳಿಹಾಳೆ ಮತ್ತು ಬಣದ ಕಲುಗಳೊಂದಿಗೆ ಶಾಲಾ ಪರಿಸರದಲ್ಲಿಸುತ್ತಾಡಲು ತಿಳಿಸುವುದು, ಮರಗಳ ತೊಗಟೆಯ ಮೇಲೆ ಬಿಳಿ ಹಾಳೆ ಇಟ್ಟು ಬಣದ ಕಲುಗಳಿಂದ ತೊಗಟೆಯ ಬಿಂಬಮೂಡುವಂತೆ ಉಜ್ವಲು ತಿಳಿಸುವುದು, ಹಾಳೆಯ ಮೇಲೆ ಆ ಮರದ ಹೆಸರು ಬರೆಯುವುದು,• 4 ರಿಂದ 7ನೇ ತರಗತಿಯ ಮಕ್ಕಳು ಈ ಚಟುವಟಿಕೆಗಳಲ್ಲಿ ಭಾಗವಹಿಸಲಿ
9.ಎಣಿಸೋಣ ಬಾರಾ, ಕಾಲುಗಳೆನ್ನು ?
ಬೇಕಾಗುವ ಸಾಮಗ್ರಿ : ಪುಸ್ತಕ ಪೆನ್ನು
ಮಾಡುವ ವಿಧಾನ : ವಿದ್ಯಾರ್ಥಿಗಳನ್ನು ಸಾಲಾಗಿ ಕುಳ್ಳಿರಿಸಿ, ತಮ್ಮ ನಿತ್ಯ ಜೀವನದಲ್ಲಿ, ಚಿರಪರಿಚಿತವಾಗಿರುವ
ಕೀಟಗಳು, ಪ್ರಾಣಿಗಳು, ಪಕ್ಷಿಗಳ ಕಾಲುಗಳ ಸಂಖ್ಯೆ ಹಾಗೂ ಬೆರಳುಗಳ ಸಂಖ್ಯೆಯನ್ನು ಅಂದಾಜು ಮಾಡಿ ಬರೆಯಲು
ತಿಳಿಸುವುದು, ಆ ಬಳಿಕ ಅವರನ್ನು ಶಾಲಾ ಪರಿಸರದಲ್ಲಿ ಸುತ್ತಾಡಲು ಬಿಟ್ಟು ನೈಜ ಜೀವಿಗಳನ್ನು ಹುಡುಕಿ
ಪ್ರತ್ಯಕ್ಷವಾಗಿ ನೋಡಿ ತಾವು ಬರೆದಿರುವ ಈ ಸಂಖ್ಯೆಗಳನ್ನು ಪರಿಶೀಲಿಸಲಿ,
ಉದಾ: ಕಪ್ಪಗೆ ಕಾಲುಗಳೆಷ್ಟು ? ಜೇಡಕ್ಕೆ ಕಾಲುಗಳಷ್ಟು ? ಹಲಿಗೆ ಬೆರಳುಗಳೆಷ್ಟು ?
.
8ಮತ್ತು 9ನೇ ತರಗತಿಯ ಮಕ್ಕಳು ಈ ಚಟುವಟಿಕೆಗಳಲ್ಲಿ ಭಾಗವಹಿಸಲಿ.
10 . ಬಾಟಲ್ ಗಾರ್ಡನ್ ನಿರ್ಮಿಸೋಣ.
ಬೇಕಾಗುವ ಸಾಮಗ್ರಿ :ಹಳೆಯ ನೀರಿನ ಪ್ಲಾಸ್ಟಿಕ್ ಬಾಟಲ್‌ಗಳು, ಕತ್ತರಿ/ಬೆಡ್, ಮಣ್ಣು, ನೀರು, ದಾರ/ಹಗಇತ್ಯಾದಿ
ಪೂರ್ವತಯಾರಿ : ವಿದ್ಯಾರ್ಥಿಗಳಿಗೆ ಹಳೆಯ ಬಿಸಾಡಿದ ನೀರಿನ ಪಾಸ್ಟಿಕ್ಬಾಟಲಿಗಳನ್ನು ಸಂಗ್ರಹಿಸಿ , ಸಾಮಗ್ರಿಗಳನ್ನು ತಂದಿಟ್ಟುಕೊಳ್ಳುವುದು,
ಮಾಡುವ ವಿಧಾನ : ಹಳೆಯ ಪಾಸ್ಮಿಕ್ ಬಾಟಲ್‌ಗಳನ್ನು ವಿವಿಧ ವಿನ್ಯಾಸಕ, ಅರ್ಧ ಕತ್ತರಿಸಿ ತೆಗೆದು ಬಾಟಲಿಗಳನ್ನುಹಗ್ರದ ಸಹಾಯದಿಂದ ಶಾಲಾ ಮುಂಭಾಗದಲ್ಲಿ, ಛಾವಣಿಗೆ ತೂಗು ಹಾಕಲಿ, ಅದರೊಳಗೆ ಮಣು, ನೀರು ತಂಬಿಸಿಸಣ್ಣ-ಪುಟ್ಟ ಹೂವಿನ ಸಸಿ, ಕ್ರೋಟನ್ ಗಿಡಗಳನ್ನು ನೆಟ್ಟು ಬೆಳೆಸಲಿ,ಅದರಲಿ, ಮಗುತನ್ನ ಹೆಸರು ಬರೆದು,ನಿರಂತರ ಪೋಷಣೆ ಮಾಡಲಿ, ಈ ಬಾಟಲಿಗಳಿಗೆ ಬಣ್ಣ ಹಚ್ಚಿ ಚಿತ್ತಾರ ಬಿಡಿಸಲಿ,8ಮತ್ತು 9ನೇ ತರಗತಿಯ ಮಕ್ಕಳು ಈ ಚಟುವಟಿಕೆಗಳಲ್ಲಿ ಭಾಗವಹಿಸಲಿ,
ಹೆಚ್ಚುವರಿ ಚಟುವಟಿಕೆಗಳು :
- ವಿವಿಧ ತರಕಾರಿ, ಹಣ್ಣು, ಪ್ರಾಣಿ, ಪಕ್ಷಿಗಳ ಚಿತ್ರ ಮುಖವಾಡಗಳನ್ನು ಬಳಸಿ ಅವುಗಳ ಗುಣ ವಿಶೇಷತೆಬಗ್ಗೆ ಹೇಳಲಿ
- ತೆಂಗಿನ ಗೆರಟೆ (ಚಿಪ್ಪುಗಳನ್ನು ಬಳಸಿಕೊಂಡು ಬಣ್ಣ ಹಚ್ಚಿ ಪ್ರಾಣಿ – ಪಕ್ಷಿಗಳ ಮುಖವಾಡ ತಯಾರು ಮಾಡಲಿ,ಪ್ರಕೃತಿಯ ಚಿತ್ರ ರಚನೆ ಮಾಡಿ ಅದನ್ನು ವರ್ಣಿಸಲಿ
- ತರಕಾರಿ/ಹಣರಿ/ಸೊಪ್ಪುಗಳಿಂದ ವಿವಿಧ ಮಾದರಿ ತಯಾರಿಸಲಿ ನದಿ ತೀರದ ವಿವಿಧ ವಿನ್ಯಾಸದ ಗಾತ್ರದ ಕಲು, ಚಿಪ್ಪಗಳನ್ನು ಬಳಸಿಕೊಂಡು ವಿವಿಧ ಬಣ್ಣ ಹಚ್ಚಿ ಪ್ರದರ್ಶನಮಾಡಲಿ.•
- ವಿವಿಧ ಎಲೆಗಳಿಂದ ತೋರಣ ತಯಾರಿಸಲಿ,ಹೂವಿನ ಮಾಲೆ ತಯಾರಿಸಲಿ• ಮಣಿನೊಂದಿಗೆ ಚಿಣ್ಯ ರಾಟವಾಡಲಿ (ಮಣಿನ ಮಾದರಿ ತಯಾರಿ)(ಮೇಲೆ ನೀಡಿರುವ ಚಟುವಟಿಕೆಗಳು ಸಲಹಾತ್ಮಕ ಮಾತ್ರ ಶಿಕ್ಷಕರು ತಮ್ಮ ವಿವೇಚನೆ ಬಳಸಿಕೊಂಡು ಇನ್ನಷ್ಟು ಪೂರಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.)






ಮಳೆಬಿಲ್ಲು ಸುತ್ತೋಲೆ