ಮಳೆ ಬಿಲ್ಲು ಏಳನೇ ದಿನದ ಚಟುವಟಿಕೆ ವಿವರ ಇಲ್ಲಿದೆ

ಏಳನೇ ದಿನದ ಚಟುವಟಿಕೆ ಕಥೆಗಳ ಹಬ್ಬ

ಕಥೆಗಳೆಂದರೆ ಮಕ್ಕಳ ಪಾಲಿಗೆ ಅದೊಂದು ಅದ್ಭುತ ಲೋಕ, ಕಥೆಗಳಿಗೆ ಕಿವಿಯಾಗುತ್ತಾ ತಮ್ಮನ್ನು ತಾವು ಮರೆತು ಅವುಗಳಲ್ಲಿ ಒಳಗೊಳ್ಳುವ ಖುಷಿಯನ್ನು ಮಕ್ಕಳು ಸದಾ ಬಯಸುತ್ತಾರೆ. ಕಥೆಗಳನ್ನು ಆಲಿಸುವುದಷ್ಟೇ ಅಲ್ಲ ದೇತಾವೇತಃ ಕಥೆಗಳನ್ನು ಕಟ್ಟುವುದು ಕೂಡಾ ಅವರಿಗೆ ಬಹು ಇಷ್ಟದ ಸಂಗತಿ,ಮಕ್ಕಳಲ್ಲಿ ಸೃಜನಶೀಲತೆ, ಕಲ್ಪನಾಶಕ್ತಿ, ಭಾಷಾಭಿವ್ಯಕ್ತಿ, ಆಲಿಸುವಿಕೆ ಹೀಗೆ ಬಹು ಆಯಾಮಗಳಲ್ಲಿ ಮಕ್ಕಳು ತಮ್ಮನ್ನು ಮುಕ್ತವಾಗಿ ತೆರೆದುಕೊಳ್ಳಲು ಅವಕಾಶ ನೀಡುವ ಕಥೆಗಳನ್ನು ಸರಳವಾಗಿ ರಚಿಸುವ ಉಪಾಯಗಳನ್ನು ಇಲ್ಲಿ ನೀಡಲಾಗಿದೆ. ಮಕ್ಕಳ ತರಗತಿ ಮಟ್ಟ ಹಾಗೂ ಆಸಕ್ತಿಗೆ ಅನುಗುಣವಾಗಿ ಇವುಗಳಲ್ಲಿ ಆಯ್ಕೆ ಮಾಡಿಕೊಂಡು ಕಥೆಗಳನ್ನು ಕಟ್ಟಿ ಅವುಗಳನ್ನು ಅಭಿವ್ಯಕ್ತಿಸುವ ಅವಕಾಶ ನೀಡಿದಲ್ಲಿ ಅದೊಂದು ಸಂಭ್ರಮದ ಹಬ್ಬವೇ ಆಗುವುದು.ಸೂಚನೆಗಳು:• ಕಥೆ ರಚನೆಯ ವಿವಿಧ ಉಪಾಯಗಳನ್ನು ನೀಡಲಾಗಿದೆ. ಇವುಗಳನ್ನು ಅಥವಾ ಇವುಗಳಿಗೆ ಹೊರತಾದ ಬೇರೆ ಉಪಾಯಗಳು ತಿಳಿದಿದ್ದಲ್ಲಿ ಅವುಗಳನ್ನು ಬಳಸಿಕೊಂಡು ಕಥೋತ್ಸವವನ್ನು ಅನುಕೂಲಿಸುವುದು,ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಈ ಚಟುವಟಿಕೆಗಳು ವೈಯಕ್ತಿಕ ಅಥವಾ ಗುಂಪಿನಲ್ಲಿ ನಡೆಯಲಿ,.ಕಥೆ ರಚನೆಯು ಮೌಖಿಕ ಅಥವಾ ಬರಹರೂಪದಲ್ಲಿ ಇದ್ದು, ಸಮಯದ ಲಭ್ಯತೆಯನ್ನಾಧರಿಸಿ ಚಟುವಟಿಕೆ ನಡೆಯಲಿ.

1.ಯಾವುದಾದರೂ ಒಂದು ಚಿತ್ರವನ್ನು ನೀಡಿ ಅದರಲ್ಲಿರುವ ವಸ್ತುವನ್ನು ಆಧರಿಸಿ ಕಥೆ ಹೇಳಲು ಅಥವಾ ಬರೆಯಲು ತಿಳಿಸುವುದು (ಕಥೆಪುಸ್ತಕ, ವೃತ್ತ ಪತ್ರಿಕೆಯಲ್ಲಿರುವ ಅಥವಾ ಇತರ ಚಿತ್ರಗಳನ್ನು ಬಳಸುವುದು).ಈ ಚಟುವಟಿಕೆಯನ್ನು4 ರಿಂದ 9ನೇತರಗತಿಯ ಮಕ್ಕಳು ನಡೆಸಲಿ

2.ತಾನು ಈಗಾಗಲೇ ತಿಳಿದಿರುವ ಕಥೆಗಳನ್ನು ಅಥವಾ ಸ್ಥಳೀಯ ಪ್ರಚಲಿತ ಕಥೆಗಳನ್ನು ಮಗು ವಾಚಿಸುವುದು |ಹೇಳುವುದು ಈಚಟುವಟಿಕೆಯನ್ನು 4 ರಿಂದ 9 ನೇತರಗತಿಯ ಮಕ್ಕಳು ನಡೆಸಲಿ

3.ಬೇರೆ ಬೇರೆ ಚಿತ್ರಗಳನ್ನು ನೀಡಿ (ಸಹ ಸಂಬಂಧವಿರುವ ಅಥವಾ ಸಂಪೂರ್ಣ ಬೇರೆ ಬೇರೆಯಾದ) ಅವುಗಳನ್ನು ಸರಣಿಯಲ್ಲಿ ಜೋಡಿಸಿಕೊಂಡು ಕಥೆ ರಚಿಸಲಿ ಈ ಚಟುವಟಿಕೆಯನ್ನು 4 ರಿಂದ 8 ನೇತರಗತಿಯ ಮಕ್ಕಳು ನಡೆಸಲಿ.

4.ಶಿಕ್ಷಕರು ಅಥವಾ ಮಗು ಒಂದು ವಾಕ್ಯವನ್ನು ಪ್ರಾರಂಭಿಸಿ ಉಳಿದ ಮಕ್ಕಳು ಒಬ್ಬೊಬ್ಬರಾಗಿ ಒಂದೊಂದು ವಾಕ್ಯವನ್ನು ಸೇರಿಸಿ ಕಥೆ ರಚಿಸಲಿ ಈ ಚಟುವಟಿಕೆಯನ್ನು 8 ಮತ್ತು 9ನೇ ತರಗತಿಯ ಮಕ್ಕಳು ನಡೆಸಲಿ

5.ಮಕ್ಕಳು ಬೇರೆ ಬೇರೆ ತಂಡಗಳಲ್ಲಿ ಕುಳಿತುಕೊಂಡು ತಮ್ಮ ತಮ್ಮತಂಡಕ್ಕೆ ನೀಡಲಾದ ಪ್ರತಿ ಒಂದು ವಾಕ್ಯವನ್ನು ಬರೆದುಅದನ್ನು ಮುಂದಿನ ತಂಡಕ್ಕೆ ನೀಡಲಿ, ಅವರು ಹಿಂದಿನ ವಾಕ್ಯಗ ಳನ್ನು ಸೇರಿಸಿ ಮುಂದಿನ ತಂಡಕ್ಕೆ ನೀಡಲಿ, ಹೀಗೆ ಒಂದಷ್ಟು ಸುತ್ತುಗಳಲ್ಲಿ ಏಕಕಾಲ ಸಂಖ್ಯೆಗನುಗುಣವಾಗಿ ಬೇರೆ ಬೇರೆ ಕಥೆ ರಚನೆಯಾಗಲಿ.ಈಚಟುವಟಿಕೆಯನ್ನು4 ರಿಂದ 5ನೇತರಗತಿಯ ಮಕ್ಕಳು ನಡೆಸಲಿ.

6.ಒಂದಷ್ಟು ಪದಗಳನ್ನು (ಉದಾ: ಕಾಡು, ಬೆಂಕಿ, ಮೊಲ, ಮಳೆ…) ಅಥವಾ ವಿವಿಧ ಪಾತ್ರಗಳನ್ನು (ಉದಾ :ಹುಲಿ, ರಾಜ, ಮಂತ್ರಿ, ಸೈನಿಕ..) ನೀಡಿ ಅವುಗಳನ್ನು ಬಳಸಿಕೊಂಡು ಕಥೆ ರಚಿಸಲಿ.ಈ ಚಟುವಟಿಕೆಯನ್ನು 6 ರಿಂದ9 ತರಗತಿಯಮಕ್ಕಳು ನಡೆಸಲಿ.

7.ಕಥೆಯ ಮೊದಲ ಭಾಗವನ್ನು ನೀಡಿ ಕಥೆಯನ್ನು ಪೂರ್ಣಗೊಳಿಸಲಿ ಈಚಟುವಟಿಕೆಯನ್ನು 8ಮತ್ತು9ನೇತರಗತಿಯಮಕ್ಕಳುನಡೆಸಲಿ

8.ಕಥೆಯ ಕೊನೆಯ ಭಾಗವನ್ನು ನೀಡಿ ಕಥೆಯಪೂರ್ವ ಭಾಗರಚಿಸಲಿ ಈಚಟುವಟಿಕೆಯನ್ನು4 ರಿಂದ 8ನೇತರಗತಿಯಮಕ್ಕಳುನಡೆಸಲಿ,

9.ಕಥೆಯ ಮಧ್ಯ ಭಾಗವನ್ನು ನೀಡಿ ಅದರ ಮೊದಲ ಮತ್ತು ಕೊನೆಯ ಭಾಗವನ್ನು
ಸೇರಿಸಿಕಥೆಯನ್ನು ಪೂರ್ಣಗೊಳಿಸಲಿ ಈ ಚಟುವಟಿಕೆಯನ್ನು 4 ರಿಂದ 8 ನೇತರಗತಿಯ ಮಕ್ಕಳು ನಡೆಸಲಿ,


10.ತಾವು ರಚಿಸಿದ ಕಥೆಯನ್ನು ಭಾವಪೂರ್ಣವಾಗಿ ಪ್ರಸ್ತುತ ಪಡಿಸಲಿ,

  1. ಒಂದು ಕಥೆಯನ್ನು ನೀಡಿ ಅದರ ಅಂತ್ಯವನ್ನು ಬದಲಿಸಿ ಕಥೆ ಪೂರ್ಣಗೊಳಿಸಲಿ,ಈ ಚಟುವಟಿಕೆಯನ್ನು 8 ಮತ್ತು
    9ನೇ ತರಗತಿಯ ಮಕ್ಕಳು ನಡೆಸಲಿ,
  2. .ಯಾವುದಾದರೂ ಒಂದು ಗಾದೆಮಾತು ನೀಡಿ ಅದರ ಆಶಯ ಅಭಿವ್ಯಕ್ತವಾಗುವಂತೆ ಕಥೆ ರಚಿಸಲಿ,ಉದಾ :
    ಅತಿಯಾಸೆ ಗತಿಗೇಡು, ಕೈ ಕೆಸರಾದರೆ ಬಾಯಿ ಮೊಸರು ಇತ್ಯಾದಿಚಟುವಟಿಕೆಯನ್ನು 4 ರಿಂದ 9ನೇ ತರಗತಿಯ
    ಮಕ್ಕಳು ನಡೆಸಲಿ.
    .
  3. ಅಜ್ಞಾನ ಅಜಿ, ತಂದೆ, ತಾಯಿ, ಅಣ, ತಂಗಿ, ಚಿಕ್ಕಪ್ಪ.. ಹೀಗೆ ಕೌಟುಂಬಿಕ ಸಂಬಂಧಗಳನ್ನು ಪಾತ್ರವಾಗಿಸಿಕೊಂಡು ಕಥೆ ರಚಿಸಲಿ.ಈ ಚಟುವಟಿಕೆಯನ್ನು 6ರಿಂದ 9 ನೇ ತರಗತಿಯ ಮಕ್ಕಳು ನಡೆಸಲಿ.ತಾನೇ ಒಂದು ಪ್ರಾಣಿಯ ಪಾತ್ರವಾಗಿ ಇತರ ಪ್ರಾಣಿಲೋಕದ ಕಥೆ ರಚಿಸಲಿ. (ಇದೇ ರೀತಿ ಪಕ್ಷಿ., ಸಸ್ಯ, ತರಕಾರಿ,
  4. ಹೂವು ಇತ್ಯಾದಿಗಳು ಪಾತ್ರವಾಗಿರುವಂತೆ ಕಥೆ ರಚಿಸಲಿ.) ಈ ಚಟುವಟಿಕೆಯನ್ನು 6 ರಿಂದ 9ನೇ ತರಗತಿಯ ಮಕ್ಕಳು ನಡೆಸಲಿ.
  5. .ವಿವಿಧ ಮೌಲ್ಯಗಳನ್ನು (ಪ್ರಾಮಾಣಿಕತೆ, ಸ್ನೇಹ, ಸತ್ಯ.) ಒಂದೊಂದು ತಂಡಕ್ಕೆ ನೀಡಿ ಕಥೆ ರಚನೆಯಾಗಲಿ, ಈ
    ಚಟುವಟಿಕೆಯನ್ನು 4 ರಿಂದ 9 ತರಗತಿಯ ಮಕ್ಕಳು ನಡೆಸಲಿ,
  6. ಬೇರೆ ಬೇರೆ ತಂಡಗಳಿಗೆ ಒಂದೇ ವಿಷಯ ಅಥವಾ ಸನ್ನಿವೇಶ ಆಧರಿಸಿ ಕಥೆ ರಚಿಸಲಿ, ಈ ಚಟುವಟಿಕೆಯನ್ನು 6
    ರಿಂದ 9 ನೇ ತರಗತಿಯ ಮಕ್ಕಳು ನಡೆಸಲಿ,
  7. , ಆಶು ಕಥೆ (ಮಗುವನ್ನು ಎದುರಿಗೆ ಕರೆದು ಸ್ಥಳದಲ್ಲಿಯೇ ವಿಷಯವನ್ನು ನೀಡಿ ಕಥೆ ರಚಿಸಲು ಹೇಳುವುದು
    ಅಥವಾ ಒಂದು ಪ್ರಾರಂಭಿಕ ವಾಕ್ಯ ನೀಡಿ ಕಥೆ ಕಟ್ಟಲು ಹೇಳುವುದು. ಈಚಟುವಟಿಕೆಯನ್ನು 6 ರಿಂದ 9ನೇ
    ತರಗತಿಯ ಮಕ್ಕಳು ನಡೆಸಲಿ,
  8. ತಾನೇ ಐತಿಹಾಸಿಕ / ಪೌರಾಣಿಕ ಪಾತ್ರವಾಗಿ ಊಹಿಸಿಕೊಂಡು ಕಥೆ ರಚಿಸಲಿ ಅಥವಾ ಹೇಳಲಿ. (ಉದಾ: ತನ್ನನ್ನು
    ತಾನು ಗಾಂಧೀಜಿಯಾಗಿ ಊಹಿಸಿಕೊಂಡು ಗಾಂಧೀಜಿಗೆ ಸಂಬಂಧಿಸಿದ ಇತಿಹಾಸದ ಕಥೆಯನ್ನು
    ಹೇಳುವುದು.) ಈಚಟುವಟಿಕೆಯನ್ನು 4 ರಿಂದ 9 ನೇ ತರಗತಿಯ ಮಕ್ಕಳು ನಡೆಸಲಿ.
  9. ಹಿನ್ನೆಲೆಯಲ್ಲಿ ಮಾಡಲಾಗುವ ಧ್ವನಿ, ಸದ್ದುಗಳನ್ನು ಆಧರಿಸಿ ಕಥೆ ರಚನೆ (ಬಾಗಿಲಿನ ಹಿಂಬದಿಯಿಂದ ಬೇರೆ
    ಬೇರೆ ಧ್ವನಿ, ಸದ್ದುಗಳನ್ನು ಸೃಷ್ಟಿಸಲಾಗುತ್ತದೆ, ತರಗತಿಯಲ್ಲಿರುವ ಮಕ್ಕಳು ಆ ಧ್ವನಿಯನ್ನು ಆಧರಿಸಿ ಕಥೆ
    ಕಟುವುದು.)ಈ ಚಟುವಟಿಕೆಯನ್ನು 6ರಿಂದ 9 ನೇ ತರಗತಿಯ ಮಕ್ಕಳು ನಡೆಸಲಿ,
  10. ಕಥಾಭಿನಯ (ಮುಖವಾಡ, ಪಪೆಟ್‌ಗಳು, ಇತರ ಪರಿಕರಗಳನ್ನು ಬಳಸಿಕೊಂಡು ತಾವು ರಚಿಸಿದ ಕಥೆಯನ್ನು
    ಗುಂಪುಗಳಲ್ಲಿ, ಅಭಿನಯಿಸಲಿ. ಈ ಚಟುವಟಿಕೆಯನ್ನು 4 ರಿಂದ 9ನೇ ತರಗತಿಯ ಮಕ್ಕಳು ನಡೆಸಲಿ,
IMG 20220521 WA0038
IMG 20220521 WA0037

ಮಳೆಬಿಲ್ಲು ಸುತ್ತೋಲೆ

ಚಟುವಟಿಕೆ

Sharing Is Caring:

Leave a Comment