ರಾಜ್ಯ ಸರಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆಯ ವೀಕ್ಷಿಸಿ

ರಾಜ್ಯ ಸರಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆಯ YOUTUBE LIVE ವೀಕ್ಷಿಸಿ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು

IMG 20220220 WA0001

ಫೆ.20 ರಂದು ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆ

ರಾಜ್ಯದ ಸಮಸ್ತ ನೌಕರರು ಭಾಗಿಯಾಗಲು ಮನವಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ತನ್ನ 2012ರ ಉಪವಿಧಿಗಳನ್ನು ತಿದ್ದುಪಡಿ ಮಾಡಲು ಉದ್ದೇಶಿಸಿದ್ದು, ಬೆಂಗಳೂರಿನ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ದಿನಾಂಕ: 20-12-2021 ರಲ್ಲಿ ನೀಡಿರುವ ಸೂಚನೆಯಂತೆ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆಯನ್ನು ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಪಡಾಕ್ಷರಿ ಇವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದು

ಫೆಬ್ರವರಿ 20, 2022 ರ ಭಾನುವಾರ, ಬೆಳಿಗ್ಗೆ 11 ಗಂಟೆಗೆ ವಾಸ್ತವ /ವರ್ಚುಯಲ್

ವೇದಿಕೆಯ ಮೂಲಕ ಶಿವಮೊಗ್ಗ ನಗರದ ಸಾಗರ ರಸ್ತೆ ಆಟೋ ಕಾಂಪ್ಲೆಕ್ಸ ನಲ್ಲಿರುವ ದ್ವಾರಕ ಕನ್ವೆನ್ಸನ್ ಹಾಲ್ ನಲ್ಲಿ ಜರುಗಲಿದ್ದು ರಾಜ್ಯ, ಜಿಲ್ಲೆ, ತಾಲ್ಲೂಕು ಹಂತದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಬೇಕೆಂದು ಸರಕಾರಿ ನೌಕರರ ಸಂಘವು ಕೋರುತ್ತದೆ.

ಉದ್ದೇಶಿತ ತಿದ್ದುಪಡಿ ಉಪವಿಧಿಗಳ ಸಂಪೂರ್ಣ ವಿವರಗಳನ್ನು ನೋಟೀಸ್‍ನೊಂದಿಗೆ ಸದಸ್ಯರ ಮೊಬೈಲ್ ಸಂಖ್ಯೆಗೆ ಪಿಡಿಎಫ್ ಸಾಪ್ಟ್ ಕಾಪಿ (pdf-soft copy) ಯನ್ನು ಸಮೂಹ ವಾಟ್ಸ್ ಅಪ್ (whatsapp) ಸಂಖ್ಯೆಗಳ ಮೂಲಕ ಈಗಾಗಲೇ ಕಳುಹಿಸಲಾಗಿದೆ. ಹೆಚ್ಚುವರಿಯಾಗಿ ಕೇಂದ್ರ ಸಂಘದ ಜಾಲತಾಣ ಸಂಘದ ಕೇಂದ್ರ ಕಚೇರಿ ಕಾರ್ಯಾಲಯ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಸಂಘಗಳ ಕಚೇರಿಗಳಲ್ಲಿ ಲಭ್ಯವಿದ್ದು ಸದಸ್ಯರು ಮುಕ್ತವಾಗಿ ಪಡೆದುಕೊಳ್ಳಬಹುದಾಗಿದೆ.

ವರ್ಚುಯಲ್ ವೇದಿಕೆಯ ಮೂಲಕ ಎಲ್ಲಾ ಸರ್ಕಾರಿ ನೌಕರರು ಸಭೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದ್ದು
ZOOM APP ಲಿಂಕ್ ಅನ್ನು ಬಳಸಿ ಸಭೆಯಲ್ಲಿ ಭಾಗವಹಿಸಬಹುದಾಗಿದೆ.

ಈ ವಿಶೇಷ ಮಹಾಸಭೆಯನ್ನು ಸಂಘದ ಫೇಸ್‍ಬುಕ್ ಲಿಂಕ್ ನಲ್ಲಿಯೂ ಸಹ ವೀಕ್ಷಿಸಬಹುದಾಗಿದೆ.

ಸಂಘದ ಸದಸ್ಯರು ಹೆಚ್ಚಿನ ಮಾಹಿತಿಗಾಗಿ ಮ್ಯಾನೇಜರ್ ಸುರೇಶ್ ಅವರನ್ನು ಮೊಬೈಲ್ ಸಂಖ್ಯೆ:

9448617400

ಮೂಲಕ ಮತ್ತು ದೂರವಾಣಿ
080-22354784 080-22354783
ನ್ನು ಸಂಪರ್ಕಿಸಬಹುದಾಗಿದೆ.

KSGEA NEWS BENGALURU

Sharing Is Caring:

Leave a Comment