ಮಳೆ ಬಿಲ್ಲು ಮೂರು ಮತ್ತು ನಾಲ್ಕನೇ ದಿನದ ಚಟುವಟಿಕೆ ವಿವರ ಇಲ್ಲಿದೆ

WhatsApp Group Join Now
Telegram Group Join Now

ಮೂರು ಮತ್ತು ನಾಲ್ಕನೇ ದಿನದ ಚಟುವಟಿಕೆ ನಾಟಕದ ಹಬ್ಬ

ಮೂರು ಮತ್ತು ನಾಲ್ಕನೇ ದಿನ ನಾಟಕದ ಹಬ್ಬ..!ಯಾವ ಮಕ್ಕಳಿಗೆ ನಾಟಕವೆಂದರೆ ಇಷ್ಟವಿಲ್ಲ ಹೇಳಿ, ಮಕ್ಕಳು ಕಲಿಯಬೇಕಾದ ವಿಷಯಗಳನ್ನು ಸಂತಸದಿಂದ ಕಲಿಯುವಂತಾಗಬೇಕು,ಕಲಿತ ವಿಷಯಗಳು ಮನಸ್ಸಿನಲ್ಲಿ ಉಳಿಯುವಂತಾಗಬೇಕು. ಈ ನಿಟ್ಟಿನಲ್ಲಿ ಯೋಜಿಸಲಾದಸಡಗರವೇ ‘ನಾಟಕದ ಹಬ್ಬ’. ಮಕ್ಕಳೇ ಸೇರಿ ಕಥೆ ಕಟ್ಟಿ, ನಾಟಕ ತಯಾರಿ ನಡೆಸಿ ಅವರಿಗೆ ತೋಚಿದ ಪಾತ್ರಗಳ ಪರಿಚಯ ಮತ್ತು ಪಾತ್ರ ಹಂಚಿಕೊಳ್ಳುವ ಮುಕ್ತ ಅವಕಾಶ ಅವರದೇ ಆಗಲಿ, ತಾವು ಕಂಡ ಬದುಕಿನ ವಿವಿಧ ಪಾತ್ರಗಳನ್ನು ಅಭಿನಯಿಸಲಿ, ಮಕ್ಕಳ ವೇಶಭೂಷಣ, ರಂಗಸಜ್ಜಿಕೆ, ಪ್ರಸಾಧನ, ಹಾಡು, ಹಸೆ, ಮಾತು,ಪಟ್ಟಾಂಗ, ಹರಟೆ ಅವರದ್ದೇ ಆಗಿರಲಿ, ನಾವೆಲ್ಲ ಸೇರಿ ಹೊಸತೊಂದನ್ನು ಸಂಭ್ರಮದಿಂದ ಕಟ್ಟುತ್ತಿದ್ದೇವೆ ಎಂಬ ಉತ್ಸುಕತೆ ಮಕ್ಕಳಲ್ಲಿ ಮೂಡಲೆ, ಗುಂಪುಗುಂಪಾಗಿ ನಾಟಕದ ವಸ್ತುಗಳನ್ನು ಅವರೇ ತೀರ್ಮಾನಿಸಿ ನಾಟಕ ಕಟ್ಟಲೆ ಮತ್ತು ಪ್ರದರ್ಶನ ನೀಡಲಿ .

  1. ನಮ್ಮೂರ ಜಾತ್ರೆ’

* ಊರಲೆ ನಡೆಸಬಹುದಾದ ಯಾವುದೇ ಪಾತ್ರೆಯನ್ನು ಮಕ್ಕಳೆಲ್ಲಾ ಸೇರಿ ಸಂಭ್ರಮದಲೆ ನಾಟಕ ತಯಾರಿಸಿ ಪ್ರದರ್ಶಿಸಲಿ

* ಜಾತ್ರೆಯ ಅನುಭವವನ್ನು ಮಕ್ಕಳು ಅನುಭವಿಸುವಂತೆ ನಾಟಕದ ಪಾತ್ರೆಯ ಪ್ರವೇಶ ರಥ,ವೇಶಭೂಷಣ, ಪೂಜಾ ಕ್ರಮ, ಶಬ್ಬಗಳು, ಜನಜಂಗುಳಿ, ಮಾರಾಟ, ಅಂಗಡಿ, ಆಟಿಕೆಗಳು, ಪೋಲಿಸ್, ಕಳ್ಳ,ವಾತ್ರಗಳು ಮುಂತಾದ ಅಂಶಗಳು ಕದಿರರೆ.• ಹಾಡು, ಚಿತ್ರ, ಚಿತ್ತಾರ, ಸನ್ನಿವೇಶಕ್ಕೆ ಸರಿಯಾದ ಪಾತ್ರಗಳನ್ನು ಮಕ್ಕಳೇ ಸೃಷ್ಟಿಸಿಕೊಂಡು ಮಕ್ಕಳೇಕಟ್ಟಿಕೊಂಡು ತಾವು ಬಯಸುವ ಹಾವ, ಭಾವ, ಮಾತು, ಕತೆ, ವಿಜೃಂಭಣೆಯ ಚಟುವಟಿಕೆಗಳು ಇರಲಿ.• ಮಕ್ಕಳೇ ಆತೀ ಸಂಭ್ರಮದಿಂದ ಮುಕ್ತವಾಗಿ ಚಟುವಟಿಕೆಯಲೆ ತೊಡಗಿಸಿಕೊಂಡು ಪ್ರದರ್ಶನ ನೀಡರೆ.4ರಿಂದ 9 ನೇ ತರಗತಿಯ ವಿದ್ಯಾರ್ಥಿಗಳು ಈ ಚಟುವಟಿಕೆಯಲ್ಲಿ ಭಾಗವಹಿಸಲಿ,ಅನುಕೂಲಿಸಬಹುದಾದ ಸಾಮಾನ್ಯ ಸೂಚನೆಗಳು:• ಸ್ಥಳೀಯ ಜನಪದ ಹಾಡು, ಅಲಂಕಾರ, ತೋರಣ, ಸಿಗುವ ಪರಿಕರಗಳೊಂದಿಗೆ ತಯಾರಿಸಿಕೊಳ್ಳುವುದು,• ಕಥೆಯ ವಿಸ್ತಾರಕ್ಕೆ, ಮಕ್ಕಳಿಗೆ ಯಾವುದೇ ಮಿತಿ ಇರದಿರಲಿ,• ನಾಟಕದಲ್ಲಿ ಹೆಚ್ಚು ಪಾತ್ರಗಳು ಬರುವಂತಾಗಲಿ ಮತ್ತು ಗುಂಪು ಗುಂಪಾಗಿ ಚಟುವಟಿಕೆ ನಡೆಯಲಿ ಎಲ್ಲಾ ಮಕ್ಕಳು ಭಾಗವಹಿಸುವಂತಾಗಲಿ,.

2. ರಜಾಸಂಭ್ರಮ

ರಜೆ ಕಳೆದು ಮತ್ತೆ ಶಾಲೆಗೆ ಬಂದ ಮಕ್ಕಳು ರಜೆ ಸಂಭ್ರಮವನ್ನು ನಾಟಕದ ಮೂಲಕ ಪ್ರದರ್ಶಿಸುವುದು

• ಗುಂಪು ಗುಂಪಾಗಿ ಈ ಚಟುವಟಿಕೆ (ನಾಟಕ) ಮಾಡುವುದು

• ರಜೆಯಲ್ಲಿ ನಡೆದ ಘಟನೆ, ಪ್ರಯಾಣ ತಮಾಷೆಗಳನ್ನು ಎಲ್ಲಾ ಮಕ್ಕಳು ಸೇರಿ ಒಂದು ರಂಗಪಠ ತಯಾರಿಸಿಕೊಂಡು ಪಾತ್ರಗಳನ್ನು ಹಂಚಿಕೊಂಡು ನಾಟಕ ತಯಾರಿ ನಡೆಸುವುದು

,• ಎಲ್ಲಾ ಮಕ್ಕಳು ರಜೆ ಕಳೆದ ಸಂದರ್ಭದ ವಿಷಯಗಳನ್ನು ಒಟ್ಟುಗೂಡಿಸಿ ಒಂದು ಪತ್ರರಚಿಸಿಕೊಳ್ಳಬಹುದು,ಹಾಡು ಸನ್ನಿವೇಶ ಸಂಭಾಷಣೆಗಳಿಗೆ ಹೆಚ್ಚು ಅವಕಾಶವಿರಲಿ

• ಮಕ್ಕಳ ಚಲನೆ ಅಭಿನಯ ಮಾತು ಮನರಂಜನೆ ಇರುವಂತಿರಲಿ

• ಸಂಭ್ರಮದಿಂದ ಮಕ್ಕಳು ನಾಟಕ ತಯಾರಿಸಿ ಪ್ರದರ್ಶನ ನೀಡಲಿ.

• ಸಂಭಾಷಣೆ ಸನ್ನಿವೇಶ ಎಲ್ಲವೂ ಮಕ್ಕಳು ಅವರ ನಿರ್ಧಾರದಂತೆ ರಚಿಸಲಿ

• 8 ಮತ್ತು 9 ನೇ ತರಗತಿ ಮಕ್ಕಳು ಈ ಚಟುವಟಿಕೆ ನಡೆಸಲಿ

ಅನುಕೂಲಿಸಬಹುದಾದ ಸಾಮಾನ್ಯ ಸೂಚನೆಗಳು:

• ಹೆಚ್ಚು ಮಕ್ಕಳು ಭಾಗವಹಿಸುವಂತಿರಲಿ,ಗುಂಪುಗುಂಪಾಗಿ (ತಂಡಗಳಾಗಿ) ಎರಡು ಮೂರು ನಾಟಕ ತಯಾರಿ ಆದರೂ ಆಗಲಿ,• ಶಾಲೆಯಲ್ಲಿ ಸಿಗಬಹುದಾದ ಸಣ್ಣ ಪುಟ್ಟ ಪರಿಕರಗಳನ್ನು ಬಳಸಿ,ಸಂಭಾಷಣೆ, ಹಾಡು, ಕುಣಿತದಿಂದ ಇರಲಿ,• ಘಟನೆಗಳು ಅದಕ್ಕೆ ಸರಿಯಾದ ಸನ್ನಿವೇಶ, ಪಾತ್ರಗಳು ಜಾಸ್ತಿ ಇರುವಂತಿರಲಿ,ಮಗುವಿನ ಚಲನೆ ಮಾತು, ದೇಹಭಾಷೆ, ಅಭಿನಯದೊಂದಿಗೆ ಸಂಭ್ರಮದಿಂದ ನಾಟಕ ತಯಾರಿ ನಡೆಸಿ,ಪ್ರದರ್ಶನ ನೀಡುವಂತಿರಲಿ.

3. ಕೋವಿಡ್ 19 ಕಲಿಸಿದ್ದು – ಕಲಿತದ್ದು

ಕೊವಿಡ್-19 ಕಲಿಸಿದ್ದು… ಕಲಿತದ್ದು• ಕೋವಿಡ್-19 ಸಂದರ್ಭದಲ್ಲಿ.. ಆಗಿರುವ ವಿಷಯಗಳನ್ನು ಮಕ್ಕಳು ರಂಗಪರ ರಚಿಸಿ ಪ್ರದರ್ಶನ ನೀಡುವುದು, ಕೋವಿಡ್-19 ಸಂದರ್ಭದ ಭಯಮಾನವೀಯ ಸ್ಪಂದನೆಗಳು..

• ಮನುಷ್ಯನಿಗೆ ಅವಶ್ಯಕತೆ ಮತ್ತು ಅನಾವಶ್ಯಕತೆಯ ಅರಿವು,ಕೌಟುಂಬಿಕ ಸಂಬಂಧಗಳು ಗಟ್ಟಿಯಾಗಿರುವುದು,ಆರೋಗ್ಯದ ಕಾಳಜಿ, ಆಹಾರ ಪದ್ಧತಿ, ಸರಳ ಬದುಕು ಲಾಕ್‌ಡೌನ್‌ ಹಾಗೂ ಸೀಲ್‌ಡೌನ್ ಸಂದರ್ಭದ ಪರಿಸ್ಮಿತಿಗಳು,ಸಾಮಾಜಿಕ ಬದಲಾವಣೆ,4 ರಿಂದ 9 ನೇ ತರಗತಿ ಮಕ್ಕಳು ಈ ಚಟುವಟಿಕೆ ನಡೆಸಿ.

ಆನುಕೂಲಿಸಬಹುದಾದ ಸಾಮಾನ್ಯ ಸೂಚನೆಗಳು:

* ಮಕ್ಕಳೆಲ್ಲರೂ ಭಾಗವಹಿಸುವಂತೆ ನೋಡಿಕೊಳ್ಳೋಣ, ಸಿಗುವ ಸಾಮಾಗ್ರಿಗಳನ್ನು ಪರಿಕರಗಳನ್ನು ಬಳಕೆಮಾಡಿಕೊಳೆ,• ಮಾನವೀಯ ಸಂಬಂಧಗಳ ಅರಿವು, ಪರಸ್ಮರ ಸೃಂದಿಸುವ ಗುಣವನ್ನು ಮಕ್ಕಳು ಅರಿಯುವಂತೆ ಮಾಡೋಣ,ಸಾಮಾಜಿಕ ಬದಲಾವಣೆಯ ಬಗ್ಗೆ ಅರಿವು ಬರುವಂತಿರಲಿ,ಹೆಚು ಪಾತ್ರ, ಸನ್ನಿವೇಶಮಾತು, ಹಾಡು ಅಭಿನಯವಿರುವಂತಿರಲಿ,

4..ಭಾವೈಕ್ಯತೆ

  • ಹಾಡು, ರಾಷ್ಟ್ರೀಯ ನಾಯಕರು, ಸಾಧಕರು, ಹೋರಾಟಗಾರರು, ಸಂತರು, ಕವಿಗಳು, ಬೇರೆ ಬೇರೆ ಧರ್ಮ
    ಪ್ರಚಾರಕರು, ಛದ ಸಹಬಾಳೆಯ ವಿಚಾರಗಳ; ನಾಗರರು.
    ಎಲಾ ಧರ್ಮವನ್ನು ಪ್ರೀತಿಸಿ ಗೌರವಿಸುವ ಏಶ್ರತೆಯ ಮನೋಭಾವ ಬರುವಂತೆ ನಾಟಕ ರಚಿಸಿ, ಪ್ರದರ್ಶನ
    .
    • 6, 7, 8, 9ನೇ ತರಗತಿ ಮಕ್ಕಳು ಈ ಚಟುವಟಿಕೆಯರೆ.ಭಾಗವಹಿಸಲಿ.
    ಆಸಲ್ಲಿಸಬಹುದಾದ ಸಾಪ, ಸಬ್ಜೆಗಳು
  • ಈ ಹಿಂದಿನ ಚಟುವಟಿಕೆಗಳ… ನೀಡಿದ ಸಾಮಾನ್ಯ ಸೂಚನೆಗಳು: ಇಸೆಗೂ ಅನ್ನಿಸುತ್ತವೆ,

.5 ಕುಟುಂಬ

•ಮಕ್ಕಳು ತಮ್ಮ ಕುಟುಂಬದ ಜೀವನ ಕ್ರಮವನ್ನು ಆಧರಿಸಿ ನಾಟಕ ತಯಾರಿಸಿ ನಡೆಸಿ ಪ್ರದರ್ಶನ ನೀಡಲಿ.ಮನೆಯ ಹಿರಿಕಿರಿಯರ ಪಾತ್ರಗಳನ್ನು ತಾವು ನಿರ್ವಹಿಸಲಿ,ಬೇರೆ ಬೇರೆ ವಯೋಮಾನದ ಸದಸ್ಯರ ಹಾವಭಾವಗಳನ್ನು ನಿರ್ವಹಿಸಲಿ.ಒಂದು ಮನೆಯಲ್ಲಿ ನಡೆವ ಒಂದು ಹಬ್ಬದ ಸನ್ನಿವೇಶಕ್ಕೆ ಮಕ್ಕಳೆಲ್ಲರೂ ಪಾತ್ರ ಹಂಚಿಕೊಂಡು ತಯಾರಿನಡೆಸಿ,• ಮನೆಯಲ್ಲಿ ದಿನನಿತ್ಯ ನಡೆಯುವ ಅಥವಾ ನಡೆಯ ಬಹುದಾದ ಘಟನೆಗಳನ್ನು ರಂಜನಾತ್ಮಕವಾಗಿ ಅಭಿನಯಿಸಿ ಸಂಭ್ರಮಿಸಲಿ, ಕೌಟುಂಬಿಕ ಸಂಬಂಧಗಳನ್ನು ಅರಿಯುವ ಗೌರವಿಸುವ ವಿಷಯಗಳು ತುಂಬಿರಿ.• 4ರಿಂದ 9 ನೇ ತರಗತಿಯ ಮಕ್ಕಳು ಈ ಚಟುವಟಿಕೆಯಲ್ಲಿ ಭಾಗವಹಿಸಲಿ..ಆನುಕೂಲಿಸಬಹುದಾದ ಸಾಮಾನ್ಯ ಸೂಚನೆಗಳು:ಈ ಹಿಂದಿನ ಚಟುವಟಿಕೆಗಳಲ್ಸ್ ನೀಡಿದ ಸಾಮಾನ್ಯ ಸೂಚನೆಗಳನ್ನು ಇಲ್ಲಿಯೂ ಅನುಸರಿಸುವುದು,.

6, ಮರಕ್ಕೂ ನನಗೂ ನಂಟು

ಸೂಚನೆ:- ಈ ನಾಟಕ ಮಾಡುವಾಗ ಸಾಕಷ್ಟು ಅವಕಾಶಗಳನ್ನು ಬಳಸಿಕೊಳ್ಳೋಣ. ನಮ್ಮ ಸುತ್ತಮುತ್ತ ಸಿಗುವನಿಂತು ಮರದ ರೀತಿಯಲ್ಲಿ ನಿಲು_ವ ಕಲ್ಪನೆಯಿರಲಿ, ಮರದ ಸುತ್ತಲಿಂದಲೂ ಹಲವಾರು ಪ್ರಾಣಿ ಪಕ್ಷಿ ತಮ್ಮಕೂಗನ್ನು ಕೂಗುತ್ತಾ ಮರದೊಂದಿಗೆ ತಮ್ಮ ಸಂಬಂಧವನ್ನು ಹಂಚುವಂತಿರಲಿ, ಉದಾ:- ಚಿಟ್ಟೆ, ಹಾವು, ನವಿಲು,1ಕೋಗಿಲೆ, ಮೊಲ, ಕೋತಿ ಮುಂತಾದವುಗಳು,ಪರಿಸರಕ್ಕೆ ಸಂಬಂಧಿಸಿದ ಹಾಡುಗಳನ್ನು ಬಳಸಿಕೊಳ್ಳುವುದರೊಂದಿಗೆ ಈ ಹಿಂದಿನ ಚಟುವಟಿಕೆಗಳಲ್ಲಿನೀಡಿದೆ ಸಾಮಾನ್ಯ ಸೂಚನೆಗಳನ್ನು ಇಲಿಯೂ ಅನುಸರಿಸುವುದು,• 4,5,6,7ನೇ ತರಗತಿಯ ಮಕ್ಕಳು ಈ ಚಟುವಟಿಕೆ ನಡೆಸಲಿ,

7 ಜೀವ ಭಾವ

ಪ್ರಕೃತಿಯಲ್ಲಿನ ಯಾವುದಾದರೊಂದು 2×3 ಅಡಿಯ ಚಿತ್ರವನ್ನು ಬಿಡಿಸಲೆ(ಆನೆ, ನವೀಲು ಇತ್ಯಾದಿ).
ಮಕ್ಕಳನ್ನು ಗುಂಪಿನಲೆ ಕೂರಿಸಿಕೊಂಡು ಪೂರಕವಾದ ಸೂಚನೆಯನ್ನು ನೀಡುವುದು,

• ಮಕ್ಕಳನ್ನು ಪರಿಸರದೆಡೆಗೆ ಕಳುಹಿ, ಅರೆ ಸಿಗುವ ಬೇರೆ ಬೇರೆ ವಸ್ತುಗಳನ್ನು ತರುವಂತೆ ಸೂಚಿಸುವುದು,
ಉದಾ: ಕಲು, ಬಣ್ಯದ ಎಲೆಗಳು ಗಾಜಿನ ಚೂರು ಕಡಿ-ತುಂಡುಗಳು ಮುಂತಾದವುಗಳನ್ನು ತಂದು
ಬಿಡಿಸಿದ ಚಿತ್ರದ ಬೇರೆ ಬೇರೆ ಭಾಗಗಳಿಗೆ ಅಂಟಿಸುವುದು, ಪೂರ್ಣವಾದ ಮೇಲೆ ಆ ಚಿತ್ರದ ಬಗ್ಗೆ ಮತ್ತು ಆ
ಚಿತ್ರಕ್ಕೆ ಸಂಬಂಧಿಸಿದ ಆಹಾರ ಕ್ರಮ ಬದುಕುವ ರೀತಿ, ವಾಸಸ್ಮಳ ಮುಂತಾದವುಗಳ ಕುರಿತು ಮಕ್ಕಳು
ರಸವತ್ತಾಗಿ ಅಭಿನಯಿಸುತ್ತಾ ಮಾತನಾಡುತ್ತಾರೆ,
• 4ರಿಂದ 9ನೇ ತರಗತಿಯ ವಿದ್ಯಾರ್ಥಿಗಳು ಈ ಚಟುವಟಿಕೆಯಲ್ಲಿ ಭಾಗವಹಿಸಲೆ,

8. ಪ್ರಕೃತಿ ಸಂರಕ್ಷಣೆ

• ವಿದ್ಯಾರ್ಥಿಗಳು ಪರಿಸರದಲ್ಲಿ ನಡೆದಿರುವ ಕೆಲವು ಹಾನಿಗಳ ಕುರಿತು ಚರ್ಚಿಸುವರು.

• ಕಾಡು ಕಡಿಯುವುದು, ಕಾಡಿಚ್ಯು, ಕಾರ್ಖಾನೆ ಮುಂತಾದ ಮಾಲಿನ್ಯಗಳ ಕುರಿತು ಚರ್ಚಿಸಿ,ರಂಗಪಠವೊಂದನ್ನು ತಯಾರಿಸಿಕೊಳ್ಳಲಿ, ಪೂರಕವಾಗಿ ಪರಿಸರದ ಹಾಡು, ಘೋಷಣಾ ಫಲಕ ಇತ್ಯಾದಿಗಳನ್ನು ಬಳಸಿ, ಜೊತೆಗೆ ಅರಣ್ಯ ನಾಶದಂತಹ ವಿಷಯಗಳು ಕೂಡ ಇದರಲ್ಲಿರಲಿ.

. ಕಾಡಿನ ಸೌಂದರ್ಯ, ಪ್ರಯೋಜನಗಳನ್ನು ಬಿಂಬಿಸುವಂತಿರಲಿ.ಅರಣ್ಯನಾಶದ ನಂತರ ಆಗುವ ಭೀಕರತೆ, ಪ್ರಾಣಿಗಳ ಆಕ್ರಂದನ ನರಳಾಟ ಮುಂತಾದುವುಗಳು ಒಳಗೊಂಡಿರಲಿ, (ಗಣಿಗಾರಿಕೆ ಸೊಟ್ಟ ಮಡಿಕೇರಿಯ ಗುಡ್ಡ ಕುಸಿ ಉತ್ತರ ಕರ್ನಾಟಕದ ನೆರೆಹಾವಳಿ ಇತ್ಯಾದಿ.

. ಈ ಹಾನಿಗಳನ್ನು ತಡೆಯುವಲ್ಲಿ ನಮ್ಮ ಜವಾಬ್ದಾರಿಯ ಕುರಿತು ರಂಗ ಪಠವಿರಲಿ

. ಈ ಹಿಂದಿನ ಚಟುವಟಿಕೆಗಳಲಿ ನೀಡಿದ ಸಾಮಾನ್ಯ ಸೂಚನೆಗಳನ್ನು ಇಲಿಯೂ ಅನುಸರಿಸುವುದು

. 4ರಿಂದ9 ನೇ ತರಗತಿಯ ಮಕ್ಕಳು ಈ ಚಟುವಟಿಕೆಯಲ್ಲಿ ಭಾಗವಹಿಸಲಿ,

9. ನಮ್ಮ ಬಗ್ಗೆ ನಿಮಗೆಷ್ಟು ಗೊತ್ತು

ನಮ್ಮ ಬಗ್ಗೆ ನಿಮಗೆಷ್ಟು ಗೊತ್ತು ವಿದ್ಯಾರ್ಥಿಗಳ ಸಮೂಹವು ಗಿಡವಾಗಿ, ಮರವಾಗಿ, ಹಣ್ಣು, ತರಕಾರಿಗಳಾಗಿ, ಬಣ್ಣಬಣ್ಣದ ಎಲೆಗಳಾಗಿ ಬಗೆಬಗೆಯ ಪ್ರಾಣಿಪಕ್ಷಿಗಳಾಗಿ ತಮ್ಮ ಪರಿಚಯವನ್ನು ಮಾಡಿಕೊಳ್ಳಲಿ.ಈ ವಿಷಯಗಳಿಗೆ ಸಂಬಂಧಿಸಿದಂತೆ ಹಾಡು, ಸೂಚನಾ ಫಲಕ, ಮುಖವಾಡಗಳನ್ನು ಬಳಸಿ,• ಶಾಲೆಗಳಿ ಸಿಗುವ ವಸ್ತುಗಳನ್ನು ಪರಿಕರಗಳಾಗಿ ಬಳಸಿಕೊಂಡು ಈ ಚಟುವಟಿಕೆ ನಡೆಸಲಿಈ ಹಿಂದಿನ ಚಟುವಟಿಕೆಗಳಲ್ಲಿ ನೀಡಿದ ಸಾಮಾನ್ಯ ಸೂಚನೆಗಳನ್ನು ಇಲ್ಲಿಯೂ ಅನುಸರಿಸುವುದು,• 4, 5, 6, 7ನೇ ತರಗತಿಯ ಮಕ್ಕಳು ಈ ಚಟುವಟಿಕೆಯಲ್ಲಿ ಭಾಗವಹಿಸಲಿ,.. ದೊಡಾಟ, ಸಣ್ಣಾಟ, ಕಷ್ಟ-ಪಾರಿಜಾತೆ, ಯಕ್ಷಗಾನ, ಹರಿಕಥೆ, ಕೀರ್ತನೆ ಗೊಂಬೆಯಾಟ, ದಫ್,
ಮೊಹರಂ ಕುಣಿತ, ಹುಲಿವೇಷ ಗಳಂತಹ ಯಾವುದೇ ವಿವಿಧ ಸ್ಮಳೀಯ ಪ್ರದರ್ಶನ ಪ್ರಕಾರವನ್ನು ಜನಪದ
ಪ್ರಕಾರವನ್ನು ಮಕ್ಕಳು ಬಯಸಿದರೆ ಮೇಲಿನ ಯಾವುದೇ ನಾಟಕದ ವಿಷಯದಲ್ಲಿ ಅಳವಡಿಸಲು
ಅನುಕೂಲಿಸೋಣ.
ಈ ಮೇಲಿನ ವಿಷಯಗಳಲ್ಲದೇ ಮಕ್ಕಳು ಬಯಸುವ ಯಾವುದೇ ವಿಷಯಗಳನ್ನು ಆಯ್ಕೆ ಮಾಡಿಕೊಂಡು ನಾಟಕ
ರಚಿಸಿ, ನಟಿಸಿ ಸಂಭ್ರಮಿಸಿ ಪ್ರದರ್ಶನ ನೀಡಿ ಆನಂದಿಸಲಿ, ಈ ಕಲಿಕಾ ಮಕರ ಸ್ನೇಹಿ ಚಟುವಟಿಕೆ ಮಕ್ಕಳೆಲ್ಲರಿಗೂ
ಹಬ್ಬವಾಗಲಿ..

IMG 20220517 WA0029

IMG 20220517 WA0031
IMG 20220517 WA0030
IMG 20220517 WA0034
IMG 20220517 WA0033 1
IMG 20220517 WA0032
WhatsApp Group Join Now
Telegram Group Join Now
Sharing Is Caring:

Leave a Comment