ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಮಹಾಸಭೆಯ ನಿರ್ಣಯಗಳು

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಮಹಾಸಭೆಯ ನಿರ್ಣಯಗಳು.

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಮಹಾಸಭೆಯ ನಿರ್ಣಯಗಳು.

IMG 20211011 WA0003

???? ಒಗ್ಗಟ್ಟಿನ ಮಂತ್ರ ಪಠಿಸಿದ ನೌಕರರ ಸಂಘ

????NPS ಹೋರಾಟಕ್ಕೆ ತೀರ್ಮಾನ

????ಶಿಕ್ಷಕರ ಬೇಡಿಕೆಗಳಿಗಾಗಿ ಹೋರಾಟ

ಇನ್ನು ಹಲವು ಮಹತ್ವದ ನಿರ್ಣಯಗಳಿಗೆ ಸಾಕ್ಷಿಯಾದ ಮಹಾಸಭೆ

IMG 20211011 WA0002

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು

ರಾಜ್ಯ ಪರಿಷತ್ ಮಹಾಸಭೆ

ದಿನಾಂಕ 10 -10 -2021ರ ಭಾನುವಾರ ಮಹಾಸಭೆಯು ಅತ್ಯಂತ ಯಶಸ್ವಿಯಾಗಿ ನಡೆಯಿತು

????️ ಶ್ರೀ ಮಾಲತೇಶ ಪ್ರಾರ್ಥಿಸಿದರು
????️ ರಾಜ್ಯಾಧ್ಯಕ್ಷರಾದ ಶ್ರೀ ಸಿ ಎಸ್ ಷಡಕ್ಷರಿಯವರು ವೇದಿಕೆ ಮೇಲಿನ ಎಲ್ಲ ಜಿಲ್ಲಾಧ್ಯಕ್ಷರು,ರಾಜ್ಯ ಪದಾಧಿಕಾರಿಗಳು, ವೇದಿಕೆಯ ಮುಂಭಾಗದಲ್ಲಿ ಜಿಲ್ಲೆಯ ಕಾರ್ಯದರ್ಶಿಗಳು, ರಾಜ್ಯ ಪರಿಷತ್ ಸದಸ್ಯರು, ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರು, ಎಲ್ಲಾ ತಾಲೂಕುಗಳು ಅಧ್ಯಕ್ಷರುಗಳು, ರಾಜ್ಯ ಪರಿಷತ್ ಸದಸ್ಯರನ್ನು ಸ್ವಾಗತಿಸಿದರು.
????️ ಪ್ರಸ್ತಾವಿಕವಾಗಿ ಮಾತನಾಡಿದ ರಾಜ್ಯಾಧ್ಯಕ್ಷರು ರಾಜ್ಯ ಸಂಘದ ಇಬ್ಬಾಗ ಆಗಿದೆ ಎಂಬ ಸಾಮಾಜಿಕ ಜಾಲತಾಣಗಳ ಮಾಹಿತಿಗೆ ಸ್ಪಷ್ಟೀಕರಣ ನೀಡಿದರು. ರಾಜ್ಯ ಸಂಘ ಬಲಿಷ್ಠ ವಾಗಿದೆ.ಸಂಘದ ಖಜಾನೆಯನ್ನು ದೇವರ ಹುಂಡಿ ಹಣದಂತೆ ನೌಕರರಿಗಾಗಿ ವಿನಿಯೋಗಿಸಲು ಬದ್ಧರಾಗಿದ್ದೇವೆ. ನೌಕರರ ಸಂಘ ನೌಕರರ ಏಳಿಗೆಗಾಗಿ ಶ್ರಮಿಸಲು ಅವರು ಯಾವುದೇ ರೀತಿಯ ಹೋರಾಟಕ್ಕೆ ಸಿದ್ಧರಾಗಿರುವಂತೆ ಕರೆ ನೀಡಿದರು. ದಾವಣಗೆರೆಯಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟದ ವಿವರಣೆ ನೀಡಿದರು.

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಮಹತ್ವದ ಬಗ್ಗೆ ಅಪಪ್ರಚಾರ ಗೊಂದಲದ ಬಗ್ಗೆ ಸ್ಪಷ್ಟೀಕರಣ, ಶಿಶುಪಾಲನಾ ರಜೆಯನ್ನು ಶಾಲಾ ಕಾರ್ಯಗಳಿಗೆ ತೊಂದರೆ ಆಗದಂತೆ ಬಳಸಲು ಹೊಸ ಆದೇಶ ಬಗ್ಗೆ ತಿಳಿಸಿದರು.
????️ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಜಗದೀಶ್ ಗೌಡಪ್ಪ ಪಾಟೀಲ್ ರವರು ಹಿಂದಿನ ಸಭೆಯ ನಡಾವಳಿಗಳನ್ನು ಓದಿದರು.
????️ರಾಜ್ಯ ಖಜಾಂಚಿ ಯವರಾದ ಶ್ರೀ ಶ್ರೀನಿವಾಸರವರ ವಾರ್ಷಿಕ ಲೆಕ್ಕಪತ್ರ ಮಂಡನೆ ಮಾಡಿದರು.

????️ ಅಧ್ಯಕ್ಷರಾದ ಶ್ರೀ ಷಡಕ್ಷರಿ ಅವರು ಸಭೆಯ ಅಜೆಂಡಾಗಳನ್ನು ತಿಳಿಸಿ ಚರ್ಚೆಗೆ ಒಳಪಡಿಸಿ ಸರ್ವಸದಸ್ಯರ ಅನುಮೋದನೆ ಪಡೆದರು

ಅನುಮೋದಿತ ವಿಷಯಗಳು

????️ NPS ರದ್ದತಿಗೆ ಕಾಯಕಲ್ಪ
????ನವೆಂಬರ್ ತಿಂಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳು ಜೊತೆಗೆ ರಾಜ್ಯ ಹಾಗೂ ಜಿಲ್ಲಾ ಅಧ್ಯಕ್ಷರ ಸಭೆ
????ರಾಜ್ಯದ ಎಲ್ಲಾಶಾಸಕರು ಸಂಸದರು ಗಳಿಗೆ NPS ರದ್ದತಿಗಾಗಿ ಪ್ರತಿ ತಾಲೂಕು ಜಿಲ್ಲಾ ಶಾಖೆಗಳಿಂದ ಮನವಿ ಅಭಿಯಾನ
????ಡಿಸೆಂಬರಿನಲ್ಲಿ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಮೂಲಕ NPS ರದ್ದತಿಗಾಗಿ ಪ್ರತಿ ತಾಲೂಕು ಜಿಲ್ಲಾ ಶಾಖೆಗಳಿಂದ ಮನವಿ ಅಭಿಯಾನ .
????ಕೇಂದ್ರ ಸಂಘದಿಂದ NPS ರದ್ದತಿಗಾಗಿ ರಾಜ್ಯ ಮುಖ್ಯ ಕಾರ್ಯದರ್ಶಿ ಯವರಿಗೆ ಮನವಿ ಅರ್ಪಣೆ.
????️ ಕೇಂದ್ರಕ್ಕೆ ಸರಿಸಮಾನ ವೇತನ
????ರಾಜ್ಯ ಸಂಘದ ಆಂತರಿಕ ಸಮಿತಿ ವರದಿ ಸಿದ್ದವಾಗಿದೆ
????ಅತ್ಯುತ್ತಮ ರಾಜ್ಯದ ವೇತನ ಮಾದರಿ ಪಡೆಯಲು ನಿರ್ಧಾರ. ಸಭೆಯ ಅನುಮೋದನೆ.
????️ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರು ಹಾಗೂ ಪದವಿಪೂರ್ವ ಉಪನ್ಯಾಸಕರ ಸಮಸ್ಯೆಗಳಿಗೆ ಪ್ರತ್ಯೇಕ ಹೋರಾಟ
????ವರ್ಗಾವಣೆ
????ವೇತನ ತಾರತಮ್ಯ ನಿವಾರಣೆ
????ವೃಂದ ಮತ್ತು ನೇಮಕಾತಿ ತಿದ್ದುಪಡಿ.
????️ ನೌಕರರ ಒಂದು ದಿನದ ಮುಷ್ಕರ ಕ್ಕೆ ಸಭೆಯ ಅನುಮೋದನೆ ಪಡೆದರು.
????️ಸಂಘದ ಪದಾಧಿಕಾರಿಗಳು ಮತ್ತು ನೌಕರರಿಗೆ ಬೆಂಗಳೂರಿಗೆ ಬಂದಾಗ ವಸತಿ ವ್ಯವಸ್ಥೆ ಆರಂಭ.
????️ಸಂಘದ ಆವರಣದಲ್ಲಿ ATM ಸೌಲಭ್ಯ
????️ಅತ್ಯುತ್ತಮ ಉಪಹಾರ ಊಟ ವ್ಯವಸ್ಥೆ

ರಾಜ್ಯ ಸಂಘದ ಇತಿಹಾಸದಲ್ಲಿ ಒಂದು ಉತ್ತಮವಾದ ದೊಡ್ಡ ಸಂಖ್ಯೆಯಲ್ಲಿ ಸೇರಿದ, ನೌಕರರ ಪರವಾದ ದಿಟ್ಟ ನಿರ್ಧಾಗಳನ್ನು ತೆಗೆದುಕೊಂಡ ಮಹಾಸಭೆ ಆಗಿ ದಾಖಲಾಯಿತು.

WhatsApp Group Join Now
Telegram Group Join Now
Sharing Is Caring:

Leave a Comment